ಆ್ಯಪ್ನಗರ

ಶ್ರಾವಣ ಶನಿವಾರ: ಯಾವ್ಯಾವ ದೇಗುಲಗಳಲ್ಲಿ ವಿಶೇಷ ಪೂಜೆ ಗೊತ್ತಾ?

ಶ್ರಾವಣದಲ್ಲಿ ಸಾಲು ಸಾಲು ಹಬ್ಬಗಳಿವೆ. ಈ ಪೈಕಿ ಶ್ರಾವಣ ಸೋಮವಾರ ಹಾಗೂ ಶ್ರಾವಣ ಶನಿವಾರ ಪ್ರಮುಖ. ಬೆಂಗಳೂರು ಭಾಗದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.

Vijaya Karnataka 10 Aug 2019, 12:58 pm
ಬೆಂಗಳೂರು: ಶ್ರಾವಣ ಮಾಸ ಪೂರ್ತಿ ಪ್ರತಿ ಶನಿವಾರ ಹಾಗೂ ಸೋಮವಾರಗಳಂದು ದೇಗುಲಗಳಲ್ಲಿ ಭಕ್ತರ ದಂಡೇ ನೆರೆದಿರುತ್ತದೆ. ನಗರ ಹಾಗೂ ಗ್ರಾಮಾಂತರ ಭಾಗದ ವಿವಿಧ ದೇಗುಲಗಳಲ್ಲಿ ಶ್ರಾವಣ ಮಾಸದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ, ಪೂಜೆ ಏರ್ಪಡಿಸಲಾಗಿದೆ.
Vijaya Karnataka Web shravana shanivara


ನಗರದ ಕೋಟೆ ವೆಂಕಟರಮಣ, ಬನಶಂಕರಿ 2ನೇ ಹಂತದ ದೇವಗಿರಿ, ಮಲ್ಲೇಶ್ವರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ, ಜೆ.ಪಿ.ನಗರ 2ನೇ ಹಂತದ ಶ್ರೀ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯ, ಗವಿಗಂಗಾಧರೇಶ್ವರ ಸ್ವಶಾಮಿ, ಶ್ರೀನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರಾವಣ ಶನಿವಾರಗಳಂದುದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತದೆ.

ದೊಡ್ಡಬಳ್ಳಾಪುರದ ಕನಸವಾಡಿ ಚಿಕ್ಕಮಧುರೆಗೆ ಶ್ರಾವಣದಲ್ಲಿ ಶನೈಶ್ಚರನಿಗೆ ವಿಶೇಷ ಪೂಜೆ ಸಲ್ಲಿಸಲು ರಾಜ್ಯದ ನಾನಾ ಭಾಗಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಶ್ರಾವಣ ಶನಿವಾರಗಳಲ್ಲಿ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ 20 ಸಾವಿರ ಗಡಿ ದಾಟುತ್ತದೆ. ಶನಿವಾಗಳಂದು ಮುಂಜಾನೆ 2ರಿಂದ ರಾತ್ರಿ 9 ರವರೆಗೆ ನಿರಂತರವಾಗಿ ದೇವಸ್ಥಾನಗಳಲ್ಲಿ ಪೂಜಾಕಾರ್ಯಗಳು ನೆರವೇರಲಿದೆ. ಮುಂಜಾನೆ 3ಕ್ಕೆ ವಿಶೇಷ ಪೂಜೆ, ಬಳಿಕ ನಿರಂತರ ಪೂಜಾಕಾರ್ಯಗಳು, ಸಂಕಲ್ಪಗಳು ನೆರವೇರಲಿವೆ. ನಿತ್ಯಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ತೈಲಾಭಿಷೇಕ ನೆರವೇರಲಿದೆ ಎಂದು ದೇಗುಲದ ಅರ್ಚಕ ಗಿರೀಶ್‌ ತಿಳಿಸಿದ್ದಾರೆ. ದೇವನಹಳ್ಳಿಯ ಶ್ರೀ ವೇಣುಗೋಪಾಲ ಸ್ವಾಮಿ, ಬೆಟ್ಟಕೋಟೆ ವೆಂಕಟರಮಣಸ್ವಾಮಿ ಪಟ್ಟಣದ ಕೋಟೆ ಒಳಭಾಗದಲ್ಲಿರುವ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ವೇಣುಗೋಪಾಲ ಸ್ವಾಮಿಯ ದೇವಾಲಯದಲ್ಲೂ ಶ್ರಾವಣ ಮಾಸದ ಪೂಜೆ ಪ್ರತಿ ಸೋಮವಾರ ಹಾಗೂ ಶನಿವಾರ ನಡೆಯಲಿದೆ.

ಸೂಲಿಬೆಲೆಯ ಚನ್ನಭೈರೇಗೌಡ ನಗರದಲ್ಲಿರುವ ಪಂಚದೇವಾಲಯಗಳಲ್ಲಿರುವ ವೆಂಕಟೇಶ್ವರ ಸ್ವಾಮಿ, ಬತ್ತಿಗಾನಹಳ್ಳಿ ಗ್ರಾಮದ ರಮಾನಂದ ಆಶ್ರಮದ ಬಳಿ ಪ್ರತಿಷ್ಠಾಪನೆ ಮಾಡಲಾಗಿರುವ ಆಂಜನೇಯಸ್ವಾಮಿ ದೇವಸ್ಥಾನ, ಸೂಲಿಬೆಲೆ ಬಾಬಾ ದೇಗುಲ, ಕಾಶಿ ಸೋಮೇಶ್ವರ ದೇಗುಲ ಹಾಗೂ ಗಿಂಡ್ಲ ಬಾವಿಯ ಬಳಿ ಇರುವ ಸೋಮೇಶ್ವರ ದೇಗುಲದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.

ನಂದಿ ಕ್ಷೇತ್ರದ ಸಪ್ತಗಿರಿಗಳಲ್ಲಿ ಒಂದಾದ ದೇವನಹಳ್ಳಿಯ ತಿಮ್ಮರಾಯಸ್ವಾಮಿಗೆ ಶ್ರಾವಣ ಮಾಸದ ಪ್ರಯುಕ್ತ ತಿಮ್ಮರಾಯಸ್ವಾಮಿಗೆ ನಿತ್ಯವೂ ಪೂಜೆ ಸಲ್ಲುತ್ತದೆ. ಪ್ರತಿದಿನ ಬೆಳಗ್ಗೆ 4 ಗಂಟೆಗೆ ದೇವರಿಗೆ ಕ್ಷೀರಾಭಿಷೇಕ, ಜಲಾಭಿಷೇಕ, ಪಂಚಾಮೃತ ಅಭಿಷೇಕದೊಂದಿಗೆ, ವಿವಿಧ ಹೂಗಳಿಂದ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ