ಆ್ಯಪ್ನಗರ

ತಿರುಪತಿಯಲ್ಲಿ ಕಲ್ಯಾಣೋತ್ಸವದ ಸಡಗರ

ತಿರುಪತಿಯಲ್ಲಿ ಆರಂಭವಾಗಿದೆ ಪದ್ಮಾವತಿ ಕಲ್ಯಾಣೋತ್ಸವ.

TIMESOFINDIA.COM 14 May 2019, 3:52 pm
ತಿರುಪತಿ: ಪುಣ್ಯ ಸ್ಥಳ ತಿರುಪತಿಯ ತಿರುಮಲದಲ್ಲಿ ವೆಂಕಟೇಶ್ವರ ವಿವಾಹ ಮಹೋತ್ಸವ ನಡೆಯುತ್ತಿದ್ದು, ಈ ದಿವ್ಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಅಲ್ಲಿ ನೆರೆದಿದೆ.
Vijaya Karnataka Web Tirumati


ವಾರ್ಷಿಕವಾಗಿ ನಡೆಯುವ ಈ ಮೂರು ದಿನಗಳ ಪದ್ಮಾವತಿ ಪರಿಣಯೋತ್ಸವಂ ಸೋಮವಾರ ಆರಂಭವಾಗಿದೆ.

ಉತ್ಸವದ ಮೊದಲ ದಿನ ಶ್ರೀಮಂತ ದೇವರು ವೇಂಕಟೇಶ್ವರ, ಮತ್ತಾತನ ಇಬ್ಬರು ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಯರಿಗೆ ಪುರಾತನ ಆಭರಣ ಮತ್ತು ಪರಿಮಳಯುಕ್ತ ಪುಷ್ಪಮಾಲೆಗಳಿಂದ ಅಲಂಕರಿಸಲಾಗುತ್ತದೆ.

ಬಂಗಾರದ ಗಜ ವಾಹನದಲ್ಲಿ ವೆಂಕಟೇಶ್ವರ ಮತ್ತು ಬಂಗಾರು ತಿರುಚಿ ಎಂದು ಕರೆಯಲಾಗುವ ಎರಡು ಸ್ವರ್ಣ ಪಲ್ಲಕ್ಕಿಗಳ ಮೇಲೆ ಭೂದೇವಿ, ಶ್ರೀದೇವಿಯರನ್ನು ಕುಳ್ಳಿರಿಸಿ, ವರ್ಣರಂಜಿತ, ಸಾಂಪ್ರದಾಯಿಕ ಮೆರವಣಿಗೆಯಲ್ಲಿ ವಿವಾಹ ಸ್ಥಳವಾದ ನಾರಾಯಣಗಿರಿ ಉದ್ಯಾನವನಕ್ಕೆ ಕರೆದೊಯ್ಯಲಾಗುತ್ತದೆ.

ನಾರಾಯಣಗಿರಿ ಉದ್ಯಾನವನ, 'ಪದ್ಮಾವತಿ ಪರಿಣಯೋತ್ಸವ' ನಡೆಯುವ ಸ್ಥಳವಾಗಿದೆ. ತಿರುಪತಿ ದೇವಸ್ಥಾನದ ಉದ್ಯಾನವನ ಇಲಾಖೆ ಇದನ್ನು ದಶಾವತಾರ ಅಷ್ಟಲಕ್ಷ್ಮೀ ಮಂಟಪವಾಗಿ ಮಾರ್ಪಡಿಸಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ.

ಮದುವೆ ಮಂಟಪದ ಪ್ರವೇಶ ದ್ವಾರ ಅಷ್ಟ ಲಕ್ಷ್ಮೀ ಪ್ರತಿಮೆಗಳೊಂದಿಗೆ ಅಲಂಕೃತಗೊಂಡಿದ್ದು, ಮಂಟಪದ ಮೇಲ್ಭಾಗದಲ್ಲಿರುವ ಮಹಾವಿಷ್ಣುವಿನ ದಶಾವತಾರ ಆಕರ್ಷಕವಾಗಿದೆ.

ಬೆಂಗಳೂರಿನಿಂದ ಕರೆಸಲಾದ 60 ಮಂದಿ ತಜ್ಞರು ಮತ್ತು ತಿರುಪತಿ ದೇವಸ್ಥಾನ ಉದ್ಯಾನವನ ತಂಡ ಉಂಜಾಲ್ (ಉಯ್ಯಾಲೆ) ವೇದಿಕೆಯನ್ನು ಮನಮೋಹಕವಾಗಿ ಅಲಂಕರಿಸಿದೆ. ಪುಣೆ ಮತ್ತು ಚೆನ್ನೈಯಿಂದ ದಾನಿ ಭಕ್ತರು ಕಳಿಸಿರುವ ವಿಧ ವಿಧದ 25,000 ಹೂಗಳು, ಸೇಬು, ಕಿತ್ತಳೆ, ದ್ರಾಕ್ಷಿಗಳು, ಮಾವು, ಅನಾನಸ್, ಬಾಳೆಹಣ್ಣು ಮುಂತಾದ ಐದು ಟನ್ ಹಣ್ಣುಗಳನ್ನು ಅಲಂಕಾರಕ್ಕೆ ಬಳಸಿಕೊಳ್ಳಲಾಗಿದೆ.

ಮಂಗಳಕರ ಮುಹೂರ್ತದಲ್ಲಿ, ತಿರುಮಲ ದೇವಾಲಯದ ಪುರೋಹಿತರು ದೈವೀಕ ದಂಪತಿಯ ವಿವಾಹ ಕಾರ್ಯಕ್ರಮದಲ್ಲಿ ವೆಂಕಟೇಶ್ವರ ಮತ್ತು ಪದ್ಮಾವತಿಯವರನ್ನು ಪರಸ್ಪರ ಎದುರು ಬದುರಾಗಿ ಕುಳ್ಳಿರಿಸಿ, ಹಿಂದೂ ವಿವಾಹ ಸಂಪ್ರದಾಯಗಳ ಅನುಸಾರ, ಪುರೋಹಿತರ ಮಂತ್ರಘೋಷಗಳ ನಡುವೆ ವಿವಾಹ ಸಂಪನ್ನವಾಗುತ್ತಿದೆ.

'ಉಂಜಲ್ ಮಂಟಪಂ' ನಲ್ಲಿ ಕೆಲ ಕಾಲ ತೂಗುಯ್ಯಾಲೆಯಾಡಿದ ಬಳಿಕ ವೆಂಕಟೇಶ್ವರ, ಭೂದೇವಿ ಶ್ರೀದೇವಿಯರು ಮೆರವಣಿಗೆಯಲ್ಲೇ ದೇವಸ್ಥಾನಕ್ಕೆ ಮರಳುವ ಸಂಪ್ರದಾಯವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ