Please enable javascript.Boy Climbing Stairs While Hula Hooping,Viral Video : ಅಬ್ಬಬ್ಬಾ! ಬೆರಗು ಮೂಡಿಸುವಂತಿದೆ ಈ ಬಾಲಕನ ಗಿನ್ನಿಸ್ ದಾಖಲೆಯ ಪ್ರಯತ್ನ - video of a boy from chennai creating guinness world records by climbing stairs while hula hooping is going viral on social media - Vijay Karnataka

Viral Video : ಅಬ್ಬಬ್ಬಾ! ಬೆರಗು ಮೂಡಿಸುವಂತಿದೆ ಈ ಬಾಲಕನ ಗಿನ್ನಿಸ್ ದಾಖಲೆಯ ಪ್ರಯತ್ನ

Vijaya Karnataka Web 5 Jun 2021, 2:16 pm
Subscribe

ಸದ್ಯ ಈ ವಿಡಿಯೋವನ್ನು ಎಲ್ಲರೂ ಬಲು ಕುತೂಹಲದಿಂದ ನೋಡುತ್ತಿದ್ದಾರೆ. ಬಾಲಕನ ಪ್ರತಿಭೆ ಎಲ್ಲರನ್ನೂ ಒಂದು ಕ್ಷಣ ನಿಬ್ಬೆರಗಾಗಿಸಿದೆ. ಹೀಗಾಗಿ, ಎಲ್ಲರೂ ಈ ಬಾಲಕನ ಕೌಶಲ್ಯವನ್ನು ಈಗ ಮುಕ್ತಕಂಠದಿಂದ ಕೊಂಡಾಡಿದ್ದಾರೆ.

ಹೈಲೈಟ್ಸ್‌:

  • ಹೂಲಾ ಹೂಪ್ ಮಾಡುತ್ತಲೇ ಮೆಟ್ಟಿಲು ಹತ್ತಿರುವ ಬಾಲಕ
  • ಕೌಶಲ್ಯದಿಂದಲೇ ಎಲ್ಲರನ್ನೂ ಚಕಿತಗೊಳಿಸಿದ ಬಾಲಕ
  • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ದೃಶ್ಯ
Guinness World Records
| Screengrab from video | Courtesy : instagram/guinnessworldrecords/
ಗಿನ್ನಿಸ್ ದಾಖಲೆಯ ಪ್ರಯತ್ನಗಳನ್ನು ನೋಡುವುದು ಒಂದು ಖುಷಿಯ ಅನುಭವ. ನೋಡಿದ ತಕ್ಷಣ `ವ್ಹಾವ್' ಎಂದು ಉದ್ಗರಿಸುವಂತೆ ಮಾಡುವ ಸಾಕಷ್ಟು ದೃಶ್ಯಗಳು ಇಲ್ಲಿ ನಮ್ಮನ್ನು ಒಂದು ಕ್ಷಣ ಚಕಿತಗೊಳಿಸುತ್ತವೆ. ಪ್ರತಿಭಾವಂತರ ಕೌಶಲ್ಯ ನಮ್ಮನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುವಂತೆ ಮಾಡುತ್ತದೆ. ಇದೇ ಕಾರಣಕ್ಕೆ ಇಂತಹ ದಾಖಲೆಯ ಪ್ರಯತ್ನದ ವಿಡಿಯೋಗಳನ್ನು ಎಲ್ಲರೂ ಬಲು ಆಸಕ್ತಿಯಿಂದಲೇ ನೋಡಿ ಎಂಜಾಯ್ ಮಾಡುತ್ತಾರೆ. ನೀವೇನಾದರೂ ಗಿನ್ನಿಸ್ ವಿಶ್ವ ದಾಖಲೆಯ ಇನ್‌ಸ್ಟಾಗ್ರಾಂ ಪುಟವನ್ನು ಸದಾ ನೋಡುವವರಿಗೆ ನಿಮಗೆ ಖಂಡಿತಾ ಇಲ್ಲಿ ಆಸಕ್ತಿಕರ ದೃಶ್ಯಗಳು ಕಾಣಸಿಗುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ.
ಹಸು ಮತ್ತು ಕರುವಿಗೆ ಪ್ರೀತಿಯಿಂದ ಪಾನಿಪೂರಿ ತಿನಿಸುವ ವ್ಯಕ್ತಿ : ಇಲ್ಲಿದೆ ವಿಡಿಯೋ
ಇದು ಬಾಲಕನೊಬ್ಬನ ದಾಖಲೆ ಪ್ರಯತ್ನದ ದೃಶ್ಯ. ಹೂಲಾ ಹೂಪ್ ಮಾಡುತ್ತಲೇ ಮೆಟ್ಟಿಲುಗಳನ್ನು ಅತೀವೇಗದಲ್ಲಿ ಹತ್ತುವ ಸಾಧನೆ ಇದು. ಆಧವ್ ಸುಗುಮಾರ್ ಎಂಬ ಬಾಲಕನ ಈ ಸಾಧನೆ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹೂಲಾ ಹೂಪ್ ಮಾಡುತ್ತಲೇ ಆಧವ್ 50 ಮೆಟ್ಟಿಲುಗಳನ್ನು ಹತ್ತಿ ದಾಖಲೆ ಬರೆದಿದ್ದಾನೆ. 18.28 ಸೆಕೆಂಡುಗಳಲ್ಲಿ ಆಧವ್ ಈ ಸಾಧನೆ ಮಾಡಿದ್ದಾಗಿ ಈ ವಿಡಿಯೋವನ್ನು ಹಂಚಿಕೊಂಡಿರುವ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ಸ್‌ ತನ್ನ ಕ್ಯಾಪ್ಶನ್‌ನಲ್ಲಿ ಬರೆದುಕೊಂಡಿದೆ.

ಕುಸಿದು ಬಿದ್ದಂತೆ ನಟಿಸುವ ಮಾಲಿಕ : ಓಡಿ ಬಂದು ಪರೀಕ್ಷಿಸುವ ಶ್ವಾನ : ಖುಷಿಯ ನಗುವರಳಿಸುವ ದೃಶ್ಯವಿದು
ಆಧವ್ ಕಳೆದ ಎರಡು ವರ್ಷಗಳಿಂದ ಹೂಲಾ ಹೂಪಿಂಗ್ ಅಭ್ಯಾಸ ಮಾಡುತ್ತಿದ್ದಾನೆ. ಹೀಗೆ ಹೂಲಾ ಹೂಪಿಂಗ್‌ ಕೌಶಲ್ಯವನ್ನು ಕರಗತ ಮಾಡಿಕೊಂಡ ಆಧವ್ 2021ರ ಏಪ್ರಿಲ್ 10ರಂದು ದಾಖಲೆ ಬರೆದಿದ್ದ. ಇದೀಗ ಈ ವಿಡಿಯೋವನ್ನು ಗಿನ್ನಿಸ್ ವಿಶ್ವ ದಾಖಲೆ ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದೆ. ಇದಾದ ಬಳಿಕ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.


ಅಬ್ಬಬ್ಬಾ... ಈ ವ್ಯಕ್ತಿಯ ಗಿನ್ನಿಸ್ ದಾಖಲೆಯ ಪ್ರಯತ್ನ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ...!
ಸದ್ಯ ಬಾಲಕನ ಈ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲರೂ ಈ ಬಾಲಕನ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನಿಜಕ್ಕೂ ಇದು ಅದ್ಭುತ ಸಾಧನೆ. ಸತತ ಅಭ್ಯಾಸ, ಪರಿಶ್ರಮ ಇಲ್ಲದೆ ಇದ್ದರೆ ಇಂತಹ ಸಾಧನೆ ಮಾಡಲು ಖಂಡಿತಾ ಸಾಧ್ಯವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ