ಆ್ಯಪ್ನಗರ

ಈ ವಿಶೇಷ ವಸ್ತುಗಳು ಯಾರ ಮನೆಯಲ್ಲಿರುತ್ತದೋ, ಅಲ್ಲಿ ಸುಖ-ಸಮೃದ್ಧಿಯೂ ನೆಲೆಸುತ್ತದೆ..!

ಸಮಸ್ಯೆಗಳು ಎಲ್ಲರ ಜೀವನದಲ್ಲಿ ಇದ್ದಿದ್ದೇ. ಅದರನ್ನು ಪರಿಹರಿಸುವ ದಾರಿಗಳು ನಮ್ಮಲ್ಲೇ ಇರುತ್ತದೆ. ವಾಸ್ತು ಹಾಗೂ ಜ್ಯೋತಿಷ್ಯದ ಪ್ರಕಾರ ಕೆಲವೊಂದು ಶುಭ ಹಾಗೂ ಪೂಜನೀಯ ವಸ್ತುಗಳನ್ನು ಮನೆಯಲ್ಲಿಟ್ಟರೆ ಹಣದ ಸಮಸ್ಯೆ, ಅನಾರೋಗ್ಯ, ಸರ್ವ ಗ್ರಹ ದೋಷಗಳೂ ನಿವಾರಣೆಯಾಗುತ್ತವೆ ಎನ್ನುತ್ತಾರೆ.

Produced bySomanagouda Biradar | Agencies 6 Mar 2023, 4:10 pm
ಕೆಲವೊಂದು ವಿಶೇಷ ವಸ್ತುಗಳು ಇರುವ ಮನೆಯಲ್ಲಿ, ದೇವರ ಆಶೀರ್ವಾದವು ಆ ಕುಟುಂಬದ ಮೇಲೆ ಉಳಿಯುತ್ತದೆ ಎಂದು ಶಾಸ್ತ್ರವು ಹೇಳುತ್ತದೆ.ಕೆಲವು ವಿಶೇಷ ವಸ್ತುಗಳನ್ನು ಖರೀದಿಸುವುದು ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಈ ವಸ್ತುಗಳನ್ನು ಮನೆಗೆ ತಂದರೆ ಸಂಪತ್ತು ಹೆಚ್ಚುತ್ತದೆ. ಸಂಸಾರದ ಸುಖ-ಸಮೃದ್ಧಿಗಾಗಿ ಜೀವನದಲ್ಲಿ ಕೆಲವು ಶುಭ ಕ್ರಮಗಳನ್ನು ಅಳವಡಿಸಿಕೊಂಡರೆ ಅನೇಕ ವಿಧವಾದ ಐಶ್ವರ್ಯಗಳನ್ನು ಸಾಧಿಸಬಹುದು. ಜ್ಯೋತಿಷ್ಯ ಮತ್ತು ವಾಸ್ತು ಪ್ರಕಾರ, ಅನೇಕ ರೀತಿಯ ವಸ್ತುಗಳನ್ನು ಬಳಸುವುದರಿಂದ, ಧನಾತ್ಮಕ ಪ್ರಯೋಜನಗಳನ್ನು ಪಡೆಯಬಹುದು. ಇವುಗಳು ಇರುವ ಮನೆಯಲ್ಲಿ ಶುಭ ಘಟನೆಗಳು ನಡೆಯುವವು ಮಾತ್ರವಲ್ಲ, ದೇವರ ಅಶೀರ್ವಾದವೂ ಸದಾ ಅವರ ಮೇಲಿರುವುದು. ಆ ವಸ್ತುಗಳು ಯಾವುವು ಎನ್ನುವುದನ್ನು ನೋಡೋಣ.
Vijaya Karnataka Web vastu items for home money
ಈ ವಿಶೇಷ ವಸ್ತುಗಳು ಯಾರ ಮನೆಯಲ್ಲಿರುತ್ತದೋ, ಅಲ್ಲಿ ಸುಖ-ಸಮೃದ್ಧಿಯೂ ನೆಲೆಸುತ್ತದೆ..!


ಹೋಳಿ 2023: ನಿಮ್ಮ ಜೀವನದಲ್ಲಿ ಕ್ಲೇಶಗಳು ಕಡಿಮೆಯಾಗಬೇಕೆಂದರೆ ಹೋಳಿಯಂದು ಈ ಪರಿಹಾರ ಕ್ರಮ ಮಾಡಿ..
ರುದ್ರಾಕ್ಷ:

ರುದ್ರಾಕ್ಷಿಯನ್ನು ಶಿವನ ರೂಪವೆಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷಿ ಇರುವ ಮನೆಯ ಮೇಲೆ ಶಿವನ ಆಶೀರ್ವಾದ ಮಳೆಯಾಗುವುದು. ರುದ್ರಾಕ್ಷಿಯನ್ನಿಟ್ಟು ಪೂಜಿಸುವುದಾದರೆ ಯಾವುದೇ ಮುಖಿ ರುದ್ರಾಕ್ಷಿಯನ್ನು ಮನೆಗೆ ತರಬಹುದು. ರುದ್ರಾಕ್ಷವು ಸಾಧಕನಲ್ಲಿರುವ ಪ್ರತಿಯೊಂದು ರೋಗ, ದೋಷ ಮತ್ತು ದುಃಖವನ್ನು ತೆಗೆದುಹಾಕುತ್ತದೆ ಎಂದು ಹೇಳಲಾಗುತ್ತದೆ. ರುದ್ರಾಕ್ಷಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಥವಾ ಅದನ್ನು ಧರಿಸುವುದು ಜೀವನ ಮತ್ತು ಕುಟುಂಬಕ್ಕೆ ಮಂಗಳವನ್ನು ತರುತ್ತದೆ.ನಿಮ್ಮ ರಾಶಿಯನುಸಾರ ವಿವಿಧ ಮುಖದ ರುದ್ರಾಕ್ಷಿಯನ್ನೂ ಧರಿಸಬಹುದು.

ಪಾರದ ಶಿವಲಿಂಗ:

ಪಾರದ ಅಂದರೆ ಪಾದರಸದ ಶಿವಲಿಂಗದ ಆರಾಧನೆಯು ಶಿವನ ಆರಾಧನೆಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ನೀವು ಪಾರದ ಶಿವಲಿಂಗವನ್ನು ಮನೆಗೆ ತಂದರೆ, ನೀವು ವಾಸ್ತು ದೋಷ, ಕಾಲಸರ್ಪ ದೋಷ ಮತ್ತು ಪಿತ್ರ ದೋಷಗಳಿಂದ ಮುಕ್ತರಾಗುತ್ತೀರಿ. ಸಂಪತ್ತನ್ನು ಹೆಚ್ಚಿಸಲು, ಪಾದರಸದ ಶಿವಲಿಂಗದ ಪೂಜೆಯನ್ನು ಪ್ರತಿದಿನ ಮಾಡಬೇಕು. ಈ ಪೂಜೆಯಿಂದ ಜೀವನದಲ್ಲಿ ಅಷ್ಟೈಶ್ವರ್ಯ ಪ್ರಾಪ್ತಿಯಾಗುವುದು.

ಉತ್ತಮ ಆರೋಗ್ಯಕ್ಕೆ ವಾಸ್ತುಶಾಸ್ತ್ರದಲ್ಲಿ ವಿವರಿಸಲಾಗಿರುವ ನಿಯಮಗಳು ಹೀಗಿವೆ ನೋಡಿ..
ಬಿಲ್ವ ಮತ್ತು ತುಳಸಿ ಗಿಡಗಳು:

ಬಿಲ್ವಪತ್ರೆ ಅಥವಾ ತುಳಸಿ ಗಿಡ ಇರುವ ಮನೆಯಲ್ಲಿ ಭಗವಂತನೇ ನೆಲೆಸುತ್ತಾನೆ ಎಂದು ಹೇಳಲಾಗುತ್ತದೆ. ಬಿಲ್ವಪತ್ರೆ ಮತ್ತು ತುಳಸಿ ಗಿಡಗಳನ್ನು ಮನೆಯಲ್ಲಿ ನೆಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿದ್ದರೆ ಆ ಮನೆಯಲ್ಲಿ ಯಾವತ್ತಿಗೂ ಹಣದ ಕೊರತೆಯಾಗದು ಎನ್ನುತ್ತಾರೆ

ದತ್ತೂರ ಅಥವಾ ಶಮೀ ಬೇರು:

ಶಮಿ ಅಥವಾ ಕಪ್ಪು ಧಾತುರದ ಬೇರನ್ನು ಮನೆಗೆ ತಂದು ಪೂಜಾ ಸ್ಥಳದಲ್ಲಿ ಇಡುವುದರಿಂದ ಐಶ್ವರ್ಯ ಪ್ರಾಪ್ತಿಯಾಗುವುದು. ಶಿವಲಿಂಗಕ್ಕೆ ಈ ವಸ್ತುಗಳನ್ನು ಅರ್ಪಿಸುವುದರಿಂದ ಸಾಕಷ್ಟು ಸಕಾರಾತ್ಮಕತೆ ನೆಲೆಸುತ್ತದೆ. ಇದನ್ನು ನಿಮ್ಮ ಸೇಫ್‌ ಲಾಕರ್‌ ಅಥವಾ ಹಣ ಇಡುವ ಸ್ಥಳದಲ್ಲಿ ಇರಿಸಿದರೆ ಹಣದ ಸಮಸ್ಯೆ ಬಾರದು ಎನ್ನಲಾಗುತ್ತದೆ. ದತ್ತೂರವು ಶನಿ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಶನಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಿ, ಧನಾತ್ಮಕ ಪರಿಣಾಮ ಹೆಚ್ಚಿಸಲು ದತ್ತೂರದ ಬೇರನ್ನು ಮನೆಯಲ್ಲಿಟ್ಟುಕೊಳ್ಳಬಹುದು.

ಈ ದಿನದಂದು ಹುಟ್ಟಿದವರಿಗೆ ಜೀವನದಲ್ಲಿ ಯಾವ ಕೊರತೆಯೂ ಆಗೋದಿಲ್ವಂತೆ..! ಐಷಾರಾಮಿ ಲೈಫ್‌ ಇವರದ್ದು
ಕರ್ಪೂರ ಅಥವಾ ತಾಮ್ರದ ಕಲಶ:

ಮಂಗಳಕರ ಕಾರ್ಯಕ್ಕಾಗಿ ಕರ್ಪೂರವನ್ನು ಖರೀದಿಸುವುದು ಮನೆಗೆ ಸಮೃದ್ಧಿಯನ್ನು ತರುತ್ತದೆ. ಕರ್ಪೂರ ಕೊಳ್ಳುವುದರಿಂದ ಶುಭ ಮನೆ ಪ್ರವೇಶಿಸುತ್ತದೆ. ಜೊತೆಗೆ ತಾಮ್ರದ ಕಲಶವನ್ನು ಖರೀದಿಸುವುದು ಕುಟುಂಬದಲ್ಲಿ ಸಾಮರಸ್ಯವನ್ನು ತರುತ್ತದೆ. ತಾಮ್ರದ ಕಲಶದಿಂದ ಶಿವಲಿಂಗದ ಮೇಲೆ ಶಿವನ ಜಲಾಭಿಷೇಕವನ್ನು ಮಾಡುವುದರಿಂದ ಸಕಾರಾತ್ಮಕ ಪರಿಣಾಮವನ್ನು ನೀಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ