ಆ್ಯಪ್ನಗರ

ಪುರಾತನ ಶಿವ ದೇವಸ್ಥಾನವನ್ನು ಪೊರೆಯುತ್ತಿರುವ ಮುಸ್ಲಿಂ ಕುಟುಂಬ

ಕೈಲಾಸವಾಸಿ ಶಿವನನ್ನು 'ನಾನಾ' ಎಂದು ಭಕ್ತಿಯಿಂದ ಕರೆಯುವ ಹಾಜಿ ಮತಿಬಾರ್‌ ರೆಹ್ಮಾನ್‌ ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದಾರೆ. ಹಿಂದೂ - ಮುಸ್ಲಿಂ ಎಂಬ ಭೇದವಿಲ್ಲದೆ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಮರ್ಪಿಸುತ್ತಿದ್ದಾರೆ.

Indiatimes 3 Mar 2019, 12:58 pm
ದಿಸ್‌ಪುರ: ಸುಮಾರು 500 ವರ್ಷದ ಹಳೆಯ ಶಿವ ದೇವಸ್ಥಾನವನ್ನು ಮುಸ್ಲಿಂ ಕುಟುಂಬವೊಂದು ರಕ್ಷಿಸಿ ಪೊರೆಯುತ್ತ ಬಂದಿದೆ.
Vijaya Karnataka Web Shiva Temple


ಗುವಾಹಟಿಯ ರಂಗಾಮಹಲ್‌ನಲ್ಲಿರುವ ಶಿವ ದೇವಸ್ಥಾನಕ್ಕೆ 500 ವರ್ಷಇತಿಹಾಸವಿದ್ದು, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಭಕ್ತಿಯಿಂದ ಶಿವನನ್ನು ಪೂಜಿಸುತ್ತಿದ್ದಾರೆ. ದೇವಸ್ಥಾನವನ್ನು ನೋಡಿಕೊಳ್ಳುತ್ತಿರುವ ಹಾಜಿ ಮತಿಬಾರ್‌ ರೆಹ್ಮಾನ್‌ ಕೈಲಾಸವಾಸಿ ಶಿವನನ್ನು ಅತ್ಯಂತ ಭಕ್ತಿಯಿಂದ ಪೂಜಿಸುತ್ತಾರೆ.

'ನಾನು ಶಿವನನ್ನು ನಾನಾ ಎಂದು ಕರೆಯುತ್ತೇನೆ. ಇದು ಸುಮಾರು 500 ವರ್ಷಗಳ ಹಳೆಯ ದೇವಸ್ಥಾನ. ನಮ್ಮ ಕುಟುಂಬ ಈ ದೇವಸ್ಥಾನವನ್ನು ನಿರ್ವಹಿಸುತ್ತಿದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆಗಳನ್ನು ಸಮರ್ಪಿಸುತ್ತಾರೆ' ಎಂದು ಮತಿಬಾರ್‌ ರೆಹ್ಮಾನ್‌ ತಿಳಿಸಿದ್ದಾರೆ.

ಭಗವಾನ್‌ ಶಿವ ದೇವಸ್ಥಾನದಲ್ಲಿ ಮುಸ್ಲಿಮರು ದುವಾ ಅರ್ಪಿಸುತ್ತಾರೆ. ಹಿಂದೂಗಳು ಪೂಜೆ ನಡೆಸುತ್ತಾರೆ. ಎಲ್ಲರೂ ಅತ್ಯಂತ ಭಕ್ತಿಯಿಂದ ಇಲ್ಲಿಗೆ ಆಗಮಿಸುತ್ತಾರೆ. ನಾವೂ ಇಲ್ಲಿ ದುವಾ ಸಮರ್ಪಿಸುತ್ತೇವೆ ಎಂದು ರೆಹ್ಮಾನ್‌ ತಿಳಿಸಿದ್ದಾರೆ.

ಹಿಂದೂ ಮತ್ತು ಮುಸ್ಲಿಂ ಸಮುದಾಯದ ಭಕ್ತರು ಆಗಮಿಸುತ್ತಿರುವುದರಿಂದ ಉಭಯ ಸಮುದಾಯಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಿದೆ.

ಇದೇ ರೀತಿ ಕಾಶ್ಮೀರದಲ್ಲಿ ಇಬ್ಬರು ಮುಸ್ಲಿಂ ಮೌಲ್ವಿಗಳು 900 ವರ್ಷದ ಇತಿಹಾಸ ಹೊಂದಿರುವ ಶಿವ ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದಾರೆ. ಕಾಶ್ಮೀರ ಪಂಡಿತರು ಗ್ರಾಮವನ್ನು ತೊರೆದ ನಂತರ ಮುಸ್ಲಿಂ ಮೌಲ್ವಿಗಳಾದ ಮೊಹಮ್ಮದ್‌ ಅಬ್ದುಲ್ಲಾ ಮತ್ತು ಗುಲಾಮ್‌ ಹಸನ್‌ ಶಿವ ದೇವಸ್ಥಾನವನ್ನು ನೋಡಿಕೊಳ್ಳಲು ಆರಂಭಿಸಿದರು. ಕಣಿವೆ ರಾಜ್ಯದಲ್ಲಿ ಮುಸ್ಲಿಂ ಮೌಲ್ವಿಗಳು ನಿರ್ವಹಿಸುತ್ತಿರುವ ಏಕೈಕ ದೇವಸ್ಥಾನ ಇದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ