Please enable javascript.Rishab Shetty,Suniel Shetty: ರಿಷಬ್‌ ಶೆಟ್ಟಿಯ 'ಕಾಂತಾರ' ಸಿನಿಮಾ ನೋಡಿ ಮೆಚ್ಚಿಕೊಂಡ ಬಾಲಿವುಡ್‌ ನಟ ಸುನೀಲ್ ಶೆಟ್ಟಿ - bollywood actor suniel shetty speaks about rishab shettys kantara - Vijay Karnataka

Suniel Shetty: ರಿಷಬ್‌ ಶೆಟ್ಟಿಯ 'ಕಾಂತಾರ' ಸಿನಿಮಾ ನೋಡಿ ಮೆಚ್ಚಿಕೊಂಡ ಬಾಲಿವುಡ್‌ ನಟ ಸುನೀಲ್ ಶೆಟ್ಟಿ

Vijaya Karnataka Web 20 Nov 2022, 7:32 pm
Embed

ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಈವರೆಗೂ ಸುಮಾರು 375 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಈ ಸಿನಿಮಾ ಗಳಿಸಿದೆ. ರಿಷಬ್‌ ಶೆಟ್ಟಿ ನಿರ್ದೇಶನ, ನಟನೆಗೆ ಎಲ್ಲರಿಂದಲೂ ಭಾರಿ ಮೆಚ್ಚುಗೆ ಸಿಕ್ಕಿದೆ. ಕನ್ನಡದ ಜೊತೆಗೆ ಪರಭಾಷೆಯ ಕಲಾವಿದರು ಕೂಡ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸದ್ಯ ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಅವರು 'ಕಾಂತಾರ' ಸಿನಿಮಾ ನೋಡಿದ್ದಾರೆ. ಸುನೀಲ್ ಶೆಟ್ಟಿ ಅವರು ಕೂಡ ಕರಾವಳಿ ಮೂಲದವರು. ಅವರಿಗೆ ಈ ಸಿನಿಮಾ ತುಂಬ ಕನೆಕ್ಟ್ ಆಗಿದೆ. ಕಾಂತಾರ ನೋಡಿ ಸುನೀಲ್ ಶೆಟ್ಟಿ ಹೇಳಿದ್ದೇನು? ‘ನಾನು ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾವನ್ನು ನೋಡಿದೆ. ಕೊನೆಯ 20-25 ನಿಮಿಷ ನೋಡುವಾಗಲಂತೂ ನನಗೆ ಅರಿವಿಲ್ಲದಂತೆಯೇ ನನ್ನ ಕಣ್ಣಲ್ಲಿ ಕಣ್ಣೀರು ಬಂತು. ಸಿನಿಮಾ ನೋಡಿ ತುಂಬಾ ಭಾವುಕನಾಗಿಬಿಟ್ಟೆ. ಯಾಕೆಂದರೆ, ನಾನು ಕೂಡ ಆ ಮಣ್ಣಿನವನು. ನಾನು ಅಲ್ಲಿ ಹುಟ್ಟಿ ಬೆಳೆದವನು. ಹಾಗಾಗಿ ಕಾಂತಾರ ಸಿನಿಮಾವು ನನಗೆ ಬಹಳ ಬೇಗನೇ ಕನೆಕ್ಟ್ ಆಯಿತು.. ನಾನು ಪ್ರತಿವರ್ಷ ಹೋಗುತ್ತೇನೆ. ದೈವಾರಾಧನೆ, ಭೂತಗಳಿಗೆ ಪೂಜೆ ಮಾಡುತ್ತೇವೆ. ಕೋಲ ಮಾಡಿಸುತ್ತೇವೆ. ರಿಷಬ್ ಶೆಟ್ಟಿ ಅವರಿಗೆ ಸಿನಿಮಾದ ಮೇಲಿರುವ ಪ್ಯಾಷನ್ ಏನೆಂಬುದು ಗೊತ್ತಾಗುತ್ತದೆ. ಕಾಂತಾರದಲ್ಲಿ ದೃಶ್ಯ ವೈಭವವಿದೆ. ಕಂಟೆಂಟ್ ಮುಖ್ಯ ಎಂಬುದು ಸಾಬೀತಾಗಿದೆ' ಎಂದು ಹೇಳಿದ್ದಾರೆ.

Namdhari Dahinkala Utsav: ನಾಮಧಾರಿ ದಹಿಂಕಾಲ ಉತ್ಸವದಲ್ಲೂ ಕಾಂತಾರ ಹವಾ: ರಿಷಬ್ ಶೆಟ್ಟಿ ಮೆಚ್ಚುಗೆ