ಆ್ಯಪ್ನಗರ

ವೈಶಾಖಮಾಸದ ರಾಶಿಫಲ ಸಿದ್ಧಾಂತ

ಸರ್ವಋುತು ಸಿದ್ಧಾಂತದ ಪ್ರಕಾರ ಏಪ್ರಿಲ್‌ 17ರಿಂದ ವೈಶಾಖ ಮಾಸ ಆರಂಭವಾಗುತ್ತದೆ. ಅಂದು ಕೃಷ್ಣಪಕ್ಷ ಭರಣಿ ನಕ್ಷತ್ರ.

Vijaya Karnataka 14 Apr 2018, 11:00 am
* ವಿ. ನಾರಾಯಣ ಶೆಟ್ಟಿ ಪದ್ಮಸಾಲಿ
Vijaya Karnataka Web ವೈಶಾಖ  ರಾಶಿಫಲ


ಸರ್ವಋುತು ಸಿದ್ಧಾಂತದ ಪ್ರಕಾರ ಏಪ್ರಿಲ್‌ 17ರಿಂದ ವೈಶಾಖ ಮಾಸ ಆರಂಭವಾಗುತ್ತದೆ. ಅಂದು ಕೃಷ್ಣಪಕ್ಷ ಭರಣಿ ನಕ್ಷತ್ರ. ಇದರ ಅಧಿಪತಿ ರವಿ. ಉಚ್ಚ ಗ್ರಹ ಅಂಗಾರಕ. ಇದರ ಆಧಾರದ ಮೇಲೆ ಮೇಷಾದಿರಾಶಿಗಳ ಫಲಾಫಲವನ್ನು ನೋಡೋಣ.

ಮೇಷ :
ರವಿ ದೆಸೆ ಆರಂಭ, ಉಚ್ಛಗ್ರಹ ಶುಕ್ರನಾಗಿದ್ದು, ಯಾವುದೇ ನೀಚಗ್ರಹ ಇರುವುದಿಲ್ಲ. ನಿವೇಶನ ಕೊಳ್ಳುವಿಕೆ, ಬಂಡವಾಳ ಹೂಡಿಕೆ, ವಾಹನ, ಬೆಳ್ಳಿ ಬಂಗಾರ ಖರೀದಿಗೆ ಸಕಾಲ.

ವೃಷಭ : ಗುರು ಮಹಾದೆಸೆ ಆರಂಭ. ನವಗ್ರಹಗಳ ಅನುಗ್ರಹ. ಪಂಚಮ ಸ್ಥಾನದಲ್ಲಿ ಶುಕ್ರ, ಸಪ್ತಮ ಸ್ಥಾನದಲ್ಲಿ ಕುಜ ಇರುವುದರಿಂದ ಕಂಕಣ ಭಾಗ್ಯ, ಸಂತಾನ ಯೋಗ ಪ್ರಾಪ್ತಿ. ಬೆಳ್ಳಿ ಬಂಗಾರ, ಜವಳಿ ಉದ್ದಿಮೆಗಳಲ್ಲಿ ಅಧಿಕ ಲಾಭ.

ಮಿಥುನ : ಶನಿಯು ಅಷ್ಟಮದಲ್ಲಿ ಸಂಚರಿಸುವುದರಿಂದ ಹಣದ ಲೇವಾದೇವಿ, ರಾಜಕೀಯ ವಿರೋಧಿಗಳಿಂದ ಎಚ್ಚರ. ಚಂದ್ರ ದೆಸೆ ಇರುವುದರಿಂದ ಪೌರ್ಣಮಿಯಿಂದ ಮೂರನೇ ದಿನ ರತ್ನ ವ್ಯಾಪಾರಗಳಲ್ಲಿ ಅಧಿಕ ಲಾಭ ಬರುತ್ತದೆ.

ಕಟಕ : ಮಾನಸಿಕ ಉದ್ವೇಗ, ಹೂಡಿಕೆಯಲ್ಲಿ ನಿರುತ್ಸಾಹ, ಆರೋಗ್ಯದಲ್ಲಿ ಕಿರಿಕಿರಿ ಸಂಭವಿಸುವ ಸಾಧ್ಯತೆ ಹೆಚ್ಚು. ಈ ಕಾಲಮಾನದಲ್ಲಿ ಶುಭ ಯೋಗ ಆರಂಭ.

ಸಿಂಹ : ರವಿ, ಶುಕ್ರ ಮತ್ತು ಶನಿ ದೆಸೆ ಗ್ರಹ (ಅಧಿಪತಿ)ಗಳಾಗಿರುವುದರಿಂದ ಸರ್ವಚೇತನ ಜ್ಞಾನಮಾರ್ಗ. ಏಪ್ರಿಲ್‌ 21 ರಿಂದಲೇ ಗಜಕೇಸರಿ, ರಾಜಯೋಗ, ಅಮೃತ ಸಿದ್ಧಯೋಗಳು ಉಂಟಾಗುತ್ತವೆ. ಲೇವಾದೇವಿಯಲ್ಲಿ ಅಧಿಕ ಲಾಭ.

ಕನ್ಯಾ : ಬುದ್ಧಿ ಬ್ರಹ್ಮಾಂಡವಾಗಿ ಸರ್ವ ಚೇತನ ಜ್ಞಾನಮಾರ್ಗ ಹೊಂದುವುದು. ರಾಜಕೀಯ ಪಟ್ಟಾಭಿಷೇಕ. ವಿದೇಶ ಪ್ರವಾಸ. ಜಲಕ್ರೀಡೆಗಳಲ್ಲಿ ಆಸಕ್ತಿ.

ತುಲಾ : ದೈವ ಪ್ರೇರಣೆಯ ನಿಗೂಢ ಶಕ್ತಿಗಳು ಅದೃಷ್ಟದ ಬೆನ್ನುಲುಬಾಗಿ ನಿಲ್ಲುತ್ತವೆ. ಕಾಲಗಣನಾ ಚಕ್ರವೇ ಬದಲಾಗುತ್ತದೆ. ಜೀವನ ನವೋಲ್ಲಾಸದತ್ತ ಸಾಗುತ್ತದೆ.

ವೃಶ್ಚಿಕ : ದುಂದುವೆಚ್ಚ, ದುವ್ರ್ಯವಹಾರ ಮತ್ತು ನಿರ್ಲಕ್ಷ್ಯ ಆಡಳಿತದಿಂದ ದೂರ ಸರಿದರೆ ಉತ್ತಮ ಫಲ ಕಾಣುವಿರಿ. ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ.

ಧನಸ್ಸು : ಗಜಕೇಸರಿ ಯೋಗ, ಶುಕ್ರದೆಸೆ, ರಾಜಯೋಗ ಮತ್ತು ಅಮೃತ ಸಿದ್ಧಯೋಗದ ಕಾರಣ ಬೆಳ್ಳಿ ಬಂಗಾರ, ರೇಷ್ಮೆ ಉದ್ದಿಮೆಗಳಲ್ಲಿ ಅಧಿಕ ಲಾಭ.

ಮಕರ :
ಶನಿ, ಕುಜ ಮತ್ತು ಕಾಳಸರ್ಪ ದೋಷಗಳಿಂದ ಮುಕ್ತಿ. ದೈವ ಚಿಂತನೆ, ಪ್ರವಾಸ, ಆಕಸ್ಮಿಕ ಧನಾಗಮನ, ಸಂತಾನ ಯೋಗ.

ಕುಂಭ : ಆಕಸ್ಮಿಕವಾಗಿ ಸ್ಥಿರಾಸ್ತಿ, ಚರಾಸ್ತಿಗಳ ಆಗಮನ. ಉನ್ನತ ಹುದ್ಧೆ, ನೂತನ ಗೃಹ ನಿರ್ಮಾಣ ಸಾಧ್ಯತೆ. ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಉನ್ನತ ಹುದ್ದೆ ಪ್ರಾಪ್ತಿ.

ಮೀನ : ಶನಿ ಮತ್ತು ಶುಕ್ರ ಮಹಾದೆಸೆಯ ಕಾರಣ ದಂಪತಿ, ಮಿತ್ರರು, ವೈರಿಗಳು ಒಂದಾಗುವರು. ಕಲಾವಿದರಲ್ಲಿ ನವಚೈತನ್ಯ, ಬರಹಗಾರರಲ್ಲಿ ನವೋಲ್ಲಾಸ ಉಂಟಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ