ಆ್ಯಪ್ನಗರ

Nag Panchami 2018: ಹಬ್ಬಗಳ ಸಡಗರ ಹೊತ್ತು ಬಂತು ನಾಗರ ಪಂಚಮಿ

ನಾಗರ ಪಂಚಮಿ ಬಂತೆಂದರೆ ಹಬ್ಬಗಳ ಸಡಗರ ಶುರುವಾಯಿತು ಎಂದೇ ಅರ್ಥ. ಈ ವರ್ಷ ನಾಗರ ಪಂಚಮಿ ಆಗಸ್ಟ್ 15ರಿಂದ ಬಂದಿರುವುದರಿಂದ ಜನರ ಸಡಗರ ಮತ್ತಷ್ಟು ಹೆಚ್ಚಿದೆ.

Vijaya Karnataka Web 14 Aug 2018, 3:20 pm
ನಾಗರ ಪಂಚಮಿ ಬಂತೆಂದರೆ ಹಬ್ಬಗಳ ಸಡಗರ ಶುರುವಾಯಿತು ಎಂದೇ ಅರ್ಥ. ಈ ವರ್ಷ ನಾಗರ ಪಂಚಮಿ ಆಗಸ್ಟ್ 15ರಂದು ಬಂದಿರುವುದರಿಂದ ಜನರ ಸಡಗರ ಮತ್ತಷ್ಟು ಹೆಚ್ಚಿದೆ. ಸ್ವಾತಂತ್ರ್ಯ ದಿನಾಚರಣೆ ಹಾಗೂ ನಾಗರಪಂಚಮಿಯನ್ನು ಸಡಗರ-ಸಂಭ್ರಮದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ.
Vijaya Karnataka Web nagara panchami


ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನ ನಾಗರ ಪಂಚಮಿಯನ್ನು ಆಚರಿಸಲಾಗುವುದು. ಈ ದಿನ ನಾಗದೇವನಿಗೆ ಹಾಲೆರೆದು, ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸು ಎಂದು ಭಯ, ಭಕ್ತಿಯಿಂದ ಪ್ರಾರ್ಥಸುತ್ತಾರೆ.

ಸಹೋದರ-ಸಹೋದರಿಯ ಅನುಬಂಧವನ್ನು ಸೂಚಿಸುವ ಹಬ್ಬ ಇದಾಗಿದೆ. ಹಾವು ಕಡಿದು ಮೃತಪಟ್ಟ ಸಹೋದರನನ್ನು ಬದುಕಿಸಿಕೊಡುವಂತೆ ಹಾವಿನಲ್ಲಿ ಸಹೋದರಿ ಪ್ರಾರ್ಥನೆ ಮಾಡಿ ತನ್ನ ಸಹೋದರನನ್ನು ಬದುಕಿಸಿಕೊಂಡ ದಿನ ಶ್ರಾವಣ ಮಾಸದ ಶುಕ್ಲ ಪಕ್ಷವಾಗಿತ್ತು, ಅಲ್ಲಿಂದ ಆ ದಿನವನ್ನು ಭಾತೃತ್ವದ ಸಂಕೇತವಾಗಿ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುವುದು ಎಂಬ ಪುರಾಣ ಕತೆ ಇದೆ.

ನಾಗರ ಪಂಚಮಿ ಆಚರಣೆ
ನಾಗರ ಪಂಚಮಿಯೆಂದು ಹಬ್ಬದ ಅಡುಗೆಗಳನ್ನು ಸಿದ್ಧ ಮಾಡಿ, ನಂತರ ಪಕ್ಕದಲ್ಲಿರುವ ಹುತ್ತವನ್ನು ಪೂಜಿಸಿ ಹಾಲೆರೆದು, ಶೇಂಗಾ, ಎಳ್ಳು, ಕಡುಬು ನಾನಾ ತರದ ಉಂಡೆಗಳನ್ನು ನೈವೇದ್ಯ ಮಾಡಿ ಅದನ್ನು ಅಕ್ಕ-ಪಕ್ಕದ ಮನೆಯವರಿಗೆ ಹಂಚಿ ಸಂಭ್ರಮಿಸುತ್ತಾರೆ.

ಮಕ್ಕಳಿಗೆ ಜೋಕಾಲಿ ಖುಷಿ
ನಾಗರ ಪಂಚಮಿ ವಿಶೇಷವಾಗಿ ಬಯಲಿನಲ್ಲಿರುವ ದೊಡ್ಡ-ದೊಡ್ಡ ಮರಗಳಿಗೆ ಜೋಕಾಲಿ ಕಟ್ಟುತ್ತಾರೆ. ಮಕ್ಕಳ-ಜತೆಗೆ ದೊಡ್ಡವರೂ ಜೋಕಾಲಿಯಲ್ಲಿ ಜೀಕುತ್ತಾ ಆ ದಿನವನ್ನು ಖುಷಿ-ಖುಷಿಯಾಗಿ ಕಳೆಯುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ