Please enable javascript.BBK 10: ವೋಟಿಂಗ್‌ ಮೂಲಕ ‘ಟಿಕೆಟ್‌ ಟು ಫಿನಾಲೆ’: ‘ಫೇರ್’ ಎಂಬ ಮುದ್ರೆ ಒತ್ತಿದ ಕಿಚ್ಚ ಸುದೀಪ್‌! - bbk 10 week 14 kiccha sudeep gives clarification regarding voting process for ticket to finale - Vijay Karnataka

BBK 10: ವೋಟಿಂಗ್‌ ಮೂಲಕ ‘ಟಿಕೆಟ್‌ ಟು ಫಿನಾಲೆ’: ‘ಫೇರ್’ ಎಂಬ ಮುದ್ರೆ ಒತ್ತಿದ ಕಿಚ್ಚ ಸುದೀಪ್‌!

Authored byಹರ್ಷಿತಾ ಎನ್ | Vijaya Karnataka Web 14 Jan 2024, 1:42 am
Subscribe

Bigg Boss Kannada 10 Week 14: ‘ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮದಲ್ಲಿ ನಡೆದ ಟಿಕೆಟ್‌ ಟು ಫಿನಾಲೆ ಟಾಸ್ಕ್‌ ಮುಗಿದ್ಮೇಲೆ ವೋಟಿಂಗ್‌ ನಡೆಸಿದ್ದು ಅನ್ಯಾಯ ಎಂಬ ಚರ್ಚೆ ವೀಕ್ಷಕರ ವಲಯದಲ್ಲಿ ನಡೆಯುತ್ತಿತ್ತು. ಇದೇ ವಿಚಾರದ ಬಗ್ಗೆ ಕಿಚ್ಚ ಸುದೀಪ್‌ ಕ್ಲಾರಿಟಿ ಕೊಟ್ಟಿದ್ದಾರೆ. ಸ್ಪರ್ಧಿಗಳು ಕೂಡ ಈ ಪ್ರಕ್ರಿಯೆ ‘ಫೇರ್’ ಎಂದಿದ್ದಾರೆ.

ಹೈಲೈಟ್ಸ್‌:

  • ಟಿಕೆಟ್‌ ಟು ಫಿನಾಲೆ ವೇಳೆ ಅನ್ಯಾಯ ಆಯ್ತಾ?
  • ಅತೀ ಹೆಚ್ಚು ಪಾಯಿಂಟ್‌ಗಳನ್ನ ಪಡೆದ ಡ್ರೋನ್ ಪ್ರತಾಪ್‌ಗೆ ಮೋಸ ಆಯ್ತಾ?
  • ವೋಟಿಂಗ್‌ ಪ್ರಕ್ರಿಯೆ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ಸ್ಪರ್ಧಿಗಳ ಅಭಿಪ್ರಾಯವೇನು?

bbk 10 week 14 kiccha sudeep gives clarification regarding voting process for ticket to finale
BBK 10: ವೋಟಿಂಗ್‌ ಮೂಲಕ ‘ಟಿಕೆಟ್‌ ಟು ಫಿನಾಲೆ’: ‘ಫೇರ್’ ಎಂಬ ಮುದ್ರೆ ಒತ್ತಿದ ಕಿಚ್ಚ ಸುದೀಪ್‌!
‘ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮದಲ್ಲಿ 14ನೇ ವಾರ ಟಿಕೆಟ್‌ ಟು ಫಿನಾಲೆ ಟಾಸ್ಕ್‌ ನಡೆಯಿತು. ಈ ಚಟುವಟಿಕೆಯ ಪಾಯಿಂಟ್‌ ಪಟ್ಟಿಯಲ್ಲಿ 420 ಅಂಕಗಳನ್ನ ಪಡೆಯುವ ಮೂಲಕ ಟಾಪ್‌ 1 ಸ್ಥಾನ ಪಡೆದಿದ್ದವರು ಡ್ರೋನ್ ಪ್ರತಾಪ್. 300 ಪಾಯಿಂಟ್ಸ್ ಮೂಲಕ 2ನೇ ಸ್ಥಾನದಲ್ಲಿದ್ದವರು ಸಂಗೀತಾ. 210 ಪಾಯಿಂಟ್ಸ್ ಮೂಲಕ 3ನೇ ಸ್ಥಾನ ಗಿಟ್ಟಿಸಿದ್ದರು ನಮ್ರತಾ. ಈ ಮೂವರ ಪೈಕಿ ಯಾರಿಗೆ ‘ಟಿಕೆಟ್‌ ಟು ಫಿನಾಲೆ’ ಸಿಗಬೇಕು ಎಂಬುದನ್ನ ವೋಟಿಂಗ್ ಮೂಲಕ ಉಳಿದ ಸ್ಪರ್ಧಿಗಳು ನಿರ್ಧರಿಸಬೇಕಿತ್ತು.
ವೋಟಿಂಗ್ ಆಧಾರದ ಮೇಲೆ ಬಹುಮತದ ಅನುಸಾರ ‘ಟಿಕೆಟ್‌ ಟು ಫಿನಾಲೆ’ ಪಡೆದವರು ಸಂಗೀತಾ. ಹೀಗಾಗಿ, ನೇರವಾಗಿ ಫಿನಾಲೆ ವಾರಕ್ಕೆ ಜಿಗಿದಿರುವ ಸಂಗೀತಾ, ಈ ಸೀಸನ್‌ನ ಕಟ್ಟ ಕಡೆಯ ಕ್ಯಾಪ್ಟನ್ ಆಗಿದ್ದಾರೆ. ವೋಟಿಂಗ್ ಬಳಿಕ ‘‘ಆಟ ಆಡದೆ ಸುಮ್ಮನೆ ಕೂರಬಹುದಿತ್ತು’’ ಎಂದು ಹೇಳಿ ಡ್ರೋನ್ ಪ್ರತಾಪ್ ಬೇಸರ ವ್ಯಕ್ತಪಡಿಸಿದ್ದರು.


‘’ಟಾಸ್ಕ್‌ಗಳಲ್ಲಿ ಅತೀ ಹೆಚ್ಚು ಪಾಯಿಂಟ್‌ ಪಡೆದ ಡ್ರೋನ್ ಪ್ರತಾಪ್‌ಗೆ ‘ಟಿಕೆಟ್‌ ಟು ಫಿನಾಲೆ’ ಸಿಗದೆ, ವೋಟಿಂಗ್ ನಡೆಸಿದ್ದು ಸರಿಯಲ್ಲ’’ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ‘’ವೋಟಿಂಗ್‌ ಮೂಲಕ ಡಿಸೈಡ್ ಮಾಡುವ ಹಾಗಿದ್ದರೆ, ಟಾಸ್ಕ್‌ ಯಾಕೆ ಆಡಿಸಬೇಕಿತ್ತು’’ ಎಂಬ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಎದ್ದಿತ್ತು. #JusticeForPrathap ಟ್ರೆಂಡ್‌ ಆಗಿತ್ತು. ಇದೇ ವಿಚಾರದ ಬಗ್ಗೆ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಕಿಚ್ಚ ಸುದೀಪ್‌ ಸ್ಪಷ್ಟನೆ ಕೊಟ್ಟರು.

‘ಬಿಗ್ ಬಾಸ್‌ ಕನ್ನಡ 10’ ಸೀಸನ್‌ನ ಕಟ್ಟ ಕಡೆಯ ಲಕ್ಷುರಿ ಬಜೆಟ್‌ ಕೂಡ ಹೊಗೆ! ಎಂಥಾ ದುರಾದೃಷ್ಟ!

ಆರಂಭದಲ್ಲೇ ಕಿಚ್ಚ ಸುದೀಪ್‌ ಹೇಳಿದ್ದೇನು?

‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯ ಆರಂಭದಲ್ಲೇ, ‘’ಈ ಬಿಗ್‌ ಬಾಸ್‌ನಲ್ಲಿ ಮೊದಲ ಬಾರಿಗೆ ‘ಬಿಗ್ ಬಾಸ್‌’ ಮೇಲೆ ಆರೋಪ. ಟಾಸ್ಕ್ ಆಡಿ ಲೀಡ್‌ನಲ್ಲಿ ಇದ್ದವರನ್ನ ಬಿಟ್ಟು, ವೋಟಿಂಗ್ ಆಧಾರದಲ್ಲಿ ಫೈನಲಿಸ್ಟ್ ಸೆಲೆಕ್ಷನ್. ‘ಬಿಗ್ ಬಾಸ್‌’ನ ಈ ನಿರ್ಧಾರದ ಹಿಂದಿನ ಕಾರಣ ಏನು? ತಪ್ಪಾಗಿರೋದು ಎಲ್ಲಿ? ನ್ಯಾಯ ಸಿಗಬೇಕಿರೋದು ಯಾರಿಗೆ? ಇವತ್ತಿನ ಪಂಚಾಯತಿಯಲ್ಲಿ ಮಾತಾಡೋಣ’’ ಎಂದು ಕಿಚ್ಚ ಸುದೀಪ್ ಹೇಳಿದರು.

BBK 10: Victim, Innocent ಆಗಿ ನಾನು ನಟಿಸಿಲ್ಲ: ಡ್ರೋನ್ ಪ್ರತಾಪ್‌ಗೆ ಚುಚ್ಚಿದ ನಮ್ರತಾ!

ಸಂಗೀತಾ ಮಾತು

‘ಟಿಕೆಟ್‌ ಟು ಫಿನಾಲೆ’ ಪಡೆದು ಫಿನಾಲೆ ವಾರಕ್ಕೆ ಕಾಲಿಟ್ಟಿರುವ ಬಗ್ಗೆ ಮಾತಾಡಿದ ಸಂಗೀತಾ, ‘’ತುಂಬಾ ಖುಷಿಯಾಗುತ್ತಿದೆ. ಈವರೆಗಿನ ಜರ್ನಿಗೆ ಬ್ಯೂಟಿಫುಲ್ ಫಲ ಸಿಕ್ಕಿದಂತಾಯಿತು’’ ಎಂದರು.

BBK 10: ಸಂಗೀತಾ, ಡ್ರೋನ್ ಪ್ರತಾಪ್‌ ಬಗ್ಗೆ ಗೇಲಿ ಮಾಡಿದ ತುಕಾಲಿ ಸಂತುಗೆ ವರ್ತೂರು ಸಂತೋಷ್‌ ನೆನಪಾಗಲಿಲ್ವಾ?

ಡ್ರೋನ್ ಪ್ರತಾಪ್‌ಗೆ ಸುದೀಪ್‌ ಪ್ರಶ್ನೆ

‘’ನಿಮ್ಮ ಪ್ರಕಾರ ಸಂಗೀತಾ ಫಿನಾಲೆ ವಾರಕ್ಕೆ ಕಾಲಿಟ್ಟರು. ಸಂಗೀತಾಗೆ ಅರ್ಹತೆ ಇದೆ ಅನ್ಸುತ್ತಾ?’’ ಎಂದು ಕಿಚ್ಚ ಸುದೀಪ್‌ ಪ್ರಶ್ನೆ ಮಾಡಿದಾಗ, ‘’ಹೌದು. ಅರ್ಹರಿದ್ದಾರೆ. ಸಂಗೀತಾ ಫಿನಾಲೆಗೆ ಹೋಗಿದ್ದು ನನಗೆ ಬೇಜಾರಿಲ್ಲ. ಆದರೆ, ನಾನು ಒಂದ್ಸಲ ಕ್ಯಾಪ್ಟನ್ ಆಗಬೇಕಿತ್ತು. ಆಗಲಿಲ್ಲ ಅಂತ ಬೇಜಾರು ಅಷ್ಟೇ’’ ಎಂದು ಡ್ರೋನ್ ಪ್ರತಾಪ್ ಉತ್ತರಿಸಿದರು.

BBK 10: ಕಷ್ಟ ಪಟ್ಟರೂ ಫಲ ಸಿಗದ ಕಾರಣ ಪ್ರತಾಪ್‌ಗೆ ಬೇಸರ! ಏಕಾಏಕಿ ವರ್ತೂರು ಸಂತೋಷ್, ಸಂಗೀತಾ ಸಿಡಿದಿದ್ಯಾಕೆ?

ಇಡೀ ಮನೆಗೆ ಕಿಚ್ಚ ಸುದೀಪ್‌ ಪ್ರಶ್ನೆ

‘’ಪ್ರತಾಪ್‌ 420 ಪಾಯಿಂಟ್ಸ್‌ ಪಡೆದಿದ್ದರು. ಸಂಗೀತಾ 300, ನಮ್ರತಾ 210 ಗಳಿಸಿದ್ದರು. ಇಲ್ಲಿ ಮೊದಲೇ ಸ್ಥಾನಕ್ಕೂ ಎರಡನೇ ಸ್ಥಾನಕ್ಕೂ 120 ಅಂಕಗಳ ವ್ಯತ್ಯಾಸ ಇದೆ. ಹೀಗಿರುವಾಗ, ‘ಬಿಗ್ ಬಾಸ್‌’ ವೋಟಿಂಗ್‌ಗೆ ಹೋಗಿ ಸೆಲೆಕ್ಟ್ ಮಾಡಿ ಅಂತಾರೆ. ಟಾಸ್ಕ್ ವಿನ್ನರ್‌ - ಪ್ರತಾಪ್‌. ಜಾಸ್ತಿ ಅಂಕ ಪಡೆದವರ ಪೈಕಿ ಒಬ್ಬರು ಫಿನಾಲೆ ವಾರಕ್ಕೆ ಹೋಗಬಹುದು ಅಂತ ಮೊದಲು ‘ಬಿಗ್ ಬಾಸ್‌’ ಹೇಳ್ತಾರೆ. ಆಮೇಲೆ ‘ಬಿಗ್ ಬಾಸ್‌’ ವೋಟಿಂಗ್ ನಡೆಸುತ್ತಾರೆ. ವೋಟಿಂಗ್ ಅವಶ್ಯಕತೆ ಬೇಕಿತ್ತಾ? ಈ ಅಪ್ರೋಚ್‌ ಯಾರಿಗೆ ಫೇರ್ ಅನಿಸಿತು, ಯಾರಿಗೆ ಅನ್‌ಫೇರ್‌ ಎನಿಸಿತು?’’ ಎಂದು ಎಲ್ಲರಿಗೂ ಕಿಚ್ಚ ಸುದೀಪ್‌ ಪ್ರಶ್ನಿಸಿದರು.

BBK 10: ಅವಕಾಶವನ್ನ ಸಂಗೀತಾ ಕಿತ್ತುಕೊಂಡಿದ್ದರೂ, ವೋಟ್‌ ಹಾಕಿ ದೊಡ್ಡತನ ಮೆರೆದ ಕಾರ್ತಿಕ್‌, ತನಿಷಾ!

ಸ್ಪರ್ಧಿಗಳು ಕೊಟ್ಟ ಉತ್ತರಗಳಿವು

ತನಿಷಾ - ''ಫೇರ್ ಇತ್ತು. 3 ಜನರನ್ನ ಪಿಕ್ ಮಾಡ್ತಾರೆ ಎಂಬ ಐಡಿಯಾ ನಮಗೂ ಇರಲಿಲ್ಲ. ಸ್ಕೋರ್‌ನಲ್ಲಿ ಪ್ರತಾಪ್‌ ಚೆನ್ನಾಗಿ ಪರ್ಫಾಮ್ ಮಾಡಿದ್ದರು. ಆದರೆ ಮೊದಲ ದಿನದಿಂದಲೂ ಪ್ರತಾಪ್‌ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿಲ್ಲ ಅನ್ಸತ್ತೆ''

ವಿನಯ್ - ''ವೋಟಿಂಗ್ ಫೇರ್‌ ಇತ್ತು. ವೋಟಿಂಗ್ ಅವಶ್ಯಕತೆ ಇತ್ತು. ಯಾಕಂದ್ರೆ, ವೋಟಿಂಗ್‌ನಿಂದ ಸರಿಯಾದ ನಿರ್ಧಾರ ಬಂತು. ಟಾಸ್ಕ್‌ ಆ ವಾರಕ್ಕೆ ಮಾತ್ರ ಸೀಮಿತವಾಗಿತ್ತು''

ತುಕಾಲಿ ಸಂತು - ''ವಾರದಲ್ಲಿ ಪ್ರತಾಪ್‌ ಹೆಚ್ಚು ಅಂಕಗಳನ್ನ ಪಡೆದಿರಬಹುದು. ಆದರೆ, ಹಿಂದಿನ ವಾರಗಳಲ್ಲಿ ಅವರ ಮಾರ್ಕ್ಸ್ ಇರಲಿಲ್ಲ. ಅವರ ಆಟವನ್ನ ನಾವು ಎಲ್ಲೂ ನೋಡೇ ಇಲ್ಲ. ಯಾವುದೋ ವಾರದಲ್ಲಿ ಆಟವಾಡಿದ್ದನ್ನ ನೋಡಿದರೆ, ಉಳಿದ ವಾರಗಳಲ್ಲಿ ಆಟವನ್ನೇ ಆಡಿಲ್ಲ. ಟಿಕೆಟ್‌ ಟು ಫಿನಾಲೆ ಅಂತ ಬಂದ ಕೂಡಲೆ ದೇವರಿಗೆ ಪೂಜೆ ಮಾಡೋದೇನು, ಗೇಮ್‌ ಮೇಲೆ ಕಾನ್ಸನ್‌ಟ್ರೇಷನ್‌ ಮಾಡೋದೇನು, ಎಲ್ಲರ ಜೊತೆ ಹೊಂದಾಣಿಕೆ ಏನು.. ಈ ತರಹ ಇನ್‌ವಾಲ್ವ್‌ಮೆಂಟ್ ಇತ್ತು. ಡೂ ಆರ್ ಡೈ ಅಂತಲೇ ಆಡುತ್ತಿದ್ದರು. 13 ವಾರಗಳಲ್ಲಿ ಅದು ಇರಲಿಲ್ಲ. ಇವನಿಗೆ ಕೊಟ್ಟುಬಿಟ್ರಲ್ಲ ಅಂತ ಬೇಸರ ಆಗುತ್ತಿತ್ತು. ಅಷ್ಟರಲ್ಲಿ ವೋಟಿಂಗ್ ಅನೌನ್ಸ್ ಮಾಡಿದ್ದು ನನಗೆ ತುಂಬಾ ಖುಷಿ ಆಯ್ತು''

ಕಾರ್ತಿಕ್ - ''ವೋಟಿಂಗ್ ನಿರ್ಧಾರ ಫೇರ್ ಅನಿಸುತ್ತದೆ. ಪ್ರತಾಪ್‌ಗೆ ತುಂಬಾ ಅವಕಾಶಗಳು ಲಭಿಸಿತು. ನನಗೆ, ವಿನಯ್‌ಗೆ ಅವಕಾಶ ಸಿಗಬಾರದು ಎಂಬ ಕಾರಣಕ್ಕೆ ಅವಕಾಶಗಳು ಪ್ರತಾಪ್ ಪಾಲಾದವು. ಸಿಕ್ಕ ಅವಕಾಶಗಳನ್ನ ಪ್ರತಾಪ್ ಬಳಸಿಕೊಂಡ. ಉತ್ತಮ ಕೂಡ ಸಿಕ್ತು. ಒಂದು ವಾರದ ಪರ್ಫಾಮೆನ್ಸ್‌ನಿಂದ ಫಿನಾಲೆ ಟಿಕೆಟ್‌ ಸಿಗೋದು ನನಗೂ ಅಸಮಾಧಾನ ಇತ್ತು. ‘ಬಿಗ್ ಬಾಸ್’ ಹೇಳಿದ್ಮೇಲೆ ತುಂಬಾ ಖುಷಿ ಆಯ್ತು''

ನಮ್ರತಾ - ''ವೋಟಿಂಗ್ ಪ್ರಕ್ರಿಯೆ ನನಗೆ ತುಂಬಾ ಇಷ್ಟ ಆಯ್ತು. ಆದರೆ ಅಲ್ಲಿ ವಾದಗಳನ್ನ ಎಲ್ಲರೂ ಓಪನ್‌ ಮೈಂಡೆಡ್‌ ಆಗಿ ಕೇಳಿಸಿಕೊಳ್ಳಲಿಲ್ಲ. ವಿನಯ್‌ಗೆ ಬಿಟ್ಟರೆ ಯಾರ ಕಡೆಯಿಂದಲೂ ವೋಟ್‌ ಬರಲ್ಲ ಅನ್ನೋದು ನನಗೆ ಗೊತ್ತಿತ್ತು. ಅದೊಂದು ಬೇಜಾರಿದೆ. ಸಂಗೀತಾ ಫೈನಲಿಸ್ಟ್ ಆಗಿದ್ದಕ್ಕೆ, ಪ್ರಕ್ರಿಯೆ ಬಗ್ಗೆ ನನಗೆ ಬೇಜಾರಿಲ್ಲ''

ಸಂಗೀತಾ - ''ಟಾಪ್‌ 2 ಸೂಚಿಸುವ ವೇಳೆ ನಾನು ಪ್ರತಾಪ್ ಹೆಸರನ್ನ ತಗೊಂಡಿದ್ದೆ. ನಾನು ಅವನಿಗೆ ತುಂಬಾ ಸಪೋರ್ಟ್ ಮಾಡಿದ್ದೆ. ಆ ಪ್ರಕ್ರಿಯೆ ಆದ್ಮೇಲೆ ಪ್ರತಾಪ್ ಆಡಿದ ಮಾತುಗಳು ನನಗೆ ತುಂಬಾ ನೋವು ಕೊಟ್ಟಿದೆ. ಆದರೆ, ಪ್ರಕ್ರಿಯೆ ಒಳ್ಳೆಯದಾಗಿದೆ''

ಡ್ರೋನ್ ಪ್ರತಾಪ್‌ಗೆ ಅನ್ಯಾಯ, ಮೋಸ ಆಯ್ತಾ? Justice For Prathap ಟ್ರೆಂಡ್‌ ಆಗ್ತಿದೆ! ಅಂದು ‘ಬಿಗ್ ಬಾಸ್’ ಹೇಳಿದ್ದೇನು?

ಡ್ರೋನ್ ಪ್ರತಾಪ್‌ ಪ್ರತಿಕ್ರಿಯೆ

‘’ಒಂದು ವಾರದಲ್ಲಿ ಬರುವ ಟಾಸ್ಕ್‌ಗಳಲ್ಲಿ ಒಬ್ಬ ವ್ಯಕ್ತಿ ಗೆದ್ದು ಫಿನಾಲೆಗೆ ಹೋಗಿಬಿಟ್ಟರೆ ಎಷ್ಟು ನ್ಯಾಯ ಅಂತ ಬಂದಾಗ ನಿಮ್ಮ ಪ್ರತಿಕ್ರಿಯೆ ಏನು?’’ ಎಂದು ಸುದೀಪ್ ಕೇಳಿದಾಗ, ‘’ನಾನು ಎಫರ್ಟ್ಸ್‌ ಹಾಕಿ ಬೆಟರ್‌ ಆಗಿ ಪರ್ಫಾಮ್ ಮಾಡಿದ್ದೀನಿ. ಕುಗ್ಗಿದ್ದಾಗ ಎದ್ದು ಬಂದಿದ್ಧೀನಿ. ಮೊದಲು ಅರ್ಥ ಆಗಿರಲಿಲ್ಲ. ಹೋಗ್ತಾ ಹೋಗ್ತಾ ಅರ್ಥ ಮಾಡಿಕೊಂಡರು ಮೂರನೇ ವಾರದಿಂದ ಪಿಕಪ್ ಆಗಿ ಆಡಿಕೊಂಡು ಬಂದಿದ್ದೇನೆ. ಅ ವಾರಗಳಲ್ಲೆಲ್ಲಾ ಆಡಿದ್ದು ಒಂದಾದರೆ, ಈ ವಾರದಲ್ಲಿ ಆಡಿದನ್ನ 15-20% ಕನ್ಸಿಡರ್ ಮಾಡಿ ವೋಟಿಂಗ್ ನಡೆದಿದ್ದರೆ, ಬೇರೆ ರೀತಿ ಆಗ್ತಿತ್ತು ಅನ್ನೋದು ನನ್ನ ಅಭಿಪ್ರಾಯ’’ ಎಂದರು ಡ್ರೋನ್ ಪ್ರತಾಪ್.

BBK 10: ‘ಉತ್ತಮ’ ಪಡೆದರೂ ಡ್ರೋನ್ ಪ್ರತಾಪ್‌ಗೆ ಇದೆ ಅದೊಂದು ಕೊರಗು! ಪಾಪ.. ಬಹಳ ಆಸೆ ಇತ್ತು!

ಕಿಚ್ಚ ಸುದೀಪ್ ಕೊಟ್ಟ ವಿಮರ್ಶೆ

‘’ಈ ವಾರದಲ್ಲಿ ಕೆಲವರು ಮಾಡಿದ ರಾಜಕಾರಣ, ಸ್ಟ್ರಾಟೆಜಿ absolutely wrong. ದಿಸ್‌ ವಾಸ್‌ ದಿ ರೈಟ್‌ ವೀಕ್‌. ಎಲ್ಲರೂ ಚರ್ಚೆ ಮಾಡಿದ್ರಿ. ಆದರೆ, ಎಲ್ಲದನ್ನೂ ಚರ್ಚೆ ಮಾಡಲಿಲ್ಲ. ಒಂದು ವಾರದಲ್ಲಿ ಎಷ್ಟೆಲ್ಲಾ ಆಯ್ತು. ಅದು ಕೆಟ್ಟದಾಗಿತ್ತಾ? ಇಲ್ಲ. ಪ್ರತಿ ಪದ, ಸ್ಟ್ರಾಟೆಜಿ ಬಗ್ಗೆ ಎಷ್ಟು ಶಾರ್ಪ್ ಆಗಿದ್ರಿ. ಫಿಲ್ಟರ್ ಮಾಡಿಕೊಂಡು ಸಲಹೆ ಕೊಡ್ತಿದ್ರಿ. ಗಮನ ಹರಿಸಿ ಸ್ಟ್ರಾಟೆಜಿ ಮಾಡ್ತಿದ್ರಿ. ಈ ವಾರ ನಾನ್‌ ಪರ್ಫಾಮರ್‌ ಅಂತ ಯಾರನ್ನ ಒಬ್ಬರನ್ನ ತೋರಿಸಿ ನೋಡೋಣ. ಪ್ರತಿ ಹೆಜ್ಜೆಯಲ್ಲೂ ಮೇಕಪ್ ಇತ್ತು. ಮೈಂಡ್‌ನಲ್ಲಿ ಇದ್ದದ್ದು ಬೇರೆ. ಹೊರಗೆ ಬರ್ತಾ ಇದ್ದದ್ದು ಬೇರೆ. ಅದು ಕೆಟ್ಟದಾಗಿತ್ತಾ? ಇಲ್ಲ. ಅದೇ ‘ಬಿಗ್ ಬಾಸ್‌’. ನಿಮ್ಮ ತಲೆ, ಬುದ್ಧಿವಂತಿಕೆ, ಸ್ಮಾರ್ಟ್‌ನೆಸ್‌ನ ಇನ್ನೊಬ್ಬರಿಗೂ ಹರ್ಟ್ ಆಗದ ಹಾಗೆ ಉಪಯೋಗಿಸಿದ ರೀತಿ ಅಫೀಶಿಯಲ್ ಆಗಿತ್ತು. ಇಷ್ಟು ವಾರ ಬೇಕಾಯಿತು ನಿಮಗೆ ಗೇಮ್‌ ಅರ್ಥ ಆಗೋಕೆ, ನಿಮ್ಮ ಸ್ಟ್ರೆಂಥ್ ಅರ್ಥ ಆಗೋಕೆ, ಇನ್ನೊಬ್ಬರ ವೀಕ್ನೆಸ್‌ನ ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ’’ ಎಂದು ಕಿಚ್ಚ ಸುದೀಪ್‌ ಕಾಮೆಂಟ್ ಮಾಡಿದರು.

'ಬಿಗ್ ಬಾಸ್‌' ಕನ್ನಡ ಸೀಸನ್‌ 10ರ ಮೊದಲ ಫೈನಲಿಸ್ಟ್‌ ಆಗಿ ಸಂಗೀತಾ ಆಯ್ಕೆ! ಪ್ರತಾಪ್‌ಗೆ ಚಾನ್ಸ್ ಮಿಸ್‌ ಆಗಿದ್ದೇಗೆ?

ಕಿಚ್ಚ ಸುದೀಪ್‌ ಕೊಟ್ಟ ಸ್ಪಷ್ಟನೆ

‘’ವೋಟಿಂಗ್ ಅಪ್ರೋಚ್‌ ಕರೆಕ್ಟ್‌ ಇತ್ತಾ? ರಾಂಗ್ ಇತ್ತಾ?’’ ಎಂದು ಕಿಚ್ಚ ಸುದೀಪ್ ಕೇಳಿದಾಗ, ‘’ಕರೆಕ್ಟ್ ಇತ್ತು’’ ಎಂದರು ಡ್ರೋನ್ ಪ್ರತಾಪ್.

ಟಾಸ್ಕ್‌ ಘೋಷಣೆಯಾದಾಗ, ‘’ಅತೀ ಹೆಚ್ಚು ಅಂಕಗಳನ್ನ ಪಡೆಯುವವರ ಪೈಕಿ ಒಬ್ಬರು ಟಿಕೆಟ್‌ ಟು ಫಿನಾಲೆ ವಾರಕ್ಕೆ ಕಾಲಿಡ್ತಾರೆ’’ ಅಂತ ‘ಬಿಗ್ ಬಾಸ್‌’ ಹೇಳಿದ್ದರು. ಈ ಕ್ಲಾರಿಟಿ ನಿಮಗೆಲ್ಲಾ ಇದೆ. ನೋಡುವವರಿಗೂ ಈ ಕ್ಲಾರಿಟಿ ಕೊಡಬೇಕು ಅನಿಸಿತು. ಕೊಟ್ಟೆ. ಇಡೀ ಸೀಸನ್‌ ಅಂತ ತಗೊಂಡಾಗ ನಿಮ್ಮ ಮತಗಳು, ಅನಿಸಿಕೆಗಳು ಎಷ್ಟು ಮುಖ್ಯ ಆಗ್ತಾವೋ ಒಳಗಡೆ ಕೂತುವವರ ಪೈಕಿ ಅವರವರ ವ್ಯಾಲಿಡೇಷನ್ ಕೂಡ ಅಷ್ಟೇ ಬಹಳ ಮುಖ್ಯ ಆಗುತ್ತೆ. ಸ್ಪರ್ಧಿಗಳು ಅವರವರು ಹತ್ತಿರ ನೋಡಿಕೊಂಡಾಗ ಮೊದಲನೇ ವಾರ ಹೇಗಿದೆ, ಹಾಗೇ ಕೊನೆಯ ವಾರ ಟಚ್ ಮಾಡಿದಾಗ.. ಟಾಸ್ಕ್‌ನಲ್ಲಿ ಗೆದ್ದರೂ ವ್ಯಾಲಿಡೇಷನ್ ಮುಖ್ಯ ಆಗುತ್ತೆ. ಒಳಗಿರುವವರ ಅನಿಸಿಕೆ ಕೂಡ ಮುಖ್ಯ ಆಗುತ್ತೆ’’ ಎಂದು ಹೇಳಿ ವೀಕ್ಷಕರಿಗೆ ಕಿಚ್ಚ ಸುದೀಪ್‌ ಸ್ಪಷ್ಟನೆ ಕೊಟ್ಟರು.

ಕೊನೆಗೆ, ‘’ನಿಮ್ಮೆಲ್ಲರಲ್ಲೂ ಒಳ್ಳೆಯ ರಾಜಕಾರಣಿಗಳಿದ್ದಾರೆ. ಎಲ್ರೂ ಚೆನ್ನಾಗಿ ಆಡಿದ್ರಿ’’ ಎಂದು ಸ್ಪರ್ಧಿಗಳಿಗೆ ಸುದೀಪ್ ಅಪ್ರೀಷಿಯೇಟ್ ಮಾಡಿದರು. ಅಂದ್ಹಾಗೆ, ‘ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮದ ಸಂಚಿಕೆಗಳು ಪ್ರತಿ ರಾತ್ರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಬಿಬಿಕೆ 10 ಜಿಯೋ ಸಿನಿಮಾದಲ್ಲಿ 24*7 ಲೈವ್ ಸ್ಟ್ರೀಮ್ ಆಗುತ್ತಿದೆ.
ಹರ್ಷಿತಾ ಎನ್
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ