Video: 'ಆಕ್ಟ್-1978' ಚಿತ್ರತಂಡಕ್ಕೆ ಬೆಂಬಲವಾಗಿ ನಿಂತ 'ಚಾಲೆಂಜಿಂಗ್ ಸ್ಟಾರ್' ದರ್ಶನ್!

ಯಜ್ಞಾ ಶೆಟ್ಟಿ, ಪ್ರಮೋದ್ ಶೆಟ್ಟಿ, ಬಿ. ಸುರೇಶ, ಸಂಚಾರಿ ವಿಜಯ್ ಮುಂತಾದವರು ನಟಿಸಿರುವ 'ಆಕ್ಟ್-1978' ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಲಾಕ್‌ಡೌನ್‌ ನಂತರ ತೆರೆಕಂಡ ಮೊದಲ ಕನ್ನಡ ಸಿನಿಮಾ ಇದಾಗಿದ್ದು, ಚತ್ರತಂಡದ ಧೈರ್ಯಕ್ಕೆ ಸ್ಯಾಂಡಲ್‌ವುಡ್‌ ಮೆಚ್ಚುಗೆ ಸೂಚಿಸಿದೆ. ಈಚೆಗೆ ನಟ ದರ್ಶನ್‌ ಕೂಡ ಇಡೀ ತಂಡವನ್ನು ತಮ್ಮ ಮನೆಗೆ ಕರೆಸಿಕೊಂಡು, ಉಪಚರಿಸಿದ್ದಾರೆ. 'ಆಕ್ಟ್-1978 ಚಿತ್ರ ರಿಲೀಸ್ ಆಗಿದ್ದು, ಎಲ್ಲರಿಂದ ಉತ್ತಮ ವಿಮರ್ಶೆ ಪಡೆದುಕೊಂಡಿದೆ. ಸರ್ಕಾರಿ ಕಚೇರಿಗಳಲ್ಲಿ ಏನು ನಡೆಯುತ್ತಿದೆ ಎಂಬ ಅಂಶವನ್ನಿಟ್ಟುಕೊಂಡು ಕಥೆ ಮಾಡಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ಎಲ್ಲರೂ ಕಷ್ಟದಲ್ಲಿದ್ದರು. ಈಗ ನಿಧಾನವಾಗಿ ಹೊರಗೆ ಬರುತ್ತಿದ್ದಾರೆ. ನೀವೆಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಿನಿಮಾ ನೋಡಿ' ಎಂದು ವಿಡಿಯೋ ಮೂಲಕ ಪ್ರೇಕ್ಷಕರಲ್ಲಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ.

Vijaya Karnataka Web 23 Nov 2020, 5:55 pm
Loading ...