ಆ್ಯಪ್ನಗರ

ನೀವು ಪ್ರಗತಿ ಸಾಧಿಸಬೇಕೆಂದರೆ ಕೆಲಸದ ಸ್ಥಳದ ವಾಸ್ತು ಹೀಗಿರಬೇಕು..

ಕೆಲಸ ಅಥವಾ ವ್ಯವಹಾರದಲ್ಲಿ ಯಶಸ್ಸು ಪಡೆಯಬೇಕೆಂದರೆ ನೀವು ಕೆಲಸ ಮಾಡುವ ಸ್ಥಳದ ವಾಸ್ತು ಕೂಡಾ ಮುಖ್ಯವಾಗಿರುತ್ತದೆ. ಯಾವ ವಸ್ತು ಎಲ್ಲಿಡಬೇಕು ಎನ್ನುವುದನ್ನು ವಾಸ್ತು ವಿವರಿಸುತ್ತದೆ. ವಾಸ್ತುವಿನ ಕುರಿತಾದ ಸಂಕ್ಷಿಪ್ತ ಮಾಹಿತಿ ಈ ಲೇಖನದಲ್ಲಿದೆ.

Vijaya Karnataka Web 8 Oct 2021, 3:46 pm
ಕೆಲಸದ ಸ್ಥಳದಲ್ಲಿ ಧನಾತ್ಮಕತೆ ಅಗತ್ಯವಾಗಿರುತ್ತದೆ. ಇದರಿಂದಾಗಿಯೇ ಅಭಿವೃದ್ಧಿಯನ್ನು ಕಾಣುವುದು, ಕೆಲಸದಲ್ಲಿ ಪ್ರಗತಿ ಸಾಧಿಸಿದರೆ ಹಣದ ಸಮಸ್ಯೆ ಬಾರದು, ನೀವು ಉನ್ನತ ಮಟ್ಟಕ್ಕೆ ಏರಬಹುದು. ಇದಕ್ಕಾಗಿ, ಕೆಲವು ವಾಸ್ತು ಸಂಬಂಧಿತ ಸಂಗತಿಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಕೆಲಸದ ಸ್ಥಳದಲ್ಲಿ ಯಾವ ದಿಕ್ಕಿನಲ್ಲಿ ಯಾವ ವಸ್ತುಗಳು ಇರಬೇಕು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ.
Vijaya Karnataka Web ನೀವು ಪ್ರಗತಿ ಸಾಧಿಸಬೇಕೆಂದರೆ ಕೆಲಸದ ಸ್ಥಳದ ವಾಸ್ತು ಹೀಗಿರಬೇಕು..


ಪೂಜಾ ಸ್ಥಳ
ನಿಮ್ಮ ಕ್ಯಾಬಿನ್ ಅಥವಾ ಶೆಡ್‌ನಲ್ಲಿ ನೀವು ಒಂದು ಸಣ್ಣ ಪೂಜಾ ಸ್ಥಳ ಮಾಡಿದ್ದರೆ, ಈ ಸ್ಥಳವು ನಿಮ್ಮ ಕುರ್ಚಿಯ ಹಿಂದೆ ಇರಬಾರದು. ಅಂದರೆ, ನೀವು ಕುಳಿತಾಗ, ನಿಮ್ಮ ಬೆನ್ನು ಪೂಜಾಸ್ಥಳದ ಕಡೆಗೆ ಇರಬಾರದು.

ಹಣ ಅಥವಾ ಪರ್ಸ್‌ ಇಡುವ ಸ್ಥಳ
ಕಛೇರಿ ಅಥವಾ ಅಂಗಡಿಯಲ್ಲಿ ಹಣವನ್ನು ಇರಿಸುವ ಸ್ಥಳ ಅಲ್ಮೇರಾ ತೆರೆದಾಗ ಅದು ಉತ್ತರದ ಕಡೆಗೆ ಮುಖ ಮಾಡುವ ರೀತಿಯಲ್ಲಿ ಇರಬೇಕು. ಯಾವುದೇ ಸಂದರ್ಭದಲ್ಲಿ ಇದಕ್ಕೆ ಮುಖಾಮುಖಿಯಾಗಿ ಕುಳಿತುಕೊಳ್ಳಬೇಡಿ

ಸ್ನಾನ ಗೃಹದ ವಾಸ್ತು ದೋಷ ಮನೆ ಮಂದಿಯ ನೆಮ್ಮದಿ ಕೆಡಿಸುವುದು

ಕುಳಿತುಕೊಳ್ಳುವ ಸ್ಥಳ

ಯಾವುದೇ ಸ್ಥಳದಲ್ಲಾಗಲಿ ನೀವು ಕುಳಿತುಕೊಳ್ಳುವಾಗ ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆ ಮುಖ ಮಾಡಿ ಕುಳಿತುಕೊಳ್ಳದಿರುವುದು ಉತ್ತಮ. ಸಾಧ್ಯವಾದರೆ ಪಶ್ಚಿಮ ಭಾಗಕ್ಕೆ ಮುಖ ಮಾಡಬಹುದು. ಆದರೆ ಕೆಲಸ ಮಾಡುವಾಗ ನಿಮ್ಮ ಮುಖವು ದಕ್ಷಿಣದ ಕಡೆಗೆ ಇರುವ ರೀತಿಯಲ್ಲಿ ನಿಮ್ಮ ಕುರ್ಚಿಯನ್ನು ಇರಿಸಿಕೊಳ್ಳಲು ಮರೆಯಬೇಡಿ.

ನಿದ್ದೆ ಮಾಡುವಾಗ ಯಾವುದೇ ಕಾರಣಕ್ಕೂ ತಲೆಯ ಸುತ್ತ ಈ ವಸ್ತುಗಳನ್ನು ಇಡಬೇಡಿ

ಟೇಬಲ್‌
ನಿಮ್ಮ ಟೇಬಲ್ ಆಯತಾಕಾರವಾಗಿರಬೇಕು ಮತ್ತು ನಿಮ್ಮ ಕುರ್ಚಿಯ ಹಿಂದೆ ಗೋಡೆ ಇರಬೇಕು. ಕುರ್ಚಿಯ ಹಿಂದೆ ಖಾಲಿ ಜಾಗವನ್ನು ಬಿಡಬೇಡಿ. ನಿಮ್ಮ ಕಾರ್ಯಕ್ಷೇತ್ರದ ಮಧ್ಯ ಭಾಗವು ತೆರೆದಿರಬೇಕು. ಉಳಿದ ಕಚೇರಿ ಸ್ಥಳಗಳಿಗೆ ಹೋಲಿಸಿದರೆ ಈ ಸ್ಥಳದಲ್ಲಿ ಕನಿಷ್ಠ ವಸ್ತುಗಳನ್ನು ಇರಿಸಿ. ನೀವು ಅಂಗಡಿಯನ್ನು ಹೊಂದಿದ್ದರೆ, ಗ್ರಾಹಕರ ನಿರ್ಗಮನವು ಮಧ್ಯದಿಂದ ಇರಬೇಕು, ಬದಿಯಿಂದ ಇರಬಾರದು ಎನ್ನುವುದನ್ನು ಗಮನದಲ್ಲಿರಿಸಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ