Please enable javascript.ಬೇಕಿಂಗ್ ಸೋಡಾದಲ್ಲಿ ಸಿಗುವ ಪ್ರಯೋಜನಗಳು,ಅಡುಗೆ ಸೋಡಾ: ಈ ಬಿಳಿ ಬಣ್ಣದ ಪುಡಿಯಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯಾ? - know the unexpected benefits of baking soda - vijaykarnataka

ಅಡುಗೆ ಸೋಡಾ: ಈ ಬಿಳಿ ಬಣ್ಣದ ಪುಡಿಯಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

Produced byಮನೋಹರ್ ಶೆಟ್ಟಿ | Vijaya Karnataka Web 4 Jul 2023, 11:05 am

ಅಡುಗೆ ಸೋಡಾ ನೋಡಲು ಒಂದು ಬಿಳಿ ಬಣ್ಣದ ಪುಡಿಯ ಹಾಗೆ ಕಂಡು ಬಂದರೂ, ಇದರಲ್ಲಿ ಸಾಕಷ್ಟು ಪ್ರಯೋಜನಗಳು ಅಡಗಿದೆ.

  • ಅಡುಗೆ ಸೋಡಾದ ಪ್ರಯೋಜನಗಳು

    ಅಡುಗೆ ಸೋಡಾದ ಪ್ರಯೋಜನಗಳು

    ಮನೆಯ ಅಡುಗೆ ಮನೆಯ ಶೆಲ್ಫ್‌ನಲ್ಲಿ ಒಂದು ಸಣ್ಣ ಡಬ್ಬದಲ್ಲಿ ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾವನ್ನು ಇಟ್ಟಿರು ತ್ತಾರೆ. ಯಾಕೆಂದ್ರೆ ಇಡ್ಲಿ, ದೋಸೆ ಮಾಡುವಾಗ ಇದರ ಉಪ ಯೋಗ ಬರುತ್ತದೆ ಅಂತ! ಆದರೆ ನಿಮಗೆ ಗೊತ್ತಿರಲಿ ಇದರ ಪ್ರಯೋಜನಗಳು ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಇದರಿಂದ ಸಾಕಷ್ಟು ಪ್ರಯೋಜನಗಳನ್ನು ನಿರೀಕ್ಷೆ ಮಾಡಬಹು ದಾಗಿದೆ.

  • ಬೆಳ್ಳಿ ಒಡವೆಗಳು ಕಪ್ಪಾಗಿದ್ದರೆ...

    ಬೆಳ್ಳಿ ಒಡವೆಗಳು ಕಪ್ಪಾಗಿದ್ದರೆ...

    ಒಂದು ಬೌಲ್‌ನಲ್ಲಿ ನಿಂಬೆಹಣ್ಣಿನ ರಸ ಮತ್ತು ಅಡುಗೆ ಸೋಡಾ ಮಿಶ್ರಣ ಮಾಡಿದ ನೀರಿನಲ್ಲಿ ಬೆಳ್ಳಿ ಒಡವೆಗಳನ್ನು ಸ್ವಲ್ಪ ಹೊತ್ತು ನೆನೆಹಾಕಿ, ಆ ಬಳಿಕ ಸ್ವಚ್ಛಗೊಳಿಸಿದರೆ, ಬೆಳ್ಳಿ ಒಡವೆಗಳ ಫಲ ಫಲ ಹೊಳೆಯುತ್ತವೆ!

  • ಫ್ರಿಡ್ಜ್‌‌ ವಾಸನೆ ಬರುತ್ತಿದ್ದರೆ...

    ಫ್ರಿಡ್ಜ್‌‌ ವಾಸನೆ ಬರುತ್ತಿದ್ದರೆ...

    ಸ್ವಲ್ಪ ಅಡುಗೆ ಸೋಡಾವನ್ನು ಒಂದು ಬೌಲ್‌ನಲ್ಲಿ ಹಾಕಿ, ಫ್ರಿಡ್ಜ್‌‌ನಲ್ಲಿ ರಾತ್ರಿಪೂರ್ತಿ ಇಟ್ಟರೆ, ರೆಫ್ರಿಜರೇಟರ್‌ ನಲ್ಲಿ ಕಂಡು ಬರುವ ವಾಸನೆ ದೂರವಾಗುತ್ತದೆ.

  • ಗೋಡೆಯ ಟೈಲ್ಸ್‌ಗಳಲ್ಲಿ ಕಲೆಯಾಗಿದ್ದರೆ...

    ಗೋಡೆಯ ಟೈಲ್ಸ್‌ಗಳಲ್ಲಿ ಕಲೆಯಾಗಿದ್ದರೆ...

    ಒಂದು ಟೇಬಲ್ ಚಮಚದಷ್ಟು ಅಡುಗೆ ಸೋಡಾಕ್ಕೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ರೀತಿ ಮಾಡಿಕೊಂಡು, ಇದನ್ನು ಕಲೆ ಯಾಗಿರುವ ಗೋಡೆಯ ಟೈಲ್ಸ್‌‌ಗೆ ಹಚ್ಚಿ, ಒರೆಸಿದರೆ, ಕಲೆಗಳು ನಿವಾರಣೆಯಾಗುವುದು.

  • ಮುಖದ ಡೆಡ್ ಸ್ಕಿನ್ ಸಮಸ್ಯೆಗೆ

    ಮುಖದ ಡೆಡ್ ಸ್ಕಿನ್ ಸಮಸ್ಯೆಗೆ

    ಅಡುಗೆ ಸೋಡಾವು ಮುಖದಿಂದ ಡೆಡ್ ಸ್ಕಿನ್ ಕಿತ್ತು ಹಾಕುವ ಕೆಲಸ ಮಾಡುವುದು. ಇದಕ್ಕೆ ಪ್ರಮುಖ ಕಾರಣ, ಅಡುಗೆ ಸೋಡಾದಲ್ಲಿ ಉರಿಯೂತ ಶಮನಕಾರಿ ಕಂಡು ಬರುತ್ತದೆ.

  • ಮೂತ್ರನಾಳಗಳ ಸಮಸ್ಯೆಗಳಿಗೆ

    ಮೂತ್ರನಾಳಗಳ ಸಮಸ್ಯೆಗಳಿಗೆ

    ಒಂದು ಲೋಟ ನೀರಿನಲ್ಲಿ, ಸಣ್ಣ ಟೀ ಚಮಚದಷ್ಟು ಅಡುಗೆ ಸೋಡಾವನ್ನು ಬೆರೆಸಿ ಕುಡಿಯುವು ದರಿಂದ, ಮೂತ್ರನಾಳಗಳ ಸಮಸ್ಯೆಗಳು ನಿವಾರಣೆಯಾಗುತ್ತದೆ.

  • ಜೀರ್ಣಕ್ರಿಯೆ ಸಮಸ್ಯೆಗೆ

    ಜೀರ್ಣಕ್ರಿಯೆ ಸಮಸ್ಯೆಗೆ

    ಅಡುಗೆ ಸೋಡಾದಲ್ಲಿರುವ ಆಲ್ಕಲೈನ್ ಗುಣ ಲಕ್ಷಣ ಕಂಡು ಬರುವುದರಿಂದ, ಮನುಷ್ಯನ ಅಜೀರ್ಣತೆಯನ್ನು ಹೋಗ ಲಾಡಿಸಿ, ಜೀರ್ಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

  • ತಳ ಹಿಡಿದ ಪಾತ್ರೆಗೆ

    ತಳ ಹಿಡಿದ ಪಾತ್ರೆಗೆ

    ತಳ ಹಿಡಿದ ಪಾತ್ರೆಗೆ ಒಂದು ಟೇಬಲ್ ಚಮಚ ಬೇಕಿಂಗ್ ಸೋಡಾ ಹಾಕಿ ಅದಕ್ಕೆ ಬಿಸಿ ನೀರು ಸುರಿದು ಸ್ವಲ್ಪ ಹೊತ್ತು ಹಾಗೆ ಬಿಡಿ. ಆಬಳಿಕ, ಈ ಪಾತ್ರೆಯನ್ನು ಉಜ್ಜುವ ಬ್ರಷ್‌ನಿಂದ ತಿಕ್ಕಿದರೆ, ಕಲೆ ನಿವಾರಣೆಯಾಗುವುದು.