Please enable javascript.ಅಷ್ಟಬಂಧ ಬ್ರಹ್ಮ ಕಲಶ: ಪೂರ್ವ ಭಾವಿ ಸಭೆ - ಅಷ್ಟಬಂಧ ಬ್ರಹ್ಮ ಕಲಶ: ಪೂರ್ವ ಭಾವಿ ಸಭೆ - Vijay Karnataka

ಅಷ್ಟಬಂಧ ಬ್ರಹ್ಮ ಕಲಶ: ಪೂರ್ವ ಭಾವಿ ಸಭೆ

Vijaya Karnataka Web 18 Dec 2014, 5:15 am
Subscribe

ಕಕ್ಕಬ್ಬೆ ಪಾಡಿ ಶ್ರೀಇಗ್ಗುತ್ತಪ್ಪ ಸನ್ನಿಧಿಯಲ್ಲಿ ಜ. 2ರಿಂದ 5ರವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶದ ಕಾರ‌್ಯಕ್ರಮಕ್ಕೆ ಕಕ್ಕಬ್ಬೆ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಪೂರ್ವಭಾವಿ ಸಭೆ ನಡೆಯಿತು

ಅಷ್ಟಬಂಧ ಬ್ರಹ್ಮ ಕಲಶ: ಪೂರ್ವ ಭಾವಿ ಸಭೆ
ನಾಪೋಕ್ಲು:ಕಕ್ಕಬ್ಬೆ ಪಾಡಿ ಶ್ರೀಇಗ್ಗುತ್ತಪ್ಪ ಸನ್ನಿಧಿಯಲ್ಲಿ ಜ. 2ರಿಂದ 5ರವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶದ ಕಾರ‌್ಯಕ್ರಮಕ್ಕೆ ಕಕ್ಕಬ್ಬೆ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಪೂರ್ವಭಾವಿ ಸಭೆ ನಡೆಯಿತು ಸಭೆಯಲ್ಲಿ ಬ್ರಹ್ಮ ಕಲಶಕ್ಕೆ ಮೊದಲು ದೇವಳ ಹಾಗೂ ರಸ್ತೆ ಶುಚಿತ್ವ ಇದರ ಬಗ್ಗೆ ಮಹಿಳಾ ಸಂಘಗಳು, ಗ್ರಾಮಸ್ಥರು ತೆಗೆದು ಕೊಳ್ಳಬೇಕಾದ ಜವಾಬ್ದಾರಿಗಳ ವಿಚಾರವಾಗಿ ಚರ್ಚಿಸಲಾಯಿತು.

ಅಂದು ಬರುವವರಿಗೆ ಸೂಕ್ತ ವ್ಯವಸ್ಥೆ, ವಾಹನಗಳ ಪಾರ್ಕಿಂಗ್, ಕೆಇಬಿ, ಭದ್ರತೆಗೆ ಪೊಲೀಸ್ ಸಿಬ್ಬಂದಿಯ ನಿಯೋಜನೆ ಸೇರಿಂದಂತೆ ಪ್ರಮುಖ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ನಂತರದ ಮಾತನಾಡಿದ ಭಕ್ತ ಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ದೇವಳಕ್ಕೆ ಸಂಬಂಧಿಸಿದ ಎಲ್ಲಾ ತಕ್ಕ ಮುಖ್ಯಸ್ಥರ, ವಿವಿಧ ಸಂಘ ಸಂಸ್ಥೆಗಳ, ಭಕ್ತಾಧಿಗಳ ಸಹಕಾರದೊಂದಿಗೆ ಈ ಕಾರ‌್ಯಕ್ರಮವನ್ನು ನಡೆಸಲು ಉದ್ಧೇಶಿ ಸಲಾಗಿದೆ. ದೇವಳಕ್ಕೆ ಆಗಮಿಸುವ ಎಲ್ಲಾ ಭಕ್ತಾರು ತಮ್ಮ ಸಾಂಪ್ರದಾಯಿಕ ಉಡುಗೆ ಯಲ್ಲಿ ಪಾಲ್ಗೊಂಡು ಎಲ್ಲರೂ ಸಹಕರಿಸ ಬೇಕು ಎಂದು ಮನವಿ ಮಾಡಿದರು.

ಭಕ್ತಜನ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ಪದಾಧಿಕಾರಿಗಳಾದ ನಂಬಡಮಂಡ ಸುಬ್ರಮಣಿ, ಕಲಿಯಂಡ ಹ್ಯಾರಿ ಮಂದಣ್ಣ, ಪಾಂಡಂಡ ನರೇಶ್, ಕಲಿಯಂಡ ಸುನಂದ, ಕೋಡಿಮಣಿ ಯಂಡ ಸುರೇಶ್, ಬಾಚಮಂಡ ಲವ ಚಿಣ್ಣಪ್ಪ, ಕುಂಜಿಲ ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೋಟೆರ ನೈಲ್ ಚಂಗಪ್ಪ, ಕಕ್ಕಬ್ಬೆ ಹೈಲ್ಯಾಂಡರ್ಸ್‌ ಕ್ಲಬ್ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ, ಕಕ್ಕಬ್ಬೆ ಕೇಂದ್ರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅನ್ನಾಡಿಯಂಡ ದಿಲೀಪ್ ಕುಮಾರ್ ಮತ್ತಿತರರು ಹಾಜರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ