Bigg Boss Kannada 10: ಸಂಭಾವ್ಯ ಸ್ಪರ್ಧಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Curated byಹರ್ಷಿತಾ ಎನ್ | Vijaya Karnataka Web 3 Oct 2023, 9:06 pm

‘ಬಿಗ್ ಬಾಸ್ ಕನ್ನಡ 10’ ಆರಂಭಕ್ಕೆ 5 ದಿನಗಳು ಬಾಕಿ ಇವೆ. ಈ ಬಾರಿ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಸ್ಪರ್ಧಿಸುವವರು ಯಾರ್ಯಾರು? ಯಾರೆಲ್ಲಾ ‘ಬಿಗ್ ಬಾಸ್’ ಮನೆಗೆ ಎಂಟ್ರಿಕೊಡ್ತಾರೆ? ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ‘ಬಿಗ್ ಬಾಸ್ ಕನ್ನಡ 10’ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಇಲ್ಲಿದೆ. ಒಮ್ಮೆ ನೋಡಿ..

  • ‘ಇವರೆಲ್ಲಾ’ ಬಿಗ್ ಬಾಸ್‌ ಮನೆಗೆ ಹೋಗ್ತಿರೋದು ನಿಜವೇ?

    ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 8 ರಿಂದ ‘ಬಿಗ್ ಬಾಸ್ ಕನ್ನಡ 10’ ಶುರುವಾಗಲಿದೆ. ಇಂದು ‘ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮದ ಪ್ರೆಸ್‌ ಮೀಟ್‌ ಜರುಗಿದೆ. ಈ ಬಾರಿ ‘ಬಿಗ್ ಬಾಸ್‌’ ಕಾರ್ಯಕ್ರಮದ ನಿರ್ದೇಶನದ ಜವಾಬ್ದಾರಿ ಪ್ರಕಾಶ್ ಹೆಗಲೇರಿದೆ. ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮ ವಿಶೇಷವಾಗಿರಲಿದ್ದು, ಹೊಸ ಮನೆ ದೊಡ್ಡ ಆಲದ ಮರದ ಬಳಿ ನಿರ್ಮಿಸಲಾಗಿದೆ.



    ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ಯಾರೆಲ್ಲಾ ಸ್ಪರ್ಧಿಸಲಿದ್ದಾರೆ ಎಂಬುದರ ಬಗ್ಗೆ ಊಹಾಪೋಹ, ವದಂತಿಗಳು ಕೇಳಿಬರುತ್ತಿವೆ. ‘ಮೊದಲ ಸ್ಪರ್ಧಿಯಾಗಿ ಚಾರ್ಲಿ ಬರುತ್ತಿದ್ದಾಳೆ’ ಎಂದು ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್‌ ಹೆಡ್‌ ಪ್ರಶಾಂತ್ ನಾಯಕ್ ಸ್ಪಷ್ಟಪಡಿಸಿದ್ದಾರೆ. ಉಳಿದ ಸ್ಪರ್ಧಿಗಳು ಯಾರ್ಯಾರು?

    ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ಸ್ಪರ್ಧಿಸುವವರ ಸಂಭಾವ್ಯ ಪಟ್ಟಿ ಇಲ್ಲಿದೆ ನೋಡಿ…

  • ಚಾರ್ಲಿ

    ‘777 ಚಾರ್ಲಿ’ ಸಿನಿಮಾದ ಮೂಲದ ಮಿಂಚಿದ್ದ ಶ್ವಾನ ಚಾರ್ಲಿ ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮಕ್ಕೆ ಬರುತ್ತಿದ್ದಾಳೆ. ‘’ಇದಕ್ಕೆ ಬೇಕಾದ ಪರ್ಮಿಷನ್ಸ್ ತೆಗೆದುಕೊಂಡಿದ್ದೇವೆ’’ ಎಂದು ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್‌ ಪ್ರಶಾಂತ್ ನಾಯಕ್ ತಿಳಿಸಿದ್ದಾರೆ.

  • ರಂಜನಿ ರಾಘವನ್

    ‘ಪುಟ್ಟಗೌರಿ ಮದುವೆ’, ‘ಕನ್ನಡತಿ’ ಸೀರಿಯಲ್‌ ಖ್ಯಾತಿಯ ರಂಜನಿ ರಾಘವನ್ ಈ ಬಾರಿ ‘ಬಿಗ್ ಬಾಸ್’ ಮನೆಗೆ ಕಾಲಿಡುವ ಸಾಧ್ಯತೆ ಇದೆ

  • ಹರೀಶ್ ನಾಗರಾಜು

    ಜರ್ನಲಿಸ್ಟ್, ನ್ಯೂಸ್ ಆಂಕರ್ ಹರೀಶ್ ನಾಗರಾಜು ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ರಕ್ಷಕ್ ಬುಲೆಟ್

    ಸೋಷಿಯಲ್ ಮೀಡಿಯಾ ಮೂಲಕ ಸೌಂಡ್ ಮಾಡುತ್ತಿರುವ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ‘ಬಿಗ್ ಬಾಸ್‌’ ಮನೆಗೆ ಬರುವ ಲಕ್ಷಣಗಳು ಕಾಣುತ್ತಿವೆ.

  • ನಮ್ರತಾ ಗೌಡ

    ‘ಪುಟ್ಟಗೌರಿ ಮದುವೆ’, ‘ನಾಗಿಣಿ 2’ ಖ್ಯಾತಿಯ ನಮ್ರತಾ ಗೌಡ ಹೆಸರು ಸಂಭಾವ್ಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.

  • Loading ...
  • ನಿನಾದ್ ಹರಿತ್ಸ

    ‘ನಾಗಿಣಿ 2’ ಖ್ಯಾತಿಯ ನಿನಾದ್ ಹರಿತ್ಸ ಕೂಡ ‘ಬಿಗ್ ಬಾಸ್’ ಶೋಗೆ ಬರಲಿದ್ದಾರಂತೆ ಎಂಬ ಅಂತೆ - ಕಂತೆ ಕೇಳಿಬರುತ್ತಿದೆ.

  • ರಾಪರ್

    ಗಾಯಕಿ ಕಮ್ ರಾಪರ್‌ ಊರ್ಮಿಳಾ ಇಶಾನಿ ಅಥವಾ ರಾಪರ್ ರಾಹುಲ್ ಡಿಟ್ಟೋ ಈ ಬಾರಿ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

  • ಅದ್ವಿತಿ ಶೆಟ್ಟಿ/ಅಶ್ವಿತಿ ಶೆಟ್ಟಿ

    ಅವಳಿ ಸಹೋದರಿಯರಾದ ಅದ್ವಿತಿ ಶೆಟ್ಟಿ ಅಥವಾ ಅಶ್ವಿತಿ ಶೆಟ್ಟಿ ಪೈಕಿ ಒಬ್ಬರು ‘ಬಿಗ್ ಬಾಸ್’ ಮನೆಗೆ ಬರಲಿದ್ದಾರಂತೆ.

  • ಪ್ರಕಾಶ್ ತುಮ್ಮಿನಾಡು

    ಒಳ್ಳೆ ಕಾಮಿಡಿ ಟೈಮಿಂಗ್ ಹೊಂದಿರುವ ಪ್ರಕಾಶ್ ತುಮ್ಮಿನಾಡು ‘ಬಿಗ್ ಬಾಸ್‌’ ಕಾರ್ಯಕ್ರಮದಲ್ಲಿ ಸ್ಪರ್ಧಿಸಲಿದ್ದಾರಾ?

  • ವಿನಯ್ ಕುಮಾರ್

    ‘ದಾವಣಗೆರೆ ಎಕ್ಸ್‌ಪ್ರೆಸ್’ ಖ್ಯಾತಿಯ ವಿನಯ್ ಕುಮಾರ್‌ ಈ ಬಾರಿ ಕ್ರೀಡಾ ಕ್ಷೇತ್ರದಿಂದ ‘ಬಿಗ್ ಬಾಸ್‌’ ಕಾರ್ಯಕ್ರಮದಲ್ಲಿ ಸ್ಪರ್ಧಿಸಲಿದ್ದಾರಂತೆ ಎಂಬ ವದಂತಿ ಹಬ್ಬಿದೆ.

  • ಆಶಾ ಭಟ್

    ಸಂಗೀತ ಕ್ಷೇತ್ರದಿಂದ ‘ಸರಿಗಮಪ’ ಸ್ಪರ್ಧಿ ಆಶಾ ಭಟ್‌ ಸ್ಪರ್ಧಿಸುವ ಸಾಧ್ಯತೆ ಇದೆ.

  • ರೂಪಾ ರಾಯಪ್ಪ

    ‘ಕೆಜಿಎಫ್’ ಸಿನಿಮಾ ನಟಿ ರೂಪಾ ರಾಯಪ್ಪ ಕೂಡ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಸ್ಪರ್ಧೆ ಮಾಡ್ತಾರಂತೆ ಎಂಬ ಗಾಸಿಪ್ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ.

  • ಕಾಫಿ ನಾಡು ಚಂದು

    ಸೋಷಿಯಲ್ ಮೀಡಿಯಾ ಸ್ಟಾರ್‌ ಕಾಫಿ ನಾಡು ಚಂದು ಹೆಸರೂ ‘ಬಿಗ್ ಬಾಸ್’ ಸ್ಪರ್ಧಿಗಳ ಸಂಭಾವ್ಯ ಪಟ್ಟಿಯಲ್ಲಿದೆ.

  • ಭವ್ಯಾ ಗೌಡ

    ‘ಗೀತಾ’ ಸೀರಿಯಲ್ ಖ್ಯಾತಿಯ ನಟಿ ಭವ್ಯಾ ಗೌಡ ಕೂಡ ‘ಬಿಗ್ ಬಾಸ್’ ಮನೆಗೆ ಬರ್ತಿದ್ದಾರೆ ಎನ್ನಲಾಗಿದೆ. ಹಾಗಾದ್ರೆ, ಭವ್ಯಾ ಗೌಡ ‘ಗೀತಾ’ ಧಾರಾವಾಹಿಯಿಂದ ಹೊರ ಬರುತ್ತಾರಾ?

  • ಸುಕೃತಾ ನಾಗ್

    ‘ಲಕ್ಷಣ’ ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುತ್ತಿರುವ ಸುಕೃತಾ ನಾಗ್‌ ‘ಬಿಗ್ ಬಾಸ್’ ಮನೆಯೊಳಗೆ ಹೋಗ್ತಾರಾ?

  • ಚಂದ್ರಪ್ರಭ

    ‘ಮಜಾಭಾರತ’, ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಚಂದ್ರಪ್ರಭ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.

  • ರಾಜೇಶ್ ಧ್ರುವ

    ‘ಅಗ್ನಿಸಾಕ್ಷಿ’ ಸೀರಿಯಲ್‌ ಖ್ಯಾತಿಯ ರಾಜೇಶ್ ಧ್ರುವ ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ಸ್ಪರ್ಧಿಸಲಿದ್ದಾರೆ ಅಂತ ಹೇಳಲಾಗುತ್ತಿದೆ.