ಆ್ಯಪ್ನಗರ

ನಮ್ಮ ಮನಸ್ಸನ್ನು ಆಳುವ ಚಂದ್ರನ ಕುರಿತು ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..

ಜ್ಯೋತಿಷ್ಯಶಾಸ್ತ್ರದಲ್ಲಿ ನವಗ್ರಹಗಳಲ್ಲಿ ಒಬ್ಬನಾಗಿರುವ ಚಂದ್ರ ನಮ್ಮ ದಿನನಿತ್ಯದ ಜೀವನದಲ್ಲಿ ಇತರ ಗ್ರಹಗಳಿಗೆ ಹೋಲಿಸಿದರೆ ಬಹುಮುಖ್ಯವಾದ ಪಾತ್ರವನ್ನು ವಹಿಸುವವನು. ನಮ್ಮ ಮನಸ್ಸನ್ನು ಆಳುವಂತಹ ಗ್ರಹ ಚಂದ್ರನೆಂದರೂ ತಪ್ಪಾಗಲಾರದು. ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರನ ಮಹತ್ವವೇನು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಸ್ಟೋರಿ ಓದಿ.

Vijaya Karnataka Web 28 Sep 2020, 7:13 pm
ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರನಿಗೆ ತನ್ನದೇ ಆದ ಮಹತ್ವದ ಸ್ಥಾನವಿದೆ. ಜನ್ಮ ಕಾಲದಲ್ಲಿ ಚಂದ್ರ ಯಾವ ರಾಶಿಯಲ್ಲಿರುತ್ತಾನೆಯೋ ಅದೇ ರಾಶಿ ನಿಮ್ಮದಾಗುತ್ತದೆ. ಉದಾಹರಣೆಗೆ ನಿಮ್ಮ ಜನ್ಮ ಕಾಲದಲ್ಲಿ ಚಂದ್ರ ಮೀನ ರಾಶಿಯಲ್ಲಿದ್ದರೆ, ನಿಮ್ಮ ರಾಶಿ ಮೀನ ಎಂದು ಪರಿಗಣಿಸಲಾಗುತ್ತದೆ. ಚಂದ್ರನ ಸ್ಥಾನವು ಹುಟ್ಟುವುದಕ್ಕೆ ಮೊದಲು ಸಹ ಪರಿಗಣನೆಗೆ ಬರುತ್ತದೆ. ಹೇಗೆಂದರೆ ಚಂದ್ರ ಉತ್ತಮ ಸ್ಥಾನದಲ್ಲಿದ್ದರೆ, ಸುಖ ಪ್ರಸವವಾಗುತ್ತದೆ. ಒಂದು ವೇಳೆ ಚಂದ್ರನು ಅಶುಭ ಸ್ಥಾನದಲ್ಲಿದ್ದರೆ ಅವಧಿ ಪೂರ್ವ ಪ್ರಸವ ಅಥವಾ ಮಗುವಿನ ಸಾವು (ಬಾಲಾರಿಷ್ಟ) ಸಹ ಉಂಟಾಗುತ್ತದೆ. ಚಂದ್ರನು ಭೂಮಿಗೆ ಅತ್ಯಂತ ಹತ್ತಿರವಿರುವ ಗ್ರಹ, ಹೀಗಾಗಿ ಇದು ನಮ್ಮ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಬನ್ನಿ ಹಾಗಾದರೆ ಚಂದ್ರನ ಕುರಿತು ಇನ್ನೂ ಏನೇನು ವಿಶೇಷ ಮಾಹಿತಿ ಇದೆ ಎಂದು ಇಂದು ತಿಳಿದುಕೊಳ್ಳೋಣ:
Vijaya Karnataka Web moon in astrology


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ರಾಜ ಎಂದು ಪರಿಗಣಿಸಲ್ಪಟ್ಟಿದ್ದರೆ, ಚಂದ್ರನನ್ನು ರಾಣಿ ಎಂದು ಪರಿಗಣಿಸಲಾಗುತ್ತದೆ. ಚಂದ್ರನು ಕಟಕರಾಶಿಯನ್ನು ಆಳುತ್ತಾನೆ. ಇದು ನಮ್ಮ ಮನಸ್ಸು, ಕೋರಿಕೆಗಳು ಮತ್ತು ಪ್ರತಿಕ್ರಿಯೆ ಹಾಗೂ ಹವ್ಯಾಸಗಳನ್ನು ಪ್ರತಿನಿಧಿಸುತ್ತದೆ. ಚಂದ್ರನು ಮನಸ್ಸು ಮತ್ತು ಬೌದ್ಧಿಕತೆಯನ್ನು ಪ್ರತಿನಿಧಿಸುತ್ತಾನೆ. ಜೊತೆಗೆ ಇದು ತಾಯಿ, ಸಂಪತ್ತು ಮತ್ತು ಜನಪ್ರಿಯತೆಯನ್ನು ಸಹ ಪ್ರತಿನಿಧಿಸುತ್ತದೆ.ಇದು ಸಮಸ್ಯೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಮತ್ತು ಇತರರಿಗೆ ಸುರಕ್ಷಿತ ಭಾವನೆಯನ್ನು ಹೇಗೆ ನೀಡುತ್ತೇವೆ ಎಂಬುದನ್ನು ಸಹ ವ್ಯಕ್ತಪಡಿಸುತ್ತದೆ.

ನಿಮ್ಮ ಜಾತಕದಲ್ಲಿ ಕೇತು ಯಾವ ಸ್ಥಾನದಲ್ಲಿದ್ದರೆ ಯಾವ ಪರಿಣಾಮ ಉಂಟಾಗುತ್ತೆ ಗೊತ್ತಾ?

ಚಂದ್ರನು ಮುಖ್ಯವಾಗಿ ತಾಯಿ ಮತ್ತು ಸ್ತ್ರೀತನವನ್ನು ಪ್ರತಿನಿಧಿಸುತ್ತದೆ. ಚಂದ್ರ ನಮ್ಮೊಳಗಿರುವ ಮಗು ಹಾಗೂ ಅವರ ಆಂತರಿಕ ತಾಯಿ ಎಂದು ಹೇಳಬಹುದು.ನಮ್ಮನ್ನು ನಾವು ಹೇಗೆ ಕಾಪಾಡಿಕೊಳ್ಳುತ್ತೇವೆ ಮತ್ತು ಸುರಕ್ಷಿತವಾಗಿ ಹಾಗೂ ಸುಭದ್ರವಾಗಿ ರಕ್ಷಿಸಿಕೊಳ್ಳುತ್ತೇವೆ ಎಂಬುದನ್ನು ಸಹ ಚಂದ್ರ ನಿರ್ಧರಿಸುತ್ತಾನೆ.


ಈ ಎಲ್ಲವೂ ಚಂದ್ರನ ಕೃಪೆಯಿಂದಲೇ ನಡೆಯುತ್ತವೆ..
ಚಂದ್ರನು ನಮ್ಮನ್ನು ಅತ್ಯಂತ ಸೃಜನಶೀಲ, ಅರ್ಥ ಗರ್ಭಿತ, ಕನಸು ಕಾಣುವ, ಕಲ್ಪನಾ ಪ್ರಪಂಚದಲ್ಲಿ ವಿಹರಿಸುವ, ಭಾವನಾತ್ಮಕ, ಹೊಂದಿಕೊಳ್ಳುವಂತಹ ಹಾಗೂ ರಕ್ಷಣಾ ಮನೋಭಾವ ನೀಡುವ ವ್ಯಕ್ತಿಯನ್ನಾಗಿಸುತ್ತದೆ. ಜೊತೆಗೆ ಇದು ನಮ್ಮನ್ನು ಮೂಡಿ ಅಥವಾ ಸಪ್ಪಗೆ ಇರುವ ವ್ಯಕ್ತಿಯಂತೆ, ವಿಶ್ರಾಂತಿ ರಹಿತ ಹಾಗೂ ಕಿರಿಕಿರಿ ನೀಡುವ ವ್ಯಕ್ತಿಯನ್ನಾಗಿಸಲೂಬಹುದು. ಜಾತಕದಲ್ಲಿ ಚಂದ್ರನ ಸ್ಥಾನವು ನಾವು ನಮ್ಮ ಪರಿಸರಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಮತ್ತು ಸ್ವೀಕರಿಸುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ. ಜೊತೆಗೆ ಇದು ನಾವು ಯಾವ ವಿಚಾರದಲ್ಲಿ ತುಂಬಾ ಅನುಕೂಲಕರವಾದ ಭಾವನೆಯನ್ನು ಹೊಂದಿರುತ್ತೇವೆ ಎಂಬುದನ್ನು ಸಹ ನಿರ್ಧರಿಸುತ್ತದೆ.

ಸೂರ್ಯ ಮಹಾದೆಸೆಯಿಂದ ಜೀವನದಲ್ಲಿ ಈ ಆಶ್ಚರ್ಯಕರ ಬೆಳವಣಿಗೆಗಳೂ ಆಗಬಹುದು..!

ಚಂದ್ರನು ಬಿಳಿ ಬಣ್ಣ, ಬೆಳ್ಳಿ, ಉದ್ಯಾನವನಗಳು, ಔಷಧಿಗಳು, ಉಪ್ಪು, ಬದಲಾವಣೆ, ವಿದೇಶ ಪ್ರಯಾಣ, ಹೆಮ್ಮೆ, ಹಾಲು ಇತ್ಯಾದಿಗಳೊಂದಿಗೆ ಸಂಬಂಧಪಟ್ಟಿರುತ್ತದೆ. ಚಂದ್ರನಿಗೆ ಸಂಬಂಧಿಸಿದ ಅದೃಷ್ಟ ಸಂಖ್ಯೆಗಳು 2, 11 ಮತ್ತು 20. ಚಂದ್ರನನ್ನು ಮೆಚ್ಚಿಸಲು ಗೌರಿ, ದುರ್ಗಾ ಮತ್ತು ಪಾರ್ವತಿಯರ ಆರಾಧನೆಯನ್ನು ಮಾಡಬೇಕಾಗುತ್ತದೆ. ಪೌರ್ಣಮಿಯು ಅತ್ಯಂತ ಶುಭದಾಯಕ ಮತ್ತು ಅಮಾವಾಸ್ಯೆಯು ಅಶುಭಕಾರಕ ಎಂದು ಪರಿಗಣಿಸಲ್ಪಟ್ಟಿದೆ.

ಜಾತಕದಲ್ಲಿ ಯಾವಾಗ ಚಂದ್ರ ಬಲವಾಗಿ ಇರುತ್ತಾನೆಯೋ ಆಗ, ಆ ವ್ಯಕ್ತಿಯು ಸದೃಢ ಮನಸ್ಸನ್ನು ಹೊಂದಿರುತ್ತಾನೆ ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಪಡೆದುಕೊಳ್ಳುತ್ತಾನೆ. ಅಂದರೆ ತಾಯಿಯು ಪ್ರೀತಿಯನ್ನು ವ್ಯಕ್ತಪಡಿಸಿದ ಹಾಗೆ ಇವರ ಕೀರ್ತಿ ಎಲ್ಲಾ ಕಡೆ ಬೆಳಗುತ್ತದೆ.
ಅದೇ ರೀತಿ ಅಶುಭಕಾರಕ ರಾಶಿಯಲ್ಲಿರುವ ಅಥವಾ ಶತ್ರು ಸ್ಥಾನದಲ್ಲಿರುವ ಚಂದ್ರನು ವ್ಯಕ್ತಿಯನ್ನು ಸೋಮಾರಿ ಮತ್ತು ನಿದ್ದೆಯ ಪೀಡಿತನನ್ನಾಗಿ ಮಾಡುತ್ತದೆ. ಇಂತಹವರು ಭಯದಿಂದ ತತ್ತರಿಸುತ್ತಿರುತ್ತಾರೆ ಮತ್ತು ವಿಶ್ರಾಂತಿ ಇಲ್ಲದೆ ಜೀವಿಸುತ್ತಿರುತ್ತಾರೆ. ಚಂದ್ರನು ಆಕಾಶಕಾಯಗಳಲ್ಲೇ ಅತ್ಯಂತ ವೇಗವಾಗಿ ಸುತ್ತುವ ಗ್ರಹಗಳಲ್ಲಿ ಒಂದು. ಹೀಗಾಗಿ ಇದು ನಿಮ್ಮ ಜೀವನದಲ್ಲಿ ಮತ್ತು ಮನಸ್ಸಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತದೆ.
ಕುಂಡಲಿಯಲ್ಲಿ ಶನಿಯು ಪ್ರಬಲನಾದಾಗ ನೀಡುವ ಶುಭಫಲಗಳೇನು ಗೊತ್ತಾ? ಇಲ್ಲಿದೆ ಮಾಹಿತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ