ಆ್ಯಪ್ನಗರ

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಈ ಪರಿಹಾರಗಳನ್ನು ಮಾಡಿದರೆ ಕಾಳಸರ್ಪದೋಷದಿಂದ ಮುಕ್ತಿ..!

ನಿಮ್ಮ ಜಾತಕದಲ್ಲಿ ಕಾಳಸರ್ಪದೋಷವಿದ್ದರೆ ಅದನ್ನು ತೊಡೆದುಹಾಕಲು ಬಯಸಿದರೆ, ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಕೆಲವು ಜ್ಯೋತಿಷ್ಯ ಕ್ರಮಗಳನ್ನು ಮಾಡಬೇಕು. ಆ ಪರಿಹಾರ ಕ್ರಮಗಳೇನು ಎನ್ನುವುದರ ಕುರಿತಾಗಿ ಮಾಹಿತಿ ಇಲ್ಲಿದೆ.

Vijaya Karnataka Web 12 Aug 2020, 11:36 am
ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ರಾಹು ಮತ್ತು ಕೇತು ಒಂದು ಕಡೆ ಇದ್ದರೆ ಮತ್ತು ಉಳಿದ ಎಲ್ಲಾ ಗ್ರಹಗಳು ಅವುಗಳ ಮಧ್ಯೆ ಇದ್ದರೆ, ಕಾಳಸರ್ಪ ಯೋಗವು ರೂಪುಗೊಳ್ಳುತ್ತದೆ. ಜಾತಕದಲ್ಲಿ ಕಾಳಸರ್ಪ ದೋಷವು ರೂಪುಗೊಂಡಾಗ, ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಶ್ರೀಕೃಷ್ಣನೂ ತನ್ನ ಜಾತಕದಲ್ಲಿ ಕಾಳಸರ್ಪ ದೋಷವನ್ನು ಹೊಂದಿದ್ದನು. ಈ ದೋಷವನ್ನು ತೊಡೆದುಹಾಕಲು ಶ್ರೀ ಕೃಷ್ಣನೂ ಕೂಡ ಕ್ರಮ ಕೈಗೊಳ್ಳುತ್ತಾನೆ. ಜ್ಯೋತಿಷ್ಯದ ಪ್ರಕಾರ ಕೆಲವು ಪರಿಹಾರ ಕ್ರಮಗಳನ್ನು ಮಾಡುವುದರಿಂದ, ನೀವು ಈ ದೋಷವನ್ನು ತೊಡೆದುಹಾಕಬಹುದು, ಮಾತ್ರವಲ್ಲದೆ ನಿಮ್ಮ ಜೀವನದಲ್ಲಿರುವ ಕಷ್ಟಗಳನ್ನೂ ನಿವಾರಿಸಬಹುದು. ಹಾಗಾದರೆ ಜನ್ಮಾಷ್ಟಮಿಯಂದು ಮಾಡಬೇಕಾದ ಪರಿಹಾರಗಳೇನು ಎನ್ನುವುದನ್ನು ತಿಳಿದುಕೊಳ್ಳೋಣ…
Vijaya Karnataka Web try these remedies on the day of krishna janmashtami to remove kala sarpa dosha in kannada
ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಈ ಪರಿಹಾರಗಳನ್ನು ಮಾಡಿದರೆ ಕಾಳಸರ್ಪದೋಷದಿಂದ ಮುಕ್ತಿ..!


​ನವಿಲು ಗರಿಗಳನ್ನು ಯಾವಾಗಲೂ ನಿಮ್ಮೊಂದಿಗೆ ಇಟ್ಟುಕೊಳ್ಳಿ

ಧರ್ಮಗ್ರಂಥಗಳ ಪ್ರಕಾರ, ಶ್ರೀಕೃಷ್ಣನ ಜಾತಕದಲ್ಲಿ ಕಾಳಸರ್ಪ ದೋಷ ಕೂಡ ಇತ್ತು. ಅದರ ಅಶುಭ ಪರಿಣಾಮವನ್ನು ತೆಗೆದುಹಾಕಲು, ಜ್ಯೋತಿಷಿಗಳು ಕೃಷ್ಣನು ನವಿಲುಗರಿಯನ್ನು ಹೊಂದಿರುವ ಕಿರೀಟವನ್ನು ಧರಿಸಿದ್ದನೆಂದು ಎಂದು ಹೇಳುತ್ತಾರೆ. ಭಗವಾನ್ ಕೃಷ್ಣನು ಜನಿಸಿದ್ದು ಕೂಡಾ ಸೆರೆಮನೆಯಲ್ಲಿ ಮತ್ತು ಹುಟ್ಟಿದ ತಕ್ಷಣವೇ ಅವನ ಹೆತ್ತವರಿಂದ ದೂರ ಹೋಗಬೇಕಾಯಿತು ಇದಕ್ಕೆ ಕಾರಣವೇ ಈ ದೋಷ ಎಂದು ಹೇಳಲಾಗುತ್ತದೆ.ಇದರ ದುಷ್ಪರಿಣಾಮಗಳನ್ನು ತೊಡೆದುಹಾಕಲು, ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನಿಗೆ ನವಿಲುಗರಿಯನ್ನು ಅರ್ಪಿಸಿ, ನಂತರ ಆ ಗರಿಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಇದು ಕಾಳಸರ್ಪದೋಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ರಾಹು- ಕೇತುವಿನ ಪ್ರಭಾವವು ಹೇಗೆ ಕಾಳ ಸರ್ಪದೋಷಕ್ಕೆ ಕಾರಣವಾಗುತ್ತೆ ಗೊತ್ತಾ?

​ಈ ಸ್ತೋತ್ರ ಪಠಣವು ಫಲಪ್ರದ

ಜನ್ಮಾಷ್ಟಮಿಯಂದು ಕೃಷ್ಣನನ್ನು ಪೂಜಿಸುವಾಗ ಗೋವಿಂದ ದಾಮೋದರ ಸ್ತೋತ್ರವನ್ನು ಪಠಿಸಬೇಕು. ಇದರ ಪಠಣವು ಸಂತೋಷ ಸಮೃದ್ಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ ಮತ್ತು ಅದೇ ಸಮಯದಲ್ಲಿ ಇದು ದುರುದ್ದೇಶಪೂರಿತ ಗ್ರಹಗಳ ಪರಿಣಾಮಗಳನ್ನು ಸಹ ತೆಗೆದುಹಾಕುತ್ತದೆ. ದಾಮೋದರ್ ಸ್ತೋತ್ರವನ್ನು ಪಠಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಮತ್ತು ಮನೆಯ ಸದಸ್ಯರಲ್ಲಿ ಪ್ರೀತಿಯ ಭಾವನೆ ಮೂಡುತ್ತದೆ.

​ನಕಾರಾತ್ಮಕ ಶಕ್ತಿ ದೂರವಿರುತ್ತದೆ

ಜನ್ಮಾಷ್ಟಮಿ ಪೂಜೆಯ ಸಮಯದಲ್ಲಿ, ದೇವರಿಗೆ ಕೊಳಲನ್ನು ಇರಿಸುವ ನಿಯಮ ಕೂಡ ಇದೆ. ಇದರ ಹಿಂದಿನ ಕಾರಣವೆಂದರೆ ರಾಹು-ಕೇತು ಋಣಾತ್ಮಕ ಶಕ್ತಿಯನ್ನು ಪ್ರಸಾರ ಮಾಡುತ್ತದೆ ಎಂದು ನಂಬಲಾಗಿದೆ, ಕಾಳ ಸರ್ಪ ದೋಷವು ಇದರೊಂದಿಗೆ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತದೆ. ಯಾಗುತ್ತದೆ. ಕೊಳಲು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವುದರಿಂದ ಕೊಳಲನ್ನು ಶ್ರೀಕೃಷ್ಣನಿಗೆ ಅರ್ಪಿಸಬೇಕು. ಮರುದಿನ, ಕೊಳಲನ್ನು ಮನೆಯ ಮುಂದೆ ನೇತುಹಾಕಿ ಅಥವಾ ದೇವರ ಬಳಿ ಇಟ್ಟುಕೊಂಡು ನಿಯಮಿತವಾಗಿ ಪೂಜೆ ಮಾಡಿ.

ಪಿತೃ ದೋಷವೆಂದರೆ ಪೂರ್ವಜರ ಶಾಪವೇ? ದೋಷಕ್ಕೆ ಕಾರಣ ಮತ್ತು ಪರಿಹಾರ ಕ್ರಮಗಳು ಇಲ್ಲಿವೆ ನೋಡಿ

​ಈ ದೇವಾಲಯದ ಭೇಟಿಯಿಂದ ಕಾಳಸರ್ಪದೋಷ ಪರಿಹಾರ

ಜನ್ಮಾಷ್ಟಮಿ ಪೂಜೆಯ ಜೊತೆಗೆ, ಕಾಳಿಂಗ ಹಾವಿನ ಮೇಲೆ ಶ್ರೀಕೃಷ್ಣ ನರ್ತಿಸುವ ಚಿತ್ರವನ್ನು ಇರಿಸಿ. ಇದು ಕಾಳಸರ್ಪ ದೋಷವನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ. ಇದರೊಂದಿಗೆ ನೀವು ಮಥುರಾದಲ್ಲಿರುವ ಕಾಳಿಯಾ ನಾಗ್ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಈ ದೇವಾಲಯದ ವಿಶೇಷತೆಯೆಂದರೆ, ಕಾಳಿಯಾ ಹಾವು ಕೃಷ್ಣನನ್ನು ಕಂಡು ಹೆದರಿ ಓಡಲು ಪ್ರಾರಂಭಿಸಿದಾಗ, ಕೃಷ್ಣನ ಶಾಪದಿಂದ ಕಲ್ಲಾಗಿ ಹೋಯಿತು. ಈ ದೇವಾಲಯದಲ್ಲಿ ಕಲ್ಲಾಯಿತೆಂದು ಹೇಳಲಾದ ಕಾಳಿಂಗ ಹಾವಿನ ಕಲ್ಲಿನ ಮೂರ್ತಿ ಇಂದಿಗೂ ಇದೆ. ಇದನ್ನು ದರ್ಶನ ಮಾಡುವ ಮೂಲಕವೂ ಕಾಲಸರ್ಪ ದೋಷದಿಂದ ಪರಿಹಾರ ಪಡೆಯುತ್ತಾರೆ.

​ಕೃಷ್ಣನ ಪೂಜೆ

ಜನ್ಮಾಷ್ಟಮಿಯಂದು ಕೃಷ್ಣನನ್ನು ಪೂಜಿಸುವಾಗ, ಬೆಳ್ಳಿ ಅಥವಾ ಗಾಜಿನ ಗೋಲಿಯನ್ನು ಅರ್ಪಿಸಬೇಕು. ಪೂಜಾ ನಂತರ ಈ ಗೋಲಿಯನ್ನು ನಿಮ್ಮೊಂದಿಗೆ ಇರಿಸಿ. ಇದರಿಂದಲೂ ಕಾಳಸರ್ಪದೋಷ ನಿವಾರಣೆಯಾಗುವುದು. ಅಲ್ಲದೇ, ಕಾಳಸರ್ಪ ದೋಷವಿಲ್ಲದವರು ಕೂಡಾ ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಗಾಜು ಕೇತುವಿಗೆ ಸಂಬಂಧಿಸಿದೆ, ಆದ್ದರಿಂದ ಅದರ ದುರುದ್ದೇಶಪೂರಿತ ಪರಿಣಾಮದಿಂದ ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ