Please enable javascript.ಮಿಥುನ ಲಗ್ನದ ಕಾರಕ ಮಾರಕಗಳು - ಮಿಥುನ ಲಗ್ನದ ಕಾರಕ ಮಾರಕಗಳು - Vijay Karnataka

ಮಿಥುನ ಲಗ್ನದ ಕಾರಕ ಮಾರಕಗಳು

Vijaya Karnataka Web 10 Nov 2012, 4:59 am
Subscribe

ಮಿಥುನ ಲಗ್ನದವರು ಎತ್ತರವಾಗಿ, ಸುಂದರ ಶರೀರದವಾಗಿರುತ್ತಾರೆ. ಇವರು ತೀಕ್ಷ್ಣ ದಷ್ಟಿಯುಳ್ಳವರು. ಅಷ್ಟೇ ಅಲ್ಲ. ಬುದ್ಧಿವಂತರೂ ಆಗಿರುತ್ತಾರೆ. ಮಾಡುವ ಕೆಲಸವನ್ನು ಅಲೋಚನೆ ಮಾಡದೆ ಮಾಡುವ ಸ್ವಭಾವ ಇವರದ್ದು.

ಮಿಥುನ ಲಗ್ನದ ಕಾರಕ ಮಾರಕಗಳು
* ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್
ಮಿಥುನ ರಾಶಿಯು ದ್ವೀಪದ ರಾಶಿ. ರಾತ್ರಿ ಬಲ ರಾಶಿ. ಶೀರ್ಷೋದಯ ರಾಶಿ. ಉಭಯ ರಾಶಿ. ವಾಯು ತತ್ವ ರಾಶಿ. ಪುರುಷ ರಾಶಿ. ವನ ಚರ ರಾಶಿ. ರಜೋಗುಣ ರಾಶಿ. ಶೂದ್ರ ವರ್ಣ ರಾಶಿ. ದೊಡ್ಡ ಶಬ್ಧ ರಾಶಿ. ಮಿಥುನ ಲಗ್ನದ ಅಧಿಪತಿಯು ಬುಧ. ಬುಧನು ಕನ್ಯಾ ರಾಶಿಯ ಅಧಿಪತಿಯೂ ಆಗಿದ್ದಾನೆ. ಈ ಲಗ್ನದಲ್ಲಿ ಹುಟ್ಟಿದವರು ಎತ್ತರವಾಗಿರುತ್ತಾರೆ. ಇವರ ದೇಹವು ಸುಂದರವಾಗಿರುತ್ತದೆ. ಇವರ ದಷ್ಟಿಯು ತೀಕ್ಷ್ಣವಾಗಿರುತ್ತದೆ. ಇವರು ಬಹಳ ಬುದ್ಧಿವಂತರಾಗಿರುತ್ತಾರೆ. ಇವರು ತಾವು ಮಾಡುವ ಕೆಲಸವನ್ನು ಅಲೋಚನೆ ಮಾಡದೆ ಮಾಡುತ್ತಾರೆ. ಪ್ರಿಯ ಭಾಷಣವುಳ್ಳವರೂ, ಕಾರ್ಯ ತತ್ಪರರೂ, ವಾತ, ಪಿತ್ತ ಕಫಗಳೆಂಬ ತ್ರಿಧಾತುಗಳು ಸಮವಾಗಿರುವ ಶರೀರವುಳ್ಳವರೂ ಆಗಿರುತ್ತಾರೆ. ಇವರು ದೊಡ್ಡವರಲ್ಲಿಯೂ ಸಜ್ಜನರಲ್ಲಿಯೂ ಪೂಜ್ಯರಾಗುತ್ತಾರೆ. ಶೌರ್ಯಗಳಿಂದ ಕೂಡಿ ಶತ್ರುಗಳನ್ನು ಜಯಿಸಲು ಸಮರ್ಥರಾಗಿರುತ್ತಾರೆ. ಇವರ ಅನೇಕ ಕೆಲಸಗಳಲ್ಲಿ ಪ್ರವತ್ತಿಯುಳ್ಳವರೂ, ಧರ್ಮದಲ್ಲಿಯೇ ನಡೆಯಲು ಅಪೇಕ್ಷೆಯುಳ್ಳವರೂ ಆಗಿರುತ್ತಾರೆ.

ಈ ಲಗ್ನದಲ್ಲಿ ಹುಟ್ಟಿದವರು ಕವಿಗಳಾಗಿ ಬಹಳ ಗ್ರಂಥಗಳನ್ನು ಬರೆಯುತ್ತಾರೆ. ಇವರ ಬರವಣಿಗೆಯು ಬಹಳ ಒಳ್ಳೆಯದಿರುತ್ತದೆ. ಇವರು ಇತರ ಕೆಲಸವೆಂದರೆ ಬಹಳ ಆಸಕ್ತಿಯಿಂದ ಮಾಡುತ್ತಾರೆ. ಅದಕ್ಕೆ ತಮ್ಮ ಸ್ವಂತ ಹಣ ಖರ್ಚು ಮಾಡುತ್ತಾರೆ. ಇತರರೊಂದಿಗೆ ಸದಾ ಬೆರೆತು ಕೆಲಸ ಮಾಡುತ್ತಾರೆ.

ಇವರ ಅಭಿಪ್ರಾಯ ಭಿನ್ನವಾಗಿರುತ್ತದೆ. ಒಂದು ಸಾರಿ ಒಂದು ನಿರ್ಧಾರಕ್ಕೆ ಬಂದು ಅದನ್ನು ಕೂಡಲೇ ಬದಲಾಯಿಸುತ್ತಾರೆ. ಇವರು ಕೈಗೊಂಡ ಕೆಲಸವನ್ನು ಪೂರ್ತಿ ಮಾಡುವುದೇ ಕಡಿಮೆ. ಇವರ ಸ್ವಭಾವವು ಚಂಚಲವಾಗಿರುತ್ತದೆ.

ಇವರು ಒಂದು ವಿಷಯವನ್ನು ಬಹಳ ಗಾಢವಾಗಿ ಅಭ್ಯಾಸ ಮಾಡಿ ಅದನ್ನು ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇವರು ಇನ್ನೊಬ್ಬರ ವಿಷಯವನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ವಿಷಯವನ್ನು ತಾವು ಇಟ್ಟುಕೊಳ್ಳದೆ, ಇನ್ನೊಬ್ಬರಲ್ಲಿ ಹೇಳಿ, ಬಹಿರಂಗ ಮಾಡುವ ಸ್ವಭಾವವಾಗಿರುತ್ತದೆ.

ಮಿಥುನ ಲಗ್ನಕ್ಕೆ ಮಂಗಳ, ಗುರು ಮತ್ತು ರವಿ ಇವು ಮಾರಕ ಗ್ರಹಗಳು. ಶುಕ್ರನೊಬ್ಬನೇ ಈ ಲಗ್ನಕ್ಕೆ ತಾರಕ ಗ್ರಹ. ಷಷ್ಠ ಮತ್ತು ಏಕಾದಶದ ಸ್ಥಾನಗಳ ಅಧಿಪತಿ ಕುಜ. ಸಪ್ತಮ ಮತ್ತು ದಶಮದ ಅಧಿಪತಿ ಗುರು. ತತೀಯ, ಷಷ್ಠ ಮತ್ತು ಏಕಾದಶ ಇದು ಮಾರಕ ಸ್ಥಾನಗಳು. ಗುರುವು ಕೇಂದ್ರಾಧಿಪತ್ಯವಾದರೂ ಆತನು ಎಂದೂ ಶುಭ ಫಲವನ್ನು ಕೊಡುವುದಿಲ್ಲ. ಗುರುವು ಮಾರಕ ಗ್ರಹಗಳಲ್ಲಿ ಸೇರಿಕೊಳ್ಳುತ್ತದೆ. ಶುಕ್ರನು ಪಂಚಮ ಮತ್ತು ದ್ವಾದಶ ಸ್ಥಾನಗಳಲ್ಲಿ ಅಧಿಪತಿಯಾಗಿದೆ.

ಲಗ್ನದ ಅಧಿಪತಿ ಶುಕ್ರನ ಮಿತ್ರನು ಮಿಥುನ ಲಗ್ನದಲ್ಲಿ ಶುಕ್ರನು ಯಾವುದೇ ಸ್ಥಾನದಲ್ಲಿದ್ದರೂ ಇದು ಶುಭ ಫಲವನ್ನು ಕೊಡುತ್ತದೆ. ಶುಕ್ರ, ಬುಧ ಯೋಗವು ಖಂಡಿತಾ ರಾಜಯೋಗವಾಗುತ್ತದೆ. ಶನಿಗೆ ಮಾರಕ ಲಕ್ಷಣ ಬಂದರೂ, ಶನಿ ಮಾರಕವಾಗುವುದಿಲ್ಲ. ಗುರುವಿನೊಂದಿಗೆ ಶುಭ ಗ್ರಹ ಇದ್ದರೂ ಗುರು ಶುಭ ಫಲವನ್ನು ಕೊಡುವುದೇ ಇಲ್ಲ. ಆದುದರಿಂದ, ಮಿಥುನ ಲಗ್ನದವರಿಗೆ ದಶಾಭುಕ್ತಿ ಕಾಲದಲ್ಲಿ ಗುರುಭುಕ್ತಿಯು ಅಶುಭ ಫಲಗಳನ್ನು ಜಾತಕನಿಗೆ ಕೊಡುತ್ತದೆ.

ಈ ಲಗ್ನದಲ್ಲಿ ಹುಟ್ಟಿದವರು ವಿಜ್ಞಾನಿಗಳು, ಬುದ್ಧಿವಂತರು, ಪತ್ರಕರ್ತರೂ ಆಗುತ್ತಾರೆ. ಇವರಿಗೆ ಸತ್ಯಧರ್ಮದ ಮೇಲೆ ಅಪಾರ ನಂಬಿಕೆ ಇರುತ್ತದೆ. ಇವರು ದೈವ ದೇವರ ಮೇಲೆ ನಂಬಿಕೆಯಿಂದ ಇದ್ದು, ಧಾರ್ಮಿಕ ಕ್ಷೇತ್ರಗಳ ಅಭಿವದ್ಧಿಗೆ ಪ್ರಯತ್ನಿಸುತ್ತಾರೆ.

ಈ ಲಗ್ನದಲ್ಲಿ ಹುಟ್ಟಿದವರಿಗೆ ಒಳ್ಳೆಯ ಹೆಂಡತಿ ಸಿಗುತ್ತಾಳೆ. ಈ ಲಗ್ನದಲ್ಲಿ ಹುಟ್ಟಿದವರು ಸುಖವನ್ನು ಅನುಭವಿಸುತ್ತಾರೆ. ಇವರ ವೈವಾಹಿಕ ಜೀವನ ಸುಖಮಯವಾಗಿರುತ್ತದೆ.

ಇವರ ಅದಷ್ಟ ಸಂಖ್ಯೆ
3, 5, 6. ಇವರು ಉಪಯೋಗಿಸುವ ಬಣ್ಣ ಕೆಂಪು, ನೀಲಿಯಾಗಿರುತ್ತದೆ. ಇವರ ಅದಷ್ಟದ ಹರಳು ಪಚ್ಚೆ, ಹಸಿರು, ಕನಕಪುಷ್ಯರಾಗ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ