ಬಹುಸಂಗಾತಿ ಇರಬೇಕು / ಮುಕ್ತ ಸಂಬೋಗ ಇರಬೇಕು ಎಂದು ಯಾಕೆ ಯೋಚಿಸುತ್ತೀರಿ? ನಟ ಅರ್ಜುನ್ ಕಪೂರ್ ಉತ್ತರ ಏನು?

ಇತ್ತೀಚೆಗೆ ನಡೆದ ಇವೆಂಟ್‌ವೊಂದರಲ್ಲಿ ಬಾಲಿವುಡ್ ನಟ ಅರ್ಜುನ್ ಕಪೂರ್ ಅವರಿಗೆ ವಿವಾಹಪೂರ್ವ ಲೈಂಗಿಕತೆ ಬಗ್ಗೆ ಪ್ರಶ್ನೆ ಮಾಡಲಾಯ್ತು. ಅರ್ಜುನ್ ಕಪೂರ್ ಅವರಿಗೆ" ನಮ್ಮ ದೇಶದ ಸಂಸ್ಕೃತಿಯೇ ನಮ್ಮ ಅಸ್ಮಿತೆ. ಓರ್ವ ಪುರುಷನಿಗೆ ಓರ್ವ ಮಹಿಳೆ ಎನ್ನುವುದು ಭಾರತದ ಅಸ್ಮಿತೆ. ಮದುವೆಗೂ ಮುನ್ನ ಲೈಂಗಿಕ ಸಂಬಂಧ ಬೆಳೆಸಬಾರದು ಎನ್ನುವುದುಂಟು. ನಾವು ಒಮ್ಮೆ ಬದುಕುತ್ತೇವೆ, ಒಮ್ಮೆ ಸಾಯುತ್ತೇವೆ, ಒಮ್ಮೆ ಮದುವೆಯಾಗುತ್ತೇವೆ. ಇದನ್ನು ಶಾರುಖ್ ಅವರು ಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ನೀವು ಯಾಕೆ ಬಹುಸಂಗಾತಿಗಳಿರಬೇಕು ಅಥವಾ ಮುಕ್ತ ಸಂಬೋಗ ಇರಬೇಕು ಎಂದು ಯೋಚನೆ ಮಾಡುತ್ತೀರಿ" ಎಂದು ಪ್ರಶ್ನೆ ಮಾಡಲಾಗಿತ್ತು.

49ನೇ ವರ್ಷದಲ್ಲಿ ಪಿಂಕ್ ಡ್ರೆಸ್‌ನಲ್ಲಿ ಕಂಗೊಳಿಸಿದ ನಟಿ ಮಲೈಕಾ ಅರೋರ

"ಯಾರು ಈ ಐಡೆಂಟಟಿಯನ್ನು ಮಾಡಿದ್ದಾರೆ" ಎಂದು ಅರ್ಜುನ್ ಕಪೂರ್ ಅವರು ಪ್ರಶ್ನೆ ಕೇಳಿದ್ದಾರೆ. ಆಗ ಪತ್ರಕರ್ತ ಅವರು "ಶಾರುಖ್ ಖಾನ್" ಎಂದಿದ್ದಾರೆ. ಆಗ ಅರ್ಜುನ್ ಕಪೂರ್, "ಶಾರುಖ್ ಖಾನ್ ದೇಶದ ಐಡೆಂಟಿಟಿ ಅಲ್ಲ, ಆದರೆ ಶಾರುಖ್ ಖಾನ್ ಅವರು ಈ ರೀತಿ ವಿಷಯವನ್ನು ಪ್ರಚಾರ ಮಾಡೋದಿಲ್ಲ" ಎಂದು ಹೇಳಿದ್ದಾರೆ.

Boycott Trend: ಬಾಯ್ಕಾಟ್ ಬಗ್ಗೆ ಅರ್ಜುನ್ ಕಪೂರ್ ಹೇಳಿಕೆ; 'ಸಾರ್ವಜನಿಕರಿಗೆ ಬೆದರಿಕೆ ಹಾಕಬೇಡಿ'- ನರೋತ್ತಮ್ ಮಿಶ್ರಾ

ಮತ್ತೆ ಮುಂದುವರಿದು ಅರ್ಜುನ್ ಅವರು "ವ್ಯಕ್ತಿಯ ಜೀವನದಲ್ಲಿ ಏಳು ಬೀಳು ಇರುತ್ತದೆ. ನೀವು ಸಾಕಷ್ಟು ಜನರನ್ನು ನೋಡುತ್ತೀರಿ, ರಿಲೇಶನ್‌ಶಿಪ್‌ನ್ನು ಬೆಳೆಸಿಕೊಳ್ಳುತ್ತೀರಿ. ಮದುವೆಯಾಗದೆ ಇರೋದಕ್ಕಿಂತ ಮದುವೆಯಾಗೋದು ದೊಡ್ಡ ವಿಷಯ. ರಿಲೇಶನ್‌ಶಿಪ್‌ನಲ್ಲಿರೋದು ದೊಡ್ಡ ವಿಷಯವೇ ಆದರೂ ಕೂಡ ಮದುವೆಯಷ್ಟು ದೊಡ್ಡದಲ್ಲ. ಮದುವೆ ಹಂತಕ್ಕೆ ಹೋಗಲು ಸಾಕಷ್ಟು ಹಂತ ಇರುತ್ತದೆ. ಒಬ್ಬರನ್ನು ನೋಡಿದಾಗಲೇ ನಾವು ಇವರನ್ನು ಮದುವೆಯಾಗಬೇಕು ಎಂದು ನಿರ್ಧಾರಕ್ಕೆ ಬರೋದು ಕಷ್ಟ" ಎಂದಿದ್ದಾರೆ.

Vijaya Karnataka Web 22 Nov 2022, 8:42 am
Loading ...