ಮೇಷ: ಉನ್ನತ ಅಧಿಕಾರಿಗಳ ಭೇಟಿಯಿಂದಾಗಿ ಸಮಸ್ಯೆಗಳು ಇತ್ಯರ್ಥಗೊಳ್ಳುವವು. ಅಟೋಮೊಬೈಲ್, ಟ್ರಾನ್ಸ್ಪೋರ್ಟ್ ವ್ಯಾಪಾರಿಗಳಿಗೆ ಅಧಿಕ ಲಾಭಾಂಶ ಕಂಡುಬರುವುದು. ಗುರುಹಿರಿಯರ ಆಶೀರ್ವಾದ ಪಡೆಯುವುದರಿಂದ ಮಾನಸಿಕ ನೆಮ್ಮದಿ ಪಡೆಯುವಿರಿ.
ವೃಷಭ : ಉದ್ಯೋಗ ಅರಸುತ್ತಿರುವವರಿಗೆ ಉದ್ಯೋಗ ಲಭಿಸುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಉತ್ತಮ ಕಾಲವಿದೆ. ಕುಲದೇವರನ್ನು ಪ್ರಾರ್ಥಿಸಿರಿ. ಮತ್ತು ಉತ್ತಮ ಆರೋಗ್ಯವನ್ನು ಹೊಂದಿರಿ. ಏಕವ್ಯಕ್ತಿಯನ್ನು ಆರೋಗ್ಯದ ವಿಷಯದಲ್ಲಿ ನಂಬುವುದು ಒಳ್ಳೆಯದು.
ಮಿಥುನ: ಕೆಲವು ಘಟನೆಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವುದು. ಇದರಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗುವುದು. ರಾಜಕೀಯ ಕ್ಷೇತ್ರದಲ್ಲಿ ಗುರುತಿಸಲ್ಪಡುವಿರಿ. ಕೌಟುಂಬಿಕವಾಗಿ ನೆಮ್ಮದಿಯ ದಿನ. ಆರ್ಥಿಕ ಸ್ಥಿತಿ ಉತ್ತಮ.
ಕಟಕ: ಇಂದು ನಿಮ್ಮ ಕಾರ್ಯಗಳಲ್ಲಿ ತಾಳ್ಮೆ ವಹಿಸಿರಿ. ಅವಸರದಿಂದ ಕಾರ್ಯ ಸಿದ್ಧಿಯಾಗುವುದಿಲ್ಲ. ಒಳ್ಳೆಯ ಸುದ್ದಿ ಕೇಳುವಿರಿ. ಮುಂದಿನ ದಿನಗಳು ಉತ್ತಮವಾಗಿದ್ದು ಮಹತ್ತರ ಕಾರ್ಯಗಳನ್ನು ಯೋಜಿಸುವಿರಿ.
ಸಿಂಹ: ಮನಸ್ಸಿನ ತಾಕಲಾಟದಲ್ಲಿ ಗೊಂದಲ ಏರ್ಪಡುವುದು. ದೈವ ಕಾರ್ಯಗಳು ಮನಸ್ಸಿಗೆ ನೆಮ್ಮದಿ ನೀಡುವುದು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ದೂರ ಪ್ರಯಾಣದ ಸಾಧ್ಯತೆ ಇರುವುದು. ಇಂದು ಲಾಭಾಂಶ ಕಡಿಮೆ.
ಕನ್ಯಾ: ಹೊಸ ಯೋಜನೆಗಳ ಬಗ್ಗೆ ಚಿಂತನೆ. ಮಿತ್ರರ ಸಹಕಾರ ದೊರೆಯುವುದು. ವ್ಯಾಪಾರ ವ್ಯವಹಾರಗಳು ಸರಾಗವಾಗಿ ನಡೆಯುವುದು. ಅಧಿಕ ತಿರುಗಾಟದಿಂದ ದೇಹಾಲಸ್ಯ ಉಂಟಾಗುವುದು. ಬಂಧುಮಿತ್ರರ ಆಗಮನದಿಂದ ಸಂತಸ.
ತುಲಾ: ಮನೋಕಾಮನೆಗಳು ಪೂರ್ಣಗೊಳ್ಳುವವು. ಸೌಭಾಗ್ಯವು ಧನಲಾಭವು. ಸಮಾಜದಲ್ಲಿ ಕೀರ್ತಿಯು, ಮಕ್ಕಳ ಅಭಿವೃದ್ಧಿಯ ಕಡೆ ಗಮನ ಕೊಡಿರಿ. ಬೇರೆ ಮಕ್ಕಳು ತಪ್ಪು ಮಾಡಿದ್ದು ಆ ತಪ್ಪಿನ ಹೊರೆಯನ್ನು ನಿಮ್ಮ ಮಕ್ಕಳು ಹೊರಬೇಕಾಗುವುದು.
ವೃಶ್ಚಿಕ: ವದಂತಿ ಹರಡುವವರನ್ನು ಸಮೀಪ ಇಟ್ಟುಕೊಳ್ಳಬೇಡಿರಿ. ಒಂದು ಚಿಕ್ಕ ವದಂತಿಯು ನಿಮ್ಮ ತೇಜೋವಧೆಯನ್ನು ಮಾಡಲಿರುವುದು. ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿರಿ. ಸಂಜೆಯ ವೇಳೆಗೆ ಆ ವದಂತಿಯು ಸುಳ್ಳೆಂದು ಗೋಚರಿಸುವುದು.
ಧನಸ್ಸು: ನಿಮ್ಮ ಹಿತಚಿಂತಕರನ್ನು ಅಥವಾ ನಿಮ್ಮನ್ನು ಬೆಂಬಲಿಸುವ ಸ್ನೇಹಿತರನ್ನು ಸಂಪರ್ಕಿಸುವುದರಿಂದ ನಿಮ್ಮ ಮನಸ್ಸಿನ ತಾಕಲಾಟಕ್ಕೆ ಉತ್ತರ ದೊರೆಯುವುದು. ಮತ್ತು ಹಣಕಾಸಿನ ನೆರವು ದೊರೆಯುವುದು. ಆರೋಗ್ಯ ಉತ್ತಮವಾಗಿರುವುದು.
ಮಕರ: ಕೆಲವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ವೈಪರೀತ್ಯ ಕಂಡುಬರುವುದು. ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಹಿನ್ನಡೆ. ಹಣಕಾಸಿನ ಮುಗ್ಗಟ್ಟನ್ನು ಎದುರಿಸುವಿರಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದಿರಿ.
ಕುಂಭ: ಆದದ್ದೆಲ್ಲಾ ಒಳಿತೇ ಆಯಿತು ಎಂಬಂತೆ ಈದಿನ ಏನೇ ಆದರೂ ಅದು ನಿಮ್ಮ ಒಳ್ಳೆಯದಕ್ಕೆ ಆಗಲಿದೆ. ವೃಥಾ ಚಿಂತನೆ ಮಾಡದೆ ಸಕರಾತ್ಮಕವಾಗಿ ಚಿಂತಿಸಿ ಯಶಸ್ಸನ್ನು ಹೊಂದುವಿರಿ.
ಮೀನ: ಇಂದು ನಿಮಗೆ ಮರೆಯಲಾರದ ದಿನ. ನಿಮ್ಮ ಸಾಮಾಜಿಕ ವರ್ಚಸ್ಸು ಹೆಚ್ಚಲಿದೆ. ಬಂಧು ಬಳಗದವರು ನಿಮಗೆ ಸಹಕಾರಿಯಾಗಿ ನಿಲ್ಲುವರು. ಖರ್ಚು-ವೆಚ್ಚಗಳ ಬಗ್ಗೆ ಕೈ ಹಿಡಿತವಿರಲಿ.