ಆ್ಯಪ್ನಗರ

BBK 10: ಏನು.. ವರ್ತೂರು ಸಂತೋಷ್‌ ಅವರಿಗೆ ಮದುವೆ ಆಗಿದ್ಯಾ? ವೈರಲ್ ಆಗಿವೆ ಫೋಟೋಸ್!

Bigg Boss Kannada 10: ‘ಬಿಗ್ ಬಾಸ್‌ ಕನ್ನಡ 10’ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಅದಾಗಲೇ ಮದುವೆ ಆಗಿದ್ಯಾ? ಹೀಗೊಂದು ಅನುಮಾನ ವೀಕ್ಷಕರಿಗೆ ಕಾಡುತ್ತಿದೆ. ಅದಕ್ಕೆ ಕಾರಣ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವರ್ತೂರು ಸಂತೋಷ್‌ ಅವರದ್ದು ಎನ್ನಲಾದ ಮ್ಯಾರೇಜ್ ಫೋಟೋಸ್..!

Authored byಹರ್ಷಿತಾ ಎನ್ | Vijaya Karnataka Web 14 Nov 2023, 8:01 am

ಹೈಲೈಟ್ಸ್‌:

  • ವರ್ತೂರು ಸಂತೋಷ್ ಅವರಿಗೆ ಮದುವೆ ಆಗಿದ್ಯಾ?
  • ವೈರಲ್ ಆಗಿವೆ ವರ್ತೂರು ಸಂತೋಷ್ ಅವರದ್ದು ಎನ್ನಲಾದ ವಿವಾಹದ ಚಿತ್ರಗಳು
  • ವರ್ತೂರು ಸಂತೋಷ್ ಅವರಿಗೆ ಮದುವೆಯಾಗಿ, ಡಿವೋರ್ಸ್ ಆಗಿದ್ಯಾ?
  • ಸ್ಪಷ್ಟನೆ ಕೊಡ್ತಾರಾ ವರ್ತೂರು ಸಂತೋಷ್?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bbk 10 contestant varthur santhosh marriage photos viral
BBK 10: ಏನು.. ವರ್ತೂರು ಸಂತೋಷ್‌ ಅವರಿಗೆ ಮದುವೆ ಆಗಿದ್ಯಾ? ವೈರಲ್ ಆಗಿವೆ ಫೋಟೋಸ್!
‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ‘ಹಳ್ಳಿಕಾರ್ ಒಡೆಯ’ ಎಂದೇ ಜನಪ್ರಿಯತೆ ಪಡೆದಿರುವ ರೈತ, ಕೃಷಿಕ ವರ್ತೂರು ಸಂತೋಷ್ ಸ್ಪರ್ಧಿಸುತ್ತಿದ್ದಾರೆ. ‘ಬಿಗ್ ಬಾಸ್‌’ ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಮಧ್ಯೆ ಸ್ನೇಹ, ಆತ್ಮೀಯತೆ ಇದೆ. ಹೀಗಾಗಿ, ಇಬ್ಬರ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅಂತ ಸ್ಪರ್ಧಿಗಳೇ ರೇಗಿಸುತ್ತಿದ್ದಾರೆ. ಹೀಗಿರುವಾಗಲೇ, ವರ್ತೂರು ಸಂತೋಷ್ ಅವರದ್ದು ಎನ್ನಲಾದ ಮದುವೆ ಫೋಟೋಗಳು ವೈರಲ್ ಆಗಿವೆ..!

ಮದುವೆ ಫೋಟೋಗಳು ವೈರಲ್

ವರ್ತೂರು ಸಂತೋಷ್‌ ಅವರದ್ದು ಎನ್ನಲಾದ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ, ಅದರಲ್ಲೂ ಟ್ರೋಲ್ ಪೇಜ್‌ಗಳಲ್ಲಿ ವೈರಲ್ ಆಗಿವೆ. ವರ್ತೂರು ಸಂತೋಷ್ ಅವರಿಗೆ ಅದಾಗಲೇ ಮದುವೆ ಆಗಿದೆ ಎನ್ನಲಾಗಿದೆ. ಎಸ್‌.ಜಯಶ್ರೀ ಎಂಬುವರನ್ನ ವರ್ತೂರು ಸಂತೋಷ್‌ ವಿವಾಹವಾಗಿದ್ದಾರೆ ಅಂತ ಹೇಳಲಾಗಿದೆ. ಮುಹೂರ್ತ ಮತ್ತು ರಿಸೆಪ್ಷನ್ ಫೋಟೋಸ್‌ ವೈರಲ್ ಆಗಿವೆ.

View this post on Instagram A post shared by ನಿಮ್ ಮನೆ ಹುಡ್ಗ (@mahaantroll_adda)

View this post on Instagram A post shared by GOWDA EDITING ❤️✨ (@e_d_i_t___official)


Bigg Boss 10: 'ಬಿಗ್ ಬಾಸ್‌' ಮನೆಯಲ್ಲಿ ಹೈಡ್ರಾಮಾ ಸೃಷ್ಟಿಸಿದ ವರ್ತೂರು ಸಂತೋಷ್‌; ನಿರಾಸೆಗೊಂಡ 'ಕಿಚ್ಚ' ಸುದೀಪ್‌!

ವಿಚ್ಛೇದನ ಆಗಿದ್ಯಾ?

ವರ್ತೂರು ಸಂತೋಷ್ ಅವರಿಗೆ ಮದುವೆಯಾಗಿ, ಡಿವೋರ್ಸ್ ಆಗಿದ್ಯಾ? ಈ ಬಗ್ಗೆ ಕ್ಲಾರಿಟಿ ಇಲ್ಲ. ಆದರೆ, ಕೆಲವರು ಹಾಗಂತ ಕಾಮೆಂಟ್ ಹಾಕುತ್ತಿದ್ದಾರೆ. ವೈರಲ್ ಆಗಿರುವ ಫೋಟೋಸ್ ಕುರಿತಾಗಿ ವರ್ತೂರು ಸಂತೋಷ್ ಅವರೇ ಸ್ಪಷ್ಟನೆ ನೀಡಬೇಕಿದೆ.

ಶೀಘ್ರದಲ್ಲೇ ವರ್ತೂರು ಸಂತೋಷ್ ಎಂಗೇಜ್‌ಮೆಂಟ್! ಹುಡುಗಿ ಯಾರು?

ನಿಶ್ಚಿತಾರ್ಥ ನಡೆಯಲಿದೆ ಅಂತ ಹೇಳಿದ್ದ ರಕ್ಷಕ್!

‘’ಹೊರಗಡೆ ವರ್ತೂರು ಸಂತೋಷ್ ಅವರಿಗೆ ಅಂತ ಹುಡುಗಿ ಇದ್ದಾರೆ. ‘ಬಿಗ್ ಬಾಸ್‌’ ಮನೆಯಿಂದ ಹೊರಗೆ ಬಂದ್ಮೇಲೆ ವರ್ತೂರು ಸಂತೋಷ್ ಅವರ ನಿಶ್ಚಿತಾರ್ಥ ನಡೆಯಲಿದೆ. ‘ಬಿಗ್ ಬಾಸ್‌’ ಮನೆಯಲ್ಲಿ ಆಗ್ತಿರುವುದು ಕಾಮಿಡಿಗೆ ಅಷ್ಟೇ. ತಮಾಷೆಗಾಗಿ ವರ್ತೂರು ಸಂತೋಷ್ ಮತ್ತು ತನಿಷಾ ಅವರನ್ನ ರೇಗಿಸುತ್ತಿದ್ವಿ. ವರ್ತೂರು ಸಂತೋಷ್ - ತನಿಷಾ ಮಧ್ಯೆ ಏನೂ ಇಲ್ಲ. ಅಲ್ಲಿ ಆಗ್ತಿರುವುದು ತಮಾಷೆಗಾಗಿ ಅಷ್ಟೇ’’ ಎಂದು ರಕ್ಷಕ್ ಬುಲೆಟ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ, ವರ್ತೂರು ಸಂತೋಷ್‌ ಮದುವೆಯಾಗುತ್ತಿರುವ ಹುಡುಗಿ ಯಾರು ಎಂಬುದನ್ನ ರಕ್ಷಕ್ ಬಹಿರಂಗ ಪಡಿಸಿಲ್ಲ.

BBK 10: 'ನಾನು ಆ ಒಂದು ವಾರವನ್ನು ನೆನಪಿಸಿಕೊಳ್ಳಲಾಗಲ್ಲ'; ನೋವು ತೋಡಿಕೊಂಡ ವರ್ತೂರು ಸಂತೋಷ್

ಹುಲಿ ಉಗುರು ಪೆಂಡೆಂಟ್ ಪ್ರಕರಣದಲ್ಲಿ ಸಿಲುಕಿದ ವರ್ತೂರು ಸಂತೋಷ್

‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಮೇಲೆ ಹುಲಿ ಉಗುರು ಪೆಂಡೆಂಟ್ ಪ್ರಕರಣದಲ್ಲಿ ವರ್ತೂರು ಸಂತೋಷ್ ಸಿಲುಕಿದರು. ‘ಬಿಗ್ ಬಾಸ್’ ಮನೆಯಿಂದಲೇ ವಿಚಾರಣೆಗೆಂದು ವರ್ತೂರು ಸಂತೋಷ್ ಅವರನ್ನ ಅರಣ್ಯಾಧಿಕಾರಿಗಳು ಕರೆದೊಯ್ದರು. ಬಳಿಕ ವರ್ತೂರು ಸಂತೋಷ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ವರ್ತೂರು ಸಂತೋಷ್ ಜೈಲಿನಿಂದ ಹೊರಬಂದರು. ‘ಬಿಗ್ ಬಾಸ್’ ಮನೆಗೆ ವರ್ತೂರು ಸಂತೋಷ್ ರೀ-ಎಂಟ್ರಿಕೊಟ್ಟರು.

Bigg Boss 10: ಹಠಹಿಡಿದ ಮಗನಿಗಾಗಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ರು ವರ್ತೂರು ಸಂತೋಷ್ ತಾಯಿ

‘ಬಿಗ್ ಬಾಸ್‌’ ಮನೆಯಲ್ಲಿ ಉಳಿಯುತ್ತಾರಾ ವರ್ತೂರು ಸಂತೋಷ್?

‘‘ಬಿಗ್ ಬಾಸ್‌’ ಮನೆಯಿಂದ ಹೊರಹೋಗಬೇಕು. ನನಗೆ ಇಲ್ಲಿರೋಕೆ ಆಗ್ತಿಲ್ಲ’’ ಎಂದು ವರ್ತೂರು ಸಂತೋಷ್ ಕಣ್ಣೀರು ಸುರಿಸಿದ್ದಾರೆ. ಕಿಚ್ಚ ಸುದೀಪ್ ಹಾಗೂ ನಟಿ ಸುಷ್ಮಾ ರಾವ್ ಮಾತುಗಳಿಗೆ ವರ್ತೂರು ಸಂತೋಷ್‌ ಕನ್ವಿನ್ಸ್ ಆಗಿಲ್ಲ. ಇತರೆ ಸ್ಪರ್ಧಿಗಳ ಮಾತಿಗೂ ವರ್ತೂರು ಸಂತೋಷ್ ಕಿವಿ ಕೊಟ್ಟಿಲ್ಲ. ದೀಪಾವಳಿ ಹಬ್ಬದ ಪ್ರಯುಕ್ತ ವರ್ತೂರು ಸಂತೋಷ್ ತಾಯಿ ‘ಬಿಗ್ ಬಾಸ್’ ಮನೆಯೊಳಗೆ ಬಂದಿದ್ದಾರೆ. ಅಮ್ಮನ ಮಾತಿಗೆ ಓಗೊಟ್ಟು ವರ್ತೂರು ಸಂತೋಷ್‌ ‘ಬಿಗ್ ಬಾಸ್‌’ ಮನೆಯಲ್ಲೇ ಉಳೀತಾರಾ? ಕಾದುನೋಡಬೇಕಿದೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ