'ಪ್ರೀತಿಯ ಅರಸಿ' ಧಾರಾವಾಹಿಗೆ ನಾಯಕಿಯಾದ ರಕ್ಷಾ ನಿಂಬರ್ಗಿ; ಇದು ಶ್ರುತಿ ನಾಯ್ಡು ಸೀರಿಯಲ್

Authored byಅವಿನಾಶ್ ಜಿ. ರಾಮ್ | Vijaya Karnataka Web 10 Oct 2023, 5:23 pm

ಕನ್ನಡ ಕಿರುತೆರೆಯಲ್ಲಿ ಹಲವಾರು ಯಶಸ್ವಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿರುವ ಶ್ರುತಿ ನಾಯ್ಡು ಅವರು ಇದೀಗ ಮತ್ತೊಂದು ಧಾರಾವಾಹಿಯನ್ನು ನಿರ್ಮಿಸಿದ್ದು, ಅದಕ್ಕೆ 'ಪ್ರೀತಿ ಅರಸಿ' ಅಂತ ಹೆಸರಿಟ್ಟಿದ್ದಾರೆ.

  • ​'ಪ್ರೀತಿಯ ಅರಸಿ' ಧಾರಾವಾಹಿ ಕಥೆ ಏನು?​

    ಉದಯ ಟಿವಿಯಲ್ಲಿ ಈಗಾಗಲೇ ಹಲವಾರು ಯಶಸ್ವಿ ಧಾರಾವಾಹಿಗಳು ಪ್ರಸಾರವಾಗಿವೆ. ಇತ್ತೀಚಿಗಷ್ಟೆ ಆರಂಭವಾದ ಸಿಂಪಲ್ ಸುನಿ ನಿರ್ಮಾಣದ 'ಶಾಂಭವಿ' ಧಾರಾವಾಹಿಗೂ ವೀಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಉಳಿದಂತೆ 'ಕನ್ಯಾದಾನ', 'ಆನಂದರಾಗ', 'ಅಣ್ಣ ತಂಗಿ','ಸೇವಂತಿ', 'ಜನನಿ', 'ರಾಧಿಕಾ', 'ಗೌರಿಪುರದ ಗಯ್ಯಾಳಿಗಳು' ಮುಂತಾದ ಧಾರಾವಾಹಿಗಳು ವೀಕ್ಷಕರ ಪ್ರೀತಿಗೆ ಪಾತ್ರವಾಗಿವೆ. ಇದೀಗ ಈ ಸಾಲಿಗೆ ಮತ್ತೊಂದು ಧಾರಾವಾಹಿ ಸೇರ್ಪಡೆ ಆಗಲಿದೆ. ಹೌದು, ಅಕ್ಟೋಬರ್‌ 16ರಿಂದ ಪ್ರತಿದಿನ ರಾತ್ರಿ 9ಕ್ಕೆ 'ಪ್ರೀತಿಯ ಅರಸಿ' ಎಂಬ ಹೊಸ ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.



    'ಪ್ರೀತಿಯ ಅರಸಿ' ಧಾರಾವಾಹಿಯು ಅಪೂರ್ಣ ಮನಸ್ಸುಗಳ ಪರಿಪೂರ್ಣ ಪ್ರೇಮಕಥೆಯನ್ನು ಹೊಂದಿದೆಯಂತೆ. ಸಾಮಾನ್ಯವಾಗಿ ಗಂಡು ಎಂದರೆ ಹೊರ ಪ್ರಪಂಚದಲ್ಲಿ ದುಡಿಯುವುದು, ಹೆಣ್ಣು ಎಂದರೆ ಮನೆ ನಿಭಾಯಿಸುವ ಜವಾಬ್ದಾರಿ ಹೊತ್ತವಳು ಎನ್ನುವುದು ಲೋಕಾರೂಡಿ. ಆದೆರ ಈ ಧಾರಾವಾಹಿಯಲ್ಲಿ ಕಥಾನಾಯಕಿ ಅಂಜಲಿ ಮತ್ತು ಕಥಾ ನಾಯಕ ರಾಕಿ, ಇವರಿಬ್ಬರೂ ಈ ಸಾಮಾನ್ಯ ಜಗತ್ತಿನಲ್ಲಿ ವಿಭಿನ್ನ ಯೋಚನಾಲಹರಿ ಹೊಂದಿರುವವರು. ತನ್ನ ಉದ್ಯೋಗದಲ್ಲಿ ಅತ್ಯುನ್ನತ ಮಟ್ಟಕ್ಕೇರುವುದು ಅಂಜಲಿಯ ಕನಸಾದರೆ, ಕುಟುಂಬವೇ ಸರ್ವಸ್ವ, ಮನೆಯೇ ಎಲ್ಲಕ್ಕಿಂತ ಮುಖ್ಯ ಅನ್ನೋದು ಹೀರೋ ರಾಕಿಯ ಧೃಡ ನಿರ್ಧಾರ. ಪ್ರೀತಿಯನ್ನು ಅರಸುತ್ತಿರುವ ಅಂಜಲಿ, ರಾಕಿಯ ಪ್ರೀತಿಯ ಅರಸಿಯಾಗುವಳೇ ಎಂಬ ಕಥೆಯನ್ನು ಇದು ಹೊಂದಿದೆ.

  • 'ಪ್ರೀತಿಯ ಅರಸಿ' ಧಾರಾವಾಹಿಯನ್ನು ಹಣ ಹಾಕಿದ ಶ್ರುತಿ ನಾಯ್ಡು

  • 'ಪ್ರೀತಿಯ ಅರಸಿ' ಧಾರಾವಾಹಿಗೆ ರಮೇಶ್ ಇಂದಿರ ನಿರ್ದೇಶನ

  • ಈ ಅಪರೂಪದ ಪ್ರೇಮಕಥೆಯಲ್ಲಿ ಅಂಜಲಿ ಪಾತ್ರ ಮಾಡುತ್ತಿದ್ದಾರೆ ನಟಿ ರಕ್ಷಾ ನಿಂಬರ್ಗಿ

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • 'ಪ್ರೀತಿಯ ಅರಸಿ' ಧಾರಾವಾಹಿಯಲ್ಲಿ ರಾಕಿ ಪಾತ್ರ ನಿಭಾಯಿಸುತ್ತಿರುವ ಪೃಥ್ವಿ ಶೆಟ್ಟಿ

  • ಹೀರೋ ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಂಡ ಹಿರಿಯ ನಟಿ ಗಿರಿಜಾ ಲೋಕೇಶ್‌

  • Loading ...
  • ನಾಯಕಿಯ ಅಜ್ಜಿ ಪಾತ್ರದಲ್ಲಿ ಬಣ್ಣ ಹಚ್ಚಿದ ಹಿರಿಯ ನಟಿ ಪದ್ಮಾವಾಸಂತಿ

  • ಅ.16ರಿಂದ ವಾರದ ಎಲ್ಲಾ ದಿನಗಳಲ್ಲೂ ರಾತ್ರಿ 9ಕ್ಕೆ ಪ್ರಸಾರವಾಗಲಿರುವ 'ಪ್ರೀತಿಯ ಅರಸಿ'