ಆ್ಯಪ್ನಗರ

Nithya Bhavishya: ಮೇಷ ರಾಶಿಯವರೇ ಜನತೆಗೆ ಭರವಸೆ ನೀಡುವ ನೆಪದಲ್ಲಿ ಕೈಲಿ ಆಗದ ಭರವಸೆಗಳನ್ನು ನೀಡದಿರಿ

ಧನುಸ್ಸುರಾಶಿಯವರೇ ಕೆಲವು ಕ್ಷುಲ್ಲಕ ವಿಚಾರಗಳನ್ನು ಮೇಲೆತ್ತಿದ ಸಹೋದರರಿಂದ ಮನಸ್ಸಿಗೆ ಖೇದ ಉಂಟಾಗುವ ಸಾಧ್ಯತೆ ಇದೆ. ಮನೋವೇಗಿಯಾದ ಆಂಜನೇಯ ಸ್ವಾಮಿಯನ್ನು ಸ್ಮರಿಸುವುದರಿಂದ ಬಹುತೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ.

Vijaya Karnataka 18 Sep 2019, 5:28 am
ಮೇಷ:- ನಿಮ್ಮನ್ನು ವಿಚಲಿತಗೊಳಿಸಲು ಸನ್ನದ್ಧರಾಗಿಯೇ ವಿರೋಧಿಗಳು ಆಟ ಆಡುತ್ತಾರೆ. ಹಾಗಾಗಿ ಆದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ಜನತೆಗೆ ಭರವಸೆ ನೀಡುವ ನೆಪದಲ್ಲಿ ಕೈಲಿ ಆಗದ ಭರವಸೆಗಳನ್ನು ನೀಡದಿರಿ. ಇದರಿಂದ ಅಪಹಾಸ್ಯಕ್ಕೆ ಗುರಿಯಾಗುವಿರಿ.
Vijaya Karnataka Web astrology


ವೃಷಭ:- ದೂರದ ಊರಿನ ಪ್ರವಾಸ ದಿಢೀರನೆ ಹಮ್ಮಿಕೊಳ್ಳಬೇಕಾಗುವುದು. ಹಾಗಾಗಿ ಈಗಿನಿಂದಲೇ ತಯಾರಿ ನಡೆಸುವುದು ಒಳ್ಳೆಯದು. ಮಕ್ಕಳ ಕಡೆಯಿಂದ ಸುವಾರ್ತೆ ಕೇಳುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಮಿಥುನ:- ಸಕಲ ಕಾರ್ಯವು ಮುಗಿಯಿತು ಎನ್ನುವಷ್ಟರಲ್ಲೇ ಮತ್ತೊಂದಿಷ್ಟು ಕೆಲಸಗಳು ತಯಾರಾಗಿ ಇರುತ್ತದೆ. ಮಾಡುತ್ತಿರುವ ಕೆಲಸವನ್ನು ಪೂರ್ಣಗೊಳಿಸಿ ಹೊಸ ಕೆಲಸವನ್ನು ಆರಂಭಿಸುವುದು ಒಳ್ಳೆಯದು. ಅರ್ಧಂಬರ್ಧ ಆಗಿರುವ ಕೆಲಸಗಳ ಕಡೆ ಹೆಚ್ಚಿನ ಗಮನ ನೀಡಿ.

ಕಟಕ:- ಕ್ರೀಡಾಕ್ಷೇತ್ರದಲ್ಲಿರುವವರಿಗೆ ಅಲ್ಪ ಹಿನ್ನಡೆ ಕಂಡು ಬರುವುದು. ಬೆಳ್ಳಿ-ಬಂಗಾರದ ವ್ಯಾಪಾರಸ್ಥರಿಗೆ ತುಸು ಚೇತರಿಕೆ ಕಂಡು ಬರುವುದು ಮತ್ತು ಹಣಕಾಸಿನ ಪರಿಸ್ಥಿತಿಯು ಸುಧಾರಣೆಗೊಳ್ಳುವುದು. ವಿದೇಶ ಪ್ರವಾಸ ಮಾಡಲು ಯೋಚಿಸುವವರಿಗೆ ಉತ್ತಮ ಕಾಲ.

ಕನ್ಯಾ ರಾಶಿಯವರೇ ನಿಮ್ಮ ಬದುಕಿನಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ಮಹತ್ತರ ತಿರುವಿಗೆ ಕಾರಣವಾಗಲಿವೆ: ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ಸಿಂಹ:- ಆನೆ ನಡೆದದ್ದೆ ದಾರಿ ಎಂಬಂತೆ ನೀವು ಕೆಲವು ವಿಚಾರಗಳಲ್ಲಿಯಾರ ಮಾತನ್ನೂ ಆಲಿಸುವುದಿಲ್ಲ. ಇದರಿಂದ ಮುಂದೆ ಸಮಸ್ಯೆಯ ಸುಳಿಯಲ್ಲಿಸಿಲುಕಿಕೊಳ್ಳುವ ಸಾಧ್ಯತೆ ಇದೆ. ಬೆಂಬಲಿಗರ ಸಲಹೆಯಂತೆ ಮುಂದುವರಿಯುವುದು ಒಳ್ಳೆಯದು.

ಕನ್ಯಾ:- ನಿಮ್ಮದು ಮೃದು ಮನಸ್ಸು ಮತ್ತು ನೇರ, ನಿಷ್ಠುರತನದ ಮಾತುಕತೆ. ಹಾಗಾಗಿ ಕೆಲವರು ನಿಮ್ಮ ಬಳಿ ಮಾತನಾಡಲು ಹಿಂಜರಿಯುವರು. ನಿಮ್ಮ ಅಂತರಂಗವನ್ನು ಅರಿತ ಕೆಲವರು ನಿಮ್ಮನ್ನು ಹಾಡಿಹೊಗಳುವರು. ನಿಮ್ಮ ನಿಷ್ಠೆಯೇ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು.

ತುಲಾ:- ನಿಮಗೇ ತಿಳಿಯದಂತಹ ವಿಷಯವೊಂದನ್ನು ನಿಮ್ಮ ಮಕ್ಕಳು ಬಹಿರಂಗಗೊಳಿಸಿ ಹರ್ಷವನ್ನುಂಟು ಮಾಡುವರು. ಇದರಿಂದ ಮಕ್ಕಳ ಮೇಲೆ ಪ್ರೀತಿ, ಮಮತೆ ಹೆಚ್ಚಾಗುವುವು. ಕಚೇರಿಯ ವಾತಾವರಣ ನಿಮಗೆ ಪೂರಕವಾಗಿರುವುದು.

ವೃಶ್ಚಿಕ:- ಬಹು ನಿರೀಕ್ಷಿತವಾದ ವಿಷಯವೊಂದು ನಿಮ್ಮ ಪರವಾಗಿ ಘಟಿಸುವುದರಿಂದ ಹೆಚ್ಚಿನ ಸಂತೋಷ, ಸಂಭ್ರಮ ಪಡೆಯುವಿರಿ. ಸಮಾಜದಲ್ಲಿಗೌರವ, ಆದರಗಳು ಸಿಗುವುವು. ಹಣಕಾಸಿನ ಸ್ಥಿತಿಯಲ್ಲಿಪ್ರಗತಿ ಕಂಡುಬರುವುದು.

ಧನುಸ್ಸು:- ಕೆಲವು ಕ್ಷುಲ್ಲಕ ವಿಚಾರಗಳನ್ನು ಮೇಲೆತ್ತಿದ ಸಹೋದರರಿಂದ ಮನಸ್ಸಿಗೆ ಖೇದ ಉಂಟಾಗುವ ಸಾಧ್ಯತೆ ಇದೆ. ಮನೋವೇಗಿಯಾದ ಆಂಜನೇಯ ಸ್ವಾಮಿಯನ್ನು ಸ್ಮರಿಸುವುದರಿಂದ ಬಹುತೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಮಕರ:- ಎಲ್ಲರೊಂದಿಗೂ ವಾದ-ವಿವಾದಕ್ಕೆ ನಿಲ್ಲದಿರಿ. ಅದರಲ್ಲೂವಿರುದ್ಧ ಲಿಂಗಿಗಳ ಸಂಗಡ ಚಾಣಾಕ್ಷತನದಿಂದ ಮಾತನಾಡುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿಸುಖಾಸುಮ್ಮನೆ ಅಪವಾದಗಳನ್ನು ಮೈಮೇಲೆ ಎಳೆದುಕೊಳ್ಳುವಿರಿ.

ಕುಂಭ:- ಮೇಲಧಿಕಾರಿಗಳು ನಿಮ್ಮ ಬಳಿ ಬಹು ಮುಖ್ಯವಾದ ವಿಚಾರದಲ್ಲಿಸಲಹೆ ಕೇಳಬಹುದು. ಉತ್ತಮ ಸಂಗತಿಯನ್ನು ತಿಳಿಸಿ. ಇದರಿಂದ ನಿಮ್ಮ ಮೇಲೆ ಹೆಚ್ಚಿನ ಅಭಿಮಾನ ಮೂಡುವುದು. ನಿಮ್ಮ ಸಣ್ಣಪುಟ್ಟ ಕೆಲಸಗಳು ಬೇಗನೆ ಈಡೇರುವುವು.

ಮೀನ:- ನಿಮ್ಮೆದುರು ನಿಮ್ಮಂತೆ ಮಾತನಾಡಿ ಹಿಂಬದಿಯಲ್ಲಿನಿಮ್ಮನ್ನು ಟೀಕಿಸುವ ಗೆಳೆಯರ ಗುಂಪು ನಿಮ್ಮನ್ನು ಭೇಟಿ ಮಾಡಲಿದೆ. ಈ ಬಗ್ಗೆ ನೀವು ಚಾಣಾಕ್ಷ ನಡೆಯನ್ನು ಪ್ರದರ್ಶಿಸುವುದರಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಅವರು ವಾಪಸ್ಸು ಹೋಗುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ