Please enable javascript.Can You Find Tiger,ಈ ಫೋಟೋದಲ್ಲಿ ಒಂದು ಹುಲಿ ಕೂಡಾ ಇದೆ: ಕಾಡಿನ ನಡುವೆ ಅಡಗಿರುವ ವ್ಯಾಘ್ರನನ್ನು ಗುರುತಿಸುವಿರಾ? - can you spot the tiger. a picture is now going viral on social media - Vijay Karnataka

ಈ ಫೋಟೋದಲ್ಲಿ ಒಂದು ಹುಲಿ ಕೂಡಾ ಇದೆ: ಕಾಡಿನ ನಡುವೆ ಅಡಗಿರುವ ವ್ಯಾಘ್ರನನ್ನು ಗುರುತಿಸುವಿರಾ?

Vijaya Karnataka Web 1 Sep 2021, 2:40 pm
Subscribe

ಸಹಜವಾಗಿಯೇ ಈ ಫೋಟೋ ಈಗ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ. ಎಲ್ಲರೂ ಬಲು ಆಸಕ್ತಿಯಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಜತೆಗೆ, ಫೋಟೋದಲ್ಲಿರುವ ಹುಲಿಯನ್ನೂ ಹುಡುಕುವ ಪ್ರಯತ್ನ ಮಾಡಿದ್ದಾರೆ. ಕೆಲವರು ಅದರಲ್ಲಿ ಸಫಲರೂ ಆಗಿದ್ದಾರೆ.

ಹೈಲೈಟ್ಸ್‌:

  • ಕಾಡಿನ ಚಿತ್ರದಲ್ಲಿ ಅಡಗಿದೆ ಒಂದು ಹುಲಿ
  • ನೆಟ್ಟಿಗರಿಗೆ ಹುಲಿಯನ್ನು ಹುಡುಕುವ ಸವಾಲು
  • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಫೋಟೋ

Image by No-longer-here from Pixabay
| Representative image | Image by No-longer-here from Pixabay
ಈ ಚಿತ್ರದಲ್ಲಿರುವ ಪ್ರಾಣಿಯನ್ನು ಹುಡುಕಬಹುದೇ...? ಹೀಗೆಂದು ಸವಾಲು ಹೊಂದಿರುವ ಫೋಟೋಗಳು ವೈರಲ್ ಆಗುವುದು ಹೊಸದೇನೂ ಅಲ್ಲ. ಆಗೊಮ್ಮೆ ಈಗೊಮ್ಮೆ ಇಂತಹ ಸವಾಲುಗಳು ನೆಟ್ಟಿಗರ ಗಮನ ಸೆಳೆಯುತ್ತಲೇ ಇರುತ್ತವೆ. ಅಲ್ಲದೆ, ಈ ಹುಡುಕಾಟ ಮನಸ್ಸಿಗೂ ಬಲು ಆನಂದ ನೀಡುತ್ತವೆ.
ನೀವು ಕೂಡಾ ಇಂತಹ ಒಗಟನ್ನು ಬಿಡಿಸಿ ಖುಷಿಪಟ್ಟಿರಬಹುದು. ಒಂದೊಮ್ಮೆ ನೀವು ಇಂತಹ ಸವಾಲುಗಳನ್ನು ಇಷ್ಟಪಡುವವರಾದರೆ ನಿಮಗೆ ಆನಂದ ನೀಡುವಂತಹ ಮತ್ತೊಂದು ಫೋಟೋ ಈಗ ವೈರಲ್ ಆಗುತ್ತಿದೆ. ಇದು ಕಾಡಿನ ಪೊದೆಗಳ ನಡುವೆ ಇರುವ ಹುಲಿಯನ್ನು ಹುಡುಕುವ ಸವಾಲು ಹೊಂದಿರುವ ಫೋಟೋ.

ಹಾರ ಬದಲಾವಣೆ ವೇಳೆ ವರ ತೋರಿದ ಪ್ರೀತಿಗೆ ಮನಸೋತ ವಧು: ಹೃದಯಸ್ಪರ್ಶಿ ದೃಶ್ಯವಿದು
tauseef_traveller ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋ ಅಪ್ಲೋಡ್ ಆಗಿದೆ. ಹಸಿರಿನಿಂದ ಆವೃತ್ತವಾದ ಜಾಗದ ನಡುವೆ ಹುಲಿಯೊಂದು ಇದೆ. ಅದನ್ನು ಹುಡುಕುವುದೇ ನೆಟ್ಟಿಗರ ಮುಂದಿರುವ ಸವಾಲು. `ಯಾವ ಫ್ರೇಮ್‌ನಲ್ಲಿ ನಿಮಗೆ ಹುಲಿ ಕಾಣಿಸುತ್ತದೆ...? 1, 2, 3 ಅಥವಾ 4' ಎಂದು ಕ್ಯಾಪ್ಶನ್ ಬರೆದು ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ.

ಸೀಲಿಂಗ್‌ನಲ್ಲಿದ್ದ ರಂಧ್ರದಲ್ಲಿ ಸಿಲುಕಿಕೊಂಡ ಬಾಲಕಿಯ ತಲೆ! : ಇಲ್ಲಿದೆ ಹುಡುಗಿಯ ರಕ್ಷಣೆಯ ದೃಶ್ಯ

Viral Video: ಓಟದಲ್ಲಿ ಮಾತ್ರ ಅಲ್ಲ, ಈಜಾಟದಲ್ಲೂ ಮೊಲ ಫಾಸ್ಟ್‌! : ಇಲ್ಲಿದೆ ವಿಡಿಯೋ
ಒಂದಷ್ಟು ಮಂದಿ ಮೊದಲ ಫೋಟೋದಲ್ಲಿಯೇ ಹುಲಿಯನ್ನು ಹುಡುಕಿದ್ದಾರೆ. ಆದರೆ, ಪಕ್ಕದಲ್ಲಿರುವ ಸ್ಟೈಡ್ ಬಟನ್ ಕ್ಲಿಕ್ ಮಾಡಿದಂತೆಯೇ ಹುಲಿಯ ಇರುವಿಕೆ ಸ್ಪಷ್ಟವಾಗಿ ಕಾಣಿಸುತ್ತದೆ. ನಾಲ್ಕನೇ ಫೋಟೋದಲ್ಲಿ ಹುಲಿ ಎಲ್ಲಿದೆ ಎಂಬುದು ನಿಖರವಾಗಿ ಗೊತ್ತಾಗುತ್ತದೆ. ನೀವು ಕೂಡಾ ಈ ಫೋಟೋವನ್ನು ಅತ್ಯಂತ ಕುತೂಹಲದಿಂದ ನೋಡಿರಬಹುದು. ಆದರೆ, ಹುಲಿ ಎಲ್ಲಿದೆ ಎಂಬುದು ತಕ್ಷಣಕ್ಕೆ ಗೊತ್ತಾದರೂ, ಗೊತ್ತಾಗದೇ ಇದ್ದರೂ ಈ ಆಟ, ಹುಡುಕಾಟ ಖಂಡಿತಾ ಖುಷಿಕೊಡುತ್ತದೆ. ಅದಕ್ಕೆ ನೆಟ್ಟಿಗರ ಪ್ರತಿಕ್ರಿಯೆಗಳೇ ಸಾಕ್ಷಿ. ಎಲ್ಲರೂ ಈ ಫೋಟೋವನ್ನು ಕಂಡು ಖುಷಿಪಟ್ಟಿದ್ದಾರೆ. ಅದ್ಭುತ, ಸುಂದರ ಎಂದೆಲ್ಲಾ ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಹುಶಃ ನಿಮಗೆ ಕೂಡಾ ಈ ಹುಡುಕಾಟ ಆನಂದ ನೀಡಿರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ