ಆ್ಯಪ್ನಗರ

ಮಾಸಿಕ ಭವಿಷ್ಯ: ಮೇ ತಿಂಗಳಲ್ಲಿ ಆರ್ಥಿಕ ಲಾಭವನ್ನು ಪಡೆಯುವ ರಾಶಿಗಳಿವು..

ವೃಷಭ ರಾಶಿಯ ಅಧಿಪತಿ ಶುಕ್ರನು ಮೊದಲನೇ ಮನೆಯಲ್ಲಿ ಸ್ಥಿತನಾಗಿರುವುದರಿಂದ ಪ್ರತಿಯೊಂದು ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.

Vijaya Karnataka Web 2 May 2020, 6:14 pm
ಗ್ರಹಗಳ ಸ್ಥಾನಗಳು ಆಯಾಯ ರಾಶಿಗಳಲ್ಲಿ ಬದಲಾದಾಗ ಗ್ರಹಪ್ರಭಾವವು ವ್ಯಕ್ತಿಯ ವೃತ್ತಿ ಜೀವನ, ಕೌಟುಂಬಿಕ ಜೀವನ, ಸಾಮಾಜಿಕ ಜೀವನದಲ್ಲಿ ಪರಿಣಾಮ ಬೀರುತ್ತದೆ. ವ್ಯಕ್ತಿಯ ಜೀವನದದಲ್ಲಿ ದಿನನಿತ್ಯ ಹಲವು ಬದಲಾವಣೆಗಳು ಉಂಟಾಗುತ್ತದೆ.ಹನ್ನೆರಡು ರಾಶಿಗಳಿಗೂ ಸಂಬಂಧಪಟ್ಟಂತೆ ಗ್ರಹಗತಿಗಳು ಬದಲಾದಾಗ ವ್ಯಕ್ತಿಯ ವೃತ್ತಿ ಜೀವನ, ಕೌಟುಂಬಿಕ ಜೀವನ, ಸಾಮಾಜಿಕ ಜೀವನ, ಆರೋಗ್ಯದಲ್ಲಿ ಪ್ರತಿದಿನವೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಇದರಂತೆ ದ್ವಾದಶ ರಾಶಿಗಳ ಮೇ‌ ತಿಂಗಳ ಮಾಸಿಕ ಭವಿಷ್ಯ ಇಲ್ಲಿದೆ ನೋಡಿ.
Vijaya Karnataka Web kannada monthly horoscope for the month of may 2020 and these rashi people may get financial benefits
ಮಾಸಿಕ ಭವಿಷ್ಯ: ಮೇ ತಿಂಗಳಲ್ಲಿ ಆರ್ಥಿಕ ಲಾಭವನ್ನು ಪಡೆಯುವ ರಾಶಿಗಳಿವು..


​ಮೇಷ ರಾಶಿ

ಈ ರಾಶಿಯವರಿಗೆ ವೃತ್ತಿಜೀವನದಲ್ಲಿ ಮೇ ಅತ್ಯುತ್ತಮ ತಿಂಗಳು. ಕರ್ಮಕಾರಕನಾದ ಶನಿಯು ಕರ್ಮದ ಮೆಯಲ್ಲಿ ಸ್ಥಿತನಾಗಿರುವುದರಿಂದ ನಿಮ್ಮಿಂದ ಕಠಿಣ ಪರಿಶ್ರಮವನ್ನು ಮಾಡಿಸುತ್ತಾನೆ. ಅದೇ ಮನೆಯಲ್ಲಿ ಗುರುವೂ ಸ್ಥಿತನಾಗಿರುವುದರಿಂದ ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿಮ್ಮನ್ನು ಯಶಸ್ವಿಯಾಗುವಿರಿ. ಮತ್ತು ಆ ನಿರ್ಧಾರಗಳ ಮೂಲಕ ಕೆಲಸದ ಸ್ಥಳದಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ. ನಾಲ್ಕನೇ ಮನೆಯಲ್ಲಿ ಮೇಲೆ ಶನಿ ಮತ್ತು ಗುರುವು ತಮ್ಮ ಪ್ರಭಾವವನ್ನು ಬೀರುವುದರಿಂದ ಕುಟುಂಬದಲ್ಲಿ ಏರಿಳಿತದ ಪರಿಸ್ಥಿತಿಗಳು ಇರುತ್ತದೆ ಮತ್ತು ತಂದೆ-ತಾಯಿಯ ಆರೋಗ್ಯವು ಸಹ ಏರಿಳಿತಗಳಿಂದ ತುಂಬಿರಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಲಿದೆ. ನೀವು ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರ ಪಡೆಯುವಿರಿ.

​ವೃಷಭ ರಾಶಿ

ರಾಶಿಯ ಅಧಿಪತಿ ಶುಕ್ರನು ಮೊದಲನೇ ಮನೆಯಲ್ಲಿ ಸ್ಥಿತನಾಗಿರುವುದರಿಂದ ಪ್ರತಿಯೊಂದು ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ವಿಶೇಷವಾಗಿ ತಿಂಗಳ ಮೊದಲಾರ್ಧವು ಬಹಳಷ್ಟು ಅನುಕೂಲಕರವಾಗಲಿದೆ. ತಂದೆ ತಾಯಿಯ ಆರೋಗ್ಯವು ಬಹಳಷ್ಟು ಉತ್ತಮವಾಗಿರುತ್ತದೆ. ಆದರೆ ತಂದೆಯೊಂದಿಗಿನ ಸಂಬಂಧವು ಹದಗೆಡುವ ಸಾಧ್ಯತೆ ಇದೆ. ಈ ತಿಂಗಳು ದಾಂಪತ್ಯ ಜೀವನ ಏರಿಳಿತಗಳಿಂದ ಕೂಡಿರಬಹುದು. ನೀವು ಅನೇಕ ಮೂಲಗಳಿಂದ ಹಣವನ್ನು ಪಡೆಯುವ ಅವಕಾಶಗಳನ್ನು ಪಡೆಯುತ್ತೀರಿ. ಇದರಿಂದ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು, ಎಚ್ಚರಿಕೆ ವಹಿಸಿ.

​ಮಿಥುನ ರಾಶಿ

ಮಿಥುನ ರಾಶಿಯವರಿಗೆ ಮಿಶ್ರ ಫಲವನ್ನು ನೀಡುವ ತಿಂಗಳು ಮೇ. ಹತ್ತನೇ ಮನೆಯ ಅಧಿಪತಿ ಗುರುವು ತನ್ನ ದುರ್ಬಲ ರಾಶಿಚಕ್ರ ಎಂಟನೇ ಮನೆಯಲ್ಲಿರುವುದರಿಂದ ವೃತ್ತಿ ಜೀವನದಲ್ಲೂ ಮಿಶ್ರಫಲವನ್ನು ಕಾಣುವಿರಿ. ಕಿರಿಯ ಸಹೋದರ ಸಹೋದರಿಯರು ನಿಮ್ಮ ಆರ್ಥಿಕ ಸ್ಥಿತಿಯನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ನಿಮಗೆ ಸಹಾಯ ಮಾಡುತ್ತಾರೆ. ಹನ್ನೆರಡನೆ ಮನೆಯಲ್ಲಿ ಶುಕ್ರನ ಸ್ಥಾನವು ಆತ್ಮೀಯ ಸಂಬಂಧಗಳನ್ನು ಬಲಪಡಿಸುತ್ತದೆ. ಆರ್ಥಿಕ ದೃಷ್ಟಿಯಿಂದ ನೋಡಿದರೆ, ಈ ತಿಂಗಳು ಅನಿರೀಕ್ಷಿತ ಧನಲಾಭವನ್ನು ಪಡೆಯುವ ಯೋಗವಿದೆ. ಸಣ್ಣ-ಪುಟ್ಟ ಆರೋಗ್ಯದ ಸಮಸ್ಯೆಗಳು ಎದುರಾದರೂ ನಿರ್ಲಕ್ಷ್ಯ ಬೇಡ, ಆರೋಗ್ಯದ ಬಗ್ಗೆ ಗಮನ ಹರಿಸುವುದನ್ನು ನಿಲ್ಲಿಸಬೇಡಿ. ಏಕೆಂದರೆ ಇಂದಿನ ಚಿಕ್ಕ ಸಮಸ್ಯೆ ನಾಳೆ ಗಂಭೀರವಾಗಿ ರೂಪುಗೊಳ್ಳಬಹುದು.

​ಕಟಕ ರಾಶಿ

ಹತ್ತನೇ ಮನೆಯಲ್ಲಿ ಶುಭಸ್ಥಾನದಲ್ಲಿ ಕುಳಿತಿರುವ ಸೂರ್ಯ ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆ ಎರಡನ್ನೂ ಹೆಚ್ಚಿಸುತ್ತಾನೆ. ಕುಟುಂಬದ ಸದಸ್ಯರಿಂದ ನಿಮ್ಮ ವ್ಯಾಪಾರಕ್ಕೆ ಅಥವಾ ಕೆಲಸದ ಸ್ಥಳದಲ್ಲಿ ಸಹಾಯವಾಗುವುದು. ನೀವು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದಿದ್ದರೆ ಕುಟುಂಬದ ಸಲಹೆಯನ್ನು ಕೇಳಿ. ಐದನೇ ಮನೆಯಲ್ಲಿ ಶುಕ್ರನ ಸ್ಥಾನವು ನಿಮ್ಮ ಪ್ರೀತಿ ಜೀವನದಲ್ಲಿ ಸಂತೋಷವನ್ನು ನೀಡುವುದು. ವಿಶೇಷವಾಗಿ ಇಡೀ ತಿಂಗಳು ಹನ್ನೊಂದನೇ ಮನೆಯಲ್ಲಿ ಸ್ಥಿತನಾಗುವ ಶುಕ್ರ ನೀವು ಮಾಡುತ್ತಿರುವ ಯಾವುದೇ ಕೆಲಸ ಅಥವಾ ವ್ಯಾಪಾರ ನಿಮ್ಮ ಆದಾಯವನ್ನು ಕಡಿಮೆಯಾಗಲು ಬಿಡುವುದಿಲ್ಲ. ಆರೋಗ್ಯದ ವಿಷಯದಲ್ಲಿ ಮೇ ತಿಂಗಳು ಹೆಚ್ಚು ಅನುಕೂಲಕರವಾಗಿಲ್ಲ.

​ಸಿಂಹ ರಾಶಿ

ಹತ್ತನೇ ಮನೆಯಲ್ಲಿ ಸ್ಥಿತನಾಗುವ ಶುಕ್ರನು ವೃತ್ತಿಪರ ಕ್ಷೇತ್ರದಲ್ಲಿ ನಿಮಗೆ ಬಹಳಷ್ಟು ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ಸೂರ್ಯನ ಶುಭಫಲದಿಂದ ಈ ಸಮಯದಲ್ಲಿ ನಿಮ್ಮ ಪ್ರತಿಯೊಂದು ಆಸೆ ಈಡೇರುತ್ತದೆ. ಕುಟುಂಬದ ವಾತಾವರಣವು ಉತ್ತಮವಾಗಿರುತ್ತದೆ. ಕುಟುಂಬದ ಸದಸ್ಯರ ಮಧ್ಯೆ ಪರಸ್ಪರ ಸ್ನೇಹ ಮತ್ತು ಪ್ರೀತಿಯ ಭಾವನೆಯನ್ನು ಹೊಂದುತ್ತಾರೆ. ಪ್ರೇಮಿಗಳು ಈ ತಿಂಗಳು ಸ್ವಲ್ಪ ತಾಳ್ಮೆಯನ್ನು ವಹಿಸಬೇಕಾಗುವುದು ಹಾಗೂ ಪರಸ್ಪರರ ಮೇಲೆ ನಂಬಿಕೆಯನ್ನು ಇಟ್ಟುಕೊಂಡು ತಮ್ಮ ಪ್ರೀತಿ ಜೀವನವನ್ನು ನಿಧಾನವಾಗಿ ಮುಂದುವರಿಸಬೇಕು. ವಿವಾಹಿತರಾಗಿದ್ದರೆ, ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹನ್ನೊಂದನೇ ಮನೆಯಲ್ಲಿ ಉತ್ತಮ ಸ್ಥಾನದಲ್ಲಿ ಕುಳಿತಿರುವ ರಾಹು ನಿಮ್ಮ ಆದಾಯವನ್ನು ಹೆಚ್ಚಿಸುವಲ್ಲಿ ಸಂಪೂರ್ಣ ಕೊಡುಗೆ ನೀಡುತ್ತಾನೆ. ಮೇ ತಿಂಗಳಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಮೇ ತಿಂಗಳಲ್ಲಿ ಜನಿಸಿದವರ ಸ್ವಭಾವ ಮತ್ತು ವ್ಯಕ್ತಿತ್ವದ ಕುರಿತು ಇಲ್ಲಿದೆ ಮಾಹಿತಿ..

​ಕನ್ಯಾ ರಾಶಿ

ಹತ್ತನೇ ಮನೆಯಲ್ಲಿರುವ ರಾಹು ಮತ್ತು ಒಂಬತ್ತನೇ ಮನೆಯಲ್ಲಿ ಕುಳಿತಿರುವ ಶುಕ್ರನ ಶುಭ ಸ್ಥಾನದಿಂದ ಕೆಲಸದ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯದಿಂದ ಯಶಸ್ವಿಯಾಗುತ್ತೀರಿ. ನಿಮ್ಮ ಸಹೋದರ ಹಾಗೂ ಸಹೋದರಿಯರ ಸಲಹೆಯಿಂದಾಗಿ ನಿಮ್ಮ ಹಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಹಾಗೂ ಇದರಿಂದಾಗಿ ನಿಮ್ಮ ಮಧ್ಯೆ ಇರುವ ಸಂಬಂಧವು ಸುಧಾರಿಸುತ್ತದೆ. ಈ ಸಮಯದಲ್ಲಿ ನಿಮ್ಮ ಮಕ್ಕಳ ಬಗ್ಗೆ ಸ್ವಲ್ಪ ಗಮನ ಹರಿಸಿ. ಹನ್ನೊಂದನೇ ಮನೆಯ ಮೇಲೆ ಮೂರು ಗ್ರಹಗಳ ದೃಷ್ಟಿ ಇರುವುದರಿಂದ ನೀವು ವಿವಿಧ ರೀತಿಯ ಮೂಲಗಳಿಂದ ಆದಾಯವನ್ನು ಪಡೆಯುವಿರಿ. ಆರೋಗ್ಯದ ದೃಷ್ಟಿಯಿಂದ ಈ ತಿಂಗಳು ಸ್ವಲ್ಪ ದುರ್ಬಲವಾಗಿರುವುರುವುದು. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ , ರೋಗನಿರೋಧಕ ಶಕ್ತಿಯ ಇಳಿಕೆಯಾಗಬಹುದು. ಇದರಿಂದಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

​ತುಲಾ ರಾಶಿ

ಹತ್ತನೇ ಮನೆಯಲ್ಲಿ ಸ್ಥಿತವಾಗಿರುವ ಮೂರು ಗ್ರಹಗಳ ಪರಿಣಾಮದಿಂದ ಈ ಸಮಯದಲ್ಲಿ ಕೆಲವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಕೆಲವರು ಕೆಲಸದಲ್ಲಿ ನಿರಾಸಕ್ತಿಯಿಂದ ಉದ್ಯೋಗವನ್ನು ಬಿಡಬಹುದು. ಕೌಟುಂಬಿಕ ವಿಚಾರದಲ್ಲಿ ಈ ಸಮಯವು ಕೆಲವು ಸವಾಲುಗಳಿಂದ ಕೂಡಿರಬಹುದು. ಈ ತಿಂಗಳಲ್ಲಿ ಪ್ರೀತಿಯ ಜೀವನದಲ್ಲಿ ಮಾನಸಿಕವಾಗಿ ಕೆಲವು ಸವಾಲುಗಳನ್ನು ಅನುಭವಿಸಬಹುದು. ವಿವಾಹಿತರಿಗೆ ವೈವಾಹಿಕ ಜೀವನದಲ್ಲಿ ಸೂರ್ಯನು ವಿವಾದ ಮತ್ತು ಪ್ರತ್ಯೇಕತೆಯ ಪರಿಸ್ಥಿತಿಯನ್ನು ಉಂಟುಮಾಡುತ್ತಾನೆ. ನೀವು ನಿಮ್ಮ ಕೌಟುಂಬಿಕ ಅಗತ್ಯತೆಗಳಿಗಾಗಿ ಅನೇಕ ಖರ್ಚುಗಳನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಹ ಸ್ವಲ್ಪ ಹದಗೆಡಬಹುದು. ಮಂಗಳನು ಕುಂಭ ರಾಶಿಗೆ ಚಲಿಸುವುದರಿಂದ ನಿಮ್ಮ ಆದಾಯದ ದಾರಿಗಳು ತೆರೆಯಬಹುದು ಹಾಗೂ ಅನುಕೂಲಕರ ಫಲಿತಾಂಶವನ್ನು ಪಡೆಯಬಹುದು. ಅತಿಯಾದ ಐಷಾರಾಮ ಜೀವನಶೈಲಿಯ ಕಾರಣದಿಂದಾಗಿ ದೈಹಿಕ ಸಮಸ್ಯೆಗಳನ್ನು ಎದುರಿಸಬಹುದು.

​ವೃಶ್ಚಿಕ ರಾಶಿ

ವೃತ್ತಿಪರ ಜೀವನದಲ್ಲಿ ಒಂದೆಡೆ ಉತ್ತಮ ಫಲಿತಾಂಶಗಳನ್ನು ಪಡೆದರೆ ಅದೇ ಸಮಯದಲ್ಲಿ ಮತ್ತೊಂದೆಡೆ ನಿಮ್ಮ ಸಹೋದ್ಯೋಗಿಗಳಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳು ಬಗೆಹರಿಯದೇ ಹಾಗೆಯೇ ಮುಂದುವರಿಯುತ್ತದೆ. ಆದಾಗ್ಯೂ, ವ್ಯರ್ಥವಾಗಿ ಯಾವುದೇ ವಿಷಯವನ್ನು ಎತ್ತಿ ಪರಿಸ್ಥಿತಿಯನ್ನು ಹದಗೆಡಿಸದಿರಿ. ಕ್ರಮೇಣವಾಗಿ ಪರಿಸ್ಥಿತಿ ಸಾಮಾನ್ಯವಾಗುತ್ತದೆ. ಸಂಗಾತಿಗಳ ನಡುವೆ ಆಕರ್ಷಣೆ ಹೆಚ್ಚಾಗುತ್ತದೆ ಮತ್ತು ಸಂಬಂಧವೂ ನಿಕಟವಾಗುವುದು, ಇದು ಇಬ್ಬರ ನಡುವಿನ ಸಂಬಂಧವನ್ನು ಸಹ ಬಲಪಡಿಸುತ್ತದೆ. ಶುಕ್ರನ ಸ್ಥಾನವು ಬುಧನೊಂದಿಗೆ ಸೇರಿ ನಿಮಗೆ ಉತ್ತಮ ಪ್ರಯೋಜನಗಳನ್ನು ನೀಡುತ್ತಾನೆ ಮತ್ತು ಇದು ವ್ಯಾಪಾರದಲ್ಲಿ ಉತ್ತಮ ಮಾರ್ಗಗಳನ್ನು ತೆರೆಯುತ್ತದೆ. ಎರಡನೇ ಮನೆಯಲ್ಲಿ ಕೇತುವಿನ ಸ್ಥಾನವು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಆಹಾರದ ಬಗ್ಗೆ ವಿಶೇಷ ಗಮನ ಹರಿಸಿ.

​ಧನುಸ್ಸು ರಾಶಿ

ಈ ತಿಂಗಳ ಆರಂಭದಲ್ಲಿ ಕೆಲವರು ಉದ್ಯೋಗವನ್ನು ಬದಲಾಯಿಸುವ ಸಾಧ್ಯತೆ ಇದೆ ಮತ್ತು ಅದರಲ್ಲಿ ಯಶಸ್ಸನ್ನು ಸಹ ಪಡೆಯಬಹುದು. ಶಿಕ್ಷಣದ ವಿಷಯದಲ್ಲಿ ಐದನೇ ಮೆನೆಯಲ್ಲಿನ ಉನ್ನತ ಸೂರ್ಯ, ಬುಧನೊಂದಿಗೆ ಸೇರಿ ನಿಮ್ಮ ಬುದ್ಧಿವಂತಿಕೆಯನ್ನು ತೀಕ್ಷ್ಣಗೊಳಿಸುತ್ತಾನೆ. ತಂದೆ- ತಾಯಿಯ ಆರೋಗ್ಯವು ಉತ್ತಮವಾಗಿರುವುದರಿಂದ ನಿಮ್ಮ ಚಿಂತೆಗಳು ಸ್ವಲ್ಪ ಕಡಿಮೆಯಾಗುತ್ತವೆ. ಪ್ರೀತಿಯ ಜೀವನದಲ್ಲಿ ಪ್ರೀತಿಪಾತ್ರರ ನಡವಳಿಕೆಯಲ್ಲಿ ಕೋಪ ಹೆಚ್ಚಾಗಬಹುದು. ಇದರಿಂದಾಗಿ ನಿಮ್ಮಿಬ್ಬರ ಮಾತುಗಳಲ್ಲಿ ಪರಸ್ಪರರ ಬಗ್ಗೆ ವಾದ ವಿವಾದಗಳು ಉಂಟಾಗಬಹುದು. ಸಂಗಾತಿಯ ಅಹಂನಿಂದಾಗಿ ನಿಮಗೆ ಅವರ ಮೇಲೆ ಕೆಟ್ಟ ಭಾವನೆ ಮೂಡಬಹುದು ಮತ್ತು ನಿಮ್ಮ ಭಾವನೆಗಳನ್ನು ನೋಯಿಸಬಹುದು. ತಿಂಗಳ ದ್ವಿತೀಯಾರ್ಧದಲ್ಲಿ ಸೂರ್ಯನು ಹನ್ನೊಂದನೇ ಮನೆ ಪ್ರವೇಶಿಸುವುದರಿಂದ ಹಣ ಲಾಭ ಉಂಟಾಗುವುದು. ನೀವು ಸರ್ಕಾರಿ ವಲಯದಿಂದಲೂ ಪ್ರಯೋಜನವನ್ನು ಪಡೆಯಬಹುದು. ಈ ಸಮಯದಲ್ಲಿ ಕೆಲವರು ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. ಅತಿಯಾದ ಹುರಿದ ಆಹಾರ ಸೇವನೆಯಿಂದ ಅಜೀರ್ಣ ಅಥವಾ ಆಮ್ಲೀಯತೆ ಉಂಟಾಗಬಹುದು.

ಜೀವನದಲ್ಲಿ ಯಶಸ್ಸನ್ನು ಪಡೆಯುವ 4 ರಾಶಿಗಳು ಯಾವುವು ಗೊತ್ತಾ?

​ಮಕರ ರಾಶಿ

ವೃತ್ತಿಜೀವನದ ಬಗ್ಗೆ ನೀವು ಯಾವುದೇ ರೀತಿಯ ಚಿಂತೆ ಮಾಡುವ ಅಗತ್ಯವಿಲ್ಲ . ವ್ಯಾಪಾರಸ್ಥರಿಗೂ ಇದು ಬಹಳ ಉತ್ತಮ ಸಮಯ. ಈ ಸಮಯದಲ್ಲಿ ಕೇವಲ ಸರ್ಕಾರಿ ವಲಯ ಮಾತ್ರವಲ್ಲದೆ ಸಾರ್ವಜನಿಕರಿಗೆ ಸಂಬಂಧಿಸಿದ ಕೆಲಸಗಳಿಂದಲೂ ಸಹ ಬಹಳಷ್ಟು ಉತ್ತಮ ಪ್ರಯೋಜನವನ್ನು ನೀವು ಪಡೆಯಬಹುದು. ಕುಟುಂಬದಲ್ಲಿ ನಿಮ್ಮ ಪ್ರಾಬಲ್ಯವನ್ನು ಸಾಧಿಸುವ ಪ್ರಯತ್ನದಿಂದ ಕುಟುಂಬದ ವಾತಾವರಣವನ್ನು ಹಾಳು ಮಾಡಬಹುದು. ನಿಮ್ಮ ಜೀವನ ಸಂಗಾತಿ ಉದ್ಯೋಗದಲ್ಲಿದ್ದರೆ, ಈ ತಿಂಗಳಿನಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು ಅಥವಾ ಅವರು ಸರ್ಕಾರಿ ಉದ್ಯೋಗವನ್ನು ಪಡೆಯಬಹುದು. ಆರ್ಥಿಕ ದೃಷ್ಟಿಯಿಂದ ನೋಡಿದರೆ, ಈ ತಿಂಗಳು ಹೆಚ್ಚು ಖರ್ಚು ಮಾಡಬೇಕಾಗುವುದು ಮತ್ತು ಕೆಲವು ಖರ್ಚುಗಳು ನಿಮ್ಮ ಆರೋಗ್ಯದ ಮೇಲೆ ಉಂಟಾಗಬಹುದು. ಮಾನಸಿಕವಾಗಿ ಆಯಾಸವು ಒಂದೆಡೆ ಕಾಣಿಸಿಕೊಳ್ಳಬಹುದು.

ಕುಂಭ ರಾಶಿ

ಈ ತಿಂಗಳು ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಐದನೇ ಮನೆಯಲ್ಲಿ ಸ್ಥಿತನಾಗಿರುವ ರಾಹುವಿನಿಂದಾಗಿ ನಿಮ್ಮ ಮನಸ್ಸನ್ನು ಗೊಂದಲಗೊಳಿಸಬಹುದು, ಆದರೆ ನೀವು ಏಕಾಗ್ರತೆಯ ಮೇಲೆ ಗಮನ ಹರಿಸಬೇಕು. ಆಗ ಮಾತ್ರ ನೀವು ಚೆನ್ನಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ನಾಲ್ಕನೇ ಮನೆಯಲ್ಲಿರುವ ಶುಕ್ರನು ನಿಮ್ಮ ಜೀವನದಲ್ಲಿ ಕೆಲವು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾನೆ ಹಾಗೂ ಕೌಟುಂಬಿಕ ಜೀವನದಲ್ಲೂ ಸಂತೋಷ ನೆಲೆಸಿರುವುದು. ವಿವಾಹಿತರಾಗಿದ್ದರೆ ನಿಮ್ಮ ಜೀವನ ಸಂಗಾತಿಯ ಭವಿಷ್ಯವು ನಿಮ್ಮ ಭವಿಷ್ಯವನ್ನೂ ಸಕ್ರಿಯಗೊಳಿಸುವುದು. ಇದರಿಂದ ನೀವಿಬ್ಬರೂ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಆದರೆ ಕೆಲವೊಮ್ಮೆ ನಿಮ್ಮಿಬ್ಬರ ನಡುವೆ ಪ್ರಾಮುಖ್ಯತೆಯ ಸಂಘರ್ಷವೂ ಇರಬಹುದು ಮತ್ತು ಬಹುಶಃ ಇದು ನಿಮ್ಮ ದಾಂಪತ್ಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ತಂದೊಡ್ಡಬಹುದು. ಈ ತಿಂಗಳಿನಲ್ಲಿ ಖರ್ಚುಗಳು ಕಡಿಮೆಯಾಗಬಹುದು. ಈ ತಿಂಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

​ಮೀನ ರಾಶಿ

ವೃತ್ತಿಪರ ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಪರಿಣಾಮ ಬೀರಬಹುದು ಇದರಿಂದಾಗಿ ತೊಂದರೆ ಉಂಟಾಗಬಹುದು. ಆದ್ದರಿಂದ ಅವರೊಂದಿಗೆ ಮಾತನಾಡಿ ಮತ್ತು ವಿಷಯಗಳನ್ನು ಅರ್ಥಮಾಡಿಕೊಂಡು ಅವರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ. ನಿಮ್ಮ ಸಹೋದ್ಯೋಗಿಗಳು ನಿಮಗೆ ಎಲ್ಲ ರೀತಿಯಲ್ಲೂ ಉತ್ತಮ ಬೆಂಬಲವನ್ನು ನೀಡುತ್ತಾರೆ. ತಂದೆ ತಾಯಿಯ ಆರೋಗ್ಯವು ಸಹ ಉತ್ತಮವಾಗಿರುತ್ತದೆ. ಆದರೂ ಹಿರಿಯ ಸಹೋದರ- ಸಹೋದರಿಯರ ಆರೋಗ್ಯದ ಬಗ್ಗೆ ಆತಂಕವಾಗಬಹುದು. ಪ್ರೀತಿಯ ಜೀವನದಲ್ಲಿ ಈ ತಿಂಗಳು ಸವಾಲುಗಳಿಂದ ತುಂಬಿರುತ್ತದೆ. ಶನಿ ಮತ್ತು ಮಂಗಳನು ನಿಮ್ಮ ಪ್ರೀತಿಯ ಜೀವನದಲ್ಲಿ ಒತ್ತಡ ಮತ್ತು ಬಿರುಕನ್ನು ಉಂಟುಮಾಡಬಹುದು. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ತಿಂಗಳು ಅನೇಕ ರೀತಿಯಿಂದ ಪ್ರಯೋಜನವನ್ನು ಪಡೆಯಬಹುದು. ಆರೋಗ್ಯದ ವಿಷಯದಲ್ಲಿ ನೀವು ಈ ತಿಂಗಳು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ