ಆ್ಯಪ್ನಗರ

ಶೇ.50ಕ್ಕಿಂತಲೂ ಹೆಚ್ಚು ಶ್ರೀಮಂತರು ಈ ಐದು ರಾಶಿಗಳಿಗೆ ಸೇರಿದವರು!

ಸಿಂಹ ರಾಶಿಯವರಲ್ಲಿ ಅತ್ಯಂತ ಶ್ರೀಮಂತರೆಂದರೆ ವಿಪ್ರೋದ ಅಜೀಂ ಪ್ರೇಮ್‌ಜಿ.

Vijaya Karnataka 17 Nov 2018, 1:17 pm
ನಮ್ಮ ದೇಶದ ಅತಿ ಹೆಚ್ಚು ಶ್ರೀಮಂತರಲ್ಲಿ ಶೇ.50ಕ್ಕಿಂತಲೂ ಹೆಚ್ಚಿನವರು ಐದು ರಾಶಿಗಳಿಗೆ ಸೇರಿದವರೆ ಎಂದರೆ ನಿಮಗೆ ಆಶ್ಚರ್ಯವೆನಿಸಬಹುದು. ನಿಮಗೊಂದು ವಿಷಯ ಗೊತ್ತಾ ಶ್ರೀಸಾಮಾನ್ಯನಿಗಿಂತ ಶ್ರೀಮಂತರೇ ಯಾವಾಗಲೂ ಹೈಲೈಟ್‌ ಆಗ್ತಿರ್ತಾರೆ. ಎಷ್ಟೇ ಅಂದ್ರೂ ಸಕ್ಕರೆ ಇದ್ದ ಕಡೇನೇ ಅಲ್ವೆ ಇರುವೆ ಮುತ್ತಿಕೊಳ್ಳೋದು!
Vijaya Karnataka Web rashi


2018ರ ಸಾಲಿನಲ್ಲಿ ಬಾರ್ಕ್ಲೇಸ್ ಹ್ಯೂರನ್‌ ಇಂಡಿಯಾ ಪ್ರಕಟಿಸಿರೋ ಮಾಹಿತಿ ಪ್ರಕಾರ ನಮ್ಮ ದೇಶದಲ್ಲಿ ಗುರುತಿಸಲ್ಪಟ್ಟ 831 ಶ್ರೀಮಂತರಲ್ಲಿ ಶೇ.50ರಷ್ಟು ಮಂದಿ ಕಟಕ, ಕನ್ಯಾ, ಮೇಷ, ವೃಶ್ಚಿಕ ಮತ್ತು ಮಕರ ರಾಶಿಯವರಾಗಿದ್ದಾರೆ. ಅದರಲ್ಲೂ ಕಟಕ ರಾಶಿಯವರ ಪಾಲೇ ಹೆಚ್ಚು. ಶೇ.10.5ರಷ್ಟಿರುವ ಕಟಕ ರಾಶಿಯ ಶ್ರೀಮಂತರಲ್ಲಿ ಗೌತಮ್‌ ಅದಾನಿ ಮೊದಲಿಗನಂತೆ!

ಕಟಕ ರಾಶಿಯವರ ನಂತರ ಕನ್ಯಾ ರಾಶಿ (ಶೇ. 9.7), ಮೇಷ (ಶೇ. 9.3), ವೃಶ್ಚಿಕ (ಶೇ. 9.2) ಮತ್ತು ಧನು (ಶೇ. 9) ಯವರು ಕಾಣಸಿಗುತ್ತಾರೆ. ಕನ್ಯಾ ರಾಶಿಯ ಶಪೂರ್‌ ಪಲ್ಲೋನ್ಜಿ ಮಿಸ್ತ್ರಿ, ಮೇಷ, ವೃಶ್ಚಿಕ ಮತ್ತು ಮಕರ ರಾಶಿಯ ರಿಲಯನ್ಸ್‌ನ ಮುಖೇಶ್‌ ಅಂಬಾನಿ, ಲೂಲು ಗ್ರೂಪ್‌ನ ಯೂಸಫ್‌ ಆಲಿ, ಗಾದ್ರೆಜ್‌ನ ಸ್ಮಿತಾ ವಿ. ಕ್ರಿಷ್ಣ ಹೆಸರಿಸಬಹುದಾದ ಕೆಲ ಶ್ರೀಮಂತರು.

ಇನ್ನುಳಿದಂತೆ ಸಿಂಹ, ತುಲಾ, ಮೀನಾ, ಮಿಥುನ, ವೃಷಭ, ಕುಂಭ ಮತ್ತು ಧನು ರಾಶಿಯ ಶ್ರೀಮಂತರ ಪ್ರಮಾಣ ಕ್ರಮವಾಗಿ ಶೇ 8.5, 8.4, 8.1, 7.3, 6.9, 6.6 ಮತ್ತು 6.4ರಷ್ಟಿದೆ. ಸಿಂಹ ರಾಶಿಯವರಲ್ಲಿ ಅತ್ಯಂತ ಶ್ರೀಮಂತರೆಂದರೆ ವಿಪ್ರೋದ ಅಜೀಂ ಪ್ರೇಮ್‌ಜಿ. ತುಲಾ, ಮೀನ ಮತ್ತು ಮಿಥನ ರಾಶಿಯವರಲ್ಲಿ ಕ್ರಮವಾಗಿ ಸನ್‌ಫಾರ್ಮಾದ ದಿಲೀಪ್‌ ಶಾಂಘ್ವಿ, ಕೊಟಕ್‌ ಬ್ಯಾಂಕ್‌ನ ಉದಯ್‌ ಕೊಟಕ್‌ ಮತ್ತು ಆರ್ಸೆಲಾರ್‌ಮಿಟ್ಟಲ್‌ನ ಸಿಇಒ ಎಲ್‌.ಎನ್‌. ಮಿಟ್ಟಲ್‌ ಅವರನ್ನು ಗುರುತಿಸಲಾಗಿದೆ.

ನೀವೂ ಮೇಲಿನ ರಾಶಿಯವರಾಗಿದ್ದರೆ ಶ್ರೀಮಂತರಾಗುವ ಕನಸು ಕಾಣಬಹುದು. ಒಂದೊಮ್ಮೆ ಇಲ್ಲವಾದರೆ ನಿರಾಶರಾಗುವ ಅಗತ್ಯವಿಲ್ಲ. ಜ್ಯೋತಿಷದ ಲೆಕ್ಕಾಚಾರ ಅಪೂರ್ಣವಾಗಿದೆಯಲ್ಲ ಅಂತ ತೃಪ್ತಿ ಪಟ್ಟುಕೊಳ್ಳಬಹುದು.

(ಆಧಾರ : ಎಕನಾಮಿಕ್‌ ಟೈಮ್ಸ್‌)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ