Please enable javascript.BBK 10: ‘ನಿಂತ್ರೆ ಬುಡವನ್ನೇ ಅಲ್ಲಾಡಿಸುತ್ತೇನೆ’: ವಿನಯ್‌ಗೆ ಶಾಕ್ ಕೊಟ್ಟ ಕಾರ್ತಿಕ್! - bbk 10 week 13 verbal spat between karthik and vinay - Vijay Karnataka

BBK 10: ‘ನಿಂತ್ರೆ ಬುಡವನ್ನೇ ಅಲ್ಲಾಡಿಸುತ್ತೇನೆ’: ವಿನಯ್‌ಗೆ ಶಾಕ್ ಕೊಟ್ಟ ಕಾರ್ತಿಕ್!

Authored byಹರ್ಷಿತಾ ಎನ್ | Vijaya Karnataka Web 2 Jan 2024, 11:23 pm
Subscribe

Bigg Boss Kannada 10 Week 13: ‘ಬಿಗ್ ಬಾಸ್‌’ ಮನೆಯಲ್ಲಿ ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಮತ್ತೆ ಕಿತ್ತಾಟ ನಡೆದಿದೆ. ಕಾರ್ತಿಕ್ - ವಿನಯ್ ಮಧ್ಯೆ ಮತ್ತೊಂದು ಬಾರಿಗೆ ಮಾತಿನ ಚಕಮಕಿ ನಡೆದಿದೆ. ‘ನಿಂತ್ರೆ ಬುಡವನ್ನೇ ಅಲ್ಲಾಡಿಸುತ್ತೇನೆ’ ಎಂದು ಹೇಳಿ ವಿನಯ್‌ಗೆ ಕಾರ್ತಿಕ್ ಕೌಂಟರ್‌ ಕೊಟ್ಟಿದ್ದಾರೆ.

ಹೈಲೈಟ್ಸ್‌:

  • ವಿನಯ್ - ಕಾರ್ತಿಕ್ ಮಧ್ಯೆ ಮಾತಿನ ಚಕಮಕಿ
  • ‘ಏನೂ ಅಲ್ಲಾಡಿಸೋಕೆ ಆಗಲ್ಲ’ ಎಂದು ಗುಡುಗಿದ ವಿನಯ್
  • ‘ನಿಂತ್ರೆ ಬುಡವನ್ನೇ ಅಲ್ಲಾಡಿಸುತ್ತೇನೆ’ ಎಂದು ಕೌಂಟರ್‌ ಕೊಟ್ಟ ಕಾರ್ತಿಕ್

bbk 10 week 13 verbal spat between karthik and vinay
BBK 10: ‘ನಿಂತ್ರೆ ಬುಡವನ್ನೇ ಅಲ್ಲಾಡಿಸುತ್ತೇನೆ’: ವಿನಯ್‌ಗೆ ಶಾಕ್ ಕೊಟ್ಟ ಕಾರ್ತಿಕ್!
‘ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮದಲ್ಲಿ ಆಗಾಗ ವಿನಯ್ ಹಾಗೂ ಕಾರ್ತಿಕ್ ಮಧ್ಯೆ ವಾಕ್ಸಮರ, ಜಗಳ ನಡೆಯುತ್ತಲೇ ಇದೆ. ಈಗ ಮತ್ತೊಮ್ಮೆ ಅದೇ ಜರುಗಿದೆ. ಸ್ಪರ್ಧಿಗಳ ಮೌಲ್ಯ ವಿಚಾರವಾಗಿ ಕಾರ್ತಿಕ್ - ವಿನಯ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ‘‘ಏನೂ ಅಲ್ಲಾಡಿಸೋಕೆ ಆಗಲ್ಲ’’ ಎಂದು ವಿನಯ್ ಆಡಿದ ಮಾತಿಗೆ ಕೌಂಟರ್‌ ಕೊಟ್ಟ ಕಾರ್ತಿಕ್‌ ‘’ನಿಂತ್ರೆ ಬುಡವನ್ನೇ ಅಲ್ಲಾಡಿಸುತ್ತೇನೆ’’ ಎಂದಿದ್ದಾರೆ.

ಟಾಸ್ಕ್ ಕೊಟ್ಟ ‘ಬಿಗ್ ಬಾಸ್‌’

‘ಬಿಗ್ ಬಾಸ್‌ ಕನ್ನಡ 10’ ಸೀಸನ್ ವಿಜೇತರಿಗೆ ನೀಡಲಾಗುವ 50 ಲಕ್ಷ ರೂಪಾಯಿ ಬಹುಮಾನ ಹಣವನ್ನು 9 ಬೇರೆ ಬೇರೆ ಮೌಲ್ಯಗಳಲ್ಲಿ ವಿಂಗಡಿಸಲಾಯಿತು. ಇಲ್ಲಿಯವರೆಗಿನ ಆಟದಲ್ಲಿ ತಮ್ಮ ಸ್ಥಾನ, ಮಾನ, ಮೌಲ್ಯ ಏನು ಎಂಬುದರ ಬಗ್ಗೆ ಸ್ಪರ್ಧಿಗಳು ತಮ್ಮ ನಿಲುವು ವ್ಯಕ್ತಪಡಿಸಿ, ಆ ಮೌಲ್ಯದ ಫಲಕ ಇತರರ ಸಮ್ಮತಿಯ ಮೇರೆಗೆ ತಮ್ಮದಾಗಿಸಿಕೊಳ್ಳಬೇಕಿತ್ತು. ಪ್ರತಿಯೊಬ್ಬರು ಕಾರ್ಯಕ್ರಮಕ್ಕೆ ನೀಡಿದ ಕೊಡುಗೆ, ವೀಕ್ಷಕರಿಗೆ ನೀಡಿದ ಮನರಂಜನೆ, ಆಟದಲ್ಲಿ ಪ್ರದರ್ಶನ, ತಮ್ಮನ್ನು ತಾವು ತೊಡಗಿಸಿಕೊಂಡ ರೀತಿಯ ಆಧಾರದ ಮೇಲೆ ಚರ್ಚಿಸಿ ಒಂದು ನಿಲುವಿಗೆ ಬರಬೇಕಿತ್ತು. ಪರಿಣಾಮ, 20 ಲಕ್ಷ ಮೌಲ್ಯದ ಫಲಕಕ್ಕಾಗಿ ಕಾರ್ತಿಕ್, ವಿನಯ್, ಸಂಗೀತಾ, ತನಿಷಾ ಬೇಡಿಕೆ ಇಟ್ಟರು. ಈ ವೇಳೆ ವಿನಯ್ - ಕಾರ್ತಿಕ್ ಮಧ್ಯೆ ವಾಕ್ಸಮರ ನಡೆಯಿತು.


ಸ್ಪರ್ಧಿಗಳ ಬೇಡಿಕೆ

2 ಲಕ್ಷದ ಫಲಕಕ್ಕಾಗಿ ವರ್ತೂರು ಸಂತೋಷ್, 7 ಲಕ್ಷದ ಫಲಕಕ್ಕಾಗಿ ಡ್ರೋನ್ ಪ್ರತಾಪ್, 15 ಲಕ್ಷದ ಫಲಕಕ್ಕಾಗಿ ತುಕಾಲಿ ಸಂತು, ನಮ್ರತಾ ಮತ್ತು ಮೈಕಲ್, 20 ಲಕ್ಷದ ಫಲಕಕ್ಕಾಗಿ ಸಂಗೀತಾ, ವಿನಯ್, ಕಾರ್ತಿಕ್ ಮತ್ತು ತನಿಷಾ ಬೇಡಿಕೆ ಇಟ್ಟರು.

ಏನೇನೋ ಮಾತಾಡಿ Bigg Boss ಸ್ಪರ್ಧಿಗಳ ಬಳಿ ಸರಿಯಾಗಿ ತಗಲಾಕ್ಕೊಂಡ 'ಬೆಂಕಿ' ತನಿಷಾ ಕುಪ್ಪಂಡ

‘ಅಸಮರ್ಥರು’ ಬಗ್ಗೆ ಮಾತು

20 ಲಕ್ಷದ ಫಲಕಕ್ಕಾಗಿ ಬೇಡಿಕೆಯಿಟ್ಟ ಸಂಗೀತಾ, ‘’ನಾವು ಅಸಮರ್ಥರಾಗಿ ಶುರು ಮಾಡಿದ್ವಿ’’ ಎಂದು ಮಾತು ಆರಂಭಿಸಿದರು. ಇತ್ತ ಕಾರ್ತಿಕ್ ಸಹ, ‘’ಮೊದಲ ವಾರ ಯಾರೆಲ್ಲಾ ಅಸಮರ್ಥರು ಅಂತ ಬಾಯ್ತುಂಬಾ ಕರೆದಿದ್ದರೋ, ಅದನ್ನೆಲ್ಲಾ ಇವತ್ತಿನ ಮಟ್ಟಕ್ಕೆ ಚೇಂಜ್ ಮಾಡಿದ್ದೀನಿ. ನಾನು ಪ್ರತಿಸ್ಪರ್ಧಿಯೇ ಅಲ್ಲ ಎಂದು ವಿನಯ್ ಈ ಹಿಂದೆ ಹೇಳಿದ್ದರು. ಈಗ ನಾನು ಟಕ್ಕರ್ ಕೊಡ್ತಿದ್ದೀನಿ ಅಂತ ವಿನಯ್ ಅವರೇ ಬಾಯ್ಬಿಟ್ಟು ಹೇಳಿದ್ದಾರೆ. ನಾನು ಬಕೆಟ್‌ ಹಿಡಿಯುತ್ತಿದ್ದೇನೆ ಅಂತ ಸಂಗೀತಾ ಹೇಳಿದ್ದರು. ಒಂದೇ ದಿನದಲ್ಲಿ ಅವರು ವೇದಿಕೆ ಮೇಲೆ ಸಾರಿ ಕೇಳುವ ಹಾಗೆ ನಾನು ಇಂಪ್ಯಾಕ್ಟ್ ಕ್ರಿಯೇಟ್ ಮಾಡಿದ್ದೆ’’ ಎಂದರು.

BBK 10: ‘ನಿನ್ನೊಂದಿಗೆ ನಾನು ಯಾವಾಗಲೂ ಇರ್ತೀನಿ’: ಸಂಗೀತಾಗೆ ತನಿಷಾ ಅಭಯ

ಕೌಂಟರ್‌ ಕೊಟ್ಟ ವಿನಯ್

ಅಸಮರ್ಥರು ಎಂಬ ವಾದ ಬಂದಿದ್ದಕ್ಕೆ ‘’ನನಗೆ ಪ್ರತಿಸ್ಪರ್ಧಿಯಾಗಿ ಯಾರು ಬೇಕು ಅಂತ ನಾನೇ ಆಯ್ಕೆ ಮಾಡಿದ್ದು. ನಾನೇ ಆ ಸ್ಥಾನ ಕೊಟ್ಟಿದ್ದೀನಿ ಅಂತ ಕಾರ್ತಿಕ್ ಅವರೇ ಒಪ್ಪಿಕೊಂಡಿದ್ದಾರೆ. ಅಸಮರ್ಥರಾಗಿ ಬಂದಿದ್ವಿ ಅಂತ ಪ್ರತಿಬಾರಿ ಹೇಳ್ತಾರೆ. ಅಸಮರ್ಥರು ಅಂತ ಕರೆದಿದ್ದು ಜನ. ಯಾಕಂದ್ರೆ, ಜನರ ವೋಟಿಂಗ್ ಮೇಲೆ ಅದು ಆಗಿದ್ದು. ನಾವು ವೋಟ್‌ ಹಾಕಿಲ್ಲ. ಅಸಮರ್ಥರಿಂದ ಸಮರ್ಥರಾಗಿದ್ದೀರಾ ಅನ್ನೋದು ನಿಮ್ಮ ಪ್ರಯತ್ನ. ಅದನ್ನ ಕಾರ್ಡ್ ಪ್ಲೇ ಮಾಡೋದು ಬೇಡ’’ ಎಂದರು ವಿನಯ್. ಈ ವೇಳೆ ಮಾತಿನ ಚಕಮಕಿ ನಡೆಯಿತು.

ಕಾರ್ತಿಕ್ - ಅಸಮರ್ಥರು ಅನ್ನೋದು ಕಾರ್ಡ್ ಅಲ್ಲ.
ತನಿಷಾ - ಅದು ನಮಗೆ ಬಂದಿದ್ದು. ಬಂದಿರೋದನ್ನ ಇಲ್ಲ ಅಂತ ಹೇಳೋಕೆ ಆಗಲ್ಲ. ಅದನ್ನ ಕಾರ್ಡ್‌ ಅಂತ ಕರೆಯೋದು ಸರಿ ಅಲ್ಲ.
ವಿನಯ್ - ಹೇಳಿದೆ ಏನಿವಾಗ?
ಕಾರ್ತಿಕ್ - ಈ ಮನೆಯಲ್ಲಿ ಮೊದಲ ವಾರ ಎಷ್ಟು ಜನ ನಮ್ಮನ್ನ ಅಸಮರ್ಥರು ಅಂತ ಕರೆದಿದ್ದಾರೆ?
ನಮ್ರತಾ - ಇಲ್ಲ.. ಹಾಗೆ ನಾವು ಮಾಡಿಲ್ಲ
ವಿನಯ್ - ಅಸಮರ್ಥರು ಅಂತ ಹೇಳೋದು ಸರಿ ಅಲ್ಲ.
ತನಿಷಾ - ನೀವು ಯಾವ ಕಾರ್ಡ್ ಪ್ಲೇ ಮಾಡ್ತಿದ್ದೀರಾ ಹಾಗಾದ್ರೆ?
ಕಾರ್ತಿಕ್ - ಮೂರು ಜನ ಇದ್ದೀರಾ.. ಏನು ಹೊಡೆಯುತ್ತೀರಾ ಅನ್ನೋದು.. ಇದು ಕಾರ್ಡ್ ಅಂದ್ರೆ..
ವಿನಯ್ - ಏನೂ ಅಲ್ಲಾಡಿಸೋಕೆ ಆಗಲ್ಲ.
ಕಾರ್ತಿಕ್ - ಅಲ್ಲಾಡಿಸಿಬಿಟ್ಟಿದ್ದೀನಿ. ನಿಂತ್ರೆ ಬುಡವನ್ನೇ ಅಲ್ಲಾಡಿಸುತ್ತೇನೆ.
ವಿನಯ್ - ಅಲ್ಲಾಡಿಸು ರಾಜ.

Bigg Boss Kannada 10 ಫಿನಾಲೆ ಯಾವಾಗ? ಅಧಿಕೃತವಾಗಿ ಘೋಷಣೆ ಮಾಡಿದ ‘ಬಿಗ್ ಬಾಸ್‌’!

ಎಲ್ಲದಕ್ಕೂ ನಾನೇ ಕಾರಣ ಎಂದ ವಿನಯ್!

‘’ನಾನು ಕಾಂಪಿಟೇಶನ್ ಕೊಟ್ಟಿದ್ದೇನೆ. ಆಟ ಆಡಿದ್ದೇನೆ. 20 ಲಕ್ಷಕ್ಕಾಗಿ ಎಷ್ಟು ಜನ ನಿಂತಿದ್ದಾರೋ.. ಅವರಿಗೆಲ್ಲಾ ಎದುರಿಗೆ ನಿಂತಿರೋದು ನಾನು. ಯಾರದ್ದೇ ಗೆಲುವಿರಲಿ, ಯಾರದ್ದೇ ದುಃಖ ಇರಲಿ. ಪ್ರತಿಯೊಂದಕ್ಕೂ ಕಾರಣ ನಾನು. ಇದು ನಿಜ ಅನ್ನೋದು ನಿಮ್ಮೆಲ್ಲರಿಗೂ ಗೊತ್ತು’’ ಅಂತ ವಿನಯ್ ಹೇಳಿದರು.

BBK 10: ಮಾಸ್ಟರ್‌ ಸ್ಟ್ರೋಕ್ ಕೊಟ್ಟ ‘ಬಿಗ್ ಬಾಸ್‌’: ವಿನ್ನರ್‌ಗೆ ಸಿಗುವ 50 ಲಕ್ಷ ಬಹುಮಾನದಲ್ಲಿ 25 ಲಕ್ಷ ಢಮಾರ್!

ಯಾರ ಮೌಲ್ಯ ಎಷ್ಟು?

ವಾದ - ವಿವಾದದ ನಂತರ ಬಹುಮತದ ಆಧಾರದ ಮೇಲೆ.. 25 ಸಾವಿರ - ವರ್ತೂರು ಸಂತೋಷ್, 50 ಸಾವಿರ - ಡ್ರೋನ್ ಪ್ರತಾಪ್, 75 ಸಾವಿರ - ಮೈಕಲ್, 1 ಲಕ್ಷ - ತನಿಷಾ, 2 ಲಕ್ಷ - ನಮ್ರತಾ, 3.50 ಲಕ್ಷ - ಕಾರ್ತಿಕ್, 7 ಲಕ್ಷ - ಸಂಗೀತಾ, 15 ಲಕ್ಷ - ವಿನಯ್, 20 ಲಕ್ಷ - ತುಕಾಲಿ ಸಂತು ಫಲಕಗಳನ್ನ ತಮ್ಮದಾಗಿಸಿಕೊಂಡರು.

ವೋಟಿಂಗ್ ಬಗ್ಗೆ ಅಸಮಾಧಾನ

ವೋಟಿಂಗ್ ಮೂಲಕ ಫಲಕಗಳನ್ನ ನೀಡಿದ್ದಕ್ಕೆ ಕೆಲ ಸ್ಪರ್ಧಿಗಳು ಅಸಮಾಧಾನಗೊಂಡರು. ‘’ವೋಟಿಂಗ್ ನಂಬಲ್ಲ. ಅದಕ್ಕೆ ನಾನು ಈವರೆಗೆ ಕ್ಯಾಪ್ಟನ್ ಆಗಿರಲಿಲ್ಲ’’ ಎಂದರು ತನಿಷಾ. ‘’ಇದು ಬುಲ್‌ಶಿಟ್‌ ವೋಟಿಂಗ್‌’’ ಎಂದರು ನಮ್ರತಾ. ಇನ್ನೂ, ‘’ಹುಚ್ಚನ ಮದುವೇಲಿ ಉಂಡೋನೇ ಜಾಣ’’ ಎಂದು ತುಕಾಲಿ ಸಂತು ಬಗ್ಗೆ ಡ್ರೋನ್ ಪ್ರತಾಪ್ ಕಾಮೆಂಟ್ ಮಾಡಿದರು. ಅಂದ್ಹಾಗೆ, ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದ ಸಂಚಿಕೆಗಳು ಪ್ರತಿ ರಾತ್ರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಜಿಯೋ ಸಿನಿಮಾದಲ್ಲಿ 24*7 ಲೈವ್ ಸ್ಟ್ರೀಮ್ ಆಗುತ್ತಿದೆ.
ಹರ್ಷಿತಾ ಎನ್
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ