ಆ್ಯಪ್ನಗರ

ಸೂರ್ಯಾಲಯ ಜ್ಯೋತಿಷ ಆ್ಯಪ್‌

ಡಾ. ಬಿ.ವಿ.ರಾಮನ್‌ ಜಯಂತಿ ಅಂಗವಾಗಿ ಡಾ. ಬಿ.ವಿ.ರಾಮನ್‌ ಮತ್ತು ರಾಜೇಶ್ವರಿ ರಿಸರ್ಚ್‌ ಫೌಂಡೇಷನ್‌ ಜ್ಯೋತಿಷಿ, ಜ್ಯೋತಿಷ ವಿದ್ಯಾರ್ಥಿ ಹಾಗೂ ಜನಸಾಮಾನ್ಯರ ಉಪಯೋಗಕ್ಕೆಂದು ಸೂರ್ಯಾಲಯ ಜ್ಯೋತಿಷ ಆ್ಯಪ್‌ ಬಿಡುಗಡೆ ಮಾಡುತ್ತಿದೆ.

Vijaya Karnataka 4 Aug 2018, 12:12 pm
ಡಾ. ಬಿ.ವಿ.ರಾಮನ್‌ ಜಯಂತಿ ಅಂಗವಾಗಿ ಡಾ. ಬಿ.ವಿ.ರಾಮನ್‌ ಮತ್ತು ರಾಜೇಶ್ವರಿ ರಿಸರ್ಚ್‌ ಫೌಂಡೇಷನ್‌ ಜ್ಯೋತಿಷಿ, ಜ್ಯೋತಿಷ ವಿದ್ಯಾರ್ಥಿ ಹಾಗೂ ಜನಸಾಮಾನ್ಯರ ಉಪಯೋಗಕ್ಕೆಂದು ಸೂರ್ಯಾಲಯ ಜ್ಯೋತಿಷ ಆ್ಯಪ್‌ ಬಿಡುಗಡೆ ಮಾಡುತ್ತಿದೆ. ಆಗಸ್ಟ್‌ 20ರ ನಂತರ ಗೂಗಲ್‌ ಪ್ಲೇಸ್ಟೋರ್‌ನಿಂದ ಉಚಿತವಾಗಿ ಸೂರ್ಯಾಲಯ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.
Vijaya Karnataka Web app


ಇದರಲ್ಲಿ ಪಂಚಾಂಗ, ಆಯನಾಂಶ (ರಾಮನ್‌, ಲಹರಿ, ಆರ್ಯಭಟ, ಗಗನ್‌/ಬ್ರಾಡ್ಲೆ, ಸೂರ್ಯ ಸಿದ್ಧಾಂತ ಇತ್ಯಾದಿ), ವಾರ, ತಿಥಿ, ಕರಣ, ಕಾಲ ಮಾಹಿತಿ, ರಾಶಿ, ನವಾಂಶ ಭಚಕ್ರ (ಆರುಢ ಮತ್ತು ವಿಶೇಷ ಲಗ್ನಗಳು ಇತ್ಯಾದಿ) ಮತ್ತಿತರ ಉಪಯುಕ್ತ ವಿಷಯಗಳಿವೆ.

ವಿಜಯಕರ್ನಾಟಕ-ಬೋಧಿವೃಕ್ಷ ಸ್ಪಿರಿಚುಯಲ್‌ ಕನೆಕ್ಟ್ ಅಡಿಯಲ್ಲಿ ನಡೆದ 'ಜ್ಯೋತಿಷ ಸಲಹಾ ಶಿಬಿರ'ದಲ್ಲಿ ಭಾಗವಹಿಸಿದ 75 ಜ್ಯೋತಿಷಿಗಳಿಗೆ ಪ್ರಾಯೋಗಿಕವಾಗಿ ಸೂರ್ಯಾಲಯ ವೇದಿಕ್‌ ಅಸ್ಟ್ರಾಲಜಿ ಆ್ಯಪ್‌ ಸೌಲಭ್ಯ ಕಲ್ಪಿಸಲಾಗುವುದು ಎಂದು ಕರ್ನಾಟಕ ಜ್ಯೋತಿಷರ ಹಾಗೂ ಜ್ಯೋತಿಷ ಬೋಧನಾ ಒಕ್ಕೂಟದ ಸಂಘದ ಕಾರ್ಯದರ್ಶಿ ಬಿ. ಗಜೇಂದ್ರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ