Please enable javascript.ರಸ್ತೆ ಅಗೆದು ಕ್ಯಾರೆ ಎನ್ನದ ಗುತ್ತಿಗೆದಾರ ! - ರಸ್ತೆ ಅಗೆದು ಕ್ಯಾರೆ ಎನ್ನದ ಗುತ್ತಿಗೆದಾರ ! - Vijay Karnataka

ರಸ್ತೆ ಅಗೆದು ಕ್ಯಾರೆ ಎನ್ನದ ಗುತ್ತಿಗೆದಾರ !

ವಿಕ ಸುದ್ದಿಲೋಕ 15 Nov 2014, 4:08 am
Subscribe

ಗೋಕಾಕ :ಜಿಲ್ಲಾ ಉಸ್ತುವಾರಿ ಸಚಿವರ ತವರಲ್ಲಿ ಗುತ್ತಿಗೆದಾರನೊಬ್ಬ ಅರ್ಧ ಕೆಲಸ ಮಾಡಿ ಯಾರ ಮಾತಿಗೂ ಬೆಲೆ ಕೊಡದೇ ನಿರ್ಲಕ್ಷ್ಯತನದ ಪರಮಾವಧಿ ಪ್ರದರ್ಶಿಸಿದ್ದಾರೆ.

ರಸ್ತೆ ಅಗೆದು ಕ್ಯಾರೆ ಎನ್ನದ ಗುತ್ತಿಗೆದಾರ !
ಗೋಕಾಕ :ಜಿಲ್ಲಾ ಉಸ್ತುವಾರಿ ಸಚಿವರ ತವರಲ್ಲಿ ಗುತ್ತಿಗೆದಾರನೊಬ್ಬ ಅರ್ಧ ಕೆಲಸ ಮಾಡಿ ಯಾರ ಮಾತಿಗೂ ಬೆಲೆ ಕೊಡದೇ ನಿರ್ಲಕ್ಷ್ಯತನದ ಪರಮಾವಧಿ ಪ್ರದರ್ಶಿಸಿದ್ದಾರೆ.

ಜನರ ತಾಳ್ಮೆ ಪರೀಕ್ಷಿಸುತ್ತಿರುವ ಈ ಗುತ್ತಿಗೆದಾರ ಕಳೆದಾರು ತಿಂಗಳಿಂದ ಕೌಜಲಗಿ-ಕುಲಗೋಡ ರಸ್ತೆಯನ್ನೇ ಅಗೆದು ಮುಂದಿನ ಕಾಮಗಾರಿ ಕೈಗೊಂಡಿಲ್ಲ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸ್ಟೇಟ ಹೈವೇ ಡೆವಲಪಮೆಂಟ ಪ್ರ್ರೋಗ್ರಾಂ ಅಡಿಯಲ್ಲಿ ಜಾಂಬೋಟಿ-ರಬಕವಿ ಮುಖ್ಯರಸ್ತೆಯಡಿ ಮಮದಾಪೂರ-ಬೆಟಗೇರಿ,ಕೌಜಲಗಿ-ಕುಲಗೋಡ ರಸ್ತೆ ಸುಧಾರಣೆಗೆ 8.5 ಕೋಟಿ ಮಂಜೂರಾಗಿದ್ದು,ಕೌಜಲಗಿ-ಕುಲಗೋಡ ರಸ್ತೆಯನ್ನು ಆರು ತಿಂಗಳ ಹಿಂದೆ ಜೆಸಿಬಿಯಿಂದ ಅಗೆದು ಇಲ್ಲಿಯವರೆಗೆ ಕಾಮಗಾರಿ ಕೈಕೊಂಡಿಲ್ಲ. ಅದನ್ನು ಮೊದಲಿದ್ದ ಹಾಗೆ ಬಿಟ್ಟಿದ್ದರೂ ಸಹ ಒಳ್ಳೆಯದಿತ್ತು ಆದರೆ ಅದನ್ನು ಅಗೆದು ಬಿಟ್ಟು ಜನರ ತಾಳ್ಮೆ ಪರೀಕ್ಷಿಸಲಾಗುತ್ತಿದೆ.ಬಹಳಷ್ಟು ಕಾಮಗಾರಿಗಳನ್ನು ಗುತ್ತಿಗೆ ಪಡೆದು ಈ ಕೆಲಸದ ಕಡೆಗೆ ಅಸಡ್ಡೆ ತೋರಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಧಿಕಾರಿಗಳು ಕಾಮಗಾರಿ ಪ್ರಗತಿಯನ್ನು ಸರಿಯಾಗಿ ಪರಿಶೀಲಿಸಿಲ್ಲ.ಗುತ್ತಿಗೆದಾರ ಪಿ.ಬಿ.ಇಬ್ರಾಹಿಂ ಕಾಮಗಾರಿ ಕಡೆಗೆ ಸುಳಿಯುತ್ತಿಲ್ಲ.ಕಳೆದ 3 ತಿಂಗಳಿಂದ ಕಾಮಗಾರಿಯನ್ನು ಪ್ರಾರಂಭಿಸುತ್ತೇನೆಂದು ಹೇಳುತ್ತಿರುವ ಗುತ್ತಿಗೆದಾರ ಹುಸಿ ಭರವಸೆ ನೀಡುತ್ತಿದ್ದಾನೆಂದು ಗ್ರಾಮಸ್ಥರು ದೂರಿದ್ದಾರೆ.ಇದನ್ನು ನೋಡಬೇಕಾದ ಎಸ್.ಎಚ್.ಡಿ.ಬಿ ಮುಖ್ಯ ಅಭಿಯಂತರರು,ಸುಪರಿಡೆಂಟ ಎಂಜನೀಯರ,ಎಕ್ಸಿಕ್ಯೂಟೀವ್ ಎಂಜನೀಯರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಹಾಯಾಗಿದ್ದಾರೆ.ಸೆಕ್ಷನ್ ಆಫೀಸರ ಮುದಕನ್ನವರ ಧಾರವಾಡದಲ್ಲಿ ಹಾಯಾಗಿದ್ದಾರೆ.ಜನಪ್ರತಿನಿಧಿಗಳು ಅವರೆಲ್ಲರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರೂ ಸಿಗುತ್ತಿಲ್ಲ.

ಈ ಬಗ್ಗೆ ಮಾಜಿ ಜಿ.ಪಂ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಪ್ರತಿಕ್ರಿಯಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ತಾವು ಸಹಿತ ಅನೇಕ ಬಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಪ್ರಶ್ನಿಸಿದರೆ ಯಾವುದೇ ಪ್ರಯೋಜನವಾಗಿಲ್ಲ.ಈ ಅಧಿಕಾರಿಗಳು ರಾಜ್ಯಸರಕಾರದ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎಂಬುದು ತಿಳಿಯದಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ