Please enable javascript.ಭದ್ರತೆಗೆ ವಿಶೇಷ ಪಡೆ, 9 ಸಾವಿರ ಪೊಲೀಸರ ನೇಮಕ - ಭದ್ರತೆಗೆ ವಿಶೇಷ ಪಡೆ, 9 ಸಾವಿರ ಪೊಲೀಸರ ನೇಮಕ - Vijay Karnataka

ಭದ್ರತೆಗೆ ವಿಶೇಷ ಪಡೆ, 9 ಸಾವಿರ ಪೊಲೀಸರ ನೇಮಕ

ವಿಕ ಸುದ್ದಿಲೋಕ 30 Jul 2012, 10:01 pm
Subscribe

'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಒಂಬತ್ತು ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುವುದು' ಎಂದು ಗೃಹ ಸಚಿವ ಆರ್.ಅಶೋಕ್ ನುಡಿದರು.

 9
ಭದ್ರತೆಗೆ ವಿಶೇಷ ಪಡೆ, 9 ಸಾವಿರ ಪೊಲೀಸರ ನೇಮಕ
ಬೆಂಗಳೂರು: 'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಒಂಬತ್ತು ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುವುದು' ಎಂದು ಗೃಹ ಸಚಿವ ಆರ್.ಅಶೋಕ್ ನುಡಿದರು.

ಕಾಂಗ್ರೆಸ್‌ನ ಅಲ್ಲಮಪ್ರಭು ಪಾಟೀಲ್ ಅವರಿಗೆ ಉತ್ತರಿಸಿ, 'ಒಂಬತ್ತು ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಜತೆಗೆ, ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆ/ ಅಪರಾಧಗಳನ್ನು ತಡೆಗಟ್ಟಲು ಜನ ಸಂಪರ್ಕ ಸಭೆ ನಡೆಸಲೂ ಉದ್ದೇಶಿಸಲಾಗಿದೆ. ಪ್ರತಿ ಪೊಲೀಸ್ ಠಾಣೆಯಲ್ಲೂ ವಿಶೇಷ ಪ್ರಕರಣಗಳ ತನಿಖೆಗೆ ಪ್ರತ್ಯೇಕ ಹಣವನ್ನೂ ಮೀಸಲಿಡಲಾಗಿದೆ ಎಂದರು.

ಗಣ್ಯರಿಗೆ ಭದ್ರತೆ, ಮುಷ್ಕರ, ಪ್ರತಿಭಟನೆಗೆ ಕಾವಲು ಇತ್ಯಾದಿಗಳಿಗೆ ಈಗಿನ ಪೊಲೀಸರನ್ನು ನಿಯೋಜಿಸುವ ಬದಲು, ಇದಕ್ಕೆಂದೇ ಪ್ರತ್ಯೇಕ ಪಡೆ ಸ್ಥಾಪಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ಕೆ.ಗೋವಿಂದರಾಜು ಪ್ರಶ್ನೆಗೆ ಸಚಿವರು ಆಶ್ವಾಸನೆ ನೀಡಿದರು.

ಜೆಡಿಎಸ್‌ನ ಎಂ.ಸಿ.ನಾಣಯ್ಯ, 'ಗಣ್ಯರ ವಾಹನಗಳ ಹಿಂದೆ- ಮುಂದೆ ಸಾಗುವ ಭದ್ರತಾ ವಾಹನಗಳು ರಸ್ತೆಯಲ್ಲಿ ಭಯ ಹುಟ್ಟಿಸುವ ವೇಗದಲ್ಲಿ ಚಲಿಸುತ್ತಿವೆ. ಇದರಿಂದ ಇತ್ತೀಚೆಗೆ ಸಾಕಷ್ಟು ಪ್ರಾಣಿಹಾನಿ, ಅಪಘಾತ ಪ್ರಕರಣಗಳೂ ನಡೆದಿವೆ. ಆದ್ದರಿಂದ ಗಣ್ಯರ ವಾಹನಗಳು 80 ಕಿ.ಮೀಗಿಂತ ಹೆಚ್ಚು ವೇಗದಲ್ಲಿ ಹೋಗದಂತೆ ಎಚ್ಚರ ವಹಿಸಿದರೆ, ಸಾರ್ವಜನಿಕರ ಜೀವಕ್ಕೆ ರಕ್ಷಣೆ ಸಿಗುತ್ತದೆ' ಎಂದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ