ಆ್ಯಪ್ನಗರ

ಬಿಜೆಪಿ ಗೊಂದಲ ನಿವಾರಣೆಯಾಗಿಲ್ಲ: ಕೆ.ಎಸ್.ಈಶ್ವರಪ್ಪ

ಪಕ್ಷದ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ, 'ಪಕ್ಷದಲ್ಲಿನ ಗೊಂದಲ ನಿವಾರಣೆಯಾಗಿಲ್ಲ,' ಎಂದು ಹೇಳಿದ್ದಾರೆ.

ವಿಕ ಸುದ್ದಿಲೋಕ 19 Sep 2016, 2:26 pm
ಶಿವಮೊಗ್ಗ: ರಾಜ್ಯಾಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಸಿಕೊಂಡ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಇದಕ್ಕೆ ಇಂಬು ನೀಡುವಂತೆ ಪಕ್ಷದ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ, 'ಪಕ್ಷದಲ್ಲಿನ ಗೊಂದಲ ನಿವಾರಣೆಯಾಗಿಲ್ಲ,' ಎಂದೂ ಹೇಳಿದ್ದಾರೆ.
Vijaya Karnataka Web all is not okay with bjp eshwarappa
ಬಿಜೆಪಿ ಗೊಂದಲ ನಿವಾರಣೆಯಾಗಿಲ್ಲ: ಕೆ.ಎಸ್.ಈಶ್ವರಪ್ಪ

'ಯಡಿಯೂರಪ್ಪ ತೆಗೆದುಕೊಂಡ ಏಕಪಕ್ಷೀಯ ನಿಧಾ೯ರ, ಕೋರ್ ಕಮಿಟಿಯಲ್ಲಿ ಚಚಿ೯ಸದೇ ಪದಾಧಿಕಾರಿಗಳ ನೇಮಕ ಸೇರಿದಂತೆ ಹಲವು ವಿಷಯಗಳ ಬಗೆಗಿನ ಗೊಂದಲ ನಿವಾರಣೆಯಾಗಿಲ್ಲ.

ಪಕ್ಷದ‌ಮುಖಂಡರು, ಕಾರ್ಯಕರ್ತರಲ್ಲಿನ ಗೊಂದಲ ಹಾಗೆಯೇ ಮುಂದುವರಿದಿದೆ. ಈ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗಿತ್ತು,' ಎಂದು ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

'ಗೊಂದಲವಿದೆ ಎಂದ ಮಾತ್ರಕ್ಕೆ ಪಕ್ಷ ಎರಡಾಗುವುದಿಲ್ಲ. ರಾಯಣ್ಣ ಬ್ರಗೇಡ್‌ನಿಂದಲೂ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ. ಈ ಮೂಲಕ ಪಕ್ಷವನ್ನು ಒಡೆಯುವಂಥ ಕೆಲಸ ಮಾಡುತ್ತಿಲ್ಲ. ಬಿಜೆಪಿ ತಾಯಿ ಇದ್ದಂತೆ. ಯಾರು ಏನೇ ಹೇಳಿದರೂ ಬ್ರಿಗೇಡ್ ಸಂಘಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ,' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ