ಆ್ಯಪ್ನಗರ

ಪಿತೃ ಪಕ್ಷದ ಮಹಾಲಯ ಅಮಾವಾಸ್ಯೆಯ ವಿಶೇಷತೆ ಏನು?

ನಮ್ಮನ್ನು ಅಗಲಿದ ಪಿತೃಗಳನ್ನು ಆರಾಧಿಸುವ ಮಹಾಲಯ ಅಮಾವಾಸ್ಯೆಗೆ ಎಲ್ಲಿಲ್ಲದ ಮಹತ್ವವಿದೆ.

Vijaya Karnataka Web 8 Oct 2018, 10:58 am
ಪಿತೃ ಪಕ್ಷದ ಅಮಾವಾಸ್ಯೆಯನ್ನು ಮಹಾಲಯ ಅಮಾವಾಸ್ಯೆ ಎಂದು ಕರೆಯಲ್ಪಟ್ಟು ಈ ಅಮವಾಸ್ಯೆಯನ್ನು ಇತರ ಅಮಾವಾಸ್ಯೆಗಿಂತ ವಿಶೇಷವಾಗಿ ಆಚರಿಸಲ್ಪಡುತ್ತದೆ.
Vijaya Karnataka Web pitru paksha


15 ದಿನಗಳ ಪಿತೃಪಕ್ಷಕ್ಕೆ ಏಕಿಷ್ಟು ಮಹತ್ವ?
ಈ ಪಕ್ಷದಲ್ಲಿ ಮಾಡುವ ಪಿತೃ ಕಾರ್ಯಗಳು ಪಂಚ ಮಹಾ ಯಜ್ಞಗಳಲ್ಲಿ ಒಂದಾಗಿರುವುದರಿಂದ ಈ ಪಕ್ಷಕ್ಕೆ ಒಂದು ಮಹತ್ವವುಂಟು.

ಒಬ್ಬ ವ್ಯಕ್ತಿ ಸಾಮಾಜಿಕ ಜೀವನದಲ್ಲಿ ನಾನಾ ಪಾತ್ರವಹಿಸಿದರೂ ಮಕ್ಕಳ ವಿಷಯಕ್ಕೆ ಬಂದಾಗ ಆಕೆ ಮತ್ತು ಆತನಲ್ಲಿ ತಂದೆತನ ಹಾಗೂ ತಾಯ್ತತನ ಎನ್ನುವುದು ಇರುತ್ತದೆ. ಈ ಪ್ರವೃತ್ತಿ ಉಂಟಾಗುವುದು ಆತನ ಒಳಗೇ ಇರುವ ಪಿತೃ ದೇವತೆಗಳ ಶಕ್ತಿಯಿಂದ. ಒಬ್ಬ ಮನುಷ್ಯ ಹುಟ್ಟಿದಾಗ ಆತನ ಪೋಷಣೆಯಲ್ಲಿ ತಂದೆ ತಾಯಿಯ ಪಾತ್ರ ಮಹತ್ವದಾಗಿರುತ್ತದೆ. ಆದ್ದರಿಂದಲೇ ಪಿತೃಪಕ್ಷಕ್ಕೆ ಎಲ್ಲಿಲ್ಲದ ಮಹತ್ವವಿದೆ.

ಆದ್ದರಿಂದ ಪಿತೃ ಪಕ್ಷದ ಯಜ್ಞ ಆಚರಣೆಯಿಂದ ವಿಶೇಷ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಪಿತೃಯಜ್ಞದ ವಿಶೇಷತೆಯೇನು?
ನಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿ ಬದುಕಿರುವಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಅವರ ಕಾಲಾನಂತರ ಶ್ರಾದ್ಧ, ತರ್ಪಣಗಳ ಮೂಲಕ ಸತ್ಕರಿಸುವುದನ್ನು ಪಿತೃಯಜ್ಞ ಎಂದು ಕರೆಯುತ್ತಾರೆ.

ಶ್ರಾದ್ಧ, ತರ್ಪಣಗಳಿಂದ ಪಿತೃ ದೇವತೆಗಳನ್ನು ಆರಾಧಿಸಿದರೆ ಅವರ ಆರ್ಶೀವಾದದಿಂದ ಒಳ್ಳೆಯದು ಆಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ