Please enable javascript.Ramachari Today Episode,Ramachari Serial: ಆವಾಜ್ ಹಾಕಿದ ಮಾನ್ಯತಾಗೆ ಖಡಕ್ಕಾಗಿ ವಾರ್ನಿಂಗ್ ಕೊಟ್ಟ ವೈಶಾಖ! - ramachari serial written update may 14 2024 episode vaishaka warns manyatha - Vijay Karnataka

Ramachari Serial: ಆವಾಜ್ ಹಾಕಿದ ಮಾನ್ಯತಾಗೆ ಖಡಕ್ಕಾಗಿ ವಾರ್ನಿಂಗ್ ಕೊಟ್ಟ ವೈಶಾಖ!

Authored byಹರ್ಷಿತಾ ಎನ್ | Vijaya Karnataka Web 14 May 2024, 7:02 pm
Subscribe

Ramachari Kannada Serial Today Episode : ಇಷ್ಟು ದಿನ ಮಾನ್ಯತಾಗೆ ವೈಶಾಖ ಕೈಜೋಡಿಸಿದ್ದಳು. ಆದ್ರೀಗ, ಸತ್ಯ ದರ್ಶನ ಆದ್ಮೇಲೆ ಮಾನ್ಯತಾ ವಿರುದ್ಧ ವೈಶಾಖ ತಿರುಗಿ ಬಿದ್ದಿದ್ದಾಳೆ. ಆವಾಜ್ ಹಾಕಿದ ಮಾನ್ಯತಾಗೆ ವೈಶಾಖ ಧಮ್ಕಿ ಹಾಕಿದ್ದಾಳೆ.

ಹೈಲೈಟ್ಸ್‌:

  • ಭಲೇ.. ಭಲೇ.. ಮಾನ್ಯತಾಗೆ ಧಮ್ಕಿ ಹಾಕಿದ ವೈಶಾಖ!
  • ‘ಇನ್ನೊಂದ್ಸಲಿ ಫೋನ್ ಮಾಡಿದರೆ ಜೈಶಂಕರ್‌ಗೆ ಎಲ್ಲಾ ಹೇಳಬೇಕಾಗುತ್ತೆ’ ಅಂತ ಮಾನ್ಯತಾಗೆ ವಾರ್ನಿಂಗ್ ಕೊಟ್ಟ ವೈಶಾಖ
  • ದೇವಸ್ಥಾನಕ್ಕೆ ಹಣ ವಾಪಸ್ ಮಾಡಿದ ವಿಶಾಲ್: ಸಹೋದರನನ್ನ ವೈಶಾಖ ಬದಲಿಸುವುದು ಹೇಗೆ?

ramachari serial written update may 14 2024 episode vaishaka warns manyatha
Ramachari Serial: ಆವಾಜ್ ಹಾಕಿದ ಮಾನ್ಯತಾಗೆ ಖಡಕ್ಕಾಗಿ ವಾರ್ನಿಂಗ್ ಕೊಟ್ಟ ವೈಶಾಖ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳ ಪೈಕಿ ‘ರಾಮಾಚಾರಿ’ ಕೂಡ ಒಂದು. ‘ರಾಮಾಚಾರಿ’ ಧಾರಾವಾಹಿ ಇದೀಗ ರೋಚಕ ಹಂತ ತಲುಪಿದೆ. ವೈಶಾಖ ಇದೀಗ ಸಂಪೂರ್ಣವಾಗಿ ಬದಲಾಗಿದ್ದಾಳೆ. ವೈಶಾಖಳ ಮನಸ್ಸಿನಲ್ಲಿ ಇದೀಗ ಸ್ವಲ್ಪವೂ ದ್ವೇಷ ಇಲ್ಲ. ದ್ವೇಷ ಕಾರುತ್ತಿರುವ ಮಾನ್ಯತಾಗೆ ವೈಶಾಖ ಖಡಕ್ ವಾರ್ನಿಂಗ್ ಕೊಟ್ಟಿದ್ದಾಳೆ ಅಂದ್ರೆ ನೀವು ನಂಬಲೇಬೇಕು.!

ವೈಶಾಖಗೆ ಮಾನ್ಯತಾ ಫೋನ್ ಮೇಲೆ ಫೋನ್!

ವೈಶಾಖಗೆ ಮಾನ್ಯತಾ ಫೋನ್ ಮೇಲೆ ಫೋನ್ ಮಾಡುತ್ತಿದ್ದಳು. ಆದರೆ, ಮಾನ್ಯತಾಳ ಫೋನ್ ಕಾಲ್‌ಗಳನ್ನ ವೈಶಾಖ ಅವಾಯ್ಡ್ ಮಾಡುತ್ತಿದ್ದಳು. ಮಾನ್ಯತಾಳ ಫೋನ್ ಕರೆಗಳನ್ನ ವೈಶಾಖ ಪಿಕ್ ಮಾಡುತ್ತಿರಲಿಲ್ಲ. ಆದರೆ, ಟಾರ್ಚರ್‌ ಜಾಸ್ತಿ ಆಗುತ್ತಿದ್ದ ಹಾಗೆ ಮಾನ್ಯತಾಳ ಫೋನ್ ಕಾಲ್ ಪಿಕ್ ಮಾಡಿ ವಾರ್ನಿಂಗ್ ಕೊಟ್ಟಿದ್ದಾಳೆ ವೈಶಾಖ.


‘’ಈ ಮನೆಗೆ ಕೆಟ್ಟದ್ದು ಬಯಸಿದರೆ ನಾನು ಸುಮ್ಮನೆ ಇರಲ್ಲ. ಇನ್ನೊಂದು ಬಾರಿ ನನಗೆ ಫೋನ್ ಮಾಡಿದರೆ ನೇರವಾಗಿ ಮನೆಗೆ ನುಗ್ಗಿ ಜೈಶಂಕರ್‌ಗೆ ಎಲ್ಲಾ ವಿಷಯ ಹೇಳಬೇಕಾಗುತ್ತದೆ’’ ಎಂದು ಮಾನ್ಯತಾಗೆ ವೈಶಾಖ ಧಮ್ಕಿ ಹಾಕಿದ್ದಾಳೆ.

ಲಕ್ಷ ಲಕ್ಷ ಹಣ ತೆಗೆದುಕೊಂಡಿರುವ ಬಗ್ಗೆ ಮಾನ್ಯತಾ ಪ್ರಶ್ನೆ ಮಾಡಿದಾಗ, ‘’ಸಾಲ ಮಾಡಿದರೂ ಸರಿ.. ಹಣವನ್ನ ವಾಪಸ್ ಕೊಡ್ತೀನಿ’’ ಅಂತ ವೈಶಾಖ ಗುಡುಗಿದ್ದಾಳೆ. ಸಡನ್‌ ಆಗಿ ವೈಶಾಖ ಚೇಂಜ್ ಆಗಿರೋದನ್ನ ನೋಡಿ ಮಾನ್ಯತಾಗೆ ಕನ್‌ಫ್ಯೂಸ್ ಆಗಿದೆ.
Ramachari Serial: ‘ನಾನು ಜೈಲಿಗೆ ಹೋಗ್ತೀನಿ, ನೀನು ಮನೆಯನ್ನ ಕಾಪಾಡು’: ಕೃಷ್ಣನ ಜೊತೆ ಕೈ ಜೋಡಿಸಿದ ವೈಶಾಖ!

ರಾಮಾಚಾರಿ - ಕೃಷ್ಣನನ್ನ ಕಂಡ ದೀಪಾ, ತುಳಸಿ!

ಬಹಳ ದಿನಗಳ ನಂತರ ಅಣ್ಣ ನಾರಾಯಣಾಚಾರ್ ಮನೆಗೆ ತಂಗಿ ತುಳಸಿ ಬಂದಿದ್ದಾರೆ. ರಾಮಾಚಾರಿ - ದೀಪಾ ಮದುವೆ ನಡೆಯಲಿಲ್ಲ ಎಂಬ ಬೇಸರ ತುಳಸಿಗೆ ಇದೆ. ‘’ಋಣ ಇರಲಿಲ್ಲ’’ ಅಂತ್ಹೇಳಿ ತುಳಸಿಯನ್ನ ಜಾನಕಿ ಸಮಾಧಾನ ಪಡಿಸಿದ್ದಾರೆ. ಅವಳಿ - ಜವಳಿ ರಾಮಾಚಾರಿ - ಕೃಷ್ಣನನ್ನ ಕಂಡು ತುಳಸಿ ಮತ್ತು ಮಗಳು ದೀಪಾ ಬೆರಗಾಗಿದ್ದಾರೆ.
Ramachari Serial: ನಾರಾಯಣಾಚಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವೈಶಾಖ!

ಹಣ ವಾಪಸ್ ಮಾಡಿದ ವಿಶಾಲ್!

ಇಷ್ಟು ವರ್ಷ ಪ್ರತಿ ತಿಂಗಳು ದೇವಸ್ಥಾನದಿಂದ ತಮಗೆ ಹಣ ಬರುತ್ತಿತ್ತು ಎಂದು ವೈಶಾಖ ಫ್ಯಾಮಿಲಿ ಭಾವಿಸಿತ್ತು. ಆದರೆ, ಜಾನಕಿ ಸತ್ಯ ದರ್ಶನ ಮಾಡಿಸಿದರು. ವೈಶಾಖ ಫ್ಯಾಮಿಲಿಗೆ ದುಡ್ಡು ಕೊಡ್ತಾಯಿದ್ದದ್ದು ನಾರಾಯಣಾಚಾರ್ ಫ್ಯಾಮಿಲಿ. ಇದು ಗೊತ್ತಾದ್ಮೇಲೆ ವೈಶಾಖ ಬದಲಾದಳು. ಆದರೆ, ವೈಶಾಖ ಸಹೋದರ ವಿಶಾಲ್ ಮನಸ್ಸಿನಲ್ಲಿ ದ್ವೇಷ ಕೊಂಚ ಕೂಡ ಕಮ್ಮಿ ಆಗಿಲ್ಲ. ಹೀಗಾಗಿ, ಹಣವನ್ನ ವಿಶಾಲ್ ಹಿಂದಿರುಗಿಸಿದ್ದಾನೆ. ಸಹೋದರನನ್ನ ವೈಶಾಖ ಬದಲಾಯಿಸುವುದಾದರೂ ಹೇಗೆ? ಎಂಬುದೇ ಸದ್ಯದ ಪ್ರಶ್ನೆ. ಅಂದ್ಹಾಗೆ, ‘ರಾಮಾಚಾರಿ’ ಧಾರಾವಾಹಿಯಲ್ಲಿ ರಾಮಾಚಾರಿ / ಕಿಲ್ಲರ್ ಕಿಟ್ಟಿ (ಕೃಷ್ಣ) ಆಗಿ ರಿತ್ವಿಕ್ ಕೃಪಾಕರ್, ಚಾರುಲತಾ ಆಗಿ ನಟಿ ಮೌನಾ ಗುಡ್ಡೇಮನೆ, ವೈಶಾಖ ಆಗಿ ನಟಿ ಐಶ್ವರ್ಯಾ ಸಾಲಿಮಠ, ಮಾನ್ಯತಾ ಆಗಿ ನಟಿ ಝಾನ್ಸಿ ಸುಬ್ಬಯ್ಯ, ಜೈಶಂಕರ್ ಆಗಿ ಚಿ ಗುರುದತ್, ನಾರಾಯಣಾಚಾರ್ ಆಗಿ ಶಂಕರ್ ಅಶ್ವತ್ಥ್, ಜಾನಕಿ ಆಗಿ ಅಂಜಲಿ ಸುಧಾಕರ್ ಅಭಿನಯಿಸುತ್ತಿದ್ದಾರೆ.
ಹರ್ಷಿತಾ ಎನ್
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ