Please enable javascript.Lakshmi Narayan Yoga 2023: ಜುಲೈ 25 ರಿಂದ ಲಕ್ಷ್ಮಿ ನಾರಾಯಣ ಯೋಗ: ಈ 3 ರಾಶಿಯವರಿಗೆ ಸುಯೋಗ..! - lakshmi narayan yoga 2023 starts from 25 july and these 3 zodiac sign people may get goddess lakshmi grace - Vijay Karnataka

Lakshmi Narayan Yoga 2023: ಜುಲೈ 25 ರಿಂದ ಲಕ್ಷ್ಮಿ ನಾರಾಯಣ ಯೋಗ: ಈ 3 ರಾಶಿಯವರಿಗೆ ಸುಯೋಗ..!

Authored byಮನಿಷಾ ಆನಂದ | Agencies 24 Jul 2023, 2:38 pm
Subscribe

ಈ ಬಾರಿ ಲಕ್ಷ್ಮಿ ನಾರಾಯಣ ಯೋಗವು 2023 ರ ಜುಲೈ 25 ರಂದು ಮಂಗಳವಾರದಿಂದ ಪ್ರಾರಂಭವಾಗಿ, 2023 ರ ಆಗಸ್ಟ್‌ 7 ರವರೆಗೆ ಇರುತ್ತದೆ. ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ ಲಕ್ಷ್ಮಿಯ ಅನುಗ್ರಹ ಮತ್ತು ಧನಾಗಮನವಾಗುವುದು. ಲಕ್ಷ್ಮಿ ನಾರಾಯಣ ಯೋಗದಿಂದ ಯಾವ ರಾಶಿಗೆ ಲಕ್ಷ್ಮಿ ಒಲಿಯುವಳು..?

ಹೈಲೈಟ್ಸ್‌:

ಹೈಲೈಟ್ಸ್‌:
  • ಲಕ್ಷ್ಮಿ ನಾರಾಯಣ ಯೋಗದಿಂದ ಅದೃಷ್ಟ
  • ಈ ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗದ ಶುಭ ಫಲ
  • ಲಕ್ಷ್ಮಿ ನಾರಾಯಣ ಯೋಗದ ಶುಭ ಫಲ
Lakshmi Narayan Yoga 2023
ಲಕ್ಷ್ಮಿ ನಾರಾಯಣ ಯೋಗದ ಫಲ-PC: istock, economic times
ಜೀವನವು ಸುಗಮ ಹಾಗೂ ಸುಖದಿಂದ ಕೂಡಿರಬೇಕು ಎಂದರೆ ಸಾಕಷ್ಟು ಹಣವು ಕೈಯಲ್ಲಿ ಇರಬೇಕು. ಇಲ್ಲವೇ ನಮಗೆ ಧನಾಗಮನ ಆಗಾಗ್ಗೆ ಆಗುತ್ತಿರಬೇಕು. ವಿಶೇಷವಾಗಿ ಹಣದ ದೇವತೆಯಾದ ಲಕ್ಷ್ಮಿ ತಾಯಿಯ ಕೃಪೆ ನಮ್ಮ ಮೇಲೆ ಇರಬೇಕು. ಅಂತಹ ಒಂದು ಅಮೃತ ಘಳಿಗೆಯು ಇದೇ ತಿಂಗಳಲ್ಲಿ ಒಲಿದು ಬರುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳಲ್ಲಿ ಶುಕ್ರ ಮತ್ತು ಬುಧ ಗ್ರಹದ ಸಂಯೋಜನೆ ಆಗುವುದು. ಅದರ ಪ್ರಭಾವದಿಂದ ಜುಲೈ 25 ರಂದು ಮಂಗಳವಾರ ಲಕ್ಷ್ಮಿನಾರಾಯಣ ಯೋಗ ರೂಪುಗೊಳ್ಳುವುದು. ಈ ಯೋಗವು ವಿಶೇಷವಾಗಿ ಕೆಲ ರಾಶಿ ಚಕ್ರದ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ. ಅಂತಹ ರಾಶಿ ಚಿಹ್ನಗಳು ಯಾವುವು ನೋಡೋಣ.
Mercury Transit 2023: ಜುಲೈ 25 ರಂದು ಸಿಂಹ ರಾಶಿಗೆ ಬುಧ: ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?
ಲಕ್ಷ್ಮಿ ನಾರಾಯಣ ಯೋಗ
ಲಕ್ಷ್ಮಿ ನಾರಾಯಣ ಯೋಗ
ಲಕ್ಷ್ಮಿ ನಾರಾಯಣ ಯೋಗವು ಇದೇ ಜುಲೈ 25 ರಂದು ಸಂಭವಿಸುವುದು. ಈ ಯೋಗವು ಆಗಸ್ಟ್ 7ರ ವರೆಗೆ ಮುಂದುವರಿಯುವುದು. ಆಗಸ್ಟ್ 7ರಂದು ಬೆಳಿಗ್ಗೆ 10.37ಕ್ಕೆ ಶುಕ್ರನು ಕನ್ಯಾ ರಾಶಿಗೆ ಆಗಮಿಸುವನು. ಇಂತಹ ಸಂದರ್ಭದಲ್ಲಿ ಲಕ್ಷ್ಮಿ ನಾರಾಯಣ ಯೋಗವು ಮುಕ್ತಾಯವಾಗುತ್ತದೆ. ಈ ಸೀಮಿತ ಅವಧಿಯಲ್ಲಿಯೇ ಮಿಥುನ, ಕನ್ಯಾ ಮತ್ತು ತುಲಾ ರಾಶಿಯವರಿಗೆ ಅದ್ಭುತವಾದ ಸುಯೋಗವನ್ನು ತಂದುಕೊಡುವುದು. ಸಂಪತ್ತು ಮತ್ತು ಐಶ್ವರ್ಯವು ಅವರನ್ನು ಹಿಂಬಾಲಿಸುವುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗವು ಅತ್ಯಂತ ಮಂಗಳಕರವಾಗಿರುತ್ತದೆ. ಈ ಸುವರ್ಣ ಅವಧಿಯು ಮಿಥುನ ರಾಶಿಯವರಿಗೆ ಧನ ಧಾನ್ಯದ ಹರಿವು ಕಾಣುವುದು. ಹಿಂದೆಂದು ಕಾಣದಂತಹ ಆರ್ಥಿಕ ಲಾಭವು ದೊರೆಯುತ್ತದೆ. ಆರ್ಥಿಕ ಸ್ಥಿತಿಯ ಸುಧಾರಣೆಯಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುವುದು. ಹಳೆಯ ಸಾಲದಿಂದ ಮುಕ್ತರಾಗುವರು. ಜೊತೆಗೆ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಾಣುವರು. ಜನರು ನಿಮ್ಮಿಂದ ಪ್ರಭಾವಿತರಾಗುವರು. ಉದ್ಯೋಗ ಮಾಡುವವರಿಗೆ ಹಾಗೂ ವ್ಯಾಪಾರಿಗಳಿಗೆ ಇದೊಂದು ಅತ್ಯಂತ ಪ್ರಶಸ್ತನೀಯ ಸಮಯ ಎನ್ನಬಹುದು.

Budhaditya Yoga 2023: ಬುಧಾದಿತ್ಯ ಯೋಗದಿಂದ ಈ 4 ರಾಶಿಯವರಿಗೆ ಎಲ್ಲಾ
ಕನ್ಯಾ ರಾಶಿ
ಕನ್ಯಾ ರಾಶಿ
ಲಕ್ಷ್ಮಿ ನಾರಾಯಣ ಯೋಗದ ಫಲ ಪಡೆದುಕೊಳ್ಳುವುದರಲ್ಲಿ ಕನ್ಯಾ ರಾಶಿಯು ಒಂದು. ಈ ರಾಶಿಯವರ ಮೇಲೆ ವಿವಿಧ ಬಗೆಯ ಸಕಾರಾತ್ಮಕ ಪರಿಣಾಮ ಉಂಟಾಗುವುದು. ಈ ಸಮಯದಲ್ಲಿ ಆದಾಯವು ಏರಿಕೆ ಆಗುತ್ತದೆ. ಈ ಕಾರಣದಿಂದಾದಗಿ ಹಣಕಾಸಿನ ಭಾಗವು ಬಹಳ ಉತ್ತುಂಗ ಸ್ಥಿತಿಗೆ ತಲುಪುವುದು. ಅದೃಷ್ಟ ಎನ್ನುವುದು ದಯೆಯ ರೂಪದಲ್ಲಿ ಸಿಗುವುದು. ವ್ಯಾಪಾರಸ್ತರಿಗೆ ಹೆಚ್ಚು ಲಾಭ ದೊರೆಯುವುದು. ವೃತ್ತಿಯಲ್ಲಿ ಪ್ರಗತಿ ಹಾಗೂ ಕುಟುಂಬದಲ್ಲಿ ಸಂತೋಷ ನೆಲೆಸುವುದು. ಆಸ್ತಿ ಸಂಬಂಧಿತ ವಿವಾದ ಇದ್ದರೆ ಅದು ಪರಿಹಾರ ಕಂಡು, ಲಾಭ ದೊರೆಯುವುದು.

ತುಲಾ ರಾಶಿ
ಲಕ್ಷ್ಮಿ ನಾರಾಯಣ ಯೋಗವು ಇವರಿಗೆ ಒಂದು ವರವಾಗಿ ಪರಿಗಣಿಸುವುದು. ಅದೃಷ್ಟದ ಪ್ರಾಬಲ್ಯದಿಂದ ವ್ಯಾಪಾರದಲ್ಲಿ ಸಾಕಷ್ಟು ಬೆಳವಣಿಗೆ ಉಂಟಾಗುವುದು. ಅನಿರೀಕ್ಷಿತ ಅದೃಷ್ಟ ಹಾಗೂ ಲಾಭವು ಆರ್ಥಿಕ ಸ್ಥಿತಿಯ ಸುಧಾರಣೆಗೆ ಸಹಾಯ ಮಾಡುವುದು. ಆದಾಯದ ಹೆಚ್ಚಳದಿಂದ ಒಂದಷ್ಟು ಮಾನಸಿಕ ಒತ್ತಡ ಕಡಿಮೆ ಆಗುವುದು. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಒಳ್ಳೆಯ ಸುದ್ದಿ ಸಿಗುವುದು. ಹೊಸ ಉದ್ಯೋಗ ಹುಡುಕಾಟವು ಸಹ ಉತ್ತಮ ಪ್ರತಿಫಲ ನೀಡುವುದು.

Shani Rahu Yuti 2023: ಈ 5 ರಾಶಿಯವರು ಇನ್ನು 4 ತಿಂಗಳು ಎಚ್ಚರದಿಂದಿದ್ದರೆ, ನಂತರ
ಒಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಮತ್ತು ಶುಕ್ರನ ಸಂಯೋಗವು ಪ್ರತಿಯೊಂದು ರಾಶಿಯವರ ಮೇಲೆ ಭಿನ್ನ ರೀತಿಯ ಪ್ರಭಾವ ಬೀರುತ್ತದೆ. ಆದರೆ ಕೆಲವು ರಾಶಿಯವರಿಗೆ ಅತ್ಯಂತ ಧನಾತ್ಮಕವಾದ ಪ್ರಭಾವ ಬೀರುವುದು. ಅವರು ಹಿಂದೆಂದೂ ಕಾಣದ ಅದೃಷ್ಟವನ್ನು ಪಡೆದುಕೊಳ್ಳುವರು.
ಮನಿಷಾ ಆನಂದ
ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ