Please enable javascript.Wonder Of Nature,ಬಣ್ಣ ಬಣ್ಣಗಳಿಂದ ಮಿಂಚುವ ಮರ : ಪ್ರಕೃತಿಯ ಈ ವೈಚಿತ್ರ್ಯಕ್ಕೆ ತಲೆಬಾಗದವರೇ ಇಲ್ಲ - wonderful pictures of rainbow eucalyptus trees which shared by ifs officer is going viral on social media - Vijay Karnataka

ಬಣ್ಣ ಬಣ್ಣಗಳಿಂದ ಮಿಂಚುವ ಮರ : ಪ್ರಕೃತಿಯ ಈ ವೈಚಿತ್ರ್ಯಕ್ಕೆ ತಲೆಬಾಗದವರೇ ಇಲ್ಲ

Vijaya Karnataka Web 17 Mar 2022, 3:54 pm
Subscribe

ಐಎಫ್‌ಎಸ್ ಅಧಿಕಾರಿ ಹಂಚಿಕೊಂಡಿರುವ ಈ ಫೋಟೋಗಳು ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಬಲು ಅಚ್ಚರಿಯಿಂದ ಈ ಫೋಟೋಗಳನ್ನು ನೋಡುತ್ತಿದ್ದಾರೆ. ಸಾಕಷ್ಟು ಮಂದಿ ಇದೇ ಮೊದಲ ಬಾರಿಗೆ ಇಂತಹ ವಿಶೇಷ ಮರದ ಬಗ್ಗೆ ಕೇಳುತ್ತಿದ್ದಾರೆ. ಹೀಗಾಗಿ, ಈ ಫೋಟೋ ಈಗ ಎಲ್ಲರನ್ನೂ ಬಹುವಾಗಿ ಆಕರ್ಷಿಸಿದೆ.

ಹೈಲೈಟ್ಸ್‌:

  • ಕಾಮನಬಿಲ್ಲಿನ ಬಣ್ಣಗಳಂತೆ ಕಾಣುವ ಅದ್ಭುತ ಮರ
  • ಹಲವು ಬಣ್ಣಗಳಿಂದ ಮಿಂಚುವ ಅಪೂರ್ವ ವೃಕ್ಷ
  • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ದೃಶ್ಯ

tree
| Image Courtesy : Susanta Nanda IFS/Twitter
ನಮ್ಮ ಪ್ರಕೃತಿ ಎಂಬುದು ಅದೆಷ್ಟೋ ಅದ್ಭುತ ರಹಸ್ಯಗಳ ಮೂಟೆ. ಇಲ್ಲಿ ಹೆಜ್ಜೆ ಹೆಜ್ಜೆಗೂ ವಿಶೇಷತೆಗಳು ನಮ್ಮ ಕಣ್ಣಿಗೆ ಗೋಚರಿಸುತ್ತವೆ. ಇಂತಹ ವಿಶೇಷತೆಗಳು ಅರೆಕ್ಷಣದಲ್ಲಿ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಈಗಂತು ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸಾಕಷ್ಟು ಅಪೂರ್ವ ದೃಶ್ಯಗಳು ಕಾಣಸಿಗುತ್ತವೆ. ಹೀಗೆ ನಮ್ಮನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುವಂತೆ ಮಾಡುವ ಸುಂದರ ಫೋಟೋವೊಂದು ಈಗ ಎಲ್ಲರನ್ನೂ ಆಕರ್ಷಿಸಿದೆ.

ಇದು ಕಾಮನಬಿಲ್ಲಿನಂತೆ ಕಾಣುವ ಅಪೂರ್ವ ಮರವೊಂದರ ದೃಶ್ಯ. ಹಲವು ಬಣ್ಣಗಳಿಂದ ಮಿರ ಮಿರ ಮಿಂಚುವ ಮರದ ಫೋಟೋವನ್ನು ಕಂಡಾಗಲೇ ಖುಷಿಯಾಗುತ್ತದೆ. ಜತೆಗೆ, ಅಚ್ಚರಿಯೂ ಮೂಡುತ್ತದೆ.

ಅಳುತ್ತಿದ್ದ ಕಂದನಲ್ಲಿ ಖುಷಿ ಮೂಡಿಸಲು `ಬೇಬಿ ಶಾರ್ಕ್‌' ಹಾಡಿದ ವಿಮಾನ ಪ್ರಯಾಣಿಕರು: ಹೃದಯಸ್ಪರ್ಶಿ ದೃಶ್ಯವಿದು
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಣ್ಣದಿಂದ ಮಿಂಚುವ ಮರವೊಂದರ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದು `ರೇನ್‌ಬೋ ಯೂಕಲಿಪ್ಟಸ್' ಎಂದು ಕರೆಯಲ್ಪಡುವ ನೀಲಗಿರಿ ಮರಗಳ ದೃಶ್ಯ. ಅತೀ ವೇಗದಲ್ಲಿ ಬೆಳೆಯುವ ಮರ ಇದು. ಈ ಮರದ ಫೋಟೋಗಳು ಈಗ ನೆಟ್ಟಿಗರನ್ನು ಬೆರಗುಗೊಳಿಸಿದೆ. ಇದು ವಿಶ್ವದ ಅತ್ಯಂತ ವರ್ಣರಂಜಿತ ಮರ ಎಂದೂ ಸುಸಂತ ನಂದ ಅವರು ಕ್ಯಾಪ್ಶನ್‌ನಲ್ಲಿ ಉಲ್ಲೇಖಿಸಿದ್ದಾರೆ.
Viral Video : 3 ವರ್ಷದ ಬಳಿಕ ಅಣ್ಣ ತಂಗಿಯ ಭೇಟಿ : ಖುಷಿಯ ಪ್ರತಿಕ್ರಿಯೆಯೇ ಹೃದಯಸ್ಪರ್ಶಿ

Viral Video: ಯಾವತ್ತೂ ನಾಗರಹಾವುಗಳ ಜತೆಗೆ ಇಂತಹ ತಮಾಷೆ ಬೇಡ!: ಭಯಾನಕ ದೃಶ್ಯವಿದು
ಸಹಜವಾಗಿಯೇ ಈ ಫೋಟೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಇದೊಂದು ಅದ್ಭುತ ಕಲೆಯಂತೆ ಕಾಣುತ್ತದೆ ಎಂದು ಹಲವರು ಬಣ್ಣಿಸಿದ್ದಾರೆ. ಸಾಮಾನ್ಯವಾಗಿ ಇವುಗಳು 60ರಿಂದ 75 ಮೀಟರ್‌ವರೆಗೆ ಬೆಳೆಯುತ್ತದೆ. ಪ್ರತಿ ಬೇಸಿಗೆಯಲ್ಲಿ ಈ ಮರದ ಹಳೆಯ ತೊಗಟೆ ಬೀಳುತ್ತವೆ. ಜತೆಗೆ, ಹಸಿರಾದ ಹೊಸ ತೊಗಟೆ ಕಾಣಿಸುತ್ತದೆ. ಈ ಹೊಸ ತೊಗಟೆ ಬಳಿಕ ವಿವಿಧ ಬಣ್ಣಗಳಿಂದ ಬದಲಾಗುತ್ತದೆ. ಇದು ಎಲ್ಲರ ಕಣ್ಮನ ಸೆಳೆಯುವಂತಿರುತ್ತದೆ. ನೀವು ಕೂಡಾ ಈ ಸೊಬಗಿಗೆ ಮಾರು ಹೋಗಿರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ