'KGF 2' ನಿರ್ಮಾಪಕರ ಹುಟ್ಟೂರಿಗೆ ಭೇಟಿ ನೀಡಿದ 'ರಾಕಿ ಭಾಯ್' ಯಶ್‌ & ಡೈರೆಕ್ಟರ್ ಪ್ರಶಾಂತ್ ನೀಲ್

'ರಾಕಿಂಗ್ ಸ್ಟಾರ್' ಯಶ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಸಿನಿಮಾವು ವಿಶ್ವಾದ್ಯಂತ ತೆರೆಗೆ ಬರಲು ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಕೋಟ್ಯಂತರ ರೂಪಾಯಿ ಬರೀ ಮುಂಗಡ ಟಿಕೆಟ್ ಬುಕಿಂಗ್‌ನಿಂದಲೇ ನಿರ್ಮಾಪಕರಿಗೆ ಹರಿದುಬಂದಿದೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶಾದ್ಯಂತ ಸುತ್ತಿ ಚಿತ್ರಕ್ಕಾಗಿ ಪ್ರಚಾರ ಮಾಡಿ ಯಶ್‌ & ಟೀಮ್. ಅಂದಹಾಗೆ, ಜಗತ್ತಿನ ಸಿನಿಪ್ರಿಯರೇ ತಿರುಗಿನೋಡುವಂತೆ ಮಾಡಿದ ಈ ಕೆಜಿಎಫ್ 2 ಸಿನಿಮಾವನ್ನು ನಿರ್ಮಾಣ ಮಾಡಿದವರು ನಿರ್ಮಾಪಕ ವಿಜಯ್ ಕಿರಗಂದೂರಿನವರು. ಮೂಲತಃ ಕಿರಗಂದೂರು ಎಂಬ ಊರಿನಿಂದ ಬಂದ ವಿಜಯ್ ಇಂದು ಹೊಂಬಾಳೆ ಫಿಲ್ಮ್ಸ್‌ನಂತಹ ದೊಡ್ಡ ನಿರ್ಮಾಣ ಸಂಸ್ಥೆಯ ಸ್ಥಾಪಕರಾಗಿದ್ದಾರೆ. ವಿಶೇಷವೆಂದರೆ, ಹುಟ್ಟೂರು ಕಿರಗಂದೂರಿನಲ್ಲಿ ಇರುವ ನಿರ್ಮಾಪಕರ ಮನೆಗೆ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಭೇಟಿ ನೀಡಿದ್ದರು. ಜೊತೆಗೆ ಅಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದ ಯಶ್, ಪ್ರಶಾಂತ್ ಮತ್ತು ನಿರ್ಮಾಪಕ ವಿಜಯ್, ಕಿರಗಂದೂರಿನ ಮನೆಯಲ್ಲೇ‌ ಮಧ್ಯರಾತ್ರಿಯವರೆಗೂ ಕಾಲ ಕಳೆದಿದ್ದಾರೆ. ಅಲ್ಲಿನ ಪರಿಸರವನ್ನು ಕಂಡು ಯಶ್ ಹಾಗೂ ಪ್ರಶಾಂತ್ ನೀಲ್ ಸಂತೋಷಪಟ್ಟಿದ್ದಾರೆ. ಆ ಕ್ಷಣದ ವಿಡಿಯೋ ಇಲ್ಲಿದೆ.

Yash: 'ಕೆಜಿಎಫ್ 2' & 'ಬೀಸ್ಟ್' ಮುಖಾಮುಖಿ; ಇದು RCB Vs CSK ಅಂತಿದ್ದಾರೆ ಫ್ಯಾನ್ಸ್!

Vijaya Karnataka Web 13 Apr 2022, 9:28 pm
Loading ...