‘ವೀರಾಸ್ವಾಮಿ ಅವರೇ ಸ್ವತಃ ಒಂದು ದೊಡ್ಡ ಶಕ್ತಿ’

ಕ್ರೇಜಿ ಸ್ಟಾರ್ ರವಿಚಂದ್ರನ್ ಕುರಿತಾಗಿ ನಿಮ್ಮ ವಿಜಯ ಕರ್ನಾಟಕ ವೆಬ್ 'ಕನಸುಗಾರನ ಕಹಾನಿ' ಎಂಬ ವಿಶೇಷ ಸರಣಿಯೊಂದನ್ನು ಆರಂಭಿಸಿದೆ. 'ಕನಸುಗಾರನ ಕಹಾನಿ' ವಿಶೇಷ ಸರಣಿಯಲ್ಲಿ ರವಿಚಂದ್ರನ್ ಕುರಿತು ಅನೇಕ ಸಂಗತಿಗಳನ್ನು ನಿರ್ದೇಶಕ ಬಿ.ಸುರೇಶ ಹಂಚಿಕೊಂಡಿದ್ದಾರೆ. ಬಿ.ಸುರೇಶ ಅವರ ಸಂದರ್ಶನದ ಏಳನೇ ಭಾಗದ ವಿಡಿಯೋ ಇಲ್ಲಿದೆ.

‘ದಿ ಬೆಸ್ಟ್ ಆಫ್ ಹಂಸಲೇಖ ಸಿಕ್ಕಿರೋದು ರವಿಚಂದ್ರನ್‌ಗೆ’

‘’ಈಶ್ವರಿ ಪ್ರೊಡಕ್ಷನ್ಸ್ ಕನ್ನಡ ಚಿತ್ರರಂಗದ ಬಹಳ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಅವರು ತಯಾರು ಮಾಡಿದ ‘ನಾಗರಹಾವು’ ಚಿತ್ರದಿಂದ ಹಿಡಿದು ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಒಳ್ಳೊಳ್ಳೆ ಸಿನಿಮಾಗಳನ್ನು ನಿರ್ಮಿಸಲು ವೀರಾಸ್ವಾಮಿ ನಿರಂತರ ಪ್ರಯತ್ನ ಮಾಡಿದ್ದಾರೆ. ಈಶ್ವರಿ ಸಂಸ್ಥೆ ಇಷ್ಟು ಕಾಲ ಬದುಕಿದ್ದರೆ, ಅದಕ್ಕೆ ಬೇರನ್ನ ಭದ್ರ ಮಾಡಿದ ವೀರಾಸ್ವಾಮಿ, ಗಂಗಪ್ಪ ಕಾರಣ. ಈ ಸಂಸ್ಥೆಯ ದೊಡ್ಡ ಕೊಡುಗೆ ‘ಭೂತಯ್ಯನ ಮಗ ಅಯ್ಯು’ ತರಹದ ಸಿನಿಮಾ. ವೀರಾಸ್ವಾಮಿ ಅವರೇ ಸ್ವತಃ ಒಂದು ದೊಡ್ಡ ಶಕ್ತಿ. ಈ ಸಂಸ್ಥೆ ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಕೊಡಲಿ. 'ಭೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ ಆ ಕಾಲಕ್ಕೆ ಪ್ರವಾಹವನ್ನ ಚಿತ್ರೀಕರಣ ಮಾಡಿಸಿದ್ದರು. ನಾವೀಗ ಪ್ರವಾಹ ಚಿತ್ರೀಕರಣ ಮಾಡೋಕೆ ಒದ್ದಾಡುತ್ತೇವೆ’’

ಸಿನಿಮಾ ಮೇಲೆ ಕೋಟ್ಯಂತರ ರೂಪಾಯಿ ಸುರಿದು, ಅದನ್ನ ವಾಪಸ್ ತೆಗೆಯೋದು ಹೇಗೆ ಅಂತ ತೋರಿಸಿಕೊಟ್ಟವರು ರವಿಚಂದ್ರನ್!

‘’ರವಿಚಂದ್ರನ್ ಅವರ ಮಡದಿ ಸುಮತಿ ಎಂಥಾ ಒಳ್ಳೆಯ ಅಡುಗೆ ಮಾಡ್ತಾರೆ ಅಂದ್ರೆ… ಅವರು ಮಾಡುವ ದೋಸೆ, ಚಟ್ನಿಯನ್ನ ತಿನ್ನುವುದೇ ಆನಂದ. ಅವರ ಇಡೀ ಮನೆಯಲ್ಲಿ ಪ್ರೀತಿಯನ್ನುವುದು ತುಂಬಿ ತುಳುಕುತ್ತಿದೆ’’

‘ಸಿಪಾಯಿ’ ಚಿತ್ರ ರಿಲೀಸ್‌ಗೂ ಎರಡು ದಿನಗಳ ಮುನ್ನ ರವಿಚಂದ್ರನ್ ತೆಗೆದುಕೊಂಡ ಬಹುಮುಖ್ಯ ನಿರ್ಧಾರವಿದು!

‘’ಹಳೇ ಸಿನಿಮಾಗಳಿಗೆ ಇದೀಗ ಬಾಲಾಜಿ ಅವರು ಹೊಸ ಜೀವ ಕೊಡುತ್ತಿದ್ದಾರೆ. ಅದು ಸಾಧ್ಯವಾದರೆ ಕ್ಲಾಸಿಕ್ ಸಿನಿಮಾಗಳಿಗೆ ಜೀವ ಕೊಟ್ಟ ಹಾಗೆ ಆಗುತ್ತದೆ. ಇದು ಈಶ್ವರಿ ಅಂತಹ ಸಂಸ್ಥೆ ಮಾತ್ರ ಮಾಡೋಕೆ ಸಾಧ್ಯ'' ಎಂದು ಬಿ.ಸುರೇಶ ಸಂದರ್ಶನದಲ್ಲಿ ಹೇಳಿದ್ದಾರೆ.

Vijaya Karnataka Web 1 Nov 2021, 7:41 pm
Loading ...