ಆ್ಯಪ್ನಗರ

Nithya Bhavishya: ಕುಂಭ ರಾಶಿಯವರಿಗೆ ಶ್ರಮಕ್ಕೆ ಸೂಕ್ತ ಪ್ರತಿಫಲ

ಬೆಳಕು ಮುಗಿದು ಸಂಜೆ ಆವರಿಸುವಷ್ಟರಲ್ಲಿ ಬದಲಾವಣೆ ಆಗದು. ಆದಾಗ್ಯೂ ಬೆಳಗ್ಗೆ ಇದ್ದ ಭಯ ಸಂಜೆಯ ವೇಳೆಯಲ್ಲಿ ಇರಲಾರದು. ಮಿಥುನ ರಾಶಿಯವರು ನವಗ್ರಹ ದೇವತೆಗಳನ್ನು ಆರಾಧನೆ ಮಾಡಿ. ಆಶ್ವತ್ಥ ಮರ ಪ್ರದಕ್ಷಿಣೆ ಹಾಕಿ.

Vijaya Karnataka 19 Jan 2019, 7:37 am
ಮೇಷ: ವಾರದ ಆರಂಭದ ದಿನದಲ್ಲಿ ಯೋಚಿಸಿದ್ದ ಪ್ರವಾಸವನ್ನು ಇಂದು ನಿರಾತಂಕವಾಗಿ ಮಾಡಬಹುದು. ವಾರಾಂತ್ಯದ ರಜಾ ದಿನಗಳಲ್ಲಿ ನಿಮ್ಮ ಮನಸ್ಸಿಗೆ ಒಪ್ಪುವ ಕ್ಷೇತ್ರಗಳಿಗೆ ಭೇಟಿ ನೀಡಲು ಮುಂದಾಗುವಿರಿ. ಇದರಿಂದ ಮನಸ್ಸು ಪ್ರಫುಲ್ಲವಾಗುವುದು.

ವೃಷಭ: 'ಅಂಜಿಕಿನ್ಯಾತಕಯ್ಯಾ, ಹನುಮನ ನೆನೆದರೆ ಹಾರಿ ಹೋಗುವುದು ಪಾಪ' ಎಂದು ದಾಸರು ಹಾಡಿದ್ದಾರೆ. ಅಂತೆಯೇ ಮಾರುತಿಯ ದರ್ಶನ, ಆತನ ಸ್ತೋತ್ರ ಪಠಿಸಿ, ಮನಸ್ಸಿನ ತುಮುಲಗಳನ್ನು ದೂರ ಮಾಡಿ.

ಮಿಥುನ: ಬೆಳಕು ಮುಗಿದು ಸಂಜೆ ಆವರಿಸುವಷ್ಟರಲ್ಲಿ ಬದಲಾವಣೆ ಆಗದು. ಆದಾಗ್ಯೂ ಬೆಳಗ್ಗೆ ಇದ್ದ ಭಯ ಸಂಜೆಯ ವೇಳೆಯಲ್ಲಿ ಇರಲಾರದು. ನವಗ್ರಹ ದೇವತೆಗಳನ್ನು ಆರಾಧನೆ ಮಾಡಿ. ಆಶ್ವತ್ಥ ಮರ ಪ್ರದಕ್ಷಿಣೆ ಹಾಕಿ.

ಕಟಕ: ವಿವೇಕಿಗಳಾದ ಮಕ್ಕಳಿಗೆ ಯಶಸ್ಸು ದೊರೆಯಲಿದೆ. ಉಪಯುಕ್ತವಾದ ಸಲಹೆ ಸಹಕಾರಗಳು ಮಕ್ಕಳಿಗೆ ದೊರೆಯುವುದರಿಂದ ಅವರು ಕೂಡಾ ಆನಂದಭರಿತ ದಿನವನ್ನು ಕಳೆಯುವರು.

ಸಿಂಹ: ಮನಸ್ಸಿನ ದುಗುಡಗಳು ಗದ್ದಲದ ಸಂತೆಯಲ್ಲಿ ಇದ್ದದ್ದೆ. ಆದರೆ ಇಂದು ಅಂತಹುದೇ ರಗಳೆಯಿಂದ ಹೊರಬರುವಿರಿ. ಅತ್ಯಂತ ಆತ್ಮೀಯ ಸ್ನೇಹಿತರ ಸಹಕಾರ ದೊರೆಯುವುದು. ಇದರಿಂದ ಜೀವನದಲ್ಲಿ ಹೊಸ ಉತ್ಸಾಹ ಮೂಡುವುದು.

ಕನ್ಯಾ: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ ಎಂಬ ಮಾತಿನಂತೆ ನೀವು ದಿಢೀರನೆ ಶ್ರೀಮಂತರಾಗುವ ಎಲ್ಲಾ ಲಕ್ಷ ಣಗಳು ಕಂಡು ಬರುವವು. ಆದರೆ ನಿಮ್ಮ ವಿವೇಕವನ್ನು ಸರಿಯಾದ ದಿಕ್ಕಿನಲ್ಲಿ ಚಿಂತಿಸುವಂತೆ ಮಾಡಿ. ಒಳಿತಾಗುವುದು.

ತುಲಾ: ಗುರು ಹಿರಿಯರ ಆಶೀರ್ವಾದ ಪಡೆಯಿರಿ. 16ರ ವಯಸ್ಸು ಅದು ಹುಚ್ಚು ಕೋಡಿಯ ಮನಸ್ಸು ಎನ್ನುವಂತೆ ಯೌವ್ವನದ ಹುರುಪಿನಲ್ಲಿ ಹಲವು ತಪ್ಪ್ಪುಗಳು ನುಸುಳುವ ಸಾಧ್ಯತೆ ಇದೆ. ಹಿರಿಯರ ವಚನದಂತೆ ನಡೆದುಕೊಂಡಲ್ಲಿ ಸಮಾಜದ ಗೌರವಕ್ಕೆ ಪಾತ್ರರಾಗುವಿರಿ.

ವೃಶ್ಚಿಕ:
ಶನಿಕಾಟದ ತೀವ್ರತರವಾದ ಬಿರುಗಾಳಿ ಇದ್ದರೂ ಗುರುಬಲ ಇರುವುದರರಿಂದ ನಿಮ್ಮ ಕೆಲಸಗಳು ಸರಾಗವಾಗಿ ಆಗುವವು. ಈಶ್ವರ ದೇವಸ್ಥಾನ ಇಲ್ಲವೆ ಶನೇಶ್ಚರ ದೇವಾಲಯಕ್ಕೆ ಎಳ್ಳೆಣ್ಣೆ ದಾನ ಮಾಡಿ.

ಧನುಸ್ಸು:
ನೀವು ಮಾಡುವ ಕೆಲಸವನ್ನು ಪರರ ಕೆಲಸಕ್ಕೆ ಹೋಲಿಸಿಕೊಂಡು ಕೀಳರಿಮೆ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ. ಧೈರ್ಯಶಾಲಿಗೆ ಭಗವಂತ ಸಹಾಯ ಮಾಡುತ್ತಾನೆ. ಹಾಗಾಗಿ ನೀವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ.

ಮಕರ:
ವ್ಯಯಸ್ಥಾನದ ಶನಿ ಆರ್ಥಿಕ ಮುಗ್ಗಟ್ಟು ಮತ್ತು ಅನಾರೋಗ್ಯ ಬಾಧೆಯನ್ನು ನೀಡುವನು. ಆದಾಗ್ಯೂ ಗುರುವಿನ ಶುಭ ಸಂಚಾರದಿಂದಾಗಿ ಹತ್ತಿಯ ಬೆಟ್ಟಕ್ಕೆ ಬೆಂಕಿಯ ಕಿಡಿ ತಗುಲಿದಂತೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ.

ಕುಂಭ: ಬಹು ನಿರೀಕ್ಷೆ ಇಟ್ಟುಕೊಂಡಿರುವ ನಿಮಗೆ ಆಶಾದಾಯಕ ವಾರ್ತೆ ಕೇಳಿಬರುವುದು. ನಿಮ್ಮ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯುವುದು. ಗುರುವಿನ ಮಂತ್ರ, ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.

ಮೀನ: ನಿಮ್ಮ ದೈನಂದಿನ ವ್ಯವಹಾರಗಳಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಇದೀಗ ಜನ ಸಾಮಾನ್ಯರೂ ವ್ಯವಹಾರಗಳಲ್ಲಿ ಪಾರದರ್ಶಕತೆ ಇಟ್ಟುಕೊಳ್ಳಬೇಕಾದ ಸಮಯ. ಇದರಿಂದ ಯಾವುದೇ ಅನಿಶ್ಚಿತತೆ ಇರುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ