ಉತ್ತರ ಕರ್ನಾಟಕದ ಜನರಿಗೆ ಫುಡ್ ಕಿಟ್ ನೀಡಿ ಸಹಾಯ ಮಾಡಿದ ನಟಿ ಹರ್ಷಿಕಾ & ಭುವನ್‌

'ಬಿಗ್ ಬಾಸ್' ಖ್ಯಾತಿಯ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಅವರು ಕೋವಿಡ್ 2ನೇ ಅಲೆ ಬಂದ ದಿನಗಳಿಂದಲೂ ಜನರ ಸೇವೆಗೆ ನಿಂತಿದ್ದಾರೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಫುಡ್ ಕಿಟ್ ನೀಡುವುದು, ಆಕ್ಸಿಜನ್ ಸೇವೆ ಒದಗಿಸುವುದು ಹೀಗೆ ಅನೇಕ ಸಾಮಾಜಿಕ ಕೆಲಸಗಳಿಂದ ಗುರುತಿಸಿಕೊಂಡಿದ್ದಾರೆ. ಈಚೆಗೆ ಕೊಡಗಿನ ಒಂದಷ್ಟು ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಸೀಲ್ ಡೌನ್ ಆದ ಏರಿಯಾಗಳಿಗೆ ಭೇಟಿ ನೀಡಿ ಫುಡ್ ಕಿಟ್ ನೀಡಿದ್ದರು. ಅಲ್ಲದೆ, ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್‌ಗೆ ಹೋಗಿ ಡ್ಯಾನ್ಸ್ ಮಾಡಿ, ರೋಗಿಗಳಿಗೆ ಮನರಂಜನೆ ನೀಡಿದ್ದರು.

ಕೊರೊನಾ ರೋಗಿಗಳಿಗೆ 'ಶ್ವಾಸ' ಮೂಲಕ ಆಕ್ಸಿಜನ್ ಪೂರೈಕೆಗೆ ಮುಂದಾದ ಭುವನ್ & ಹರ್ಷಿಕಾ ಪೂಣಚ್ಚ

ಬೆಂಗಳೂರು, ಕೊಡಗು ನಂತರ ಉತ್ತರ ಕರ್ನಾಟಕದ ಕಡೆಗೆ ಭುವನ್ ಮತ್ತು ಹರ್ಷಿಕಾ ಹೆಜ್ಜೆ ಇಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕೊರೊನಾ ಜಾಗೃತಿ ಅಭಿಯಾನ ಮಾಡುತ್ತಿರುವ ಅವರು, ಕಲಬುರಗಿ ಜಿಲ್ಲೆಯ ಮುಧೋಳ ತಾಲ್ಲೂಕಿನ ಸೇಡಂ ಗ್ರಾಮಕ್ಕೆ ತೆರಳಿ ಅಲ್ಲಿನ ಅಲೆಮಾರಿ ಜನಾಂಗದವರು, ಮಂಗಳಮುಖಿಯರು ಹಾಗೂ ಬಡ ಕುಟುಂಬಗಳ ಮನೆ ಮನೆಗೆ ಹೋಗಿ ಕೊರೊನಾ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ಭುವನಂ ಸಂಸ್ಥೆಯ 'ಫೀಡ್ ಕರ್ನಾಟಕ' ಯೋಜನೆಯ ಅಡಿಯಲ್ಲಿ ಊರಿನ ಎಲ್ಲ ಕೊರೊನಾ ಪೀಡಿತ ಕುಟುಂಬಗಳಿಗೆ 1 ತಿಂಗಳಿಗೆ ಬೇಕಾಗುವಷ್ಟು ದಿನಸಿ , ಔಷಧಿ ಹಾಗು ಮಾಸ್ಕ್‌ಗಳನ್ನು ವಿತರಿಸಿದ್ದಾರೆ. ಆ ಕುರಿತ ವಿಡಿಯೋ ಇಲ್ಲಿದೆ.

ಊರಿನ ಸೇವೆ ಮಾಡಿದ್ದಕ್ಕೆ ಕೃತಜ್ಞತೆ: ಮನೆಯ ಮಗಳಿಗೆ ಹರ್ಷಿಕಾ ಎಂದು ನಾಮಕರಣ ಮಾಡಿದ ಸವಸುದ್ದಿ ಗ್ರಾಮಸ್ಥ

Vijaya Karnataka Web 12 Jun 2021, 2:32 pm
Loading ...