ದರ್ಶನ್, ಮಾಲಾಶ್ರೀ, ಗಣೇಶ್‌ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಬಲು ಜೋರು: ಫೋಟೋಗಳು ಇಲ್ಲಿವೆ

Curated byಹರ್ಷಿತಾ ಎನ್ | Vijaya Karnataka Web 15 Jan 2024, 6:45 pm

ಸ್ಯಾಂಡಲ್‌ವುಡ್‌ ಹಾಗೂ ಕಿರುತೆರೆ ಅಂಗಳದಲ್ಲೂ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌, ಗೋಲ್ಡನ್ ಸ್ಟಾರ್ ಗಣೇಶ್‌, ಕನಸಿನ ರಾಣಿ ಮಾಲಾಶ್ರೀ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಹೇಗಿತ್ತು? ನೀವೇ ನೋಡಿ.. ಫೋಟೋಗಳಲ್ಲಿ…

  • ಸಂಕ್ರಾಂತಿ ಹಬ್ಬದ ಸಡಗರದಲ್ಲಿ ಕನ್ನಡದ ತಾರೆಯರು

    ಇಂದು ಸಂಕ್ರಾಂತಿ ಹಬ್ಬ. ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬವನ್ನ ಸಡಗರದಿಂದ ಆಚರಿಸಲಾಗುತ್ತಿದೆ. ಕನ್ನಡ ತಾರೆಯರು ಕೂಡ ಸಂಕ್ರಾಂತಿ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫಾರ್ಮ್ ಹೌಸ್‌ನಲ್ಲಿ ಸಂಕ್ರಾಂತಿ ಹಬ್ಬ ಜೋರಾಗಿತ್ತು. ‘ಕಾಟೇರ’ ಸಿನಿಮಾ ನಟಿ ಆರಾಧನಾ ಹಾಗೂ ನಟಿ ಮಾಲಾಶ್ರೀ ಮನೆಯಲ್ಲೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಗಿದೆ. ಕಬ್ಬು ತಂದು ಮನೆಯಲ್ಲಿ ಸಂಕ್ರಾಂತಿ ಆಚರಿಸಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್.

    ನಟಿ ಶ್ವೇತಾ ಶ್ರೀವಾತ್ಸವ್, ‘ಕೆಂಡಸಂಪಿಗೆ’ ಧಾರಾವಾಹಿ ನಟಿ ಅಮೃತಾ ರಾಮಮೂರ್ತಿ, ‘ಒಲವಿನ ನಿಲ್ದಾಣ’ ನಟಿ ಸಿಮ್ರನ್, ‘ರಾಮಾಚಾರಿ’ ನಟಿ ಅಂಜಲಿ ಸುಧಾಕರ್ ಕೂಡ ಸಂಕ್ರಾಂತಿ ಹಬ್ಬವನ್ನ ಆಚರಿಸಿದ್ದಾರೆ. ತಾರೆಯರ ಮನೆಗಳಲ್ಲಿ ಸಂಕ್ರಾಂತಿ ಸಂಭ್ರಮ ಹೇಗಿತ್ತು ಅಂತ ನೀವೇ ನೋಡಿ ಕೆಳಗಿನ ಫೋಟೋಗಳಲ್ಲಿ…

  • ಫಾರ್ಮ್ ಹೌಸ್‌ನಲ್ಲಿ ದರ್ಶನ್‌

    ಸಂಕ್ರಾಂತಿ ಹಬ್ಬವನ್ನ ಮೈಸೂರಿನ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಆಚರಿಸಿದ್ದಾರೆ.

  • ಮಗನೊಂದಿಗೆ ದರ್ಶನ್

    ಸಂಕ್ರಾಂತಿ ಹಬ್ಬವನ್ನ ಪುತ್ರ ವಿನೀಶ್‌ ಜೊತೆ ಸಡಗರದಿಂದ ಆಚರಿಸಿದ ನಟ ದರ್ಶನ್.

  • ಸಖತ್ ಜೋರು

    ದರ್ಶನ್‌ ಫಾರ್ಮ್‌ ಹೌಸ್‌ನಲ್ಲಿ ಸಂಕ್ರಾಂತಿ ಹಬ್ಬ ಸಖತ್ ಜೋರಾಗಿದೆ.

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ವಿಜಯಲಕ್ಷ್ಮೀ ದರ್ಶನ್

    ಸಂಕ್ರಾಂತಿ ಸಡಗರದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ.

  • ಹಬ್ಬದ ಖುಷಿಯಲ್ಲಿ ಮಾಲಾಶ್ರೀ

    ಸಂಕ್ರಾಂತಿ ಹಬ್ಬದ ಖುಷಿಯಲ್ಲಿ ನಟಿ ಮಾಲಾಶ್ರೀ & ಫ್ಯಾಮಿಲಿ

  • Loading ...
  • ವಿಶೇಷ ಪೂಜೆ

    ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಿದ್ದಾರೆ ಮಾಲಾಶ್ರೀ

  • ಬಸವನಿಗೆ ಕಬ್ಬು

    ಸಂಕ್ರಾಂತಿ ಪ್ರಯುಕ್ತ ಬಸವನಿಗೆ ಕಬ್ಬು, ಬಾಳೆಹಣ್ಣು ಕೊಟ್ಟಿದ್ದಾರೆ ಮಾಲಾಶ್ರೀ

  • ‘ಕಾಟೇರ’ ಗೆದ್ದ ಖುಷಿ

    ‘ಕಾಟೇರ’ ಗೆದ್ದ ಖುಷಿಯಲ್ಲಿದ್ದಾರೆ ಮಾಲಾಶ್ರೀ ಪುತ್ರಿ ಆರಾಧನಾ.

  • ಗಣೇಶ್‌

    ಗೋಲ್ಡನ್ ಸ್ಟಾರ್ ಗಣೇಶ್ ನಿವಾಸದಲ್ಲೂ ಸಂಕ್ರಾಂತಿ ಹಬ್ಬ ಜೋರಾಗಿತ್ತು.

  • ಕಬ್ಬು ತಂದ ಗಣಿ

    ಸಂಕ್ರಾಂತಿ ಪ್ರಯುಕ್ತ ಮನೆಗೆ ಕಬ್ಬು ಖರೀದಿಸಿ ತಂದಿದ್ದಾರೆ ಗಣೇಶ್.

  • ಶ್ರೀಮುರಳಿ ಫ್ಯಾಮಿಲಿ

    ಸಂಕ್ರಾಂತಿ ಸಂಭ್ರಮದಲ್ಲಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ ಫ್ಯಾಮಿಲಿ.

  • ಅಂಜಲಿ ಸುಧಾಕರ್

    ಸಂಕ್ರಾಂತಿ ಸಂಭ್ರಮದಲ್ಲಿ ‘ರಾಮಾಚಾರಿ’ ನಟಿ ಅಂಜಲಿ ಸುಧಾಕರ್.

  • ಕಿರುತೆರೆ ಕಲಾವಿದರು

    ಕಿರುತೆರೆ ಕಲಾವಿದರೆಲ್ಲಾ ಒಂದೆಡೆ ಸೇರಿ ಸಂಕ್ರಾಂತಿ ಆಚರಿಸಿದ್ದಾರೆ.

  • ಉಡುಪಿಯಲ್ಲಿ ದೀಪಿಕಾ ದಾಸ್‌

    ಸಂಕ್ರಾಂತಿ ಪ್ರಯುಕ್ತ ಉಡುಪಿಯ ಕೃಷ್ಣ ಮಠಕ್ಕೆ ದೀಪಿಕಾ ದಾಸ್ ಭೇಟಿ ಕೊಟ್ಟಿದ್ದಾರೆ.

  • ‘ಒಲವಿನ ನಿಲ್ದಾಣ’ ನಟಿ

    ಸಂಕ್ರಾಂತಿ ಹಬ್ಬವನ್ನ ಆಚರಿಸಿದ್ದಾರೆ ‘ಒಲವಿನ ನಿಲ್ದಾಣ’ ಧಾರಾವಾಹಿ ನಟಿ ಸಿಮ್ರನ್.

  • ಶ್ವೇತಾ ಶ್ರೀವಾತ್ಸವ್

    ಸಂಕ್ರಾಂತಿ ಪ್ರಯುಕ್ತ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ನಟಿ ಶ್ವೇತಾ ಶ್ರೀವಾತ್ಸವ್.

  • ಮಗಳ ಜೊತೆ ಅಮೃತಾ ರಾಮಮೂರ್ತಿ

    ಮುದ್ದು ಮಗಳ ಜೊತೆ ಸಂಕ್ರಾಂತಿ ಸಂಭ್ರಮದಲ್ಲಿ ನಟಿ ಅಮೃತಾ ರಾಮಮೂರ್ತಿ.

  • ‘ಕೆಂಡಸಂಪಿಗೆ’ ಧಾರಾವಾಹಿ

    ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ನಟಿ ಅಮೃತಾ ರಾಮಮೂರ್ತಿ ನಟಿಸುತ್ತಿದ್ದಾರೆ.