ಕಾರು ತಡೆದ ಸಂಚಾರಿ ಪೇದೆಯನ್ನು ಬಾನೆಟ್ ಮೇಲೆ ಎಳೆದೊಯ್ದ ಭೂಪ!

ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ತಡೆದ ಪೊಲೀಸ್ ಪೇದೆಯೋರ್ವನನ್ನು, ಚಾಲಕನೋರ್ವ ತನ್ನ ಕಾರಿನ ಬಾನೆಟ್ ಸುಮಾರು 200 ಮೀಟರ್ ದೂರದವರೆಗೆ ಎಳೆದೊಯ್ದ ಘಟನೆ ರಾಜಸ್ಥಾನದ ಬಿಕಾನೆರ್‌ನಲ್ಲಿ ನಡೆದಿದೆ. ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಸಂಚಾರಿ ಪೇದೆಯೋರ್ವ ಕಾರೊಂದನ್ನು ತಡೆಯಲು ಮುಂದಾಗಿದ್ದಾನೆ. ಆತ ಕಾರು ತಡೆಯಲು ಮುಂದೆ ಬರುತ್ತಿದ್ದಂತೇ ಆತನ ಮೇಲೆ ಚಾಲಕ ಕಾರು ಹಾಯಿಸಿದ್ದಾನೆ. ಇನ್ನು ಪೊಲೀಸ್ ಪೇದೆಯನ್ನು ಕಾರಿನ ಬಾನೆಟ್ ಮೇಲೆ ಎಳೆದೊದ್ದ ಚಾಲಕನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಅಶಿಸ್ತಿನ ಚಾಲನೆ ಮಾಡಿದ್ದಲ್ಲದೇ, ಇದನ್ನು ಪ್ರಶ್ನಿಸಿದ ಪೊಲೀಸ್ ಪೇದೆಯನ್ನು ಅಪಾಯಕ್ಕೆ ದೂಡಿದ ಚಾಲಕನ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka Web 21 Sep 2020, 7:53 pm
Loading ...