ಆ್ಯಪ್ನಗರ

ರುದ್ರಾಕ್ಷಿಯನ್ನು ಯಾರು ಹೇಗೆ ಧರಿಸಬೇಕು?

ಶಿವನ ಕಣ್ಣೀರಿನಿಂದ ಉತ್ಪತ್ತಿಯಾದುದು ಎನ್ನಲಾದ ರುದ್ರಾಕ್ಷಿಯನ್ನು ಯಾರು ಹೇಗೆ ಧರಿಸಬೇಕು ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ. ಈ ಬಗ್ಗೆ ಖಚಿತವಾಗಿ ತಿಳಿದುಕೊಂಡೇ ಅದನ್ನು ಧರಿಸಬೇಕು.

Vijaya Karnataka 16 Jun 2018, 1:08 pm
ತಲೆಮಾರುಗಳಿಂದಲೂ ಮಾನವರೆಲ್ಲ ಶಿವನ ಕೃಪೆಗೆ ಒಳಗಾದವರೇ ಆಗಿದ್ದಾರೆ. ಶಬ್ದ(ಮಂತ್ರ), ಚಲನೆ( ಯೋಗ ಮತ್ತು ನೃತ್ಯ), ಪವಿತ್ರ ಗ್ರಂಥಗಳು (ವೇದ, ತಂತ್ರ), ಚಿಕಿತ್ಸೆ ಮತ್ತು ದೀರ್ಘಾಯುಷ್ಯ (ಆಯುರ್ವೇದ) ದ ರೂಪದಲ್ಲಿ ಶಿವ ತನ್ನ ಕರುಣೆಯನ್ನು ತೋರಿಸುತ್ತಲೇ ಬಂದಿದ್ದಾನೆ. ಇದಲ್ಲದೆ ಆತನ ಕಣ್ಣೀರು ಹಾಗೂ ಶಿವನ ಸೃಷ್ಟಿಯ ಪ್ರಕೃತಿಯು ರುದ್ರಾಕ್ಷದ ಉತ್ಪತ್ತಿಗೆ ಕಾರಣವಾಗಿ ಮಾನವ ಜನಾಂಗವನ್ನು ಶಾಶ್ವತವಾಗಿ ಹರಸುತ್ತಿದೆ.
Vijaya Karnataka Web rudraksha


ಜನರು ಶತಮಾನಗಳಿಂದ ರುದ್ರಾಕ್ಷವನ್ನು ಧರಿಸುತ್ತಿದ್ದರೂ ಯಾವ ರುದ್ರಾಕ್ಷಿಯನ್ನು ಹೇಗೆ ಧರಿಸಬೇಕು ಎಂಬ ಬಗ್ಗೆ ಎಲ್ಲರಲ್ಲೂ ತಿಳಿವಳಿಕೆ ಇಲ್ಲ. ಈ ಕಾರಣಕ್ಕಾಗಿ 2001ರಲ್ಲಿ ರುದ್ರಾಲೈಫ್‌ ಸಂಸ್ಥೆಯನ್ನು ಸ್ಥಾಫಿಸಲಾಯಿತು. ಅಂದಿನಿಂದ ರುದ್ರಾಲೈಫ್‌ ರುದ್ರಾಕ್ಷಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ ಬಂದಿದೆ, ರುದ್ರಾಕ್ಷಿಯ ಬಗೆಗೆ ವಿಶ್ವಾಸಾರ್ಹ ಸಂಸ್ಥೆ ಎನಿಸಿಕೊಂಡಿದೆ.

ಹಲವು ವರ್ಷಗಳ ಸಂಶೋಧನೆಯ ಬಳಿಕ ರುದ್ರಾಕ್ಷಿಯ ಬಗೆಬಗೆಯ ಸಂಯೋಜನೆಗಳನ್ನು ತಯಾರಿಸಿದೆ. ವಿದ್ಯಾರ್ಥಿಗಳ ಕಲಿಕೆಯ ಶಕ್ತಿಯನ್ನು ಹೆಚ್ಚಿಸುವ ಸರಸ್ವತಿ ಬಂಧ, ಸಾಮಾನ್ಯವಾದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಸ್ವಾಸ್ಥ್ಯ ಬಂಧ ಈ ಬಗೆಯ ಪ್ರಮುಖ ಸಂಯೋಜನೆಗಳು. ಇದಲ್ಲದೆ, 14 ಮುಖಿ ರುದ್ರಾಕ್ಷಿ ಕೈಗಾರಿಕೋದ್ಯಮಿಗಳಿಗೆ ಪೂರಕವಾಗಿದ್ದು ಅವರ ನಿರ್ಧರಣಾ ಶಕ್ತಿ, ಮುಂದಾಲೋಚನ ಶಕ್ತಿಗಳನ್ನು ಹೆಚ್ಚಿಸುತ್ತದೆ. 12 ಮುಖವುಳ್ಳ ರುದ್ರಾಕ್ಷಿಯು ಸೂರ‍್ಯನನ್ನು ಪ್ರತಿನಿಧಿಸುತ್ತಿದ್ದು ಇದು ಹಿರಿಯ ಎಕ್ಸೆಕ್ಯೂಟಿವ್‌ಗಳು ಹಾಗೂ ಉದ್ಯಮಿಗಳಿಗೆ ಹೆಸರು, ಖ್ಯಾತಿ ಹಾಗೂ ಆಡಳಿತಾತ್ಮಕ ಸಾಮರ್ಥ್ಯ‌ವನ್ನು ತಂದು ಕೊಡುವುದು.

ರುದ್ರಾಲೈಫ್‌, ಐಎಸ್‌ಒ 9001:2015 ಪ್ರಮಾಣೀಕೃತ ಪ್ರಯೋಗಶಾಲೆಯಲ್ಲಿ ಪರೀಕ್ಷಿಸಲಾದ ರುದ್ರಾಕ್ಷಿಯನ್ನು ಕೊಡುತ್ತದೆ. ಹಲವಾರು ವರ್ಷಗಳಿಂದ ಇದು ಯಶಸ್ಸು, ಆತ್ಮವಿಶ್ವಾಸ, ಪ್ರಗತಿ, ರಕ್ತದೊತ್ತಡ ನಿಯಂತ್ರಣ, ಉದ್ವೇಗ ನಿಯಂತ್ರಣ, ಆಧ್ಯಾತ್ಮಿಕತೆ, ದಾಂಪತ್ಯ/ಕೌಟುಂಬಿಕ ಆನಂದ, ಭೌತಿಕ ಗಳಿಕೆಗೆ ಪೂರಕವಾಗಿ ಅನೇಕರಿಗೆ ನೆರವಾಗುತ್ತ ಬಂದಿದೆ.

ಜೂನ್‌ 15ರಿಂದ 24ರವರೆಗೆ ರುದ್ರಾಲೈಫ್‌ ಸಂಸ್ಥೆಯು ಬೆಂಗಳೂರಿನ ಎರಡು ಸ್ಥಳಗಳಲ್ಲಿ ಏಕಕಾಲದಲ್ಲಿ ರುದ್ರಾಕ್ಷಿಯ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಂಡಿದೆ. ಇದರಲ್ಲಿ ಒಂದರಿಂದ 21 ಮುಖದವರೆಗಿನ ಬಗೆಬಗೆ ರುದ್ರಾಕ್ಷಿಗಳನ್ನು ನೋಡಬಹುದು. ಯಾವ ರುದ್ರಾಕ್ಷಿಯನ್ನು ಹೇಗೆ ಧರಿಸಬೇಕು ಎಂಬುದರ ಬಗ್ಗೆ ಪರಿಣತರಿಂದ ಉಚಿತ ಮಾಹಿತಿ ಪಡೆಯಬಹುದು. ಪ್ರದರ್ಶನದಲ್ಲಿ ಉಚಿತವಾಗಿ ಮಾಲೆ ತಯಾರಿ ಹಾಗೂ ರುದ್ರಾಕ್ಷಿಗೆ ಅಭಿಷೇಕ ನೆರವೇರಿಸಲಾಗುವುದು.

ಸ್ಥಳ 1: ಸೆಂಟ್ರಲ್‌ ಕಾಟೇಜ್‌ ಇಂಡಸ್ಟ್ರೀಸ್‌ ಎಂಪೋರಿಯಂ, 144, ಎಂ ಜಿ ರೋಡ್‌, ಕೊಟಕ ಮಹೀಂದ್ರ ಬ್ಯಾಂಕ್‌ ಪಕ್ಕ, ಟ್ರಿನಿಟಿ ಮೆಟ್ರೋ ಸ್ಟೇಷನ್‌ ಸಮೀಪ, ಬೆಂಗಳೂರು.

ಸಮಯ: ಬೆಳಗ್ಗೆ 10.30ರಿಂದ ರಾತ್ರಿ 8 (ಭಾನುವಾರವೂ ತೆರೆದಿರುತ್ತದೆ).

ಸಂಪರ್ಕ: 9322947642 / 9322524441

ಸ್ಥಳ 2: ಸೆಂಟ್ರಲ್‌ ಕಾಟೇಜ್‌ ಇಂಡಸ್ಟ್ರೀಸ್‌ ಎಂಪೋರಿಯಂ, ಶಾಪ ನಂ. 44, 3ನೇ ಬ್ಲಾಕ್‌, ಒಂದನೇ ಮಹಡಿ, ಬಿಡಿಎ ಕಮರ್ಷಿಯಲ್‌ ಕಾಂಪ್ಲೆಕ್ಸ್‌, ಎಚ್‌ಎಸ್‌ಆರ್‌ ಲೇಔಟ್‌, ಬೆಂಗಳೂರು.

ಸಮಯ: ಬೆಳಗ್ಗೆ 11ರಿಂದ ರಾತ್ರಿ 8 (ಭಾನುವಾರವೂ ತೆರೆದಿರುತ್ತದೆ)

ಸಂಪರ್ಕ: 9320077018 / 9322791218.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ