Please enable javascript.ಸೇವಾಲಾಲ್ ಜಯಂತಿ ಫೆ.13ರಿಂದ 15ರವರೆಗೆ - ಸೇವಾಲಾಲ್ ಜಯಂತಿ ಫೆ.13ರಿಂದ 15ರವರೆಗೆ - Vijay Karnataka

ಸೇವಾಲಾಲ್ ಜಯಂತಿ ಫೆ.13ರಿಂದ 15ರವರೆಗೆ

ವಿಕ ಸುದ್ದಿಲೋಕ 4 Feb 2015, 4:00 am
Subscribe

ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ.13ರಿಂದ 15ರವರೆಗೆ ಬಂಜಾರ ಸೇವಾಲಾಲ್ ಜಯಂತ್ಯುತ್ಸವ ನಡೆಯಲಿದೆ ಎಂದು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಲಜಾನಾಯ್ಕ ಹೇಳಿದ್ದಾರೆ.

 13 15
ಸೇವಾಲಾಲ್ ಜಯಂತಿ ಫೆ.13ರಿಂದ 15ರವರೆಗೆ
ದಾವಣಗೆರೆ: ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ.13ರಿಂದ 15ರವರೆಗೆ ಬಂಜಾರ ಸೇವಾಲಾಲ್ ಜಯಂತ್ಯುತ್ಸವ ನಡೆಯಲಿದೆ ಎಂದು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಲಜಾನಾಯ್ಕ ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.13ರಂದು ಬೆಳಗ್ಗೆ ಒಂದು ಸಾವಿರ, ಸಂಜೆ ಐದು ಸಾವಿರ ಜನ ಸೇರಲಿದ್ದಾರೆ. 14ರಂದು ಬೆಳಗ್ಗೆ 10 ಸಾವಿರ, ಮಧ್ಯಾಹ್ನ 50 ಸಾವಿರ ಹಾಗೂ 15ರಂದು ಬೆಳಗ್ಗೆ 25 ಸಾವಿರ ಜನ ಸೇರುವ ನೀರಿಕ್ಷೆಯಿದ್ದು, ಬೆಳಗ್ಗೆ ಉಪಾಹಾರ, ಮಧ್ಯಾಹ್ನ, ಸಂಜೆ ಊಟದ ವ್ಯವಸ್ಥೆಯನ್ನು 10 ಕಡೆ ಮಾಡಲಾಗುವುದು ಎಂದರು.

ತಾತ್ಕಾಲಿಕ ಆಸ್ಪತ್ರೆ, ಪೊಲೀಸ್ ಠಾಣೆ, ಅಬ್ಯುಲೆನ್ಸ್, ಪೈರ್‌ಎಂಜಿನ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಸಮರ್ಪಕ ವಿದ್ಯುತ್ ಸೌಲಭ್ಯ, ಹೆಲಿಪ್ಯಾಡ್ ನಿರ್ಮಾಣ, ಬ್ಯಾರಿಕೇಡಿಂಗ್ ವ್ಯವಸ್ಥೆ ರಾಜ್ಯದ ನಾನಾ

ಕಡೆಯಿಂದ ಬರುವ ಭಕ್ತರಿಗೆ ಸಾರಿಗೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಇಲಾಖಾಧಿಕಾರಿಗಳ ಸಭೆ ನಡೆಸಲಾಗಿದೆ. ಅಲ್ಲದೆ ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಮೂರ‌್ನಾಲ್ಕು ಕಡೆ ಶೌಚಾಲಯ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಫೆ.14ರಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಾರ್ವಜನಿಕ ಉದ್ದಿಮೆ ರಾಜ್ಯ ಸಚಿವ ಜಿ.ಎಂ.ಸಿದ್ದೇಶ್ವರ್, ಸಚಿವರಾದ ಶಾಮನೂರು ಶಿವಶಂಕರಪ್ಪ, ಎಚ್.ಆಂಜನೇಯ, ಪಿ.ಟಿ. ಪರಮೇಶ್ವರನಾಯ್ಕ, ಮಾಜಿ ಮುಖ್ಯಸಚೇತಕ ಶಂಕರಮೂರ್ತಿ ಸೇರಿದಂತೆ ಆನೇಕರು ಪಾಲ್ಗೊಳ್ಳಲಿದ್ದು, ಜಿಲ್ಲೆಯ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಹಾಲಿ, ಮಾಜಿ ಜಿಪಂ, ತಾಪಂ ಜನಪ್ರತಿನಿಧಿಗಳ ಭಾಗವಹಿಸುವರು ಎಂದರು.

ನಿಗಮ ಮಂಡಳಿಯಿಂದ ಜಯಂತ್ಯುತ್ಸವಕ್ಕೆ 25 ಲಕ್ಷ ರೂ. ಜಿಲ್ಲಾಡಳಿತಕ್ಕೆ ನೀಡುತ್ತಿದ್ದು, ಜಯಂತ್ಯುತ್ಸವ ಸಮರ್ಪಕವಾಗಿ ಆಚರಣೆ ಮಾಡಲು 18 ಸಮಿತಿ ರಚಿಸಲಾಗಿದ್ದು, ಅಲ್ಲದೆ ಸಮಾಜದ ಸ್ವಯಂ ಸೇವಕ ತಂಡ ಕಾರ್ಯನಿರ್ವಹಿಸಲಿದ್ದು, ಸ್ವಯಂ ಸೇವರಿಗೆ ಗುರುತಿನ ಚೀಟಿ, ಬ್ಯಾಡ್ಜ್, ಸಮವಸ್ತ್ರ ವ್ಯವಸ್ಥೆ ಮಾಡಲಾಗುವುದು ಎಂದರು.

ವೇದಿಕೆ ನಿರ್ಮಾಣ, ಮಹಿಳೆಯರು, ಮಕ್ಕಳು, ವೃದ್ಧರು ತಂಗುವಿಕೆ ಶಾಮಿಯಾನ ವ್ಯವಸ್ಥೆ, ಗಣ್ಯರು, ಸಾಧು ಸಂತರ ಉಳಿಯಲು ತಾತ್ಕಾಲಿಕ ತಂಗುವಿಕೆಗೆ ಶಾಮಿಯಾನ ವ್ಯವಸ್ಥೆ, ವಿದ್ಯುತ್ ದೀಪಾಲಂಕಾರ, ಪೂಜಾ ಕಾರ್ಯಗಳು, ಉತ್ಸವ ಸೇವೆ, ಪೂಣ ಕುಂಬಾಭಿಷೇಕ, ಗಣ್ಯರ ಉಡುಪು, ನೆನಪಿನ ಕಾಣಿಕೆ ವ್ಯವಸ್ಥೆಯನ್ನು ನಿಗಮ ಮಂಡಳಿ ವಹಿಸಿಕೊಂಡಿದೆ ಎಂದು ತಿಳಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ