ಆ್ಯಪ್ನಗರ

ಬಯಸಿದ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಜ್ಯೋತಿಷ್ಯದ ಪ್ರಕಾರ ಏನು ಮಾಡಬೇಕು ಗೊತ್ತಾ?

ಜಗತ್ತಿನ ಬಹುತೇಕ ಎಲ್ಲ ಬೆಳವಣಿಗೆಗಳು ಇವತ್ತು ಜ್ಞಾನಾಧಾರಿತವಾಗಿವೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಜ್ಞಾನವಿದ್ದರೆ ಶಕ್ತಿಶಾಲಿ. ಜ್ಞಾನ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬಲ್ಲಿಗೆ ಜಗತ್ತು ಬಂದು ನಿಂತಿದೆ. ಯಾವುದೇ ವಿಷಯದಲ್ಲಿ ಆಳವಾದ ಜ್ಞಾನ ಪಡೆಯಬೇಕಾದರೆ ಶಿಕ್ಷಣ ಅತಿಮಹತ್ವದ ಪಾತ್ರವನ್ನು ವಹಿಸುತ್ತದೆ. ಶಿಕ್ಷಣವಿಲ್ಲದೆ ಜ್ಞಾನವಿಲ್ಲ, ಜ್ಞಾನವಿಲ್ಲದಿದ್ದರೆ ಜೀವನವಿಲ್ಲ ಎನ್ನುವ ಸಂದರ್ಭ ಬಂದಿದೆ. ಹೀಗಾಗಿಯೇ ಆಧುನಿಕ ಜಗತ್ತಿನಲ್ಲಿ ಶಿಕ್ಷಣಕ್ಕೆ ಎಲ್ಲಿಲ್ಲದ ಮಹತ್ವ ನೀಡಲಾಗುತ್ತಿದೆ.

Vijaya Karnataka Web 28 Aug 2019, 9:06 pm
ಇಂದಿನ ಪಾಲಕರು ತಮ್ಮ ಮಕ್ಕಳನ್ನು ಆದಷ್ಟು ಹೆಚ್ಚು ಶಿಕ್ಷಣವಂತರನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ಎಷ್ಟೇ ಖರ್ಚಾದರೂ ಪರವಾಗಿಲ್ಲ, ಮಕ್ಕಳು ಉತ್ತಮ ಶಾಲೆಯಲ್ಲಿ ಕಲಿಯಬೇಕು, ಅತ್ಯುತ್ತಮ ಕಾಲೇಜಿನಲ್ಲಿ ಅಡ್ಮಿಶನ್ ಪಡೆಯಬೇಕು ಎಂದು ಬಯಸುತ್ತಾರೆ. ಕೆಲಬಾರಿ ಪಾಲಕರು ಎಷ್ಟು ಬೇಕಾದಷ್ಟು ಹಣ ಖರ್ಚು ಮಾಡಲು ತಯಾರಿದ್ದರೂ ಮಕ್ಕಳಿಗೆ ಬೇಕಾದ ಕಾಲೇಜಿನಲ್ಲಿ ಸಿಗುವುದಿಲ್ಲ. ಕೇವಲ ಮನುಷ್ಯ ಪ್ರಯತ್ನ ಮಾತ್ರ ಇದಕ್ಕೆ ಕೆಲವು ಬಾರಿ ಸಾಕಾಗುವುದಿಲ್ಲ. ನಮ್ಮ ಪ್ರಯತ್ನದೊಂದಿಗೆ ಜ್ಯೋತಿಷ್ಯ ಶಾಸ್ತ್ರದ ಮೊರೆಹೋದಲ್ಲಿ ಬೇಕಾದ ಕೋರ್ಸ್ ಅಥವಾ ಕಾಲೇಜಿಗೆ ಸೇರುವ ಆಸೆ ನೆರವೇರಬಹುದು.
Vijaya Karnataka Web horoscope 2


ಕಾಲೇಜುಗಳು ಆರಂಭವಾಗುತ್ತಲೇ ಬೇಕಾದ ಕಡೆ ಸೀಟು ಸಿಗುವುದು ಅಥವಾ ಇಲ್ಲ ಎಂಬ ಬಗ್ಗೆ ಟೆನ್ಶನ್ ಆರಂಭವಾಗುತ್ತದೆ. ವಿದ್ಯಾರ್ಥಿಗಳು ಮಾತ್ರವಲ್ಲದೆ ಅವರ ಪಾಲಕರಿಗೂ ಈ ಟೆನ್ಶನ್ ತಪ್ಪಿದ್ದಲ್ಲ. ಕೆಲ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅತ್ಯುತ್ತಮ ಮಾರ್ಕ್ ಗಳಿಸಿದ್ದರೂ ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಗುವುದಿಲ್ಲ. ಹೀಗೆ ಯಾಕೆ ಆಗುತ್ತದೆ ಎಂಬುದನ್ನು ಜ್ಯೋತಿಷ್ಯದ ಮೂಲಕ ಅರಿತುಕೊಳ್ಳಬಹುದು. ಆಯಾ ಸಮಯ ಸಂದರ್ಭಗಳಲ್ಲಿ ಅದೃಷ್ಟ ಬಲವು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಾಗ ಹೀಗೆ ಬೇಡವಾದ ಘಟನೆಗಳು ಜರುಗುತ್ತವೆ.

ಈ ಸುದ್ದಿ ಓದಿ: ಜೀವನದಲ್ಲಿ ಸಂಪತ್ತು ವೃದ್ಧಿಗೆ ಹೀಗೆ ಮಾಡಿ!

ಗ್ರಹ ಗತಿಯಲ್ಲಿ ನಾಲ್ಕು ಮತ್ತು ಐದನೇ ಸುತ್ತಿನ ಅದೃಷ್ಟವು ಬಲಹೀನವಾಗಿ ದ್ದಾಗ ವಿದ್ಯಾರ್ಥಿಯು ಬೇಕಾದ ಕಾಲೇಜಿನಲ್ಲಿ ಪ್ರವೇಶ ಪಡೆಯಲು ವಿಫಲನಾಗುತ್ತಾನೆ. ಹುಟ್ಟಿದ ದಿನಾಂಕದ ಪ್ರಕಾರ ಅದೃಷ್ಟವಂತನಾಗಿದ್ದರೆ ಕಡಿಮೆ ಅಂಕ ಪಡೆದರೂ ಅಂಥ ವಿದ್ಯಾರ್ಥಿಗೆ ಉತ್ತಮ ಕಾಲೇಜಿನಲ್ಲಿ ಪ್ರವೇಶ ಸಿಗಬಹುದು.

ನಿರ್ದಿಷ್ಟ ಕೋರ್ಸ್ ಅಥವಾ ಕಾಲೇಜಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಯು ಒಂದೆರಡು ವರ್ಷಗಳ ಮುಂಚಿನಿಂದಲೇ ತಯಾರಿ ಆರಂಭಿಸಿರುತ್ತಾರೆ. ಇದರ ಜೊತೆಗೆ ಇನ್ನೂ ಕೆಲವು ಸೂತ್ರಗಳನ್ನು ಪಾಲಿಸಿದರೆ ಅಡ್ಮಿಶನ್ ಪಡೆಯುವುದು ಸುಲಭವಾಗುತ್ತದೆ.

ಇದನ್ನೂ ಓದಿ: ಸಾಲದ ಶೂಲದಿಂದ ಪಾರಾಗಲು ಜ್ಯೋತಿಷ್ಯ ಸೂತ್ರಗಳು ಯಾವುದು ಗೊತ್ತಾ?

ಬಯಸಿದ ಕಾಲೇಜಿನಲ್ಲಿ ಅಡ್ಮಿಷನ್ ಪಡೆಯಲು ಹೀಗೆ ಮಾಡಿ:
*ಒಂದು ಶುಭ ದಿನದಂದು ಬೆಳಗ್ಗೆ ಸ್ನಾನ ಮಾಡಿದ ನಂತರ ದೇವಸ್ಥಾನಕ್ಕೆ ಹೋಗಿ. ಮನಸ್ಸಿನಲ್ಲಿ ನಿಮ್ಮ ಗುರಿ, ನೀವು ಪ್ರವೇಶ ಪಡೆಯಬೇಕೆಂದಿರುವ ಕೋರ್ಸ್ ಅಥವಾ ಕಾಲೇಜು ಇವುಗಳ ಬಗ್ಗೆ ಸ್ಮರಣೆ ಮಾಡುತ್ತಾ ಒಂದು ಕೈಯಲ್ಲಿ ಒಂದು ಹಿಡಿ ಅನ್ನವನ್ನು ಇಟ್ಟುಕೊಂಡು ದೇವರ ಪ್ರಾರ್ಥನೆ ಮಾಡಿ.

*ನೀವು ಅಂದುಕೊಂಡ ಗುರಿಯನ್ನು ಸಾಧಿಸಲು ಶ್ರದ್ಧೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಪ್ರಯತ್ನಿಸುವುದಾಗಿ ದೇವರ ಮುಂದೆ ಪ್ರಮಾಣ ಮಾಡಿದಂತೆ. ಇದರಿಂದ ನಿಮ್ಮ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ.

*ಶಿಕ್ಷಣದಲ್ಲಿ ಉತ್ತಮ ಯಶಸ್ಸು ಪಡೆಯಬೇಕಾದರೆ ವಿದ್ಯಾದೇವತೆ ಸರಸ್ವತಿಯ ಅನುಗ್ರಹ ಅತಿ ಅಗತ್ಯವಾಗಿದೆ. ನವರಾತ್ರಿ ಹಾಗೂ ಶುಭ ದಿನಗಳಂದು ವಿದ್ಯಾರ್ಥಿಗಳು ಶ್ರದ್ಧೆಯಿಂದ ಸರಸ್ವತ ದೇವಿಯ ಆರಾಧನೆ ಮಾಡಬೇಕು.

*ಎಷ್ಟೇ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಪ್ರಯತ್ನಪಟ್ಟರೂ ಒಳ್ಳೆಯ ಕಾಲೇಜಿನಲ್ಲಿ ನಿಮಗೆ ಅಡ್ಮಿಷನ್ ಸಿಗಲಿಲ್ಲವೆಂದರೆ ಚಪ್ಪಲಿಗಳನ್ನು ದಾನ ಮಾಡಬೇಕು. ಶನಿವಾರದಂದು ನೀವೇ ತಯಾರಿಸಿದ ಸಾಸಿವೆ ಎಣ್ಣೆಯನ್ನು ದಾನ ಮಾಡಿ.

*ಕತ್ತಿನಲ್ಲಿ ಬೆಳ್ಳಿಯ ತಾಯತ ಧರಿಸುವುದರಿಂದ ಸಹ ನಿಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಬಡವರಿಗೆ ಹಸಿರು ವಸ್ತ್ರವನ್ನು ದಾನ ಮಾಡಬೇಕು. ಯಾವುದಾದರೂ ಸೋಮವಾರದಿಂದ ಆರಂಭಿಸಿ ಮುಂದಿನ 43 ದಿನಗಳವರೆಗೆ ಹೀಗೆ ಹಸಿರು ವಸ್ತ್ರವನ್ನು ದಾನ ಮಾಡಬೇಕು.

*ಏಳು ಮುಖದ ರುದ್ರಾಕ್ಷಿಯನ್ನು ಧರಿಸುವುದರಿಂದ ಕೂಡ ಅದೃಷ್ಟ ಹೊಂದಬಹುದು.

* ನಿಮ್ಮ ತಾಯಿ ನೀಡಿದ ಬೆಳ್ಳಿಯ ಚೇನ್ ಕತ್ತಿನಲ್ಲಿ ಧರಿಸುವುದರಿಂದ ನಿಮ್ಮ ಗುರಿ ಸಾಧನೆ ಸುಲಭವಾಗುತ್ತದೆ.

*ವರ್ಷಗಳು ಕಳೆದು ಹೋದರೂ ಬಯಸಿದ ಕಾಲೇಜಿನಲ್ಲಿ ಪ್ರವೇಶ ಸಿಗದಿದ್ದರೆ ಅಲ್ಲಿಗೆ ಆ ಗುರಿಯ ಬೆನ್ನು ಹತ್ತುವುದನ್ನು ನಿಲ್ಲಿಸಿಬಿಡಬೇಕು. ಅಂದರೆ ದೇವರು ನಿಮಗಾಗಿ ಬೇರೆ ಯಾವುದೋ ವೃತ್ತಿ ಅಥವಾ ಕ್ಷೇತ್ರವನ್ನು ನಿಗದಿ ಮಾಡಿದ್ದಾನೆ ಎಂದರ್ಥ.

*ಎಲ್ಲರೂ ಯಾವುದೋ ಕಾಲೇಜು ಅಥವಾ ಕೋರ್ಸ್‌ಗೆ ಪ್ರವೇಶ ಪಡೆಯುತ್ತಿದ್ದಾರೆ ಎಂದರೆ ನೀವೂ ಅದನ್ನೇ ಮಾಡಬೇಕಿಲ್ಲ. ನಿಮ್ಮ ಶಕ್ತಿ ಹಾಗೂ ಸಾಮರ್ಥ್ಯಗಳನ್ನು ಅರಿತುಕೊಳ್ಳಿ. ಇತರರಲ್ಲಿ ಇರದ ವಿಶೇಷ ಗುಣ ನಿಮ್ಮಲ್ಲಿ ಯಾವುವು ಇವೆ ಎಂಬುದನ್ನು ಗುರುತಿಸಿ. ನಿಮ್ಮ ಪಾಲಕರೊಂದಿಗೆ ನಿಮ್ಮ ಗುರಿಗಳ ಬಗ್ಗೆ ಮಾತುಕತೆ ನಡೆಸಿ. ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದ್ದು, ಬೇರೆ ಯಾವ ಕೋರ್ಸ್ ಮಾಡಬಹುದು ಎಂಬ ಬಗ್ಗೆ ಚಿಂತನೆ ನಡೆಸಿ.

*ಪರೀಕ್ಷೆಗಳಿಗೆ ಮುನ್ನ ಅಭ್ಯಾಸದ ಬಗ್ಗೆ ಯೋಜನೆ ತಯಾರಿಸಿಕೊಳ್ಳಿ ಹಾಗೂ ಆ ಯೋಜನೆಯ ಮೇಲೆ ಕೆಲಸ ಮಾಡಿ.

*ಬೌದ್ಧಿಕ ಸಾಮರ್ಥ್ಯ ಹೆಚ್ಚಳಕ್ಕೆ ಆದಷ್ಟು ಹೆಚ್ಚು ಹಸಿರು ಬಣ್ಣ ಉಪಯೋಗಿಸಿ. ಹೆಬ್ಬೆರಳಿಗೆ ಹಸಿರು ಬಣ್ಣದ ದಾರ ಸುತ್ತಿಕೊಳ್ಳಿ.

*ಮನೆಯಲ್ಲಿ ಅಭ್ಯಾಸ ಮಾಡಲು ಕುಳಿತಿರುವ ಪೂರ್ವ ಅಥವಾ ಉತ್ತರ- ಪೂರ್ವ ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳಿ.

*ಗಾಯತ್ರಿ ಮಂತ್ರ ಪಠಿಸುವುದರಿಂದ ಸಾಕಷ್ಟು ಪ್ರಯೋಜನಗಳಾಗುತ್ತವೆ.

*ಪರೀಕ್ಷೆಗಳು ಬರುವ ಮುಂಚೆ ಬುಧವಾರದಂದು ಕೆಲ ಹೆಸರುಕಾಳು, ಹಸಿರು ಹುಲ್ಲು, 5 ಏಲಕ್ಕಿ ಗಳನ್ನು ಒಂದು ಹಸಿರು ಬಟ್ಟೆಯಲ್ಲಿ ಸುತ್ತಿ ಅದನ್ನು ಗಣೇಶ ದೇವಸ್ಥಾನಕ್ಕೆ ತೆರಳಿ ದೇವರಿಗೆ ಅರ್ಪಿಸಿ.

*ಪರೀಕ್ಷೆ ಬರೆಯಲು ಹೋಗುವಾಗ ನಿಮ್ಮ ಎರಡು ಜೇಬುಗಳಲ್ಲಿ ಒಂದಿಷ್ಟು ಸ್ಫಟಿಕ ಹಾಗೂ ಕರ್ಪೂರ ಗಳನ್ನು ಇಟ್ಟುಕೊಳ್ಳಿ. ಇದರಿಂದ ಮನಸ್ಸಿನಲ್ಲಿನ ನಕಾರಾತ್ಮಕ ಭಾವನೆಗಳು ನಿವಾರಣೆಯಾಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

*ಅಭ್ಯಾಸದ ಕೋಣೆಯಲ್ಲಿ ಎದುರಿಗೆ ಕಾಣುವುದು ಸರಸ್ವತಿ ದೇವಿಯ ಫೋಟೋ ಹಾಕಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ