ಆ್ಯಪ್ನಗರ

Viral Video: ಗೂಳಿಯ ಮುಂದೆ ಡ್ಯಾನ್ಸ್‌ ಮಾಡಲು ಹೋದ ಯುವತಿ!: ನಂತರದ್ದು ನಕ್ಕು ನಗಿಸುವ ದೃಶ್ಯ

ಸದ್ಯ ಈ ತಮಾಷೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಯುವತಿಯ ವಿಡಿಯೋ ಶೂಟ್‌ನ ಕಥೆ ಇದು. ಸದ್ಯ ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನು ಗಳಿಸಿದ್ದು, ಎಲ್ಲರಲ್ಲೂ ಮಂದಹಾಸ ಮೂಡಿಸಿದೆ. ಈ ದೃಶ್ಯ ಕಂಡ ಹಲವರು ಬಲು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

Vijaya Karnataka Web 7 Jun 2022, 4:50 pm

ಹೈಲೈಟ್ಸ್‌:

  • ಗೂಳಿಯ ಮುಂದೆ ಯುವತಿಯ ಡ್ಯಾನ್ಸ್‌
  • ಮ್ಯೂಸಿಕ್‌ಗೆ ಹೆಜ್ಜೆ ಹಾಕುತ್ತಿದ್ದ ಯುವತಿಗೆ ಶಾಕ್
  • ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ದೃಶ್ಯ ವೈರಲ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web dance
| Screengrab from video | Courtesy : instagram/bhutni_ke_memes/
ಇದು ಇಂಟರ್‌ನೆಟ್ ಜಮಾನ. ಸೋಶಿಯಲ್ ಮೀಡಿಯಾ ಎಂಬುದು ಈಗ ಪ್ರಭಾವಶಾಲಿಯಾಗಿದೆ. ಜತೆಗೆ, ಈ ಸೋಶಿಯಲ್ ಮೀಡಿಯಾ ಎಂಬುದು ಪ್ರತಿಭಾ ಪ್ರದರ್ಶನಕ್ಕೂ ದೊಡ್ಡ ವೇದಿಕೆ ಕೂಡಾ ಆಗಿದೆ. ಅದರಲ್ಲೂ ಸಣ್ಣ ಸಣ್ಣ ರೀಲ್ಸ್‌ ವಿಡಿಯೋಗಳನ್ನು ಶೂಟ್ ಮಾಡುವುದು ಕೂಡಾ ಈಗ ಹೊಸದೇನೂ ಅಲ್ಲ. ಇದನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರೂ ಸಾಕಷ್ಟು ಅಭಿಮಾನಿಗಳನ್ನೂ ಸಂಪಾದಿಸಿಕೊಳ್ಳುತ್ತಾರೆ. ಲೈಕ್ಸ್‌, ಕಮೆಂಟ್ಸ್‌ಗಳನ್ನೂ ಪಡೆಯುತ್ತಾರೆ.
ಆದರೆ, ಈ ರೀಲ್‌ಗಳನ್ನು ಶೂಟ್ ಮಾಡುವ ಸಂದರ್ಭದಲ್ಲಿ ಒಂದಷ್ಟು ವಿಶಿಷ್ಟ ಸನ್ನಿವೇಶಗಳು ಎದುರಾಗುವುದು ಕೂಡಾ ಇದೆ. ಇವುಗಳಲ್ಲಿ ಕೆಲವು ದೃಶ್ಯಗಳು ಆಘಾತಕಾರಿಯಾಗಿದ್ದರೆ, ಇನ್ನೊಂದಷ್ಟು ದೃಶ್ಯಗಳು ನಗುವುಕ್ಕಿಸುವಂತಿರುತ್ತವೆ. ಅಂತೆಯೇ, ಸದ್ಯ ಇಂತಹದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ.

Emotional Video: ಸೋದರನನ್ನು ಕಂಡು ಓಡೋಡಿ ಬಂದು ಬಿಗಿದಪ್ಪಿಕೊಂಡ ಚಿಂಪಾಂಜಿ: ಈ ದೃಶ್ಯ ನೋಡಿದರೆ ಮಾತೇ ಹೊರಡದು
ತಮ್ಮ ವಿಡಿಯೋ ಚೆನ್ನಾಗಿ ಬರಬೇಕು, ಬೇರೆಯವರಿಗಿಂತ ನಾನು ಡಿಫ್ರೆಂಟ್ ಪ್ರಯತ್ನ ಮಾಡಬೇಕು ಎಂಬುದು ಕೆಲವರ ಆಸೆ. ಆದರೆ, ಇವರ ಈ ಪ್ರಯತ್ನ ಒಂದಷ್ಟು ಸಂದರ್ಭದಲ್ಲಿ ಅಪಾಯಕಾರಿಯೂ ಆಗಿ ಮಾರ್ಪಡುತ್ತವೆ. ಅಂತೆಯೇ, ಈ ಯುವತಿ ಕೂಡಾ ತನ್ನ ರೀಲ್ ಶೂಟಿಂಗ್‌ಗೆ ಸಜ್ಜಾಗಿದ್ದಳು. ಆದರೆ, ಈಕೆಯ ಪ್ರಯತ್ನ ಕೂಡಾ ಅಪಾಯಕಾರಿಯೇ ಆಗಿತ್ತು. ಯಾಕೆಂದರೆ ಈ ಯುವತಿ ರೀಲ್ ಶೂಟ್ ಮಾಡಲು ಹೋಗಿ ನಿಂತಿದ್ದು ಒಂದು ಗೂಳಿಯ ಮುಂದೆ...!

Viral Video: ನೀರನ್ನು ಕಂಡ ಕೂಡಲೇ ಮುದ್ದು ಮರಿಯಾನೆಯ ಆಟ: ಮುದ ನೀಡುತ್ತದೆ ಈ ಖುಷಿಯ ಕ್ಷಣ
bhutni_ke_memes ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಗೂಳಿ ಮುಂದೆ ಯುವತಿಯೊಬ್ಬಳು ಮ್ಯೂಸಿಕ್‌ಗೆ ಸ್ಟೆಪ್ಸ್‌ ಹಾಕುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಆದರೆ, ಈಕೆ ತನ್ನ ನೃತ್ಯದ ವಿಡಿಯೋ ಶೂಟ್ ಮಾಡುತ್ತಿದ್ದಂತೆಯೇ ಆಕೆಗೆ ಅಲ್ಲಿಂದ ಓಡುವ ಪರಿಸ್ಥಿತಿ ಎದುರಾಗಿತ್ತು. ಯಾಕೆಂದರೆ, ಈಕೆಯ ಡ್ಯಾನ್ಸ್‌ ಕಂಡು ಗೂಳಿ ಇವಳ ಮೇಲೆ ದಾಳಿಗೆ ಮುಂದಾಗಿತ್ತು. ಇದನ್ನು ನೋಡುತ್ತಿದ್ದಂತೆಯೇ ಈ ಯುವತಿ ಓಡಿ ಹೋಗಿ ಪಕ್ಕದಲ್ಲಿ ನಿಂತುಕೊಂಡಿದ್ದಳು...! ತನ್ನ ಸ್ಥಿತಿ ಆಕೆಗೂ ನಗು ತರಿಸಿತ್ತು.

Viral Video: ಹುಲಿಯ ಬೋನ್ ಬಳಿ ವ್ಯಕ್ತಿಯ ಕುಚೇಷ್ಟೆ: ಅದೃಷ್ಟ ಚೆನ್ನಾಗಿತ್ತು ವ್ಯಾಘ್ರ ದಾಳಿಯ ಮೂಡ್‌ನಲ್ಲಿರಲಿಲ್ಲ!
View this post on Instagram A post shared by Bhutni_ke (@bhutni_ke_memes)

ಸಹಜವಾಗಿಯೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎಲ್ಲರಲ್ಲೂ ನಗು ಮೂಡಿಸುವಲ್ಲಿ ಈ ವಿಡಿಯೋ ಯಶಸ್ವಿಯಾಗಿದ್ದು, ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ. ಜತೆಗೆ, ಈ ದೃಶ್ಯ ಕಂಡ ಬಹುತೇಕರು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಬರೀ ಲೈಕ್ಸ್‌, ಕಮೆಂಟ್ಸ್‌ಗಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವವರಿಗೂ ಒಂದು ಪಾಠ ಕೂಡಾ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ