ಆ್ಯಪ್ನಗರ

ಈ ವಾಸ್ತು ದೋಷವು ನಷ್ಟಕ್ಕೆ ಕಾರಣ ಎಚ್ಚರ..! ಇಂದೇ ಸರಿ ಮಾಡಿಕೊಳ್ಳಿ..

ಕೆಲವು ವಾಸ್ತು ದೋಷಗಳು ನಮಗೆ ತೊಂದರೆ ಕೊಡಬಹುದು, ತಪ್ಪು ವಾಸ್ತು ನಿರ್ಧಾರಗಳು ಮನೆಯಲ್ಲಿ ಕೆಟ್ಟದ್ದನ್ನು ಸಂಭವಿಸುವಂತೆ ಮಾಡುತ್ತವೆ. ಕೆಲವು ವಾಸ್ತು ದೋಷಗಳು ನಷ್ಟಕ್ಕೂ ಕಾರಣವಾಗುತ್ತವೆ. ಯಾವ ವಾಸ್ತು ದೋಷ ನಷ್ಟವನ್ನು ತರುತ್ತದೆ..? ನಷ್ಟಕ್ಕೆ ಕಾರಣವಾಗುವ ವಾಸ್ತು ದೋಷಗಳಾವುವು.?

Vijaya Karnataka Web 22 Apr 2021, 4:49 pm
ನಾವು ಕಚೇರಿಯ ನಂತರ ಹೆಚ್ಚು ಸಮಯವನ್ನು ನಮ್ಮ ಮನೆಯಲ್ಲಿಯೇ ಕಳೆಯುತ್ತೇವೆ. ನಾವು ಹೇಗೆ ಜೀವನ ನಡೆಸುತ್ತಿದ್ದೇವೆ, ನಮ್ಮ ದಿನಚರಿ ಹೇಗಿದೆ, ನಾವು ಪ್ರತಿ ಕೆಲಸವನ್ನು ಹೇಗೆ ಮಾಡುತ್ತೇವೆ ಈ ಎಲ್ಲ ವಿಷಯಗಳೂ ವಾಸ್ತುವಿಗೆ ಸಂಬಂಧಿಸಿವೆ. ಬದುಕಲು ವಾಸ್ತು ಅತ್ಯಗತ್ಯ. ಭಾರತೀಯರಷ್ಟೇ ಅಲ್ಲ ವಿದೇಶಿಗರೂ ಸಹ ತಮ್ಮ ಶಾಸ್ತ್ರ, ಆಚರಣೆಯಲ್ಲಿ ಬಂದಿರುವ ವಾಸ್ತುವನ್ನು ನಂಬುತ್ತಾರೆ. ಚೀನೀಯರು ಫೆಂಗ್‌ ಶುಯಿಯನ್ನು ನಂಬುವಂತೆ ವಿಶ್ವದಲ್ಲಿ ವಾಸ್ತುವಿನ ಪ್ರಸ್ತುತತೆ ಎಲ್ಲೆಡೆ ಇದೆ. ಆದರೆ, ಅದರ ಹೆಸರುಗಳು, ಪೂಜಿಸುವ ದೇವರುಗಳು ಬೇರೆಯದ್ದಾಗಿರುತ್ತವೆ ಅಷ್ಟೆ. ಕೆಲವು ವಾಸ್ತು ದೋಷಗಳು ನಮಗೆ ತೊಂದರೆ ಕೊಡಬಹುದು, ತಪ್ಪು ವಾಸ್ತು ನಿರ್ಧಾರಗಳು ಮನೆಯಲ್ಲಿ ಕೆಟ್ಟದ್ದನ್ನು ಸಂಭವಿಸುವಂತೆ ಮಾಡುತ್ತವೆ. ಕೆಲವು ವಾಸ್ತು ದೋಷಗಳು ನಷ್ಟಕ್ಕೂ ಕಾರಣವಾಗುತ್ತವೆ ಎಂದರೆ ನೀವು ನಂಬಲೇಬೇಕು. ಈ ಲೇಖನದಲ್ಲಿ ನಷ್ಟವನ್ನು ತರುವ ತಪ್ಪು ವಾಸ್ತು ದೋಷಗಳು ಯಾವುವು ಎಂಬುದನ್ನು ತಿಳಿಯೋಣ.
Vijaya Karnataka Web according to vastu shastra these vastu mistakes will bring you loss
ಈ ವಾಸ್ತು ದೋಷವು ನಷ್ಟಕ್ಕೆ ಕಾರಣ ಎಚ್ಚರ..! ಇಂದೇ ಸರಿ ಮಾಡಿಕೊಳ್ಳಿ..



​ಹಾಸಿಗೆಗಳ ಕೆಳಗೆ ಕಸ ಇಡುವುದು

ನಿಮ್ಮ ಹಾಸಿಗೆಯ ಕೆಳಗೆ ಕಸ, ಹರಿದ ಪೇಪರ್‌ನಂತಹ ವಸ್ತುಗಳನ್ನು ನೀವು ಇಡುತ್ತಿದ್ದರೆ ತಕ್ಷಣ ಅದನ್ನು ಬದಲಾಯಿಸಿ. ಹಾಸಿಗೆಯ ಕೆಳಗೆ ಸ್ವಚ್ಛತೆ ಕಾಪಾಡುವುದು ತುಂಬ ಉತ್ತಮ. ಏಕೆಂದರೆ ಇದು ನಿಮ್ಮ ಲಾಭದ ಹರಿವನ್ನು ಹೆಚ್ಚು ಮಾಡುತ್ತದೆ. ಕಸ ಅಥವಾ ಹಳೆಯ ಮುರಿದ ವಸ್ತುಗಳನ್ನು ಹಾಸಿಗೆಯ ಕೆಳಗೆ ಇಡಬಾರದು ಎಂಬುದನ್ನು ಎಂದೂ ಮರೆಯಬೇಡ. ಹಾಗೆ ಮಾಡುವುದರಿಂದ ನಿಮ್ಮ ವೈವಾಹಿಕ ಸಂಬಂಧದಲ್ಲಿ ಜಗಳ, ವಾಗ್ವಾದ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ನಾವು ಕಣ್ಮುಚ್ಚಿ ಈ ರಾಶಿಯವರನ್ನು ನಂಬಬಹುದು..! ನಂಬಿಕೆಗೆ ಅರ್ಹ ರಾಶಿಗಳಿವು..

​ಪೊರಕೆ ಎಸೆಯುವುದು, ಅದನ್ನು ತುಳಿಯುವುದು

ಜನರು ಆತುರದಲ್ಲಿ ಕಸ ಗುಡಿಸಿದ ನಂತರ ಪೊರಕೆಯನ್ನು ಎಸೆಯುತ್ತಾರೆ. ಅದನ್ನು ಜುಟ್ಟು ಮುಂದಾಗಿ ನಿಲ್ಲಿಸುವುದು, ಕಾಲಿನಲ್ಲಿ ತುಳಿಯುವುದು ತುಂಬಾ ತಪ್ಪು. ಪೊರಕೆಯನ್ನು ಲಕ್ಷ್ಮಿ ಪ್ರತಿರೂಪ ಎಂದು ಹೇಳಲಾಗುತ್ತದೆ. ಈ ರೀತಿ ಪೊರಕೆಯನ್ನು ಎಸೆಯುವುದು, ತುಳಿಯುವುದು ಮಾಡುವುದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ಅಂತಹ ಮನೆಯಲ್ಲಿ ಲಕ್ಷ್ಮಿಯು ವಾಸಿಸಲು ಇಷ್ಟಪಡುವುದಿಲ್ಲ ಎಂದು ನಂಬಲಾಗಿದೆ. ಹಾಗಾಗಿ ಪೊರಕೆಯನ್ನು ಗೌರವಿಸಬೇಕು. ಅದನ್ನು ನಿಧಾನವಾಗಿ ಇಡಬೇಕು. ಹೊರಗಿನಿಂದ ಬಂದವರ ಕಣ್ಣಿಗೆ ಪೊರಕೆ ಬೀಳದಂತೆ ಮರೆ ಮಾಡಬೇಕು.

ಯಾವ ರಾಶಿಯವರ ಸ್ನೇಹ ಮಾಡಬೇಕು..? ಈ 5 ರಾಶಿಯವರು ಉತ್ತಮ ಗೆಳೆಯರು..!

​ದಕ್ಷಿಣದ ಕಡೆಗೆ ಬೀರು ಇಡುವುದು

ಮನೆಯ ದಿಕ್ಕನ್ನು ಅಥವಾ ಹಣ ಇರುವ ವಾರ್ಡ್ರೋಬ್ ಅನ್ನು ದಕ್ಷಿಣ ದಿಕ್ಕಿಗೆ ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣಕ್ಕೆ ಎದುರಾಗಿರುವ ಕಪಾಟನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಬೀರು ಈ ದಿಕ್ಕಿನಲ್ಲಿ ಇಟ್ಟರೆ ಅದು ಯಾವಾಗಲೂ ಖಾಲಿಯಾಗಿರುತ್ತದೆ ಮತ್ತು ಅದರಲ್ಲಿ ಎಂದಿಗೂ ಹಣವಿರಲ್ಲ ಎಂದು ನಂಬಲಾಗಿದೆ. ಬೇಕಿದ್ದರೆ ನೀವು ಬೀರು ತೆರೆಯುವಾಗ ಅದರ ಮುಖವು ಉತ್ತರದ ಕಡೆಗೆ ಇರುವ ರೀತಿಯಲ್ಲಿ ನೀವು ಬೀರುವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಹುದು. ಹೀಗೆ ಇರಿಸಲಾಗಿರುವ ವಾರ್ಡ್ರೋಬ್ ಅನ್ನು ಅತ್ಯಂತ ಶುಭವೆಂದು ಪರಿಗಣಿಸ ಲಾಗುತ್ತದೆ.

ರಾಮ ನವಮಿಯಂದೇ 5 ಗ್ರಹಗಳ ಬೃಹತ್‌ ಸಂಯೋಗ: ರಾಶಿಚಕ್ರದ ಮೇಲಾಗುವ ಪ್ರಭಾವವೇನು..?

​ದೇವರ ಮನೆಯಲ್ಲಿ ಒಡೆದ ವಿಗ್ರಹ ಇಡುವುದು

ದೇವರ ಮನೆಯಲ್ಲಿ ಅಥವಾ ಪೂಜೆ ಮಾಡುವ ಜಾಗದಲ್ಲಿ ಒಡೆದ ವಿಗ್ರಹ ಇಡುವುದು, ಅದನ್ನುಪೂಜಿಸುವುದು ಶುಭವಲ್ಲ. ವಾಸ್ತು ಪ್ರಕಾರ ಇದನ್ನು ಮಾಡುವುದು ತಪ್ಪು ಎಂದು ಪರಿಗಣಿಸಲಾಗಿದೆ. ಒಡೆದ ದೇವರ ವಿಗ್ರಹವನ್ನು ಮನೆಯಲ್ಲಿ ಇಡಬಾರದು. ನಿಮ್ಮ ಮನೆಯಲ್ಲಿ ಪ್ರತಿಮೆ ಒಡೆದರೆ ಅದನ್ನು ಹರಿಯುವ ನೀರಿನಲ್ಲಿ ಬಿಡಬೇಕು.

ಈ 5 ರಾಶಿಯವರು ಗುಟ್ಟನ್ನು ರಟ್ಟು ಮಾಡದೇ ಇರಲಾರರು..! ಇವರ ಬಳಿ ಹುಷಾರಾಗಿರಿ..

​ಸಂಜೆ ಹಣವನ್ನು ಸಾಲವಾಗಿ ನೀಡುವುದು

ಸಂಜೆ ಯಾರಾದರೂ ನಿಮ್ಮಿಂದ ಹಣವನ್ನು ಸಾಲ ಪಡೆಯಲು ಬಂದರೆ, ಕೊಡಬೇಡಿ. ಇತರರಿಗೆ ಸಹಾಯ ಮಾಡುವುದು ಒಳ್ಳೆಯದು. ಆದರೆ ಮುಸ್ಸಂಜೆಯಲ್ಲಿ ಯಾರಿಗೂ ಸಾಲ ಕೊಡಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ನಿಮ್ಮ ಮೇಲೆ ಕೋಪಗೊಂಡು ನಿಮ್ಮ ಮನೆಯಿಂದ ಹೊರಟು ಹೋಗುತ್ತಾಳೆ. ಹಾಗಾಗಿ ಸಂಜೆ ಯಾರಿಗೂ ಸಾಲ ಕೊಡಬೇಡಿ.

ಈ 5 ರಾಶಿಚಕ್ರ ಚಿಹ್ನೆಗಳ ಜನರೊಂದಿಗೆ ಜಾಗರೂಕರಾಗಿರಿ..! ಇವರು ದ್ವೇಷಿಗಳು..

​ಮನೆಯಲ್ಲಿ ಜೇಡರ ಬಲೆ ಇರುವುದು

ನಿಮ್ಮ ಮನೆಯಲ್ಲಿ ಜೇಡರ ಬಲೆ ಇದ್ದರೆ, ಅದನ್ನು ತಕ್ಷಣ ತೆಗೆದುಹಾಕಿ. ಮನೆಯಲ್ಲಿ ಈ ರೀತಿ ಜೇಡರ ಬಲೆ ಇರಬಾರದು ಎಂದು ನಂಬಲಾಗಿದೆ. ಇದು ನಿಮ್ಮ ಪ್ರಗತಿಯನ್ನು ತಡೆಯುತ್ತದೆ. ನಿಮ್ಮ ಮನೆಯಲ್ಲಿ ಯಾವುದಾದರೂ ಸ್ಥಳದಲ್ಲಿ ಬಲೆ ಇದ್ದರೆ, ಅದನ್ನು ನೋಡುವುದರಿಂದ ನಿಮ್ಮ ಕೆಲಸ ನಿಧಾನವಾಗಬಹುದು ಮತ್ತು ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ವಾಸಿಸುವುದಿಲ್ಲ. ತಾಯಿ ಲಕ್ಷ್ಮಿ ಸ್ವಚ್ಛತೆಯನ್ನು ಕಾಪಾಡುವ ಮನೆಯಲ್ಲಿ ವಾಸಿಸಲು ಆದ್ಯತೆ ನೀಡುತ್ತಾಳೆ ಎಂದು ನಂಬಲಾಗಿದೆ. ಆದ್ದರಿಂದ, ನಾವು ಯಾವಾಗಲೂ ನಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

Vara Bhavishya: ಏಪ್ರಿಲ್‌ 19 ರಿಂದ 25 ರವರೆಗೆ ನಿಮ್ಮ ರಾಶಿಫಲಗಳು ಹೇಗಿವೆ..?

​ಮನೆಯ ಮುಖ್ಯ ದ್ವಾರ ಸ್ವಚ್ಛಗೊಳಿಸಿ

ನಿಮ್ಮ ಮನೆಗೆ ಧನಾತ್ಮಕ ಶಕ್ತಿಯು ಪ್ರವೇಶಿಸುವ ಸ್ಥಳವೆಂದು ಮನೆಯ ಮುಖ್ಯ ದ್ವಾರವೆಂದು ಪರಿಗಣಿಸಲಾಗಿದೆ. ಆದ್ದರಿಂದ ನಿಮ್ಮ ಮನೆಯ ಮುಖ್ಯ ಬಾಗಿಲಿನ ಮುಂದೆ ಎಂದಿಗೂ ಕೊಳಕು ಇರಬಾರದು. ಬೆಳಿಗ್ಗೆ ಎದ್ದ ನಂತರ, ನಾವು ಮೊದಲು ಮನೆಯ ಮುಖ್ಯ ದ್ವಾರದ ಬಳಿ ಗುಡಿಸಬೇಕು. ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶಿಸಿ ನಿಮ್ಮ ಮನೆಗೆ ಸಮೃದ್ಧಿಯನ್ನು ತರುತ್ತಾಳೆ.

ಮೇಷ ರಾಶಿಗೆ ಬುಧನ ಸಂಚಾರ: 5 ರಾಶಿಯವರಿಗೆ ಲಾಭ..! ಯಾವ ರಾಶಿಗೆ ಏನು ಫಲ..?

ಸೋರುವ ನಲ್ಲಿಗಳು

ಕೆಲವು ಜನರ ಮನೆಯಲ್ಲಿ ನಲ್ಲಿ ತೊಟ್ಟಿಕ್ಕುತ್ತಲೇ ಇರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ವಾಸ್ತು ಪ್ರಕಾರ ಇದನ್ನು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ನಲ್ಲಿ ತೊಟ್ಟಿಕ್ಕುವಿಕೆಯು ನಿಮ್ಮ ಮನೆಯಲ್ಲಿ ಹಣದ ನಷ್ಟವನ್ನು ಸೂಚಿಸುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ನಲ್ಲಿ ಕೆಟ್ಟಿದ್ದರೆ ಅದನ್ನು ತಕ್ಷಣ ಸರಿಪಡಿಸಿ. ನಲ್ಲಿ ತೊಟ್ಟಿಕ್ಕುವಿಕೆಯನ್ನು ಬಹಳ ಕೆಟ್ಟದೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯಲ್ಲಿ ನೀರು ಹೆಚ್ಚು ವ್ಯರ್ಥವಾಗುವುದರಿಂದ ಹಣದ ನಷ್ಟ ಹೆಚ್ಚು ಎಂದು ನಂಬಲಾಗಿದೆ.

ಪ್ರೀತಿ ಫಲಿಸುತ್ತದೆಯೋ..? ಇಲ್ಲವೋ..? ಎಂದು ತಿಳಿಸುವ ಹೃದಯ ರೇಖೆಯಿದು..!

​ಸ್ನಾನದ ಮನೆ

ಕೆಲವು ಜನರು ಸ್ನಾನದ ನಂತರ ಬಾತ್ರೂಮ್ ಅನ್ನು ಹಾಗೆ ಬಿಟ್ಟುಬರುತ್ತಾರೆ. ಅದರಲ್ಲಿ ಸಾಬೂನಿನ ನೊರೆ, ಕೂದಲು, ಕೊಳಕು ಹಾಗೇ ಇರುತ್ತದೆ. ಈ ರೀತಿ ಅಭ್ಯಾಸ ತುಂಬಾ ಕೆಟ್ಟದ್ದು ಎಂದು ನಂಬಲಾಗಿದೆ. ನೀವು ಸ್ನಾನ ಮಾಡಿ ಬಚ್ಚಲಿಂದ ಹೊರಬಂದಾಗಲೆಲ್ಲಾ ಸ್ನಾನದ ಮನೆಯನ್ನು ಸ್ವಚ್ಛಗೊಳಿಸಿ ಹೊರಗೆ ಬನ್ನಿ. ಹಾಗೆ ಮಾಡದಿದ್ದರೆ ವರುಣನು ಕೋಪಗೊಳ್ಳುತ್ತಾನೆ. ಅವನ ಅಸಮಾಧಾನವು ನಷ್ಟಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.

ಹೊಸ ಮನೆ ಖರೀದಿಸುತ್ತಿದ್ದೀರಾ..? ಈ ಹತ್ತು ವಾಸ್ತು ಸಲಹೆಗಳನ್ನು ಮರೆಯದೇ ಪಾಲಿಸಿ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ