ಆ್ಯಪ್ನಗರ

‘ಕಳೆದ ವಾರ ನಾಯಿಗೆ ಉಗಿದ ಹಾಗೆ ಸುದೀಪ್‌ ಉಗೀತಾರೆ ಅಂತ ಇಡೀ ಕರ್ನಾಟಕ ಕಾಯುತ್ತಿತ್ತು! ಯಾಕೆ ಉಗಿಯಲಿಲ್ಲ ಅಂದ್ರೆ…’

Bigg Boss Kannada 10 Week 10: ಕಳೆದ ವಾರ ‘ಗಂಧರ್ವರು ವರ್ಸಸ್ ರಾಕ್ಷಸರು’ ಟಾಸ್ಕ್ ಆದ್ಮೇಲೆ ವಾರಾಂತ್ಯದಲ್ಲಿ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್‌ ಯಾಕೆ ಕ್ಲಾಸ್‌ ತಗೊಳ್ಳಲಿಲ್ಲ? ಈ ಬಗ್ಗೆ ಇಂದಿನ ಪಂಚಾಯತಿ ಸೆಷನ್‌ನಲ್ಲಿ ಕಿಚ್ಚ ಸುದೀಪ್‌ ಮಾತನಾಡಿದ್ದಾರೆ. ಅವರು ಏನು ಹೇಳಿದರು ಅಂತ ಇಲ್ಲಿ ಓದಿ…

Authored byಹರ್ಷಿತಾ ಎನ್ | Vijaya Karnataka Web 17 Dec 2023, 12:37 am

ಹೈಲೈಟ್ಸ್‌:

  • ಕಳೆದ ವಾರ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಯಾಕೆ ಕ್ಲಾಸ್‌ ತಗೊಳ್ಳಲಿಲ್ಲ?
  • ‘ಸುದೀಪ್ ಉಗೀತಾರೆ ಅಂತ ಇಡೀ ಕರ್ನಾಟಕ ಕಾಯುತ್ತಿತ್ತು!’
  • ಕಳೆದ ವಾರ ಸುದೀಪ್‌ ಯಾಕೆ ಉಗೀಲಿಲ್ಲ ಅಂದ್ರೆ… ?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bbk 10 week 10 kiccha sudeep reveals why he did not school contestants last week after rakshasaru task
‘ಕಳೆದ ವಾರ ನಾಯಿಗೆ ಉಗಿದ ಹಾಗೆ ಸುದೀಪ್‌ ಉಗೀತಾರೆ ಅಂತ ಇಡೀ ಕರ್ನಾಟಕ ಕಾಯುತ್ತಿತ್ತು! ಯಾಕೆ ಉಗಿಯಲಿಲ್ಲ ಅಂದ್ರೆ…’
ಕಳೆದ ವಾರ.. ಅಂದ್ರೆ ‘ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮದಲ್ಲಿ 9ನೇ ವಾರ ಗಂಧರ್ವರು ವರ್ಸಸ್ ರಾಕ್ಷಸರು ಟಾಸ್ಕ್ ನೀಡಲಾಗಿತ್ತು. ಈ ಚಟುವಟಿಕೆಯಲ್ಲಿ ಕೆಲವರು ಅಕ್ಷರಶಃ ರಾಕ್ಷಸರಂತೆಯೇ ವರ್ತಿಸಿದರು. ಅದರಲ್ಲೂ ‘ಚೇರ್‌ ಆಫ್ ಥಾರ್ನ್ಸ್’ ಟಾಸ್ಕ್‌ನಲ್ಲಿ ರಾಕ್ಷಸರಾಗಿದ್ದವರು ಮನುಷ್ಯತ್ವವನ್ನೇ ಮರೆತು ಆಡಿದರು. ಸೋಪು ನೀರಿನಲ್ಲಿ ದಾಳಿ ನಡೆಸಿದರು. ಪರಿಣಾಮ, ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಕಣ್ಣಿಗೆ ಗಂಭೀರವಾಗಿ ಪೆಟ್ಟು ಬಿತ್ತು. ಇಬ್ಬರೂ ಆಸ್ಪತ್ರೆಗೆ ದಾಖಲಾಗುವಂತಾಯಿತು. ಇಷ್ಟೆಲ್ಲಾ ಆದ್ಮೇಲೆ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್‌ ಸರಿಯಾಗಿ ಕಿವಿ ಹಿಂಡುತ್ತಾರೆ, ಅದರಲ್ಲೂ ಕೆಲವರಿಗೆ ಸ್ಪೆಷಲ್ ಕ್ಲಾಸ್‌ ತಗೊಳ್ತಾರೆ ಅಂತ ವೀಕ್ಷಕರು ಭಾವಿಸಿದ್ದು ಹೌದು.
ಕಳೆದ ವಾರದ ಪಂಚಾಯತಿ ಸಂಚಿಕೆಗಾಗಿ ಇಡೀ ಕರ್ನಾಟಕ ಕಾಯುತ್ತಿತ್ತು. ಆದರೆ, ನಿರೀಕ್ಷಿಸಿದ ಮಟ್ಟಕ್ಕೆ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್‌ ಮಂಗಳಾರತಿ ಮಾಡಲಿಲ್ಲ. ಇದನ್ನ ಸ್ವತಃ ಕಿಚ್ಚ ಸುದೀಪ್‌ ಇಂದಿನ ಪಂಚಾಯತಿ ಸೆಷನ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಇಂದು ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸ್ಪರ್ಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಿಚ್ಚ ಸುದೀಪ್, ‘’ಕಳೆದ ವಾರ ಗಂಧರ್ವರು - ರಾಕ್ಷಸರು ಟಾಸ್ಕ್ ಆದ್ಮೇಲೆ ನಾಯಿಗೆ ಉಗಿದ ಹಾಗೆ ಸುದೀಪ್ ಉಗೀತಾರೆ ಅಂತ ಇಡೀ ಕರ್ನಾಟಕ ಕಾಯುತ್ತಿತ್ತು. ಆದರೆ ಹಾಗೆ ಮಾಡಲಿಲ್ಲ’’ ಎಂದು ಹೇಳಿದ್ದಾರೆ. ಜೊತೆಗೆ ‘’ಯಾಕೆ ಮಾಡಲಿಲ್ಲ’’ ಎಂಬುದಕ್ಕೆ ಕಿಚ್ಚ ಸುದೀಪ್‌ ಕಾರಣವನ್ನೂ ನೀಡಿದ್ದಾರೆ.


ಸ್ಪರ್ಧಿಗಳಲ್ಲಿ ಶಿಸ್ತು ಇಲ್ಲ!

‘ಬಿಗ್ ಬಾಸ್‌’ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಶಿಸ್ತು ಇಲ್ಲ ಎಂಬುದರ ಬಗ್ಗೆ ಈ ವಾರದ ಪಂಚಾಯತಿ ಸೆಷನ್ ಆರಂಭದಲ್ಲೇ ಕಿಚ್ಚ ಸುದೀಪ್ ಬೇಸರ ವ್ಯಕ್ತಪಡಿಸಿದರು. ಕ್ಯಾಪ್ಟನ್ ಇದ್ದಾಗ ಬೆಲೆ ಕೊಡಲಿಲ್ಲ. ಕ್ಯಾಪ್ಟನ್ ಇಲ್ಲದಿರುವಾಗಲೂ ನಿಯಮಗಳು ಫಾಲೋ ಆಗ್ತಿಲ್ಲ ಎಂಬ ಕಾರಣಕ್ಕೆ ಕಿಚ್ಚ ಸುದೀಪ್‌ ಕೋಪಗೊಂಡರು. ಈ ಬಗ್ಗೆ ಸ್ಪರ್ಧಿಗಳಿಗೆ ಛೀಮಾರಿ ಹಾಕುತ್ತಿದ್ದ ಸಮಯದಲ್ಲಿ ಕಳೆದ ವಾರದ ವಿಷಯವನ್ನ ಕಿಚ್ಚ ಸುದೀಪ್ ಉಲ್ಲೇಖಿಸಿದರು.

‘ಸಂಬಳಕ್ಕಾಗಿ ನಾನು ಈ ಕೆಲಸ ಮಾಡಬೇಕಾ? ಇದೆಂಥಾ ಆಟಿಟ್ಯೂಡ್‌? ಗೆಟ್‌ ಔಟ್‌!’ ಸ್ಪರ್ಧಿಗಳ ವಿರುದ್ಧ ಸುದೀಪ್ ಕೆಂಡ!

ಇಡೀ ಕರ್ನಾಟಕ ಕಾಯುತ್ತಿತ್ತು!

‘’ಮನೆಯಲ್ಲಿ ಕ್ಯಾಪ್ಟನ್ ಸ್ಥಾನ ಹೋದ್ಮೇಲೆ ಸೆಲೆಬ್ರೇಷನ್ ಶುರು ಮಾಡಿದ್ಧೀರಾ. ಕ್ಯಾಪ್ಟನ್ ಇದ್ದಾಗ ಬೆಲೆ ಕೊಡಲಿಲ್ಲ. ಇಲ್ಲದಿರೋದಕ್ಕೆ ಇನ್ನೂ ಗೌರವ ಇಲ್ಲ. ಅಸಲಿಗೆ, ಕಳೆದ ವಾರ ರಾಕ್ಷಸರು ವರ್ಸಸ್ ಗಂಧವರು ಟಾಸ್ಕ್ ಆದ್ಮೇಲೆ.. ಅಷ್ಟು ಕಿತ್ತಾಟ, ಕೂಗಾಟ ಆದಾಗಲೇ ಇಡೀ ಕರ್ನಾಟಕದಲ್ಲೆಲ್ಲಾ ಜನ ಕಾಯ್ತಾಯಿದ್ದರು. ಬರ್ತಾರೆ ಇವತ್ತು ಸುದೀಪ್‌ ಅವರು.. ನಾಯಿಗೆ ಉಗಿದ ಹಾಗೆ ಉಗೀತಾರೆ.. ಒಂದ್ ನಾಲ್ಕು ಜನರಿಗೆ ಸಿಕ್ಕಾಪಟ್ಟೆ ಬೈಯ್ಯುತ್ತಾರೆ.. ಹಾಗೆ ಹೀಗೆ ಅಂತ ತುಂಬಾ ಇತ್ತು. ಆದರೆ, ನಾವು ಆರಾಮಾಗಿ sort out (ಪರಿಹಾರ) ಮಾಡಿ ಕಳೆದ ವಾರ ಹೋದ್ವಿ. ನಾವು ಯಾಕೆ ಉಗೀಲಿಲ್ಲ ಅಂದ್ರೆ ‘ಬಿಗ್ ಬಾಸ್‌’ ಮನೆ ಅಂದ್ಮೇಲೆ ಅವೆಲ್ಲಾ ಇರುತ್ತೆ. ಟಾಸ್ಕ್‌ನಲ್ಲಿ ಇರುತ್ತೆ’’ ಎಂದರು ಕಿಚ್ಚ ಸುದೀಪ್‌.

BBK 10: ಸ್ಪರ್ಧಿಗಳ ಅವಾಂತರ: ಕಿಚ್ಚ ಸುದೀಪ್‌ ಬೆಟ್ಟು ಮಾಡಿ ತೋರಿಸಿದ 9 ತಪ್ಪುಗಳಿವು..
‘’ಈ ವಾರ ಹೀಗೆ ಇರಲೇಬಾರದು. ಆದರೆ, ನಿಮ್ಮೆಲ್ಲರಿಗೂ ಖುಷಿ ಕೊಡಲು ಹೋದ ನಮಗೆ ನೀವು ಕೊಟ್ಟಿರುವ ಉಡುಗೊರೆ ಇದು’’ ಎಂದು ಸ್ಪರ್ಧಿಗಳ ಅಶಿಸ್ತು ಬಗ್ಗೆ ಕಿಚ್ಚ ಸುದೀಪ್‌ ತಮ್ಮ ಬೇಸರ ಹೊರಹಾಕಿದರು.

ಬಿಗ್ ಬಾಸ್‌ ಕನ್ನಡ 10 ಸ್ಪರ್ಧಿಗಳಿಗೆ ತಮ್ಮ ಕೈರುಚಿಯ ಜೊತೆಗೆ ಕಿಚ್ಚ ಸುದೀಪ್‌ ಕಳುಹಿಸಿದ ಸಂದೇಶಗಳ ಒಳಾರ್ಥವೇನು?


ಸಿರಿಗೆ ಸ್ಪೆಷಲ್ ಅಧಿಕಾರ

ಸ್ಪರ್ಧಿಗಳಿಗೆಲ್ಲಾ ಕಿವಿ ಹಿಂಡಿದ ಬಳಿಕ, ‘ಬಿಗ್ ಬಾಸ್‌’ ಮನೆಯಲ್ಲಿ ರೂಲ್ಸ್ ಸರಿಯಾಗಿ ಫಾಲೋ ಆಗದ ಕಾರಣ, ‘’ಯಾರು ಪಕ್ಕಾ ರೂಲ್ಸ್ ಫಾಲೋ ಮಾಡ್ತಾರೆ?’’ಎಂದು ಕಿಚ್ಚ ಸುದೀಪ್ ಕೇಳಿದರು. ಅದಕ್ಕೆ, ಬಹುತೇಕ ಮಂದಿ ಸಿರಿ ಹೆಸರು ಹೇಳಿದರು. ಹೀಗಾಗಿ, ‘’ನಿಯಮಗಳನ್ನ ಎಲ್ಲರೂ ಫಾಲೋ ಮಾಡುವ ಹಾಗೆ ನೋಡಿಕೊಳ್ಳಿ. ಈ ಅಧಿಕಾರವನ್ನ ನಾನು ನಿಮಗೆ ಕೊಡ್ತಾ ಇದ್ದೇನೆ. ಯಾರಿಗೆ ಏನೇ ಶಿಕ್ಷೆ ಕೊಡಬೇಕಾದರೂ ಕೊಡಬಹುದು’’ ಎಂದು ಸಿರಿಗೆ ಕಿಚ್ಚ ಸುದೀಪ್‌ ವಿಶೇಷ ಅಧಿಕಾರ ನೀಡಿದರು. ಅಂದ್ಹಾಗೆ, ‘ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮದ ಸಂಚಿಕೆಗಳು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ರಾತ್ರಿ ಪ್ರಸಾರವಾಗುತ್ತಿದೆ. ಜಿಯೋ ಸಿನಿಮಾದಲ್ಲಿ 24*7 ಲೈವ್ ಸ್ಟ್ರೀಮ್ ಆಗುತ್ತಿದೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ