Video: ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಉಚಿತವಾಗಿ ಫುಡ್‌ ಕಿಟ್ ಹಂಚಿದ ನಟಿ ರಾಗಿಣಿ!

ನಟಿ ರಾಗಿಣಿ ದ್ವಿವೇದಿ ಕಳೆದ ಬಾರಿ ಕೊರೊನ ವೈರಸ್ ಹೆಚ್ಚಾಗಿ ಲಾಕ್‌ಡೌನ್‌ ಆದಾಗ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿದ್ದರು. ಅನೇಕ ಪೊಲೀಸರಿಗೆ, ವೈದ್ಯಕೀಯ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ ಆಹಾರ ವಿತರಣೆ ಮಾಡಿದ್ದರು. ಬಡವರಿಗೆ ಫುಡ್‌ ಕಿಟ್‌ಗಳನ್ನು ನೀಡಿದ್ದರು. ಇದೀಗ ಅವರು ಪುನಃ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಬಾರಿ ಅವರು ಸ್ಮಶಾನಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಫುಡ್‌ ಕಿಟ್ ವಿತರಣೆ ಮಾಡಿದ್ದಾರೆ. ಚಾರಿಟೆಬಲ್‌ ಟ್ರಸ್ಟ್‌ವೊಂದರ ನೇತೃತ್ವದಲ್ಲಿ ಕಾಕ್ಸ್‌ ಟೌನ್‌ ಹತ್ತಿರದ ಕಲ್ಲಹಳ್ಳಿ ಹಾಗೂ ಭಾರತಿನಗರ ಬಳಿಯ ಸ್ಮಶಾನದ ಸಿಬ್ಬಂದಿಗೆ ರಾಗಿಣಿ ಆಹಾರ ಸಾಮಗ್ರಿಗಳನ್ನು ನೀಡಿದ್ದಾರೆ. ಪ್ರತಿನಿತ್ಯ ನೂರಾರು ಜನ ಕೋವಿಡ್‌ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸಮಯದಲ್ಲಿ ಸ್ಮಶಾನದಲ್ಲೂ ಹೆಚ್ಚು ಕೆಲಸದ ಒತ್ತಡ ಇರುವುದನ್ನು ನಾವು ನೋಡಿದ್ದೇವೆ. ಈ ಸಮಯದಲ್ಲಿ ಅಲ್ಲಿ ಕರ್ತವ್ಯದಲ್ಲಿ ತೊಡಗಿಕೊಂಡಿರುವವರಿಗೂ ಧೈರ್ಯ ತುಂಬುವ ಕೆಲಸವನ್ನು ರಾಗಿಣಿ ಮಾಡಿದ್ದಾರೆ. ಇಲ್ಲಿ ಮಾತ್ರವಲ್ಲದೆ, ಈಚೆಗೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ ಆಹಾರ ನೀಡಿದ್ದರು ರಾಗಿಣಿ.

ಹೊಸ ಚಿತ್ರಕ್ಕೆ ಸಹಿ ಹಾಕಿದ ರಾಗಿಣಿ ದ್ವಿವೇದಿ: ಖಾಕಿ ತೊಡಲಿದ್ದಾರೆ ತುಪ್ಪದ ಬೆಡಗಿ!

Vijaya Karnataka Web 5 May 2021, 5:42 pm
Loading ...