ಆ್ಯಪ್ನಗರ

Episode 61 Highlights: ಹರೀಶ್ ರಾಜ್‌ರನ್ನು ಥೂ ಎಂದು ಉಗಿದ ವಾಸುಕಿ ವೈಭವ್

ಬಿಗ್ ಬಾಸ್ ಲೋಕದಲ್ಲಿ ರಾಕ್ಷಸರು ಮತ್ತು ಗಂಧರ್ವರ ನಡುವಿನ ಟಾಸ್ಕ್‌ಗಳು ಸತತ ಮೂರನೇ ದಿನವೂ ಮುಂದುವರೆದಿದೆ. ಎರಡೂ ತಂಡಗಳ ನಡುವೆ ಮಾತಿಗೆ ಮಾತು, ನಿಯಮಗಳ ಉಲ್ಲಂಘನೆಯಿಂದ ಸೌಮ್ಯ ಸ್ವಭಾವದ ಚಂದನಾ ಇಕ್ಕಟ್ಟಿಗೆ ಸಿಕ್ಕಂತಿದೆ. ಮುಖ್ಯವಾಗಿ ಚಂದನಾ ಅವರಿಗೆ ಸ್ವತಃತ್ರ ನಿರ್ಧಾರ ತೆಗೆದುಕೊಳ್ಳಲೂ ಬರುತ್ತಿಲ್ಲ. ಯಾರು ಸ್ಟ್ರಾಂಗ್ ಆಗಿ ಮಾತನಾಡುತ್ತಾರೋ ಅವರ ಪರವಾಗಿ ತೀರ್ಪು ತೆಗೆದುಕೊಳ್ಳುತ್ತಾ, ತಂಡಗಳನ್ನು ನಿಭಾಯಿಸುವ ಚಾಕಚಕ್ಯತೆ ಇಲ್ಲದೆ ಎರಡೂ ತಂಡಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇ ವಿಚಾರಕ್ಕೆ ಚಂದನಾ ಮೇಲೆ ಬೇಸರಗೊಂಡು ತಾವು ಊಟ ಮಾಡಲ್ಲ ಎಂದು ಕಿಶನ್ ನಿರ್ಧರಿಸಿದರು. ಅವರು ತಿನ್ನಲ್ಲ ಎಂದರೆ ನಾವೂ ತಿನ್ನಲ್ಲ ಎಂದು ರಾಜು ತಾಳಿಕೋಟೆ ಸಹ ಹಠಕ್ಕೆ ಬಿದ್ದರು. ಇದರಿಂದ ಬೇಸರಗೊಂಡ ಚಂದನಾ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.

Vijaya Karnataka Web 13 Dec 2019, 7:08 pm

Vijaya Karnataka Web bigg boss 7 episode 61 day 60 written updates harish raj upsets on vasuki vaibhav
Episode 61 Highlights: ಹರೀಶ್ ರಾಜ್‌ರನ್ನು ಥೂ ಎಂದು ಉಗಿದ ವಾಸುಕಿ ವೈಭವ್

ಒಡತಿಯಾಗಿ ಚಂದನಾ ಸಂಪೂರ್ಣ ವಿಫಲ

ಇತ್ತಂಡಗಳನ್ನು ನಿಭಾಯಿಸುವಲ್ಲಿ ಒಡತಿಯಾಗಿರುವ ಚಂದನಾ ಸಂಪೂರ್ಣ ವಿಫಲರಾದರು ಎಂದೇ ಹೇಳಬೇಕು. ಟಾಸ್ಕ್‌ಗಿಂತ ಹೆಚ್ಚಾಗಿ ಚಂದನಾರ ನಾಯಕತ್ವದ ಬಗ್ಗೆಯೇ ಮನೆಯ ಸದಸ್ಯರು ಹೆಚ್ಚು ಹೆಚ್ಚು ಚರ್ಚಿಸುವಂತಾಯಿತು. ಟಾಸ್ಕ್‌ನಲ್ಲಿ ವಾಸುಕಿ ವೈಭವ್ ಥೂ ಎಂದು ಹರೀಶ್ ರಾಜ್‌ರನ್ನು ಬೈದದ್ದಕ್ಕೆ, ಹರೀಶ್ ರಾಜ್ ಸಹ ಥೂ ಥೂ ಎಂದು ಉಗಿದರು.

ಬಿಗ್ ಬಾಸ್ ಮನೆಯಲ್ಲಿ ಅಪ್ಪನ ಪತ್ರ ಓದಿ ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ ಡ್ಯಾನ್ಸಿಂಗ್ ಸ್ಟಾರ್ ಕಿಶನ್ ಬಿಳಗಲಿ

ಹರೀಶ್ ರಾಜ್‌ರನ್ನು ಥೂ ಎಂದು ಉಗಿದ ವಾಸುಕಿ

ಗಂಧರ್ವನೊಬ್ಬ ಥೂ ಎಂದು ಉಗಿಯುವುದು ಸರಿಯಲ್ಲ, ರಾಕ್ಷಸರಾದ ನಾವು ಥೂ ಎಂದು ಉಗಿಯಬಹುದು ಎಂದರು. ತನ್ನನ್ನು ಥೂ ಎಂದು ಉಗಿದರು ಎಂಬ ಕಾರಣದಿಂದ ಈ ಟಾಸ್ಕ್‌ನಲ್ಲಿ ನನಗೆ ಮುಂದುವರೆಯಲು ಸಾಧ್ಯವೈಲ್ಲ ಎಂದು ಕೂತುಬಿಟ್ಟರು ಹರೀಶ್ ರಾಜ್. ನನಗೆ ಮೂರು ಸಲ ಥೂ ಎಂದು ಉಗಿದಿದ್ದಾರೆ. ಅವನ್ಯಾರೋ ನನ್ನನ್ನು ಉಗಿದಿದ್ದಾನೆ. ಆದ್ದರಿಂದ ನಾನು ಈ ಟಾಸ್ಕನಿಂದ ಹೊರಬರುತ್ತಿದ್ದೇನೆ ಎಂದು ಕ್ಯಾಮೆರಾ ಮುಂದೆ ಹರೀಶ್ ರಾಜ್ ಹೇಳಿದರು.

ಸ್ಯಾಂಡಲ್‍ವುಡ್ ಚಿತ್ರೋತ್ಸವ 2019: ನಿಮ್ಮ ನೆಚ್ಚಿನ ತಾರೆಯರಿಗೆ ವೋಟ್ ಮಾಡಿ

ಬೇಸರದಿಂದ ಟಾಸ್ಕನ್ನೇ ಬಿಟ್ಟ ಹರೀಶ್ ರಾಜ್

ಈ ಘಟನೆಯಿಂದ ಬೇಸರಗೊಂಡಿದ್ದರು ಹರೀಶ್ ರಾಜ್. ಇದಕ್ಕೂ ಮುನ್ನ ಕಿಶನ್‌ರನ್ನು ನೀನೊಬ್ಬ ಕೇವಲ ನೃತ್ಯಗಾರನಷ್ಟೇ ಎಂದದ್ದಕ್ಕೆ ಕಿಶನ್ ಬೇಸರಗೊಂಡಿದ್ದ. ನಾನು ವೈಯಕ್ತಿಕವಾಗಿ ನಿನ್ನ ಬಗ್ಗೆ ಮಾತನಾಡಿದರೆ ನೀನು ಕಣ್ಣೀರು ಹಾಕುತ್ತೀಯ ಎಂದು ಹರೀಶ್ ರಾಜ್ ಬಗ್ಗೆ ಕಿಶನ್‌ ಹೇಳಿದರು. ಇದಕ್ಕೆ ಪ್ರತಿಯಾಗಿ ಹರೀಶ್ ರಾಜ್ ಹೇಳು ನೋಡಿಯೇ ಬಿಡೋಣ. ಅದೇನು ಹೇಳುತ್ತೀಯೋ ಹೇಳು ಎಂದು ಕೆಣಕಿದರು. ಆದರೆ ಕಿಶನ್ ಏನೂ ಹೇಳಲಿಲ್ಲ. ಹರೀಶ್ ರಾಜ್ ರಾಕ್ಷಸನ ಪಾತ್ರದಲ್ಲಿ ರಾಕ್ಷಸನಂತೆಯೇ ಅತಿಯಾಗಿ ಆಡುತ್ತಿದ್ದಾರೆ.

ಟಾಸ್ಕ್ ಆಡುತ್ತಿದ್ದಾಗ ಕಿಶನ್‌ರನ್ನು ಕೆಣಕಿದ ಹರೀಶ್

ಇದಕ್ಕೂ ಮುನ್ನ ಫಿಸಿಕಲ್ ಟಾಸ್ಕ್ ಆಡುತ್ತಿರಬೇಕಾದರೆ ಕಿಶನ್‌ರನ್ನು ಬೇಕೆಂದೇ ಕೆಣಕಿದರು ಹರೀಶ್ ರಾಜ್. ಇದು ಸ್ವಲ್ಪ ವಿಕೋಪಕ್ಕೂ ತಿರುಗಿತು. ಆದರೆ ಗಂಧರ್ವನಾಗಿದ್ದ ಕಿಶನ್ ಹೆಚ್ಚು ಮಾತನಾಡದೆ ಸಂಯಮ ಪ್ರದರ್ಶಿಸಿದರು. ಟ್ರಿಗರ್ ಆಗುವ ಸಾಧ್ಯತೆಗಳಿದ್ದರೂ ಕಿಶನ್ ಸಂಯಮದಿಂದ ವರ್ತಿಸಿದರು. ನೀನೊಬ್ಬ ಕೇವಲ ನೃತ್ಯಪಟು ಎಂದು ಕೆಣಕಿದ್ದರು ಹರೀಶ್ ರಾಜ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ