ಆ್ಯಪ್ನಗರ

Nithya Bhavishya: ಕಟಕ ರಾಶಿಯವರೇ ಗಾಳಿಗೆ ಗುದ್ದಿ ಮೈನೋಯಿಸಿಕೊಳ್ಳದಿರಿ

ಧನುಸ್ಸು ರಾಶಿಯವರರೇ, ನಿಮಗೆ ನಿಮ್ಮ ಸ್ವಂತ ಬಲದ ಮೇಲೆ ನಂಬಿಕೆ ಇರಬೇಕು. ಆದರೆ ಕಾರ್ಯ ಸಾಫಲ್ಯತೆ ತಿಳಿದಷ್ಟು ಸುಲಭವಾಗಿ ಇರಲಾರದು. ಆಂಜನೇಯ ಸ್ತೋತ್ರ ಪಠಿಸಿ. ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡುವುದು ಒಳಿತು.

Vijaya Karnataka 13 Apr 2019, 7:21 am
ಮೇಷ:- ಸುಡು ಕೆಂಡಗಳನ್ನು ಕಟ್ಟಿಕೊಂಡೇ ತಿರುಗಾಡುತ್ತಿದ್ದೀರಿ. ಹಾಗಾಗಿ ಯಾವುದೇ ಕಾರ್ಯ ಮಾಡುವ ಮೊದಲು ನಿಧಾನವಾಗಿ ನಿರ್ಣಯ ತೆಗೆದುಕೊಂಡು ನಂತರ ಮುನ್ನುಗ್ಗುವುದು ಒಳ್ಳೆಯದು. ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗತಿಗಳು ಉತ್ತಮ ಸ್ಥಾನದಲ್ಲಿ ಸಂಚರಿಸದೆ ಅನೇಕ ದುಃಖ ಪ್ರಸಂಗಗಳನ್ನು ಉಂಟು ಮಾಡುತ್ತಿವೆ.

ವೃಷಭ:- ಜೀವನವಿಡೀ ಬರೀ ಹೊಯ್ದಾಟಗಳು ಎಂದು ದಿಗಿಲುಪಡುವ ಸಂಭವ ಜಾಸ್ತಿ ಇದೆ. ಆದರೆ ಇದಕ್ಕೆ ಮಕ್ಕಳಿಂದಲೆ ಪರಿಹಾರ ಸಾಧ್ಯವಿದೆ. ಮಕ್ಕಳು ತಮ್ಮ ಶೈಕ್ಷ ಣಿಕ ಕ್ಷೇತ್ರದಲ್ಲಿ ಮುಂದೆ ಬರುವರು.

ಮಿಥುನ:-ವಿನಾಕಾರಣ ಬಳಸು ದಾರಿಗಳನ್ನು ಹಿಡಿದು ಬಳಲಿಕೆಗೆ ತುತ್ತಾಗದಿರಿ. ತಿಳಿದವರ ಬಳಿ ಮಾಹಿತಿ ಪಡೆಯಿತಿ. ಇದರಿಂದ ಗೆಲ್ಲುವ ಹೇರಳ ಅವಕಾಶಗಳು ಇವೆ. ಮಾತಿನ ಭರದಲ್ಲಿ ಸುಳ್ಳು ಆಶ್ವಾಸನೆ ನೀಡದಿರಿ.

ಕಟಕ:- ಗಾಳಿಗೆ ಗುದ್ದಿ ಮೈನೋಯಿಸಿಕೊಳ್ಳದಿರಿ. ನಿಮ್ಮ ಕಾರ್ಯದಲ್ಲಿನ ಉತ್ತಮ ತರ್ಕವು ನಿಮ್ಮ ಸಾಮರ್ಥ್ಯ‌ಕ್ಕೆ ದಾರಿ ತೋರಲಿದೆ. ಕೆಲವರು ವಿದೇಶ ಪ್ರವಾಸವನ್ನು ಮಾಡುವ ಸಾಧ್ಯತೆ ಇದೆ.

ಸಿಂಹ:- ನಿಮ್ಮ ವಿಚಾರದಲ್ಲಿ ಅನುಪಮ ಅಭಿಮಾನ, ಆದರ ಇಟ್ಟುಕೊಂಡ ನಿಮ್ಮ ಆಪ್ತ ಬಂಧುವರ್ಗ ನಿಮಗೆ ಸಹಾಯ ಸಹಕಾರ ನೀಡುವರು. ಮಕ್ಕಳ ನಡವಳಿಕೆಗಳು ನಿಮಗೆ ಬೇಸರ ತರಿಸುವ ಸಾಧ್ಯತೆ ಇದೆ.

ಕನ್ಯಾ:- ನಿಮ್ಮನ್ನು ಹೀಯಾಳಿಸುವ ಜನ ಎದುರಾಗುವರು. ಆದರೆ ಅದಕ್ಕಾಗಿ ವ್ಯಥೆ ಪಡದಿರಿ. ನಿಂದಿಸಿದ ಜನರೇ ಶರಣಾಗುವ ಕಾಲ ಸನ್ನಿಹಿತವಾಗಿದೆ. ಅವರೆಲ್ಲರೂ ನಿಮ್ಮ ವಿಚಾರಧಾರೆಗೆ ಬೆಲೆ ನೀಡುವರು.

ತುಲಾ:- ಅಡಕೆ ಕದ್ದಮಾನ ಆನೆ ಕೊಟ್ಟರೂ ಬರದು. ಹಾಗಾಗಿ ನಿಮ್ಮ ನಡೆ ನುಡಿಯಲ್ಲಿ ಬಹು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಅಲ್ಪ ಸೋಲನ್ನೆ ಕಂಡು ಗಹಗಹಿಸಿ ನಗುವವರನ್ನು ನಿರ್ಲಕ್ಷಿಸುವುದು ಒಳ್ಳೆಯದು.

ವೃಶ್ಚಿಕ:- ಹೈರಾಣಾಗುವ ಬೆಳವಣಿಗೆಗಳು ಕಂಡುಬರುತ್ತವೆ. ಮಾತು ಬೆಳ್ಳಿ, ಮೌನ ಬಂಗಾರ ಎಂದರು ಹಿರಿಯರು. ಆದಷ್ಟು ಮೌನವಾಗಿರಿ. ಇದರಿಂದ ಅನುಕೂಲವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಧನುಸ್ಸು:- ನಿಮಗೆ ನಿಮ್ಮ ಸ್ವಂತ ಬಲದ ಮೇಲೆ ನಂಬಿಕೆ ಇರಬೇಕು. ಆದರೆ ಕಾರ್ಯ ಸಾಫಲ್ಯತೆ ತಿಳಿದಷ್ಟು ಸುಲಭವಾಗಿ ಇರಲಾರದು. ಆಂಜನೇಯ ಸ್ತೋತ್ರ ಪಠಿಸಿ. ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡುವುದು ಒಳಿತು.

ಮಕರ:- ಗುರು ಒಲಿದರೆ ಕೊರಡು ಕೊನರುವುದಯ್ಯಾ ಎಂಬಂತೆ ಗುರುವಿನ ಶುಭ ಸಂಚಾರದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ವಿವಿಧ ಮೂಲಗಳಿಂದ ಹಣಕಾಸು ಬರುವುದು. ಮನಸ್ಸಿಗೆ ನೆಮ್ಮದಿ ಮೂಡುವುದು.

ಕುಂಭ:- ಪರಿಪೂರ್ಣವಾದುದು ಇನ್ನು ನಿಮಗೆ ದಕ್ಕಿಲ್ಲ. ಅದಕ್ಕಾಗಿ ಚಾತಕಪಕ್ಷಿಯಂತೆ ತಾಳ್ಮೆಯಿಂದ ಕಾಯುವುದು ಒಳಿತು. ಗುರುವಿನ ಸ್ತೋತ್ರ ಪಠಿಸಿ. ಗುರುವಿನ ಒಲುಮೆ ದೊರೆತ ತಕ್ಷ ಣ ನಿಮ್ಮನ್ನು ಯಾರೂ ಪ್ರಶ್ನಿಸುವುದಿಲ್ಲ.

ಮೀನ:- ಕೃಪಾಸಿಂಧುವಾದ ಭಗವಾನ್‌ ಶ್ರೀಹರಿಯನ್ನು ಆರಾಧಿಸಿ. ಆತನ ಅನುಗ್ರಹದಿಂದ ಲಕ್ಷ್ಮಿ ಆಗಮನದ ದಾರಿ ಸುಲಲಿತವಾಗುವುದು. ಹೆಣ್ಣುಮಕ್ಕಳಿಗೆ ಗೌರವ ಕೊಡುವುದನ್ನು ಮರೆಯದಿರಿ. ಸಾಧ್ಯವಾದರೆ ಕುಮಾರಿ ಪೂಜೆ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ