ಆ್ಯಪ್ನಗರ

ಮದುವೆಗೂ ಅಂಗಾರಕನಿಗೂ ಉಂಟು ನಂಟು..! ಇದರಿಂದ ಸಂಬಂಧದಲ್ಲಿ ವಿರಸ

ವೈದಿಕ ಜ್ಯೋತಿಷ್ಯದ ಪ್ರಕಾರ, ಮಂಗಳ ಗ್ರಹದ ದೋಷದಿಂದಾಗಿ ವೈವಾಹಿಕ ಸಂಬಂಧಗಳಲ್ಲಿ ತೊಂದರೆ ತಪ್ಪಿದ್ದಲ್ಲ. ವಧು-ವರರ ನಡುವೆ ಮನಸ್ಥಾಪ ಉಂಟಾಗಲೂ ಅಂಗಾರಕನೇ ಕಾರಣ ಎನ್ನುತ್ತೆ ಜ್ಯೋತಿಷ್ಯ ಶಾಸ್ತ್ರ. ಮಂಗಳನು ಯಾವ ಮನೆಯಲ್ಲಿದ್ದರೆ ಏನು ಪರಿಣಾಮ..? ಮಂಗಳನು ಯಾವ ಮನೆಯಲ್ಲಿದ್ದರೆ ವೈವಾಹಿಕ ಜೀವನದಲ್ಲಿ ವಿರಸ..?

Vijaya Karnataka Web 13 Jan 2021, 5:27 pm
ಮದುವೆ ಎಂದರೆ ಖುಷಿಯ ವಿಷಯ. ಮದುವೆ ಎಂದರೆ ಸಂಭ್ರಮ, ಸಡಗರ. ಯಾರೇ ಆಗಲಿ ತಮ್ಮ ಮದುವೆ ಎಂದರೆ ಎಲ್ಲರೂ ನೆನಪಿಡುವಂತೆ ಆಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಮದುವೆಯಾಗುವ ಇರುವ ಖುಷಿ ಆದ ನಂತರ ಇರುತ್ತದೆ ಎಂದು ಬಹಲಷ್ಟು ಪ್ರಕರಣಗಳಲ್ಲಿ ಹೇಳಲು ಬರುವುದಿಲ್ಲ. ಕೆಲವೊಂದು ಪ್ರಕರಣಗಳಲ್ಲಿ ಮದುವೆ ಅರ್ಧಕ್ಕೆ ಮುರಿದು ಬೀಳಬಹುದು. ಇಬ್ಬರ ನಡುವೆ ಜಗಳವಾಗಿ ಮನಸ್ಥಾಪಗಳು ಎದುರಾಗಬಹುದು. ಕೆಲವೊಮ್ಮೆ ವಿಚ್ಛೇಧನದವರೆಗೂ ಹೋಗುವ ಸಾಧ್ಯತೆಗಳಿರುತ್ತವೆ. ವೈದಿಕ ಜ್ಯೋತಿಷ್ಯದ ಪ್ರಕಾರ ಮಂಗಳ ಗ್ರಹದ ದೋಷದಿಂದಾಗಿ ವೈವಾಹಿಕ ಸಂಬಂಧಗಳಲ್ಲಿ ಇಂತಹ ತೊಂದರೆಗಳು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ವಧು-ವರರ ನಡುವೆ ಮನಸ್ಥಾಪ ಉಂಟಾಗಲೂ ಅಂಗಾರಕನೇ ಕಾರಣ ಎಂದು ಹೇಳುತ್ತಾರೆ. ಈ ಲೇಖನದಲ್ಲಿ ಮಂಗಳನು ಯಾವ ಮನೆಯಲ್ಲಿದ್ದರೆ ಏನು ಪರಿಣಾಮ ಎಂಬುದನ್ನು ಹೇಳಲಾಗಿದೆ.
Vijaya Karnataka Web mars in these houses you will get problems in married life
ಮದುವೆಗೂ ಅಂಗಾರಕನಿಗೂ ಉಂಟು ನಂಟು..! ಇದರಿಂದ ಸಂಬಂಧದಲ್ಲಿ ವಿರಸ


​ಮೊದಲ ಮನೆಯಲ್ಲಿ ಮಂಗಳ

ಜಾತಕದ ಮೊದಲ ಮನೆಯಲ್ಲಿ ಮಂಗಳ ಇರುವಿಕೆಯು ಬಹಳ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಜಾತಕದ ಮೊದಲ ಮನೆ, ನಾಲ್ಕನೆಯ, ಏಳನೇ, ಎಂಟನೇ ಮನೆಯಲ್ಲಿದ್ದಾಗ ಮಂಗಳನು ವಕ್ರ ದೃಷ್ಟಿ ಬೀರುತ್ತಾನೆ. ಇದು ಸಂಭವಿಸಿದಾಗ, ಕುಟುಂಬದ ಸಂತೋಷ ಮತ್ತು ವೈವಾಹಿಕ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಮಕರ ರಾಶಿಗೆ ಸೂರ್ಯನ ಪ್ರವೇಶ: ಈ ಐದು ರಾಶಿಯವರಿಗೆ ಸಂಪತ್ತಿನ ಲಾಭ..!

​ಜಾತಕದ ಎರಡನೇ ಮನೆಯಲ್ಲಿ ಮಂಗಳ

ಜಾತಕದ ಎರಡನೇ ಮನೆಯಲ್ಲಿ ಮಂಗಳ ಇರುವಿಕೆಯನ್ನು ಅತ್ಯಂತ ಕೆಟ್ಟದ್ದು ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ಆಸ್ತಿ ಮತ್ತು ಕುಟುಂಬ ವಂಚನೆ ಸಂಭವಿಸುವ ಸಾಧ್ಯತೆ ಇದೆ. ಇದು ವಧು-ವರರ ನಡುವೆ ಘರ್ಷಣೆಗೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಾನಸಿಕ ದುಃಖವೂ ಹೆಚ್ಚಾಗುತ್ತದೆ.

ಹೂವಿಗೂ ಇದೆ ಗ್ರಹದೋಷ ದೂರಾಗಿಸುವ ಶಕ್ತಿ..! ಆ ಹೂವುಗಳಾವುವು..?

​ಜಾತಕದ ನಾಲ್ಕನೇ ಮನೆಯಲ್ಲಿ ಮಂಗಳ

ಜಾತಕದ ನಾಲ್ಕನೇ ಮನೆಯಲ್ಲಿ ಮಂಗಳ ಇರುವಿಕೆಯು ಗಂಡ ಮತ್ತು ಹೆಂಡತಿಯ ನಡುವಿನ ಸಾಮರಸ್ಯವನ್ನು ಹಾಳು ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕುಟುಂಬ ಸಾಮರಸ್ಯವು ತೊಂದರೆಗೊಳಗಾಗುತ್ತದೆ. ಇದು ದಾಂಪತ್ಯ ಜೀವನದಲ್ಲಿ ಕಹಿ ಉಂಟುಮಾಡಬಹುದು. ಕೌಟುಂಬಿಕ ವಿಷಯದಲ್ಲಿ ಅಸಮಾಧಾನಗಳು ಉಂಟಾಗಬಹುದು.

ಮಕರ ರಾಶಿಗೆ ಶನಿ ಪ್ರವೇಶ: 2021ರಲ್ಲಿ ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

​ಜಾತಕದ 7ನೇ ಮನೆಯಲ್ಲಿ ಮಂಗಳ

ಜಾತಕದ ಏಳನೇ ಮನೆಯಲ್ಲಿ ಮಂಗಳ ಇರುವಿಕೆಯು ಗಂಡ ಮತ್ತು ಹೆಂಡತಿಯ ನಡುವೆ ತಪ್ಪು ತಿಳುವಳಿಕೆಯನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಂಗಾತಿಯ ಬಗ್ಗೆ ತಪ್ಪು ಆಲೋಚನೆಗಳು ಮನಸ್ಸಿನಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ. ಇದು ವೈವಾಹಿಕ ಜೀವನದ ಸಂತೋಷವನ್ನು ಹಾಳು ಮಾಡುತ್ತದೆ ಮತ್ತು ಸಂಬಂಧವು ಕ್ಷೀಣಿಸಲು ಪ್ರಾರಂಭಿಸುತ್ತದೆ. ಈ ಸಂದರ್ಭಗಳಲ್ಲಿ, ಜೀವನದಲ್ಲಿ ಕೆಟ್ಟ ದಿನಗಳು ಪ್ರಾರಂಭವಾಗುತ್ತದೆ.

Vara Bhavishya: ಕುಂಭದವರಿಗೆ ದೈಹಿಕ ನೋವು ತಪ್ಪಿದ್ದಲ್ಲ..! ಗಾಯವೂ ಆಗಬಹುದು

​ಜಾತಕದ ಎಂಟನೇ ಮನೆಯಲ್ಲಿ ಮಂಗಳ

ಜಾತಕದ ಎಂಟನೇ ಮನೆಯಲ್ಲಿ ಮಂಗಳ ಇರುವಿಕೆಯು ಬಹಳ ಕೆಟಟ ಪರಿಣಾಮ ಬೀರಲಿದೆ. ಅಂತಹ ಪರಿಸ್ಥಿತಿಯಲ್ಲಿ, ಸಾಕಷ್ಟು ಹೋರಾಟ ಇರುತ್ತದೆ. ವಿವಾಹೇತರ ಸಂಬಂಧ ಹೊಂದುವ ಸಾಧ್ಯತೆಯೂ ಇರುತ್ತದೆ. ಈ ಸಂದರ್ಭಗಳಲ್ಲಿ, ಕೆಲವೊಮ್ಮೆ ಗಂಡ ಮತ್ತು ಹೆಂಡತಿ ಒಟ್ಟಿಗೆ ವಾಸಿಸಲು ಇಷ್ಟಪಡದಂತಹ ಪರಿಸ್ಥಿತಿ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ರಾಜಿ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಅದರ ನಂತರವೂ ಇಡೀ ಜೀವನವನ್ನು ಕಲಹದಿಂದ ಕಳೆಯಬೇಕಾಗುತ್ತದೆ.

2021 ಆರೋಗ್ಯ ರಾಶಿ ಭವಿಷ್ಯ: ಯಾವ ರಾಶಿಯವರ ಆರೋಗ್ಯ ಹೇಗಿರಲಿದೆ..? ತಪ್ಪದೇ ತಿಳಿಯಿರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ